Wednesday, February 4, 2026
Wednesday, February 4, 2026

ವಾಸ್ತವ್ಯಕ್ಕಿದೆ ಜೆಎಲ್‌ಆರ್‌ನ ಹಂಪಿ ಹೆರಿಟೇಜ್ & ವೈಲ್ಡರ್‌ನೆಸ್ ರೆಸಾರ್ಟ್‌

ಹಂಪಿ ಎಂದರೆ ಬರೀ ಕಲ್ಲಿನ ರಥ, ಸಾಸಿವೆಕಾಳು ಗಣಪ, ಬಡವಿ ಲಿಂಗ, ವಿರೂಪಾಕ್ಷ ದೇವಸ್ಥಾನ ಅಷ್ಟೇ ಅಲ್ಲ. ಹಂಪಿಯ ಸುತ್ತ ಹಲವಾರು ಪ್ರೇಕ್ಷಣಿಯ ಸ್ಥಳಗಳಿವೆ. ಹನುಮನ ಜನ್ಮಸ್ಥಳ ಅಂಜನಾದ್ರಿ ಬೆಟ್ಟ, ನವ ಬೃಂದಾವನ, ಆನೆಗುಂದಿ, ಹಿಪ್ಪೀ ದ್ವೀಪ, ತುಂಗಭದ್ರಾ ನದಿ, ಹುಲಿಗೆಮ್ಮ, ದಾರೋಜಿ ಕರಡಿಧಾಮ ಸೇರಿದಂತೆ ಹಲವು ಪ್ರೇಕ್ಷಣೀಯ ಸ್ಥಳಗಳಿವೆ. ಒಂದು ಮಾತಿದೆ. ಕಾಲು-ಕಣ್ಣು ಗಟ್ಟಿ ಇದ್ದವರು ಹಂಪಿಯನ್ನು ನೋಡಬೇಕಂತೆ. ನೀವು ನೋಡುವ ಮನಸ್ಸು ಮಾಡುತ್ತೀರಾ?

ಕರ್ನಾಟಕ ಪ್ರವಾಸ ಎಂದ ತಕ್ಷಣ ಎಲ್ಲರಿಗೂ ನೆನಪಿಗೆ ಬರುವುದು ಹಂಪಿ. ಇತಿಹಾಸದ ಕಾಲದಿಂದಲೂ ಹಂಪಿ ತನ್ನ ಹಿರಿಮೆಯನ್ನು ಹಿಗ್ಗಿಸಿಕೊಳ್ಳುತ್ತಲೇ ಬರುತ್ತಿದೆ. ಹಂಪಿಯನ್ನು ʼಹಾಳು ಹಂಪಿʼ ಎಂದು ಕರೆದರೂ ಇಂದಿಗೂ ಪ್ರತಿವರ್ಷ 7 ಲಕ್ಷಕ್ಕೂ ಅಧಿಕ ಪ್ರವಾಸಿಗರನ್ನು ತನ್ನತ್ತ ಸೆಳೆಯುತ್ತಿದೆ. ಹಂಪಿಯನ್ನು ವಿಶ್ವದ ಅತಿದೊಡ್ಡ ಓಪನ್‌ ಮ್ಯೂಸಿಯಂ ಎಂದೂ ಕರೆಯುತ್ತಾರೆ. ಹಂಪಿಯಲ್ಲಿರುವ ಸ್ಮಾರಕಗಳನ್ನು ಬೇರೆಡೆ ಸಾಗಿಸಬಹುದಾಗಿದ್ದರೆ, ನಾವು ಹಂಪಿಯನ್ನು ಬ್ರಿಟಿಷ್‌ ಮ್ಯೂಸಿಯಂನಲ್ಲಿ ನೋಡಬೇಕಾಗುತ್ತಿತ್ತು. ಆದರೆ ಹಾಗಾಗಲಿಲ್ಲ. ಇದು ಭಾರತೀಯರ ಮತ್ತು ಕನ್ನಡಿಗರ ಸೌಭಾಗ್ಯ. ಆ ವಿರೂಪಾಕ್ಷ ದೊಡ್ಡವನು. ಹಂಪಿ ನಮ್ಮ ರಾಜ್ಯದಲ್ಲಿಯೇ ಉಳಿದುಕೊಂಡಿತು. ಕನ್ನಡನಾಡಿನ ಪಾರಂಪರಿಕ ಸ್ಥಳವಾಗಿ, ಕರ್ನಾಟಕದ ಐತಿಹ್ಯವಾಗಿ ಚಿರಸ್ಥಾಯಿಯಾಯಿತು.

ಇದನ್ನೂ ಓದಿ: ಬೆಳಗಾವಿಯ ಕುಂದಾ ಚೆಂದ ಜೆಎಲ್‌ಆರ್‌ನ ವಾಸ್ತವ್ಯ ಆನಂದ

ಒಂದು ಕಾಲದಲ್ಲಿ ವಿಶ್ವದ ಅತಿ ಶ್ರೀಮಂತ ನಗರವಾಗಿದ್ದ ಹಂಪಿಯಲ್ಲಿ ಇಂದು ಅದರ ಅವಶೇಷಗಳು, ಮಂದಿರಗಳು, ಆಗಿನ ಕಾಲದ ಮಾರುಕಟ್ಟೆಗಳು, ಹಾಳುಬಿದ್ದ ಅಥವಾ ದಾಳಿಕೋರರಿಂದ ಹಾಳಾದ ಮೂರ್ತಿಗಳು, ಕಣ್ಣು ಹಾಯಿಸಿದಷ್ಟೂ ಕಾಣುವ ಗುಡ್ಡಗಳು ಬಿಟ್ಟರೆ ಅಂದಿನ ಯಾವ ಶ್ರೀಮಂತಿಕೆಯೂ ಸಿಗುವುದಿಲ್ಲ. ಹಾಗಾದರೆ, ಇನ್ನೂ ಏಕೆ ಜಗತ್ತಿನ ಹಲವಾರು ಪ್ರವಾಸಗರು ಹಂಪಿಯತ್ತ ಬರುತ್ತಾರೆ? ಇನ್ನೂ ಏಕೆ ಹಂಪಿಯ ಬಗ್ಗೆ ಹಲವಾರು ಪುಸ್ತಕಗಳು, ಕಾದಂಬರಿಗಳು ಬರುತ್ತಿವೆ? ಇನ್ನೂ ಏಕೆ ಪ್ರವಾಸೋದ್ಯಮವೆಂದ ತಕ್ಷಣ ಹಂಪಿಯ ಬಗ್ಗೆಯೇ ಯೋಚಿಸುತ್ತಾರೆ? ಈ ಹಲವಾರು ಪ್ರಶ್ನೆಗಳಿಗೆ ಉತ್ತರ ಬೇಕೆಂದರೆ ಅದಕ್ಕೆ ಹಂಪಿಗೇ ಹೋಗಬೇಕು. ಹಂಪಿಯಲ್ಲಿ ಇದ್ದು ಬಂದರೆ ಮಾತ್ರ ಈ ಪ್ರಶ್ನೆಗೆ ಸಂಕ್ಷಿಪ್ತ ಉತ್ತರವಾದರೂ ದೊರೆಯಲು ಸಾಧ್ಯ.

New Project - 2026-01-31T121816.143

ಹಂಪಿ ಎಂದರೆ ಬರೀ ಕಲ್ಲಿನ ರಥ, ಸಾಸಿವೆಕಾಳು ಗಣಪ, ಬಡವಿ ಲಿಂಗ, ವಿರೂಪಾಕ್ಷ ದೇವಸ್ಥಾನ ಅಷ್ಟೇ ಅಲ್ಲ. ಹಂಪಿಯ ಸುತ್ತ ಹಲವಾರು ಪ್ರೇಕ್ಷಣಿಯ ಸ್ಥಳಗಳಿವೆ. ಹನುಮನ ಜನ್ಮಸ್ಥಳ ಅಂಜನಾದ್ರಿ ಬೆಟ್ಟ, ನವ ಬೃಂದಾವನ, ಆನೆಗುಂದಿ, ಹಿಪ್ಪೀ ದ್ವೀಪ, ತುಂಗಭದ್ರಾ ನದಿ, ಹುಲಿಗೆಮ್ಮ, ದಾರೋಜಿ ಕರಡಿಧಾಮ ಸೇರಿದಂತೆ ಹಲವು ಪ್ರೇಕ್ಷಣೀಯ ಸ್ಥಳಗಳಿವೆ. ಒಂದು ಮಾತಿದೆ. ಕಾಲು-ಕಣ್ಣು ಗಟ್ಟಿ ಇದ್ದವರು ಹಂಪಿಯನ್ನು ನೋಡಬೇಕಂತೆ. ನೀವು ನೋಡುವ ಮನಸ್ಸು ಮಾಡುತ್ತೀರಾ?

ಅಂದಹಾಗೆ, ಹಂಪಿಗೆ ಹೋಗಲು ಇದು ಒಳ್ಳೆಯ ಸಮಯ. ಏಕೆಂದರೆ, ಈಗ ಹಂಪಿ ಉತ್ಸವ ಶುರುವಾಗುತ್ತಿದೆ. ದೇಶ ವಿದೇಶದ ಹಲವಾರು ಖ್ಯಾತ ಗಾಯಕ ಗಾಯಕಿಯರು, ಸಿನಿಮಾ ನಟ ನಟಿಯರು, ನರ್ತಕ ನರ್ತಕಿಯರು ಹೀಗೆ ಹಲವಾರು ಕಲಾವಿದರು ಅಲ್ಲಿಗೆ ಬರುತ್ತಾರೆ. ಈಗ ಹಂಪಿ ಬರೀ ಭಾರತೀಯರಷ್ಟೇ ಅಲ್ಲದೆ, ವಿದೇಶಿಗರಿಂದಲೂ ನಳನಳಿಸುತ್ತಿರುತ್ತದೆ.

New Project - 2026-01-31T121754.879

ನಿಮಗೇನಾದರೂ ಹಂಪಿಗೆ ಹೋಗುವ ಯೋಜನೆ ಅಥವಾ ಯೋಚನೆಗಳಿದ್ದರೆ, ಇದೇ ಸರಿಯಾದ ಸಮಯ. ಫೆಬ್ರವರಿಯಲ್ಲಿ ಯಾವುದೇ ʼವರಿʼಯಿರದೆ ಹಂಪಿಗೆ ಹೋಗಬಹುದು. ಆದರೆ ಉಳಿಯುವುದು ಎಲ್ಲಿ? ನಮ್ಮನ್ನು ಸುತ್ತಾಡಿಸುವವರು ಯಾರು? ನಮಗೆ ಸ್ಥಳಮಹಿಮೆ ತಿಳಿಸುವವರು ಯಾರು? ಊಟ ತಿಂಡಿ ನಿದ್ದೆಗೆ ವ್ಯವಸ್ಥೆ ಹೇಗೆ? ಇಂಥ ಪ್ರಶ್ನೆಗಳು ಕಾಡುತ್ತಿವೆಯೇ? ಇವೆಲ್ಲದಕ್ಕೂ ಒಂದೇ ಉತ್ತರ.

ಜಂಗಲ್‌ ಲಾಡ್ಜ್‌ ರೆಸಾರ್ಟ್‌ನ ಹಂಪಿ ಹೆರಿಟೇಜ್‌ & ವೈಲ್ಡರ್‌ನೆಸ್‌ ರೆಸಾರ್ಟ್‌!

ಹಂಪಿಯಲ್ಲಿನ ವಿಶ್ವ ಹೇರಿಟೇಜ್ ತಾಣಗಳ ಮಧ್ಯದಲ್ಲಿ ಇರುವ ಹಂಪಿ ಹೆರಿಟೇಜ್ & ವೈಲ್ಡರ್‌ನೆಸ್ ರೆಸಾರ್ಟ್, ಜೆಎಲ್‌ಆರ್ ರವರ ಅತ್ಯಂತ ಜನಪ್ರಿಯ ರೆಸಾರ್ಟ್‌. ದಾರೋಜಿ ಅಡವಿಯಲ್ಲಿರುವ ಈ ರೆಸಾರ್ಟ್, ಕರಡಿ ಅಭಯಾರಣ್ಯದ ಸಮೀಪದಲ್ಲಿದೆ. ಇಲ್ಲಿನ ಕಾಡು ಪ್ರದೇಶ ಕರಡಿಗಳಿಗೆ ನೈಸರ್ಗಿಕ ವಾಸಸ್ಥಳ. ಹಾಗೆಯೇ ಕರಡಿಗಳ ʼಕರಡಿಯಾಟʼಕ್ಕೂ ಇದೇ ಆಟದ ಮೈದಾನ.

New Project - 2026-01-31T121846.709

ಗುಡ್ಡಗಾಡು-ಬಂಡೆ ಪ್ರದೇಶ, ಹೊಲ ಮತ್ತು ಹಳ್ಳಿಗಳ ನಡುವಲ್ಲಿರುವ ಈ ರೆಸಾರ್ಟ್ "ಗ್ರಾಮೀಣ" ಎಂಬ ಶಬ್ದಕ್ಕೆ ಅರ್ಥ ನೀಡುವುದಲ್ಲ, ನಿಜವಾಗಿಯೂ ಇದು ಗ್ರಾಮೀಣ ಪ್ರದೇಶದಲ್ಲೇ ಇರುವ, ಅಲ್ಲಿನ ಸಂಸ್ಕೃತಿ ಜನಜೀವನವನ್ನು ಎತ್ತಿಹಿಡಿಯುವ ರೆಸಾರ್ಟ್‌. ಇದನ್ನು ರೆಸಾರ್ಟ್ ಎಂದು ಕರೆಯುವುದಕ್ಕಿಂತ ಹಳ್ಳಿ ಎಂದೇ ಕರೆಯಬಹುದು.

ಏನೇನು ಮಾಡಬಹುದು ಇಲ್ಲಿ?

ಕರಡಿಗಳನ್ನು ಅವುಗಳ ವಾಸಸ್ಥಳಗಳಲ್ಲಿ ಕಾಣಲು, ಬೆಟ್ಟದ ತಪ್ಪಲಿನಲ್ಲಿ ವೀಕ್ಷಣಾ ಗೋಪುರವಿದೆ. ಅದೃಷ್ಟವಿದ್ದರೆ, ಕಾಡು ಹಂದಿಗಳು, ಕಾಡು ಮೊಲಗಳು, ಚಿಪ್ಪುಹಂದಿಗಳು, ಮುಳ್ಳು ಹಂದಿಗಳು, ನರಿ-ತೋಳಗಳು ಮತ್ತು ಚಿರತೆಗಳು ಕೂಡ ಕಾಣಿಸಬಹುದು. ಅಡವಿಯಲ್ಲಿನ 8 ಕಿಮೀ ಪ್ರಯಾಣವು ಪಕ್ಷಿಪ್ರಿಯರಿಗೆ ಪರಮಾನಂದವಾಗುವ ಲೋಕಕ್ಕೆ ಕರೆದೊಯ್ಯುತ್ತದೆ. ಇಲ್ಲಿ ನವಿಲು, ಹಳದಿ ಕತ್ತಿನ ಬುಲ್ ಬುಲ್, ಗೌಜುಗಗಳು, ಗೌಜಲಕ್ಕಿ ಅಥವಾ ಪುರುಲೆ ಹಕ್ಕಿ, ಕಾಡು ಕೋಳಿಗಳು, ಸಿರ್ಕೀರ್ ಮಾಲ್ಕೋಹಾ ಮತ್ತು ಕಲ್ಲುಗುಬ್ಬಿ ಎಂಬ ವಿಶೇಷ ಪಕ್ಷಿ ಪ್ರಭೇದವನ್ನು ಕಾಣಬಹುದು.

ಇನ್ನು ದೇವಾಲಯ ಸಂದರ್ಶನ, ಪರಿಸರದ ನಡಿಗೆ, ಪಕ್ಷಿ ವೀಕ್ಷಣೆ ಇತ್ಯಾದಿ ಚಟುವಟಿಕೆಗಳು ಕೂಡ ಇವೆ.

New Project - 2026-01-31T121909.284

ಬೆಳಗಿನ ಸಮಯ – ಇತಿಹಾಸದ ಪಾಠ

ಬೆಳಿಗ್ಗೆ ಸಮಯವನ್ನು ಹಂಪಿಯ ಸ್ಮಾರಕ ಪ್ರದೇಶಗಳ ಸಂದರ್ಶನಕ್ಕೆ ಮೀಸಲಾಗಿರಿಸಿ. ಈ ಅವಧಿಯಲ್ಲಿ ಇಡೀ ಹಂಪಿಯ ಸೌಂದರ್ಯ, ವೈಭವ ಮತ್ತು ಪರಂಪರೆಯನ್ನು ಕಾಣಬಹುದು. ಕೃಷ್ಣದೇವರಾಯ ಮತ್ತಿತರ ರಾಜರ ಕಾಲದಲ್ಲಿನ ದೇವಸ್ಥಾನಗಳು, ರಾಜರು ಆಡಳಿತ ಮಾಡುತ್ತಿದ್ದ ಸ್ಥಳಗಳು, ನಗರ ಹಾಗೂ ಉಪನಗರ ಪ್ರದೇಶಗಳಾಗಿ ಹಂಪಿಯನ್ನು ವಿಂಗಡಿಸಿ ಸ್ಥಳಗಳನ್ನು ತೋರಿಸುತ್ತಾರೆ. ತುಂಗಭದ್ರಾ ನದಿಯ ಅತ್ತಬದಿಯಲ್ಲಿದೆ ರಾಮಾಯಣದ ಕಿಷ್ಕಿಂದೆಯೆಂದೇ ಗುರುತಿಸಲ್ಪಡುವ ಆನೆಗುಂದಿ. ಅಲ್ಲಿ ಗತಕಾಲದ ವೈಭವ ಸಾರುವ ಸ್ಮಾರಕಗಳು, ಕಾಲುವೆಗಳು ಮತ್ತು ಪುರಾಣ ಪ್ರಸಿದ್ಧ ತಾಣಗಳಿವೆ. ಅವೆಲ್ಲವನ್ನೂ ನೋಡಬಹುದು.

New Project - 2026-01-31T121833.347

ಎಲ್ಲವನ್ನೂ ಸವಿದು ಬಂದ ನಂತರ ರಾತ್ರಿ ಒಂದೊಳ್ಳೆ ಊಟವನ್ನು ಮಾಡಿ ದಿನವನ್ನು ಮುಗಿಸಬಹುದು. ಹೇಳಬೇಕೆಂದರೆ, ನೀವು ರೆಸಾರ್ಟ್‌ನಲ್ಲಿ ಮೂರುದಿನಗಳ ಕಾಲವಿದ್ದರೂ, ಎಲ್ಲವನ್ನೂ ಸವಿಯಲು ಸಾಧ್ಯವಾಗುವುದಿಲ್ಲ. ನಿಮಗೆ ಅಷ್ಟೊಂದು ಬಗೆಯ ರುಚಿಯ ಆಹಾರ ಸಿಗುತ್ತದೆ!

ಯಾವಾಗ ಬರಬಹುದು?

ಮೊದಲೇ ಹೇಳಿದ ಹಾಗೆ ಜೂನ್‌ನಿಂದ ಫೆಬ್ರವರಿ ಅಥವಾ ಮಾರ್ಚ್‌ನಲ್ಲಿ ಹವಾಮಾನ ಚೆನ್ನಾಗಿರುತ್ತದೆ. ಅಷ್ಟೇ ಅಲ್ಲ ವನ್ಯಮೃಗಗಳು ನೋಡಲು ಸಿಗುತ್ತವೆ. ರೆಸಾರ್ಟ್ ವರ್ಷವಿಡೀ ತೆರೆದಿರುತ್ತದೆ. ನಿಮಗೆ ಯಾವಾಗ ಹೋಗಬೇಕೆನಿಸಿದರೂ ಹೋಗಬಹುದು. ಕರಡಿಗಳನ್ನು ನೋಡೋಕೆ ಸೀಸನ್‌ ಏನೂ ಬೇಕಾಗಿಲ್ಲ. ಅವುಗಳನ್ನು ವರ್ಷವಿಡೀ ಕಾಣಬಹುದು. ಆದರೆ ಮಳೆಯ ನಂತರ ಬಂಡೆಗಳ ಪ್ರದೇಶ ಹಸಿರಿನಿಂದ ತುಂಬಿರುತ್ತದೆ. ಅದು ಬೆಸ್ಟ್ ಸಮಯ. ಬಯಲು ಸೀಮೆಯ ಬಿಸಿಲನ್ನು ತಡೆದುಕೊಳ್ಳುವವರು ಬಿರುಬೇಸಗೆಯಲ್ಲೂ ಹೋಗಬಹುದು.

New Project - 2026-01-31T122013.954

ಹಂಪಿ ಹಾಗೂ ಸುತ್ತಮುತ್ತ ಏನೆಲ್ಲ ನೋಡಬಹುದು?

  • ವಿರೂಪಾಕ್ಷ ದೇವಾಲಯ
  • ಹಂಪಿ ಬಜಾರ್‌
  • ಹಂಪಿ ಅಶ್ವಶಾಲೆ
  • ಮಾತಂಗ ಬೆಟ್ಟ
  • ನರಸಿಂಹ ದೇವಾಲಯ
  • ವಿಜಯ ವಿಠ್ಠಲ ದೇವಾಲಯ ಮತ್ತು ಕಲ್ಲಿನ ರಥ
  • ಹೇಮಕೂಟ ಬೆಟ್ಟ
  • ಅಚ್ಚುತರಾಯ ಸ್ವಾಮಿ ದೇವಸ್ಥಾನ
  • ಲಕ್ಷ್ಮೀ ನರಸಿಂಹ ದೇವಸ್ಥಾನ
  • ಹಜಾರ ರಾಮ ದೇವಸ್ಥಾನ
  • ಲೋಟಸ್‌ ಮಹಲ್‌
  • ರಾಣಿ ಸ್ನಾನಗೃಹಗಳು
  • ಗೆಜ್ಜಲ ಮಂಟಪ
  • ನವಬೃಂದಾವನ
  • ಪಂಪಾ ಸರೋವರ
  • ತುಂಗಭದ್ರಾ ಜಲಾಶಯ

ಇದಿಷ್ಟು ಮಾತ್ರವಲ್ಲದೆ ಇನ್ನೂ ಹಲವಾರು ಪ್ರೇಕ್ಷಣೀಯ ಸ್ಥಳಗಳು ಹಂಪಿಯ ಸುತ್ತಮುತ್ತಲಿವೆ.

ಸ್ಪೆಷಲ್ ಎಕ್ಸಿಕ್ಯೂಟಿವ್ ಕಾಟೇಜ್ ಪ್ಯಾಕೇಜ್

ಆಕರ್ಷಕ ರಿಯಾಯಿತಿಗಾಗಿ ಆನ್‌ಲೈನ್‌ ಬುಕಿಂಗ್‌ ಮಾಡಿ

ಪ್ಯಾಕೇಜ್ ನಲ್ಲಿ ಏನೇನಿದೆ?

ಉಳಿಯುವುದಕ್ಕೆ ವಾಸ್ತವ್ಯ

  • ಊಟ ಮತ್ತು ತಿಂಡಿ
  • ಜೀಪ್ ಸಫಾರಿ
  • ಹಂಪಿ ಭೇಟಿ

ಡೇ ವಿಸಿಟ್ (Day Visit) ಪ್ಯಾಕೇಜ್‌ನಲ್ಲಿ ಏನೇನಿದೆ?

  • ಸ್ವಾಗತ ಪಾನೀಯ
  • ಪ್ರಾಣಿಸಂಗ್ರಹಾಲಯ ಭೇಟಿ
  • ಬಫೆಟ್ ಲಂಚ್
  • ದರೋಜಿ ಕರಡಿಧಾಮ ಸಫಾರಿ
  • ಸಂಜೆ ಚಹಾ/ಕಾಫಿ

ರಿಪೋರ್ಟಿಂಗ್ ಸಮಯ: ಬೆಳಗ್ಗೆ 10:00
ಚೆಕ್ ಔಟ್ ಸಮಯ: ಸಂಜೆ 5:30

ಜೆಎಲ್‌ಆರ್‌ನಲ್ಲಿ ದಿನಚರಿ

ದಿನ 1

ಮಧ್ಯಾಹ್ನ 1:00 – ಸ್ವಾಗತ ಪಾನೀಯದೊಂದಿಗೆ ಚೆಕ್ ಇನ್
ಮಧ್ಯಾಹ್ನ 1:30 – ಊಟ
ಮಧ್ಯಾಹ್ನ 3:30 – ಜೀಪ್ ಸಫಾರಿ (ದಾರೋಜಿ ಕರಡಿಧಾಮಕ್ಕೆ)
ಸಂಜೆ 6:30 – ಚಹಾ/ಕಾಫಿ ಹಾಗೂ ತಿಂಡಿ
ರಾತ್ರಿ 7:30 – ವನ್ಯಜೀವಿ ಡಾಕ್ಯುಮೆಂಟರಿ ಚಿತ್ರ / ಕ್ಯಾಂಪ್‌ಫೈರ್
ರಾತ್ರಿ 8:30 – ಡಿನ್ನರ್
ರಾತ್ರಿ 9:30 – ವಿಶ್ರಾಂತಿ

ದಿನ 2

ಬೆಳಗ್ಗೆ 6:30 – ಉತ್ಥಾನ
ಬೆಳಗ್ಗೆ 8:00 – ಬ್ರೇಕ್‌ಫಾಸ್ಟ್
ಬೆಳಗ್ಗೆ 8:30 – ಹಂಪಿ ನೋಡುವ ಸಮಯ (ದೇವಸ್ಥಾನ ಮತ್ತಿತರ ಪವಿತ್ರ ಸ್ಥಳಗಳು)
ಮಧ್ಯಾಹ್ನ 1:30 – ಊಟ
ಮಧ್ಯಾಹ್ನ 3:30 – ಹಂಪಿ ನೋಡುವ ಸಮಯ (ರಾಜರ ಗತಕಾಲದ ವೈಭವ)
ಸಂಜೆ 6:30 – ಚಹಾ/ಕಾಫಿ ಮತ್ತು ತಿಂಡಿ
ರಾತ್ರಿ 7:30 – ವನ್ಯಜೀವಿ ಸಿನಿಮಾ / ಕ್ಯಾಂಪ್‌ಫೈರ್
ರಾತ್ರಿ 8:30 – ಡಿನ್ನರ್
ರಾತ್ರಿ 9:30 – ಕೋಣೆಗೆ ಹಿಂತಿರುಗಿ ವಿಶ್ರಾಂತಿ

ದಿನ 3

ಬೆಳಗ್ಗೆ 6:30 – ಉತ್ಥಾನ
ಬೆಳಗ್ಗೆ 8:00 – ಬ್ರೇಕ್‌ಫಾಸ್ಟ್
ಬೆಳಗ್ಗೆ 8:30 – ಅಂಜನಾದ್ರಿ ಬೆಟ್ಟಕ್ಕೆ ಪ್ರಯಾಣ (ತಜ್ಞರೊಂದಿಗೆ ಹೈಕಿಂಗ್ ಕೂಡ ಲಭ್ಯವಿದೆ)
ಮಧ್ಯಾಹ್ನ 1:30 – ಊಟ
ಮಧ್ಯಾಹ್ನ 3:30 – ತುಂಗಭದ್ರಾ ಜಲಾಶಯ ಭೇಟಿ
ಸಂಜೆ 6:30 – ಚಹಾ/ಕಾಫಿ ಮತ್ತು ತಿಂಡಿ
ರಾತ್ರಿ 8:30 – ಡಿನ್ನರ್
ರಾತ್ರಿ 9:30 – ಕೋಣೆಗೆ ಹಿಂತಿರುಗಿ ವಿಶ್ರಾಂತಿ

ದಿನ 4

ಬೆಳಗ್ಗೆ 6:30 – ಚಹಾ/ಕಾಫಿ
ಬೆಳಗ್ಗೆ 8:00 – ಬ್ರೇಕ್‌ಫಾಸ್ಟ್
ಬೆಳಗ್ಗೆ 9:00 – ನೇಚರ್‌ ವಾಕ್‌ ಅಥವಾ ಹೈಕಿಂಗ್
ಬೆಳಗ್ಗೆ 10:30 – ಚೆಕ್ ಔಟ್

Vinay Khan

Vinay Khan

Travel blogger and adventurer passionate about exploring new cultures and sharing travel experiences.

ವ್ಹಾವ್..ವ್ಹಾವ್..ಗೋವಾ!

Read Previous

ವ್ಹಾವ್..ವ್ಹಾವ್..ಗೋವಾ!

ದೇಶ ಸುತ್ತಬೇಕಿಲ್ಲ, ಕರ್ನಾಟಕದಲ್ಲೇ ಇವೆ ಅನೇಕ ಡಾಲ್ಫಿನ್‌ ತಾಣಗಳು..

Read Next

ದೇಶ ಸುತ್ತಬೇಕಿಲ್ಲ, ಕರ್ನಾಟಕದಲ್ಲೇ ಇವೆ ಅನೇಕ ಡಾಲ್ಫಿನ್‌ ತಾಣಗಳು..