ಬೆಳಗಾವಿಯ ಕುಂದಾ ಚೆಂದ ಜೆಎಲ್‌ಆರ್‌ನ ವಾಸ್ತವ್ಯ ಆನಂದ
ಬೆಳಗಾವಿಯಿಂದ ಕೇವಲ 10 ಕಿಲೋಮೀಟರ್ ದೂರದಲ್ಲಿರುವ ಪಶ್ಚಿಮ ಘಟ್ಟಗಳ ಗುಡ್ಡಗಾಡುಗಳಲ್ಲಿರುವ ಭೀಮಗಡ ಅಡ್ವೆಂಚರ್ ಕ್ಯಾಂಪ್ ಪ್ರಕೃತಿ ಮತ್ತು ಇತಿಹಾಸ ಒಳಗೊಂಡಿರುವ, ಸಾಹಸಗಳನ್ನು ಮಾಡುವವರಿಗೆ ಹಲವಾರು ಮರೆಯಲಾಗದ ಅನುಭವವನ್ನು ನೀಡುವ ಸ್ಥಳ. ಜಂಗಲ್ ಲಾಡ್ಜಸ್ ಮತ್ತು ರೆಸಾರ್ಟ್‌ಗಳಿಂದ (ಜೆಎಲ್‌ಆರ್) ನಿರ್ವಹಿಸಲ್ಪಟ್ಟ ಇದು ಕೇವಲ ಶಿಬಿರವಲ್ಲ, ಇದೊಂದು ದಿವ್ಯಾನುಭೂತಿ ನೀಡುವ ಪ್ರಾಕೃತಿಕ ಜಾಗ.
ಕುಂದಾನಗರಿ ಬೆಳಗಾವಿ ಅಂದ ತಕ್ಷಣ ನಮ್ಮ ನೆನಪಿಗೆ ಬರುವುದು ಕನ್ನಡ ಹಾಗೂ ಮರಾಠಿಗರ ನಡುವಿನ ಜಗಳ-ಗಲಾಟೆಗಳು. ಆದರೆ, ಬೆಳಗಾವಿ ಅಂದರೆ, ಬರೀ ಜಗಳಕ್ಕಷ್ಟೇ ಅಲ್ಲ; ಭಾಷೆ ಮತ್ತು ಗಡಿಗಳನ್ನು ಮೀರಿ ಬೆಳಗಾವಿ ಬೆಳೆದು ನಿಂತಿದೆ. 1920ರಲ್ಲೇ ಬೆಳಗಾವಿಯಲ್ಲಿ ಕಾಂಗ್ರೆಸ್ ರಾಷ್ಟ್ರೀಯ ಸಮಾವೇಶ ನಡೆದಿತ್ತು. ಅಂಬೇಡ್ಕರ್ ಅವರು ಸಹ ಬೆಳಗಾವಿಗೆ ಹಲವಾರು ಬಾರಿ ಭೇಟಿ ನೀಡಿದ್ದರು. ಈಗಲೂ ಬೆಳಗಾವಿ ದೇಶದ ಪ್ರಮುಖ ನಗರ, ಹಲವಾರು ಕಂಪನಿಗಳನ್ನು ಹೊಂದಿ, ತನ್ನದೇ ಆದ ಬೆಳವಣಿಗೆಯಲ್ಲಿರುವ ನಗರ. ಹೈದರಾಬಾದ್, ಬೆಂಗಳೂರು, ಮಂಗಳೂರು ಹಾಗೂ ಇನ್ನಿತರ ನಗರಗಳಿಗೆ ಸಮಾನವಾದ ದೂರದಲ್ಲಿದೆ. ಮೊದಲಿನಿಂದಲೂ ಕಾಸ್ಮೋಪಾಲಿಟನ್ ನಗರವಾಗಿರುವ ಬೆಳಗಾವಿ ಇಂದಿಗೂ ಅನೇಕ ಸಂಸ್ಕೃತಿಯ, ಭಾಷೆಯ ಜನರನ್ನು ತನ್ನತ್ತ ಕರೆಯುತ್ತದೆ.

ಬೆಳಗಾವಿಯಲ್ಲಿ ಮರಾಠಿಗರು ಕಟ್ಟಿಸಿದ್ದ ಹಲವಾರು ಕೋಟೆ ಕೊತ್ತಲಗಳಿವೆ. ಚೆನ್ನಮ್ಮ ರಾಯಣ್ಣನವರ ಸ್ಮಾರಕಗಳೂ ಇವೆ. ಬೆಳಗಾವಿಯಲ್ಲಿ ಸಂರಕ್ಷಿತ ಕಾಡುಗಳೂ ಇವೆ. ಅದರಲ್ಲಿ ಭೀಮಗಡ ಕಾಡು ಎಲ್ಲರಿಗೂ ಗೊತ್ತಿರುವಂಥದ್ದೇ. ಭೀಮಗಡಕ್ಕೆ ಬಂದ ಹೆಸರಿನ ಬಗ್ಗೆ ಜಾಸ್ತಿ ತಲೆ ಕೆಡಿಸಿಕೊಳ್ಳುವುದು ಬೇಡ. ಏಕೆಂದರೆ, ಶಿವಾಜಿ ಮಹಾರಾಜ್ ಕಟ್ಟಿಸಿದ ಕೋಟೆಯಿಂದ ಈ ಕಾಡು ಭೀಮಗಡ ವಾಯಿತು. ಅಂಥ ಈ ಕಾಡಿನಲ್ಲಿ ಒಂದು ಜಂಗಲ್ ಇದೆ. ಕಾಡಿನಲ್ಲಿ ಜಂಗಲ್ಲಾ ಅಂತ ಗೊಂದಲಕ್ಕೊಳಗಾಗಬೇಡಿ. ನಾವು ಹೇಳ್ತಿರೋದು ಜಂಗಲ್ ಲಾಡ್ಜಸ್ ಮತ್ತು ರೆಸಾರ್ಟ್ ಬಗ್ಗೆ!
ಬೆಳಗಾವಿಯಿಂದ ಕೇವಲ 10 ಕಿಲೋಮೀಟರ್ ದೂರದಲ್ಲಿರುವ ಪಶ್ಚಿಮ ಘಟ್ಟಗಳ ಗುಡ್ಡಗಾಡುಗಳಲ್ಲಿರುವ ಭೀಮಗಡ ಅಡ್ವೆಂಚರ್ ಕ್ಯಾಂಪ್ ಪ್ರಕೃತಿ ಮತ್ತು ಇತಿಹಾಸ ಒಳಗೊಂಡಿರುವ, ಸಾಹಸಗಳನ್ನು ಮಾಡುವವರಿಗೆ ಹಲವಾರು ಮರೆಯಲಾಗದ ಅನುಭವವನ್ನು ನೀಡುವ ಸ್ಥಳ. ಜಂಗಲ್ ಲಾಡ್ಜಸ್ ಮತ್ತು ರೆಸಾರ್ಟ್‌ಗಳಿಂದ (ಜೆಎಲ್‌ಆರ್) ನಿರ್ವಹಿಸಲ್ಪಟ್ಟ ಇದು ಕೇವಲ ಶಿಬಿರವಲ್ಲ, ಇದೊಂದು ದಿವ್ಯಾನುಭೂತಿ ನೀಡುವ ಪ್ರಾಕೃತಿಕ ಜಾಗ.

ಪರಿಸರದಲ್ಲಿರಲು ಇಷ್ಟ ಪಡುವವರು, ಚಾರಣಿಗಳು, ʼಸಿಟಿ ಬೋರಪ್ಪ. ಯಾವ್ದಾದ್ರೂ ಕಾಡು ಸೇರ್ಕೋಬೇಕುʼ ಅಂತ ಅಂದುಕೊಳ್ಳುವವರಿಗೆ ಇದು ನೆಚ್ಚಿನ ತಾಣ. ಇನ್ನು ಇತಿಹಾಸ ಪ್ರಿಯರಿಗೆ 17 ನೇ ಶತಮಾನದಲ್ಲಿ ಛತ್ರಪತಿ ಶಿವಾಜಿ ಮಹಾರಾಜರು ನಿರ್ಮಿಸಿದ ಭೀಮಗಡ ಕೋಟೆಯೂ ಇದೆ. ಕಾಡಿನಲ್ಲಿ ಓಡಾಡಲು ಇಚ್ಛಿಸುವವರಿಗೆ ಹಕ್ಕಿಗಳ ಚಿಲಿಪಿಲಿ ಗಾನವಿದೆ. ಪ್ರಾಣಿಗಳೆಲ್ಲ ಬಂದು ʼಹಾಯ್ʼ ಮಾಡಿ ಹೋಗುತ್ತವೆ. ಇಲ್ಲಿನ ನೂರಾರು ವಿಧದ ಗಿಡ-ಮರಗಳು ನಿಸರ್ಗದ ಜತೆಗೆ ನಿಮ್ಮನ್ನು ಕನೆಕ್ಟ್ ಮಾಡುತ್ತಾ, ಬೇರೆಯದೇ ಲೋಕಕ್ಕೆ ಕರೆದೊಯ್ಯುತ್ತವೆ.
ಭೀಮಗಡ ಅಡ್ವೆಂಚರ್ ಕ್ಯಾಂಪ್ ಬಗ್ಗೆ ನಿಮಗೆಷ್ಟು ಗೊತ್ತು?
ಬೆಂಗಳೂರು, ಮುಂಬೈ ಅಥವಾ ಗೋವಾದಂಥ ಜನದಟ್ಟಣೆಯ ನಗರಗಳಿಂದ ಬರುವವರಿಗೆ ಭೀಮಗಡ ಅಡ್ವೆಂಚರ್ ಕ್ಯಾಂಪ್ ತವರುಮನೆ. ಬರೀ ದೂರದ ಊರಿನವರಿಗಷ್ಟೇ ಅಲ್ಲ, ಪಕ್ಕದ ಬೆಳಗಾವಿಯವರಿಗೂ ಪಕ್ಕದ ಮನೆ ಥರ. ಬೇಜಾರಾದಾಗಲೆಲ್ಲ ಹೋಗುತ್ತಾರೆ. ಈ ಶಿಬಿರವು ಸೌಕರ್ಯದಲ್ಲಿ ರಾಜಿ ಮಾಡಿಕೊಳ್ಳದೆ ಅರಣ್ಯದಲ್ಲೂ ಆರಾಮಾಗಿರಲು ಎಡೆಮಾಡಿಕೊಟ್ಟಿದೆ. ಪ್ರಾಚೀನ ಕೋಟೆಗಳಿಗೆ ಚಾರಣ ಮಾಡಲು, ಗೋಲ್ ಘರ್‌ನಲ್ಲಿ ಉತ್ತರ ಕರ್ನಾಟಕದ ರೊಟ್ಟಿ ಊಟ ಸವಿಯಲು ಅಥವಾ ಖಾನಾಪುರದಲ್ಲಿ ಕುಂಬಾರಿಕೆ ಕಲೆಯನ್ನು ಕಲಿಯಲು ಭೀಮಗಡ ಕ್ಕಿಂತ ಬೆಸ್ಟ್ ಜಾಗ ಯಾವುದಿದೆ? ಭೀಮಗಡ ದಲ್ಲಿ ಪ್ರತಿ ಕ್ಷಣವೂ ಅರ್ಥಪೂರ್ಣ.
ಬೆಳಗಾವಿ ಗಾಲ್ಫ್ ಕ್ಲಬ್‌ನ ಹತ್ತಿರ…
ಬೆಳಗಾವಿಯಿಂದ ಕೇವಲ 10 ಕಿಲೋಮೀಟರ್ ದೂರದಲ್ಲಿ, ಬೆಳಗಾವಿ ಗಾಲ್ಫ್ ಕೋರ್ಸ್ ಪಕ್ಕದಲ್ಲಿರುವ ಬೆಟ್ಟದ ಮೇಲೆ, ಭೀಮಗಡ ಅಡ್ವೆಂಚರ್ ಕ್ಯಾಂಪ್ ಇದೆ. ರಾಜ್ಯದ ಜನರ ಮನಸ್ಸನ್ನು ಗೆದ್ದಿರುವ ಜಂಗಲ್ ಲಾಡ್ಜಸ್ ಮತ್ತು ರೆಸಾರ್ಟ್ಸ್ (JLR) ಅವರ ನಿರ್ವಹಣೆಯಲ್ಲಿರುವ ಈ ರೆಸಾರ್ಟ್, ಪಶ್ಚಿಮ ಘಟ್ಟದಲ್ಲಿ ಸಾಹಸ ಮತ್ತು ಪರಿಸರ ಪ್ರವಾಸೋದ್ಯಮದ ಪರಿಪೂರ್ಣ ಚಿತ್ರಣ ನೀಡುತ್ತದೆ.
ಈ ರೆಸಾರ್ಟ್‌ನಲ್ಲಿ ಏನೇನೆಲ್ಲ ಮಾಡಬಹುದು ಗೊತ್ತಾ?

ಬೆಳಗಾವಿಯಿಂದ ಕೇವಲ 18ಕಿಮೀ ದೂರದಲ್ಲಿರುವ ರಾಜಹಂಸಗಡ ಕೋಟೆಗೆ ಗೈಡೆಡ್ ಟ್ರೆಕ್ ಮಾಡಬಹುದು. 14ನೇ ಶತಮಾನದಲ್ಲಿ ನಿರ್ಮಿಸಲಾದ ಈ ಪ್ರಾಚೀನ ಕೋಟೆಯು ರಾಜರ, ಯುದ್ಧಗಳ ಮತ್ತು ವ್ಯಾಪಾರ ಮಾರ್ಗಗಳ ಹಲವಾರು ಕಥೆಗಳನ್ನು ಹೇಳುತ್ತದೆ. ರಟ್ಟ ರಾಜವಂಶ ಮತ್ತು ಟಿಪ್ಪು ಸುಲ್ತಾನ್ ಆಳಿದ ಇತಿಹಾಸವನ್ನು ಹಂಚಿಕೊಳ್ಳುವ ಗೈಡ್‌ಗಳು ಇದ್ದಾರೆ. ಈ ಬೆಟ್ಟದ ಮೇಲಿರುವ ಸಿದ್ದೇಶ್ವರ ದೇವಸ್ಥಾನಕ್ಕೆ ಹೋಗಿ ನಮಸ್ಕಾರ ಮಾಡಿ ಬರಬಹುದು. ಬೆಟ್ಟದ ಮೇಲಿಂದ ಮಹದಾಯಿ ಹರಿಯುವುದನ್ನು ನೋಡಿ, ಒಳ್ಳೊಳ್ಳೆ ಫೊಟೋಗಳನ್ನು ಕ್ಲಿಕ್ಕಿಸಬಹುದು.
ಹೊಟ್ಟೆ ತುಂಬ ರೊಟ್ಟಿ
ಶಿಬಿರದಲ್ಲಿ ಗೋಲ್ ಘರ್ ಇದೆ. ಹೆಸರೇ ಹೇಳುವ ಹಾಗೆ ವೃತ್ತಾಕಾರದಲ್ಲಿರುವ ಈ ಕಟ್ಟಡ ಎಲ್ಲರ ಹಸಿವನ್ನೂ ತಣಿಸುತ್ತದೆ. ಇಲ್ಲಿ ಬಫೆ ಶೈಲಿಯಲ್ಲಿ ಊಟವನ್ನು ನೀಡಲಾಗುತ್ತದೆ. ಜೋಳದ ರೊಟ್ಟಿ, ಝುಣಕಾ ಮತ್ತು ಬೆಳಗಾವಿ ಕುಂದಾದಂಥ ರುಚಿಕರವಾದ ಸ್ಥಳೀಯ ಭಕ್ಷ್ಯಗಳನ್ನು ಆನಂದಿಸಬಹುದು. ಶಿಬಿರದಲ್ಲಿರುವ ಎಲ್ಲರೂ ಒಟ್ಟಾಗಿ ಊಟಕ್ಕೆ ಸೇರುವುದರಿಂದ, ಅವರಿವರ ಕತೆಗಳು, ಗಾಸಿಪ್‌ಗಳು, ಹೊಸ ಮುಖಗಳು, ಜೋಕ್‌ಗಳೆಲ್ಲ ಸೇರಿ ಸ್ವಲ್ಪ ಜಾಸ್ತಿ ಊಟ ಹೋಗುತ್ತದೆ. ಸಂಜೆಯಾಗುತ್ತಿದ್ದಂತೆ, ಫೈರ್‌ಕ್ಯಾಂಪ್ ಸುತ್ತ ಕೂತು, ನಕ್ಷತ್ರಗಳನ್ನು ಎಣಿಸುತ್ತ, ಎಲ್ಲರ ಜತೆ ಮಾತನಾಡುತ್ತ ಟೈಮ್ ಪಾಸ್ ಮಾಡಬಹುದು.
ನೇಚರ್ ವಾಕ್

ಹಲವಾರು ರಾಜ್ಯಗಳಿಗೆ ಶ್ವಾಸಕೋಶವಾಗಿರುವ ಪಶ್ಚಿಮ ಘಟ್ಟಗಳಲ್ಲಿ ನೇಚರ್ ವಾಕ್ ಮಾಡಬಹುದು. ಶುದ್ಧ ಗಾಳಿ, ಕಣ್ಣಿಗೆ ರಾಚುವಷ್ಟು ಹಸಿರಿನ ಹೊದಿಕೆ. ಕಿವಿ ಇಂಪಾಗಿಸುವ ಖಗಗಳ ಗಾನ, ಅಲ್ಲಲ್ಲಿ ಕಾಣುವ ವಿಶೇಷ ಪ್ರಾಣಿಗಳು. ನಮ್ಮ ಇಡೀ ದಿನವನ್ನು ವಿಶೇಷವನ್ನಾಗಿ ಮಾಡುತ್ತವೆ. ಮಲಬಾರ್ ಗ್ರೇ, ಹಾರ್ನ್‌ಬಿಲ್‌ನಂಥ ಪಕ್ಷಿಗಳು ಮತ್ತು ಕೀಟಗಳನ್ನು ತಿನ್ನುವ ಡ್ರೊಸೆರಾದಂಥ ಸಸ್ಯಗಳನ್ನು ಗುರುತಿಸಲು ಗೈಡ್‌ಗಳೂ ಇರುತ್ತಾರೆ. ಅಂಬೋಲಿ ಮತ್ತು ಸುರಳ್ ಜಲಪಾತಗಳ ಬಳಿಯ ಕಾಲುದಾರಿಗಳು ಶಾಂತಿಯುತ ಅರಣ್ಯದಲ್ಲಿ ಮರೆಯಲಾಗದಂಥ ಅನುಭವ ನೀಡುತ್ತದೆ. ಅದರ ಜತೆಗೆ ಅಳಿಲಿನಿಂದ ಹಿಡಿದು ಚಿರತೆಗಳಂಥ ವನ್ಯಜೀವಿಗಳು ನಮ್ಮ ಕಣ್ಣ ಮುಂದೆ ಹಾದು ಹೋಗುತ್ತವೆ.
ಕುಂಬಾರಿಕೆ ಮಾಡೋಕೆ ಇಷ್ಟನಾ?
ಶಿಬಿರದಿಂದ ಸ್ವಲ್ಪ ದೂರದಲ್ಲಿ, ಅಂದರೆ, ಖಾನಾಪುರದಲ್ಲಿ ಬೆಳಗಾವಿಯ ಕುಂಬಾರಿಕೆ ಸಂಸ್ಥೆ ಇದೆ. ಇಲ್ಲಿ, ನುರಿತ ಕಲಾವಿದರು ಜೇಡಿಮಣ್ಣಿನಿಂದ ಸಾಂಪ್ರದಾಯಿಕ ವಸ್ತುಗಳನ್ನು ದೀಪಗಳು ಮತ್ತು ಗಡಿಗೆಗಳನ್ನು ಮಾಡುವುದು ಹೇಳಿಕೊಡುತ್ತಾರೆ. ಅವರ ಜತೆ ಸೇರಿ ನೀವು ಕುಂಬಾರಿಕೆಯನ್ನು ಮಾಡಬಹುದು. ನಿಮ್ಮ ಕಲೆ ಮತು ಕ್ರಿಯೇಟಿವಿಟಿಯನ್ನು ಪ್ರದರ್ಶನ ಮಾಡಬಹುದು.
ಸೀಸನ್
ಭೀಮಗಡ ಕ್ಯಾಂಪ್‌ಗೆ ಭೇಟಿ ನೀಡಲು ಸೂಕ್ತ ಸಮಯ ಅಕ್ಟೋಬರ್ ಮತ್ತು ಮಾರ್ಚ್ ನಡುವೆ. ಈ ಸಮಯದಲ್ಲಿ ಹವಾಮಾನವು ಆಹ್ಲಾದಕರವಾಗಿ, ತಂಪಾಗಿ ಇರುತ್ತದೆ ಮತ್ತು ಕಾಡಲ್ಲಿ ಸುತ್ತಾಡಲು ಇದು ಒಳ್ಳೆಯ ಸಮಯ. ಈ ಸಮಯದಲ್ಲಿ, ಭಾರೀ ಬಿಸಿಲು ಅಥವಾ ಮಳೆಯ ಬಗ್ಗೆ ಚಿಂತೆಯೇ ಇಟ್ಟುಕೊಳ್ಳಬೇಡಿ. ಆರಾಮವಾಗಿ ಚಾರಣ, ಪ್ರಕೃತಿ ನಡಿಗೆಗಳು ಮತ್ತು ಎಲ್ಲ ಸಾಹಸ ಚಟುವಟಿಕೆಗಳನ್ನು ಆನಂದಿಸಿ.
ಜೂನ್‌ನಿಂದ ಸೆಪ್ಟೆಂಬರ್ ವರೆಗಿನ ಮಳೆಗಾಲವು ಕಾಡಿಗೆ ಯೌವ್ವನವನ್ನು ಕೊಟ್ಟು, ಹಸಿರಿನಿಂದ ರಂಗೇರಿಸಿರುತ್ತದೆ. ಆದರೆ ಮಳೆಗಾಲದ ಸಮಯದಲ್ಲಿ ಕಾಲುದಾರಿಗಳಲ್ಲಿ ಜಾರಬಹುದು. ನೀವು ಸೌಕರ್ಯ ಮತ್ತು ನೈಸರ್ಗಿಕ ಸೌಂದರ್ಯದ ಅತ್ಯುತ್ತಮ ಸಮತೋಲನವನ್ನು ಬಯಸಿದರೆ, ಅಕ್ಟೋಬರ್ ನಿಂದ ಮಾರ್ಚ್ ವರೆಗಿನ ತಂಪಾದ ಸಮಯದಲ್ಲಿ ನಿಮ್ಮ ಪ್ರವಾಸವನ್ನು ಯೋಜಿಸುವುದು ಉತ್ತಮ.
ಪ್ಯಾಕೇಜ್‌ಗಳು
ಕಾಟೇಜ್ ಪ್ಯಾಕೇಜ್
ಪ್ರಕೃತಿಯೊಂದಿಗೆ ಬೆರೆಯಲು ಮತ್ತು ಆಧುನಿಕ ಸೌಕರ್ಯವನ್ನು ನೀಡಲು ವಿನ್ಯಾಸಗೊಳಿಸಲಾದ ಆಕರ್ಷಕ ಕುಟೀರಗಳಲ್ಲಿ ಉಳಿಯಿರಿ. ಈ ಶಿಬಿರವು 13 ಕುಟೀರಗಳನ್ನು ಹೊಂದಿದೆ. ಪ್ರತಿಯೊಂದೂ ಒಳ್ಳೆಯ ವಿಶ್ರಾಂತಿಗೆ ಹೇಳಿ ಮಾಡಿಸಿದ್ದು.
ಪ್ಯಾಕೇಜ್‌ನಲ್ಲಿ
ಆರಾಮದಾಯಕ ಕಾಟೇಜ್ ವಸತಿ
ಉಚಿತ ಉಪಾಹಾರ
ಗೈಡೆಡ್ ಪ್ರಕೃತಿ ಚಟುವಟಿಕೆಗಳು ಮತ್ತು ದೃಶ್ಯವೀಕ್ಷಣೆ
ಸಂಜೆ ಫೈರ್‌ಕ್ಯಾಂಪ್ ಅನುಭವಗಳು
ಸ್ವಚ್ಛ, ಖಾಸಗಿ ಸ್ನಾನಗೃಹಗಳು
ಪ್ರತಿ ಕಾಟೇಜ್‌ನಲ್ಲಿ ಟಿವಿ ಮತ್ತು ಕಾಫಿ ಮಷೀನ್
ಪಾರ್ಕಿಂಗ್ ಸೌಲಭ್ಯಗಳು
ಹೊರಾಂಗಣ ಬಳಕೆಗಾಗಿ ಛತ್ರಿಗಳು ಮತ್ತು ಟಾರ್ಚ್‌ಗಳು
ದಿನಚರಿ
ದಿನ 1
1:00 PM - ಆಗಮನ ಮತ್ತು ಚೆಕ್-ಇನ್
ಕಾಟೇಜ್‌ನಲ್ಲಿ ಆರಾಮವಾಗಿ ಸ್ವಲ್ಪ ರೆಸ್ಟ್ ಮಾಡಿ ಮತ್ತು ಪ್ರಶಾಂತ ಪರಿಸರದಲ್ಲಿ ಸ್ವಲ್ಪ ಸಮಯ ಕಳೆಯಿರಿ. ಫ್ರೆಶ್ ಆಗಿ ಮತ್ತು ಅರಣ್ಯದ ವೈಬ್‌ಗಳನ್ನು ಎಂಜಾಯ್ ಮಾಡಿ.
1:30 PM - 2:30 PM - ಗೋಲ್ ಘರ್‌ನಲ್ಲಿ ಊಟ
ಉತ್ತರ ಕರ್ನಾಟಕದ ಜವಾರಿ ಊಟ ಮಾಡಿ, ರೊಟ್ಟಿ, ಎಣ್ಣೆಗಾಯಿ, ಶೇಂಗಾ ಹಿಂಡಿ, ಸಿಹಿಪದಾರ್ಥದಲ್ಲಿ ಕುಂದಾಗಳನ್ನೆಲ್ಲ ಸೇರಿಸಿದ ಒಳ್ಳೆಯ ಊಟ ಮಾಡಿ
3:30 PM - 6:00 PM - ರಾಜಹಂಸಗಡ ಕೋಟೆಗೆ ವಿಹಾರ
ರಾಜಹಂಸಗಡ ಕೋಟೆಯ ಬಗ್ಗೆ ತಿಳಿಯಲು ಇಲ್ಲಿನ ಮಾರ್ಗದರ್ಶಿಗಳ ಜತೆ ಒಂದು ಸುತ್ತು ಹಾಕಿಕೊಂಡು ಬನ್ನಿ, ಆಗ ಇದು ಬರೀ ವಾಕ್ ಆಗದೆ, ಇತಿಹಾಸದ ಒಳಹರಿವುಗಳನ್ನು ತಿಳಿದುಕೊಳ್ಳುವ ಸಮಯವಾಗುತ್ತದೆ. ಅದರ ಜತೆಗೆ ರಾಜಹಂಸಗಡದಲ್ಲಿ ಒಳ್ಳೊಳ್ಳೆ ಫೊಟೋಗಳು ಸಿಗುತ್ತವೆ. ಸ್ಮೈಲ್ ಮಾಡಿ, ಕ್ಲಿಕ್ ಮಾಡಿ.
6:00 PM - 6:30 PM - ಸಂಜೆ ಚಹಾ/ಕಾಫಿ
ಸಂಜೆಯಾಗುತ್ತಿದ್ದಂತೆ ಅರಣ್ಯದಲ್ಲಿ ದಿವ್ಯ ಮೌನ ಶುರುವಾಗುತ್ತದೆ. ಆ ಮೌನದಲ್ಲಿ ಒಂದೊಳ್ಳೆ ಟೀ ಅಥವಾ ಕಾಫೀ ಹೀರುತ್ತ, ಸುತ್ತಾಡಿ ಬಂದ ಸ್ಥಳಗಳ ಬಗ್ಗೆ ಮೆಲುಕು ಹಾಕುತ್ತ, ನಿಮ್ಮ ಸ್ನೇಹಿತರು ಅಥವಾ ಪ್ರೀತಿ ಪಾತ್ರರ ಜತೆ ಹರಟೆ ಹೊಡೆಯಿರಿ.
ರಾತ್ರಿ 8:30 – 9:30 – ಗೋಲ್ ಘರ್‌ನಲ್ಲಿ ಫೈರ್‌ಕ್ಯಾಂಪ್ ಭೋಜನ
ಬೆಚ್ಚಗಿನ ಕ್ಯಾಂಪ್‌ಫೈರ್ ಸುತ್ತಲೂ ವಿಶ್ರಾಂತಿ ಪಡೆಯಿರಿ ಮತ್ತು ರುಚಿಕರವಾದ ಭೋಜನವನ್ನು ಆನಂದಿಸಿ. ತಲೆ ಎತ್ತಿ ನೋಡಿದರೆ ಹೊಳೆಯುವ ನಕ್ಷತ್ರಗಳನ್ನು ಎಣಿಸುತ್ತಾ, ಇಲ್ಲಿರುವ ಬೇರೆ ಅತಿಥಿಗಳು ಮತ್ತು ಸಿಬ್ಬಂದಿಯೊಂದಿಗೆ ಕಾಡಿನ ಕಥೆಗಳನ್ನು ಹಂಚಿಕೊಳ್ಳಿ.
ದಿನ 2
6:00 AM –
ವೇಕಪ್ ಕಾಲ್
ಬೆಳಗ್ಗೆ ಬೇಗ ಎದ್ದು, ಕಾಡಲ್ಲಿ ಮತ್ತೊಂದು ಸುತ್ತುಹೊಡೆಯಲು ಸಿದ್ಧರಾಗಿ
6:30 – 8:30 AM – ಮಾರ್ಗದರ್ಶಿ ಪ್ರಕೃತಿ ನಡಿಗೆ
ಭೀಮಗಡ ವನ್ಯಜೀವಿ ಅಭಯಾರಣ್ಯದ ಶ್ರೀಮಂತ ಜೀವವೈವಿಧ್ಯವನ್ನು ಅನ್ವೇಷಿಸುತ್ತಾ ನಮ್ಮ ನಡಿಗೆಯನ್ನು ಪ್ರಾರಂಭಿಸಿ. ಪಕ್ಷಿಗಳು, ಚಿಟ್ಟೆಗಳು ಮತ್ತು ಎಂದೂ ಕಾಣದಿರುವ ವನ್ಯಜೀವಿಗಳನ್ನು ಗುರುತಿಸಲು ಒಂದು ಉತ್ತಮ ಅವಕಾಶ.
8:30 – 9:30AM ಉಪಾಹಾರ
ಇಷ್ಟೊಂದೆಲ್ಲ ನಡೆದು ಬಂದ ಮೇಲೆ ಹೊಟ್ಟೆ ಸುಮ್ಮನಿರಲ್ಲ ಸ್ವಾಮಿ, ಅದನ್ನು ಆಗಾಗ ತುಂಬಿಸುತ್ತಲೇ ಇರಬೇಕು ಅಲ್ವಾ?
10:30 AM– ಚೆಕ್-ಔಟ್
ಮರೆಯಲಾಗದ ನೆನಪುಗಳು ಮತ್ತು ಆತ್ಮೀಯ ಆತಿಥ್ಯದ ಸಂತಸವನ್ನು ಹೊತ್ತು ಕಾಡಿಗೆ ವಿದಾಯ ಹೇಳಿ.
ದಾರಿ ಹೇಗೆ?
ಕರ್ನಾಟಕದ ಬೆಳಗಾವಿಯಿಂದ ಕೇವಲ 10ಕಿಮೀ ದೂರದಲ್ಲಿರುವ ಬೆಟ್ಟಗಳ ಮೇಲೆ ಭೀಮಗಡ ಅಡ್ವೆಂಚರ್ ಕ್ಯಾಂಪ್ ಇದೆ. ಅದಕ್ಕೆ ಹೋಗುವ ದಾರಿ ಬಗ್ಗೆ ಮಾಹಿತಿ ಇಲ್ಲಿದೆ.
ವಿಮಾನದ ಮೂಲಕ
ಹತ್ತಿರದ ವಿಮಾನ ನಿಲ್ದಾಣವೆಂದರೆ ಬೆಳಗಾವಿ ವಿಮಾನ ನಿಲ್ದಾಣ (IXG), ಇದು ಶಿಬಿರದಿಂದ ಸುಮಾರು 35 ಕಿಮೀ ದೂರದಲ್ಲಿದೆ. ಇದು ಪ್ರಮುಖ ನಗರಗಳಿಗೆ ಸಂಪರ್ಕ ಕಲ್ಪಿಸುತ್ತದೆ, ಇದು ಪ್ರಯಾಣಿಕರಿಗೆ ಅನುಕೂಲಕರವಾಗಿದೆ. ವಿಮಾನ ನಿಲ್ದಾಣದಿಂದ, ನೀವು ಟ್ಯಾಕ್ಸಿಯನ್ನು ಬಾಡಿಗೆಗೆ ಪಡೆಯಬಹುದು ಅಥವಾ ಸ್ಥಳೀಯ ಸಾರಿಗೆಯನ್ನು ಬಳಸಿಕೊಂಡು ಶಿಬಿರವನ್ನು ತಲುಪಬಹುದು.
ರೈಲಿನ ಮೂಲಕ
ಹತ್ತಿರದ ರೈಲು ನಿಲ್ದಾಣವೆಂದರೆ ಬೆಳಗಾವಿ ಜಂಕ್ಷನ್, ಇದು ಬೆಂಗಳೂರು, ಮುಂಬೈ ಮತ್ತು ಪುಣೆಯಂಥ ಪ್ರಮುಖ ನಗರಗಳಿಗೆ ಉತ್ತಮ ಸಂಪರ್ಕ ಹೊಂದಿದೆ. ರೈಲ್ವೇ ನಿಲ್ದಾಣದಿಂದ, ಶಿಬಿರವು ಸುಮಾರು 10 ಕಿಮೀ ದೂರದಲ್ಲಿದೆ. ಇಲ್ಲಿಗೆ ತಲುಪಲು ಅಲ್ಲಿ ಟ್ಯಾಕ್ಸಿಗಳ ದಂಡೇ ಇರುತ್ತೆ.
ರಸ್ತೆಯ ಮೂಲಕ
ಬೆಳಗಾವಿ ನಗರದಿಂದ ಇದು ಸುಮಾರು 10ಕಿಮೀ ದೂರದಲ್ಲಿದೆ.
ಬೆಂಗಳೂರಿನಿಂದ ಸುಮಾರು 505 ಕಿಮೀ ದೂರವಿದೆ, ಕಾರಿನಲ್ಲಿ ಸುಮಾರು 9 ರಿಂದ 10 ಗಂಟೆಗಳ ಸಮಯ ತೆಗೆದುಕೊಳ್ಳುತ್ತದೆ.
ಮುಂಬೈನಿಂದ ಸುಮಾರು 502 ಕಿಮೀ ದೂರದಲ್ಲಿದೆ, ಸುಮಾರು 9 ರಿಂದ 10 ಗಂಟೆಗಳ ಡ್ರೈವ್ ಮಾಡಬೇಕಾಗುತ್ತದೆ.
ಗೋವಾದಿಂದ ಸುಮಾರು 103 ಕಿಮೀ ದೂರದಲ್ಲಿದೆ, ಸುಮಾರು 2 ಗಂಟೆಗಳ ಡ್ರೈವ್ ಮಾಡಬಹುದು.
ಸಂಪರ್ಕ
ಬೆಳಗಾವಿ ಗಾಲ್ಫ್ ಮೈದಾನದ ಎದುರು,
ಕಟಗಲಿ ರಸ್ತೆ, ದೇಸೂರು, ಖಾನಾಪುರ,
ಬೆಳಗಾವಿ ಜಿಲ್ಲೆ. ಖಾನಾಪುರ - 590014
ಮ್ಯಾನೇಜರ್: ಸಲ್ಮಾ
ಸಂಪರ್ಕ ಸಂಖ್ಯೆ: 7338682616
ಇಮೇಲ್ ಐಡಿ: info@junglelodges.com