ಗೌಡಗೆರೆಯ ಚಾಮುಂಡೇಶ್ವರಿ
ಗೌಡಗೆರೆಯಲ್ಲಿ ಒಬ್ಬ ರೈತ ತನ್ನ ಹೊಲದಲ್ಲಿ ಉಳುಮೆ ಮಾಡುತ್ತಿದ್ದ. ಆಗ ಅವನಿಗೆ ಚಾಮುಂಡೇಶ್ವರಿಯ ವಿಗ್ರಹ ಸಿಕ್ಕಿತು. ಅಂದಿನ ರಾತ್ರಿಯೇ ದೇವಿಯು ಅವನ ಕನಸಿನಲ್ಲಿ ಕಾಣಿಸಿಕೊಂಡು, ಆ ಸ್ಥಳದಲ್ಲಿ ತನಗೊಂದು ದೇವಾಲಯ ನಿರ್ಮಿಸುವಂತೆ ಸೂಚಿಸಿದಳು. ಅದರಂತೆ ಗ್ರಾಮಸ್ಥರೆಲ್ಲರೂ ಒಟ್ಟಾಗಿ, ದೇವಾಲಯವನ್ನು ನಿರ್ಮಿಸಿದರು ಎನ್ನಲಾಗಿದೆ.
- ವಾಣಿ ಮೈಸೂರು
ಗೌಡಗೆರೆಯ ಚಾಮುಂಡೇಶ್ವರಿ ದೇವಾಲಯ, ಕರ್ನಾಟಕದ ರೇಷ್ಮೆ ನಾಡು ಎಂದು ಗುರುತಿಸಿಕೊಂಡಿರುವ ರಾಮನಗರ ಜಿಲ್ಲೆಯ ಚನ್ನಪಟ್ಟಣ ತಾಲೂಕಿನ ಗೌಡಗೆರೆಯಲ್ಲಿದೆ. ತಾಯಿ ಚಾಮುಂಡೇಶ್ವರಿ ದೇವಿಯ 60 ಅಡಿ ಎತ್ತರದ ಪಂಚಲೋಹದ ವಿಗ್ರಹ ಇಲ್ಲಿದೆ. ಸದಾ ವಿಭಿನ್ನ ಅಲಂಕಾರಗಳಿಂದ ವಿಭಿನ್ನ ರೂಪದಲ್ಲಿ ಕಂಗೊಳಿಸುವ ತಾಯಿಯನ್ನು ನೋಡಲು ಎರಡೂ ಕಣ್ಣುಗಳು ಸಾಲದು. ಈ ದೇವಾಲಯದ ತುಂಬೆಲ್ಲಾ ಭಕ್ತರ ಹರಕೆ ಹೊತ್ತು ಕಟ್ಟಿರುವ ತೆಂಗಿನಕಾಯಿಗಳ ಚಿತ್ರಣ ಕಂಡುಬರುತ್ತದೆ. ಅಲ್ಲಿ ದೇವರ ಹೆಸರಲ್ಲಿ ತಲೆಯ ಮೇಲೆ ನೀರನ್ನು ಹಾಕಿಸಿಕೊಂಡರೆ ಪಾಪಗಳ ಪರಿಹಾರವಾಗುತ್ತದೆ, ಮುಕ್ತಿ ಸಿಗುತ್ತದೆ ಎನ್ನುವ ನಂಬಿಕೆ ಜನರದ್ದು. ಇಲ್ಲಿಗೆ ಬರುವ ಎಲ್ಲರಿಗೂ ದೇವಸ್ಥಾನದ ವತಿಯಿಂದ ಅನ್ನ ದಾಸೋಹ ಕಾರ್ಯಕ್ರಮ ನಡೆಯುತ್ತದೆ.

ದೇವಾಲಯದ ಹಿನ್ನೆಲೆ
ಗೌಡಗೆರೆಯಲ್ಲಿ ನೂರಾರು ವರ್ಷಗಳ ಹಿಂದೆ ಒಬ್ಬ ರೈತನು ತನ್ನ ಹೊಲದಲ್ಲಿ ಉಳುಮೆ ಮಾಡುತ್ತಿದ್ದ. ಆಗ ಅವನಿಗೆ ಚಾಮುಂಡೇಶ್ವರಿ ದೇವಿಯ ರೂಪದ ಒಂದು ವಿಗ್ರಹ ಸಿಕ್ಕಿತು. ಆ ದಿನ ರಾತ್ರಿಯೇ ದೇವಿ ಚಾಮುಂಡಿಯು ಅವನ ಕನಸಿನಲ್ಲಿ ಕಾಣಿಸಿಕೊಂಡು, ಆ ಸ್ಥಳದಲ್ಲಿ ತನಗೊಂದು ದೇವಾಲಯ ನಿರ್ಮಿಸುವಂತೆ ಸೂಚಿಸಿದಳು. ಅದರಂತೆ ಗ್ರಾಮಸ್ಥರೆಲ್ಲರೂ ಒಟ್ಟಾಗಿ, ದೇವಾಲಯವನ್ನು ನಿರ್ಮಿಸಿದರು ಎನ್ನಲಾಗಿದೆ.
ಶರಾವತಿಯ ಮಡಿಲಲ್ಲಿ ಸಿಗಂದೂರು ದೇವಿ
ದಾರಿ ಹೇಗೆ?
ಬೆಂಗಳೂರಿನಿಂದ 76 km ಮತ್ತು ಮೈಸೂರಿನಿಂದ 85 km ಗೌಡಗೆರೆಗೆ ತಲುಪಲು ಚನ್ನಪಟ್ಟಣದದಿಂದ ಬಸ್ಸು ಅಥವಾ ಅಲ್ಲಿ ಸಿಗುವ ಸ್ಥಳೀಯ ಆಟೋದಲ್ಲಿ ಹೋಗಬಹುದು. ಗದ್ದೆ ಸೀಮೆಯ ಬಯಲು ಮಾವಿನತೋಟ ಮತ್ತು ಅಡಿಕೆತೋಟಗಳು ಹೆಚ್ಚಾಗಿ ಕಂಡು ಬರುತ್ತದೆ. ಪ್ರಯಾಣ ಹಿತಕರ ವೆನಿಸುತ್ತದೆ ಮುಂಜಾನೆಯ ಪ್ರಯಾಣವಂತೂ ಇನ್ನು ತಂಪಾದ ವಾತಾವರಣವಿರುತ್ತದೆ. ಮತ್ತಷ್ಟು ಮನಸಿಗೆ ಮತ್ತು ಕಣ್ಣಿಗೆ ಮುದನೀಡುತ್ತದೆ.