ಬೆಂಗಳೂರಿನಲ್ಲಿ ಸೌತ್ ಆಫ್ರಿಕನ್ ಟೂರಿಸಂ ರೋಡ್ ಶೋ
ಫೆಬ್ರವರಿ 9 ರಿಂದ 12 ರವರೆಗೆ ಬೆಂಗಳೂರು, ಅಹಮದಾಬಾದ್, ಕೊಲ್ಕತ್ತಾ ಮತ್ತು ದೆಹಲಿಯಲ್ಲಿ ಸೌತ್ ಆಫ್ರಿಕನ್ ಟೂರಿಸಂ ರೋಡ್ ಶೋ ಹಮ್ಮಿಕೊಳ್ಳಲಾಗಿದ್ದು, ಪ್ರವಾಸೋದ್ಯಮ ಮಾರುಕಟ್ಟೆಯಲ್ಲಿ ಜವಾಬ್ದಾರಿಯುತ ಸ್ಥಾನ ಪಡೆಯುವ ವಿಶ್ವಾಸವನ್ನು ಸೌತ್ ಆಫ್ರಿಕಾ ವ್ಯಕ್ತಪಡಿಸಿದೆ.
ಬೆಂಗಳೂರಿನ ಐಟಿಸಿ ಗಾರ್ಡೇನಿಯಾ ಹೊಟೇಲ್ ನಲ್ಲಿ ಫೆಬ್ರವರಿ 9 ರಂದು ಸೌತ್ ಆಫ್ರಿಕನ್ ಟೂರಿಸಂ ರೋಡ್ ಶೋ ಹಮ್ಮಿಕೊಳ್ಳಲಾಗಿತ್ತು. ಭಾರತದ ಪ್ರವಾಸಿಗರನ್ನು ಸೆಳೆಯಲು, ಮತ್ತು ಭಾರತೀಯ ಪ್ರವಾಸೋದ್ಯಮ ಮಾರುಕಟ್ಟೆಯಲ್ಲಿ ಸ್ಥಾನವನ್ನು ಪಡೆಯಲು ಈ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು. ಭಾರತದೊಂದಿಗಿನ ಬಾಂಧವ್ಯವನ್ನು ಬಲಪಡಿಸಲು ಬುನಾದಿಯಾಗಲಿರುವ ಸೌತ್ ಆಫ್ರಿಕನ್ ಟೂರಿಸಂ ರೋಡ್ ಶೋದಲ್ಲಿ ಸೌತ್ ಆಫ್ರಿಕಾದ 40 ಎಕ್ಸಿಬಿಟರ್ಸ್ ಪ್ರವಾಸೋದ್ಯಮ ಸುಸ್ಥಿರತೆಗೆ ಮತ್ತು ಉಭಯ ದೇಶಗಳ ಪ್ರವಾಸೋದ್ಯಮ ಸಹಯೋಗದ ಕುರಿತು ಮಾಹಿತಿಗಳನ್ನು ಹಂಚಿಕೊಂಡಿದ್ದಾರೆ. ಫೆಬ್ರವರಿ 9 ರಿಂದ 12 ರವರೆಗೆ ಬೆಂಗಳೂರು, ಅಹಮದಾಬಾದ್, ಕೊಲ್ಕತ್ತಾ ಮತ್ತು ದೆಹಲಿಯಲ್ಲಿ ಟೂರಿಸಂ ರೋಡ್ ಶೋ ಹಮ್ಮಿಕೊಳ್ಳಲಾಗಿದ್ದು, ಪ್ರವಾಸೋದ್ಯಮ ಮಾರುಕಟ್ಟೆಯಲ್ಲಿ ಜವಾಬ್ದಾರಿಯುತ ಸ್ಥಾನ ಪಡೆಯುವ ವಿಶ್ವಾಸವನ್ನು ಸೌತ್ ಆಫ್ರಿಕಾ ವ್ಯಕ್ತಪಡಿಸಿದೆ.