Wednesday, November 11, 2026
Wednesday, November 11, 2026

ವಿಶ್ವದಲ್ಲಿ ಅತ್ಯಧಿಕ ಮಂದಿ ಭೇಟಿನೀಡುವ ಸ್ಥಳಗಳು ಯಾವುದು ಗೊತ್ತಾ?

ಥೈಲ್ಯಾಂಡ್‌ನ ರಾಜಧಾನಿಯಾದ ಬ್ಯಾಂಕಾಕ್ ಅನ್ನು ಪ್ರಪಂಚದಲ್ಲಿಯೇ ಅತ್ಯಂತ ಹೆಚ್ಚು ಮಂದಿ ಭೇಟಿನೀಡುವ ನಗರವೆಂದು ಪರಿಗಣಿಸಲಾಗುತ್ತದೆ. ಪ್ರತಿ ವರ್ಷ 22 ಮಿಲಿಯನ್‌ಕ್ಕೂ ಹೆಚ್ಚು ಅಂದರೆ 2 ಕೋಟಿ ವಿದೇಶಿ ಪ್ರವಾಸಿಗರು ಇಲ್ಲಿಗೆ ಭೇಟಿ ನೀಡುತ್ತಾರೆ. ಚಾವ್ ಫ್ರಾಯಾ ನದಿ ಹತ್ತಿರದಲ್ಲಿರುವ ಬ್ಯಾಂಕಾಕ್ ಸೌಂದರ್ಯಕ್ಕೆ ಎಂಥವರೂ ಮಾರುಹೋಗುತ್ತಾರೆ. ಇಲ್ಲಿನ ಸಂತೆಗಳು, ಬೀದಿ ಆಹಾರ, ಮಂದಿರಗಳು ಮತ್ತು ನೈಸರ್ಗಿಕ ಸೌಂದರ್ಯ ಪ್ರವಾಸಿಗರಿಗೆ ಆಕರ್ಷಣೆಯಾಗಿವೆ.

ದೇಶ ಸುತ್ತು ಕೋಶ ಓದು ಅಂತಾರೆ. ಜಗತ್ತಿನಲ್ಲಿರೋ ನಾನಾ ದೇಶಗಳನ್ನು ಸುತ್ತಿದಾಗ ಮಾತ್ರ ನಮಗೆ ವಿಶ್ವದಲ್ಲಿರುವ ವಿಭಿನ್ನ, ಸಂಸ್ಕೃತಿ, ಆಚಾರ ವಿಚಾರ, ಸಂಪ್ರದಾಯಗಳ ಬಗ್ಗೆ ತಿಳಿಯುತ್ತದೆ. ಅದರಲ್ಲೂ ಪ್ರವಾಸ ಮಾಡಿದಾಗ ಮಾತ್ರ ನಮಗೆ ನಮ್ಮ ದೇಶಕ್ಕಿಂತ ಬೇರೆ ದೇಶಗಳು ಯಾವುದರಲ್ಲಿ ವಿಭಿನ್ನವಾಗಿದೆ ಅನ್ನೋದು ತಿಳಿಯುತ್ತದೆ. ಪ್ರಪಂಚದಲ್ಲಿ ಕೆಲವೊಂದು ಸ್ಥಳಗಳು ಪ್ರವಾಸಿಗರ ಪಾಲಿಗೆ ಫೇವರಿಟ್ ಎನಿಸಿಕೊಂಡಿದೆ. ಅಂಥ ಅದ್ಭುತ ಎನಿಸುವ ಸ್ಥಳಕ್ಕೆ ಹೆಚ್ಚಿನ ಪ್ರವಾಸಿಗರು ಭೇಟಿ ನೀಡುತ್ತಲೇ ಇರುತ್ತಾರೆ. ಪ್ಯಾರಿಸ್‌ನ ಪ್ರೇಮಮಯ ಬೀದಿಗಳಿಂದ ಹಿಡಿದು ಬ್ಯಾಂಕಾಕ್‌ನ ಗಿಜಿಗಿಜಿ ಅನ್ನೋ ಮಾರುಕಟ್ಟೆಯವರೆಗೂ, ವಿಶ್ವದಲ್ಲಿ ಅತ್ಯಧಿಕ ಮಂದಿ ಭೇಟಿನೀಡುವ ಟಾಪ್ 10 ನಗರಗಳು ಯಾವುದು ಅನ್ನೋದನ್ನು ನೋಡೋಣ..

ಇದನ್ನೂ ಓದಿ: ಪ್ರವಾಸಿಗಳಿಗೆ ಮಳೆಯನ್ನೇ ಮಾರುವ ದೇಶಗಳ ಬಗ್ಗೆ ಗೊತ್ತಾ?

ಪ್ಯಾರಿಸ್, ಫ್ರಾನ್ಸ್

ಪ್ಯಾರಿಸ್‌ಗೆ ಸಾಮಾನ್ಯವಾಗಿ ʼಪ್ರೇಮದ ನಗರʼ ಎಂದು ಕರೆಯಲಾಗುತ್ತದೆ. ಇದು ವಿಶ್ವದ ಅತ್ಯಂತ ರೋಮ್ಯಾಂಟಿಕ್ ಸ್ಥಳ ಎಂದೇ ಪ್ರಸಿದ್ಧಿ. ಪ್ರವಾಸಿಗರಿಗಾಗಿಯೂ ಅತ್ಯುತ್ತಮ ತಾಣ. ಪ್ಯಾರಿಸ್‌ನಲ್ಲಿ ಐತಿಹಾಸಿಕ ಕಟ್ಟಡಗಳು, ಆಕರ್ಷಕ ಅರಮನೆಗಳು, ಚಿತ್ರಕಲಾ ಗ್ಯಾಲರಿಗಳು ಮತ್ತು ಸಂಗ್ರಹಾಲಯಗಳು, ಚರ್ಚ್‌ಗಳು, ಸುಂದರ ಉದ್ಯಾನವನಗಳು ಮತ್ತು ತೋಟಗಳು ಇವೆ. ಅಲ್ಲದೆ, ಶಾಪಿಂಗ್ ಮಾಡೋದಕ್ಕೂ ಪ್ಯಾರಿಸ್ ತುಂಬಾನೆ ಹೆಸರುವಾಸಿ. ಪ್ಯಾರಿಸ್‌ನ ಪ್ರಸಿದ್ಧ ಐಫೆಲ್ ಟವರ್ ಪ್ರಪಂಚದ ಅತ್ಯಂತ ಫೇಮಸ್ ಸ್ಥಳ. ಐಫೆಲ್ ಟವರ ಎತ್ತರ ಸುಮಾರು 300 ಮೀಟರ್‌ಗಳಷ್ಟು ಇರುತ್ತದೆ. ಪ್ಯಾರಿಸ್‌ಗೆ ಬರುವ ಜನ ನೋಡಿ ಹೋಗಲೇಬೇಕಾದ ಪ್ರಮುಖ ಆಕರ್ಷಣೆ.

Untitled Design - 2026-11-11T154008.462

ಬ್ಯಾಂಕಾಕ್, ಥೈಲ್ಯಾಂಡ್

ಥೈಲ್ಯಾಂಡ್‌ನ ರಾಜಧಾನಿಯಾದ ಬ್ಯಾಂಕಾಕ್ ಅನ್ನು ಪ್ರಪಂಚದಲ್ಲಿಯೇ ಅತ್ಯಂತ ಹೆಚ್ಚು ಮಂದಿ ಭೇಟಿನೀಡುವ ನಗರವೆಂದು ಪರಿಗಣಿಸಲಾಗುತ್ತದೆ. ಪ್ರತಿ ವರ್ಷ 22 ಮಿಲಿಯನ್‌ಕ್ಕೂ ಹೆಚ್ಚು ಅಂದರೆ 2 ಕೋಟಿ ವಿದೇಶಿ ಪ್ರವಾಸಿಗರು ಇಲ್ಲಿಗೆ ಭೇಟಿ ನೀಡುತ್ತಾರೆ. ಚಾವ್ ಫ್ರಾಯಾ ನದಿ ಹತ್ತಿರದಲ್ಲಿರುವ ಬ್ಯಾಂಕಾಕ್ ಸೌಂದರ್ಯಕ್ಕೆ ಎಂಥವರೂ ಮಾರುಹೋಗುತ್ತಾರೆ. ಇಲ್ಲಿನ ಸಂತೆಗಳು, ಬೀದಿ ಆಹಾರ, ಮಂದಿರಗಳು ಮತ್ತು ನೈಸರ್ಗಿಕ ಸೌಂದರ್ಯ ಪ್ರವಾಸಿಗರಿಗೆ ಆಕರ್ಷಣೆಯಾಗಿವೆ.

ಲಂಡನ್, ಇಂಗ್ಲೆಂಡ್

ಲಂಡನ್, ಇಂಗ್ಲೆಂಡಿನ ರಾಜಧಾನಿ ನಗರ. ಯೂರೋಪಿನಲ್ಲಿಯೇ ಅತ್ಯಧಿಕ ಮಂದಿ ಭೇಟಿನೀಡುವ ಪ್ರವಾಸಿ ತಾಣ ಲಂಡನ್. ಇಲ್ಲಿ ಬ್ರಿಟನ್ ರಾಯಲ್ ಕುಟುಂಬ ವಾಸಿಸುತ್ತಿದೆ. ಲಂಡನ್ ಹಲವು ಪ್ರಸಿದ್ಧ ಪ್ರವಾಸಿ ಆಕರ್ಷಣೆಗಳು, ಸಂಗ್ರಹಾಲಯಗಳು, ಉದ್ಯಾನವನಗಳು ಮತ್ತು ಐತಿಹಾಸಿಕವಾಗಿ ಶ್ರೀಮಂತವಾದ ಸಂಸ್ಕೃತಿ ನಗರ. ಲಂಡನ್‌ನಲ್ಲಿ ನೋಡಬಹುದಾದ ಪ್ರಮುಖ ಸ್ಥಳಗಳು: ಬಂಕಿಂಗ್ಹಾಮ್ ಪ್ಯಾಲೆಸ್, ಬಿಗ್ಬೆನ್, ಟವರ್ ಆಫ್ ಲಂಡನ್, ಮತ್ತು ಬ್ರಿಟಿಷ್ ಮ್ಯೂಸಿಯಂ ಮುಂತಾದವು.

Untitled Design - 2026-11-11T153728.462

ದುಬೈ, ಯುನೈಟೆಡ್ ಅರಬ್ ಎಮಿರೇಟ್ಸ್‌

ದುಬೈ, ಯುನೈಟೆಡ್ ಅರಬ್ ಎಮಿರೇಟ್ಸ್‌ನ ಒಂದು ಪ್ರಮುಖ ನಗರವಾಗಿದೆ. 2023ರಲ್ಲಿ ಸುಮಾರು 15.93 ಮಿಲಿಯನ್ ಪ್ರವಾಸಿಗರನ್ನು ಆಕರ್ಷಿಸಿದ್ದು, ಪ್ರಪಂಚದ ನಾಲ್ಕನೆಯ ಅತ್ಯಧಿಕ ಭೇಟಿ ನೀಡಲ್ಪಟ್ಟ ನಗರ ಎನಿಸಿಕೊಂಡಿದೆ. ದುಬೈ ಒಂದು ಕಾಲದಲ್ಲಿ ಮೀನುಗಾರರ ಹಳ್ಳಿಯಷ್ಟೆ ಆಗಿತ್ತು. ಆದ್ರೆ ಇಂದು ಆಧುನಿಕತೆ, ಐಷಾರಾಮಿ ಜೀವನ ಶೈಲಿ ಮತ್ತು ವಿಶ್ವದ ಮಟ್ಟದ ವಾಸ್ತುಶಿಲ್ಪಕ್ಕಾಗಿ ಪ್ರಸಿದ್ಧವಾಗಿದೆ. ಸುಮಾರು 828 ಮೀಟರ್ ಎತ್ತರವಿರುವ ಪ್ರಪಂಚದ ಅತಿ ಎತ್ತರದ ಕಟ್ಟಡ ಬುರ್ಜ್ ಖಲೀಫಾ ದುಬೈನಲ್ಲಿದೆ. ವಿಶ್ವದ ಅತಿದೊಡ್ಡ ಶಾಪಿಂಗ್ ಮಾಲ್‌ಗಳಲ್ಲಿ ದುಬೈ ಮಾಲ್ ಒಂದಾಗಿದೆ. ಶಾಪಿಂಗ್ ಮಾತ್ರವಲ್ಲದೆ, ಆಕ್ವೇರಿಯಂ, ಥೀಮ್ ಪಾರ್ಕ್, ಮತ್ತು ಇತರ ಮನೋರಂಜನೆ ವ್ಯವಸ್ಥೆಗಳಿವೆ. ದುಬೈನ ಐಷಾರಾಮಿ ಜೀವನ ಶೈಲಿ ಮತ್ತು ಆಧುನಿಕ ತಂತ್ರಜ್ಞಾನಕ್ಕೆ ಪ್ರವಾಸಿಗರು ಮಾರುಹೋಗುತ್ತಾರೆ. ಮರುಭೂಮಿ ಸಫಾರಿ, ಐಷಾರಾಮಿ ಹೊಟೇಲ್‌ಗಳಿಗೆ ದುಬೈ ಪ್ರಸಿದ್ಧ.

ಸಿಂಗಾಪುರ

ಸೌಂದರ್ಯಕ್ಕೆ ಮತ್ತೊಂದು ಹೆಸರಾದ ರಾಷ್ಟ್ರವಿದು. ಸಾಕಷ್ಟು ಸಂಖ್ಯೆಯಲ್ಲಿ ಪ್ರವಾಸಿಗರನ್ನು ಸೆಳೆಯುವ ದೇಶಗಳಲ್ಲಿ ಸಿಂಗಾಪುರ ಕೂಡಾ ಸೇರುತ್ತದೆ. ಪ್ರವಾಸೋದ್ಯಮ ಈ ದೇಶದ ದೊಡ್ಡ ಶಕ್ತಿ ಕೂಡಾ ಹೌದು. ವಿಶ್ವದಲ್ಲಿ ಅತಿ ಹೆಚ್ಚು ಜನರು ಭೇಟಿ ನೀಡುವ 5ನೆಯ ನಗರ ಸಿಂಗಾಪುರ.

ಕುಆಲಾ ಲಂಪುರ್, ಮಲೇಷಿಯಾ

ಕುಆಲಾ ಲಂಪುರ್, ಮಲೇಷಿಯಾದ ರಾಜಧಾನಿ, 2023ರಲ್ಲಿ 13.79 ಮಿಲಿಯನ್ ಪ್ರವಾಸಿಗರನ್ನು ಆಕರ್ಷಿಸಿ, ಪ್ರಪಂಚದ ಆರನೇ ಅತ್ಯಧಿಕ ಭೇಟಿ ನೀಡಲಾದ ನಗರ ಎನಿಸಿಕೊಂಡಿದೆ.

ನ್ಯೂಯಾರ್ಕ್ ಸಿಟಿ, ಅಮೆರಿಕ

ನ್ಯೂಯಾರ್ಕ್ ಸಿಟಿ, ಅಮೆರಿಕದ ಪ್ರಸಿದ್ಧ ನಗರ. ನ್ಯೂಯಾರ್ಕ್ ನಗರವು ಪ್ರಪಂಚದಾದ್ಯಂತದ ಪ್ರವಾಸಿಗರನ್ನು ಆಕರ್ಷಿಸುವ ಅನೇಕ ಪ್ರವಾಸಿ ತಾಣಗಳನ್ನು ಹೊಂದಿದೆ. ಕೆಲವು ಪ್ರಮುಖ ತಾಣಗಳೆಂದರೆ: ಎಂಪೈರ್ ಸ್ಟೇಟ್ ಬಿಲ್ಡಿಂಗ್, ಲಿಬರ್ಟಿ ಪ್ರತಿಮೆ, ಸೆಂಟ್ರಲ್ ಪಾರ್ಕ್, ಟೈಮ್ಸ್ ಸ್ಕ್ವೇರ್, ಮತ್ತು ವಸ್ತುಸಂಗ್ರಹಾಲಯಗಳು. ನ್ಯೂಯಾರ್ಕ್ ನಗರದಲ್ಲಿ ನೀವು ಭೇಟಿ ನೀಡಬಹುದಾದ ಕೆಲವು ಸ್ಥಳಗಳು ಇಲ್ಲಿವೆ: ಎಂಪೈರ್ ಸ್ಟೇಟ್ ಬಿಲ್ಡಿಂಗ್, ಲಿಬರ್ಟಿ ಪ್ರತಿಮೆ, ಸೆಂಟ್ರಲ್ ಪಾರ್ಕ್, ಟೈಮ್ಸ್ ಸ್ಕ್ವೇರ್, ವಸ್ತುಸಂಗ್ರಹಾಲಯಗಳು, ಮೆಟ್ರೋಪಾಲಿಟನ್ ಮ್ಯೂಸಿಯಂ ಆಫ್ ಆರ್ಟ್, ನ್ಯಾಚುರಲ್ ಹಿಸ್ಟರಿ ಮ್ಯೂಸಿಯಂ ಮತ್ತು ಮ್ಯೂಸಿಯಂ ಆಫ್ ಮಾಡರ್ನ್ ಆರ್ಟ್ ಸೇರಿದಂತೆ ಅನೇಕ ಉತ್ತಮ ವಸ್ತುಸಂಗ್ರಹಾಲಯಗಳನ್ನು ನ್ಯೂಯಾರ್ಕ್ ಹೊಂದಿದೆ. ಬ್ರಾಡ್‌ವೇ ಥಿಯೇಟರ್, ಫೈನಾನ್ಷಿಯಲ್ ಡಿಸ್ಟ್ರಿಕ್ಟ್, ಕೋನಿ ಐಲ್ಯಾಂಡ್ ಹೀಗೆ ಅನೇಕ ನಗರಗಳನ್ನು ಹೊಂದಿದೆ.

ಇಸ್ತಾಂಬುಲ್, ಟರ್ಕಿ

ಇಸ್ತಾಂಬುಲ್, ಟರ್ಕಿಯ ಅತ್ಯಂತ ಜನಪ್ರಿಯ ನಗರ. ದೇಶ ವಿದೇಶದಲ್ಲಿ ಟರ್ಕಿಯ ಸೌಂದರ್ಯ ಕಣ್ತುಂಬಿಕೊಳ್ಳಲು ಲಕ್ಷಾಂತರ ಪ್ರವಾಸಿಗರು ಆಗಮಿಸುತ್ತಾರೆ. 2023ರಲ್ಲಿ ದಾಖಲೆಯ 13.40 ಮಿಲಿಯನ್ ಪ್ರವಾಸಿಗರು ಇಸ್ತಾಂಬುಲ್‌ಗೆ ಭೇಟಿ ಕೊಟ್ಟಿದ್ದಾರೆ. ಈ ಮೂಲಕ ಇಸ್ತಾಂಬುಲ್ ಪ್ರಪಂಚದ ಎಂಟನೆಯ ಅತ್ಯಧಿಕ ಭೇಟಿ ನೀಡಲಾದ ನಗರ ಎನಿಸಿಕೊಂಡಿತ್ತು. 2025ರಲ್ಲಿ ಭಾರತ ಪಾಕಿಸ್ತಾನ ನಡುವಿನ ಯುದ್ಧದ ವೇಳೆ ಟರ್ಕಿ ಪಾಕ್ಗೆ ಬೆಂಬಲ ನೀಡಿದ್ದರಿಂದ ಟರ್ಕಿಯ ಪ್ರವಾಸಿ ತಾಣಗಳನ್ನು ಬ್ಯಾನ್ ಮಾಡುವ ಮೂಲಕ ಭಾರತೀಯ ಪ್ರವಾಸಿಗರು ಆಕ್ರೋಶ ಹೊರಹಾಕಿದ್ದರು.

Untitled Design - 2026-11-11T154327.409

ಟೋಕಿಯೋ, ಜಪಾನ್‌

ಟೋಕಿಯೋ, ಜಪಾನ್‌ನ ರಾಜಧಾನಿ ನಗರ. 2023ರಲ್ಲಿ 12.93 ಮಿಲಿಯನ್ ಪ್ರವಾಸಿಗರನ್ನು ಆಕರ್ಷಿಸಿ, ಪ್ರಪಂಚದ ಒಂಬತ್ತನೆಯ ಅತ್ಯಧಿಕ ಭೇಟಿ ನೀಡಲಾದ ನಗರವಾಗಿದೆ.

ಅಂಟಾಲ್ಯಾ, ಟರ್ಕಿ

ಅಂಟಾಲ್ಯಾ, ಟರ್ಕಿಯ ಸುಂದರ ಕಡಲತೀರ ನಗರ. 2023ರಲ್ಲಿ 12.41 ಮಿಲಿಯನ್ ಪ್ರವಾಸಿಗರನ್ನು ಆಕರ್ಷಿಸಿ, ಪ್ರಪಂಚದ ಹತ್ತನೇ ಅತ್ಯಧಿಕ ಭೇಟಿ ನೀಡಲಾದ ನಗರವಾಗಿದೆ.

Admin

Admin

Pravasi Prapancha – A pioneering initiative led by Vishweshwar Bhat, the esteemed journalist and head of the Vishwavani Group. It is the first and only travel-focused publication in Kannada journalism, dedicated exclusively to news, information, and travel narratives about various destinations. The digital media counterpart of this venture is Pravasi Prapancha Digital Channel, which brings travel-related news from across the state, country, and world. It features fascinating insights, traveler experiences, interviews related to travel, entertainment segments, and much more. Editor-in-Chief: Shri Vishweshwar Bhat

ಇದು 1753ರ ಮನೆ, ಗೊತ್ತಿರಲಿ!

Read Previous

ಇದು 1753ರ ಮನೆ, ಗೊತ್ತಿರಲಿ!

ಅಚ್ಚರಿ ಮೂಡಿಸುವ ʻಬ್ಲೂ ಡ್ರ್ಯಾಗನ್‌ ನದಿʼ...

Read Next

ಅಚ್ಚರಿ ಮೂಡಿಸುವ ʻಬ್ಲೂ ಡ್ರ್ಯಾಗನ್‌ ನದಿʼ...