Thursday, July 10, 2025
Thursday, July 10, 2025

ಮೇ 1 ರಿಂದ ವಿದೇಶಿ ಪ್ರವಾಸಿಗರಿಗೆ ಥಾಯ್ಲೆಂಡ್‌ನಲ್ಲಿ ಡಿಜಿಟಲ್ ಆಗಮನ ಕಾರ್ಡ್ ಕಡ್ಡಾಯ

ಥಾಯ್ಲೆಂಡ್‌ ಪ್ರವಾಸ ಇನ್ನುಮುಂದೆ ಅಷ್ಟೊಂದು ಸುಲಭವಲ್ಲ..."ಸ್ಮಾರ್ಟ್ ಪ್ರವಾಸೋದ್ಯಮ ತಾಣ" ವಾಗಿ ಬದಲಾಗುತ್ತಿರುವ ಥಾಯ್ಲೆಂಡ್‌, ಮೇ 1 ರಿಂದ ವಿದೇಶಿ ಪ್ರವಾಸಿಗರಿಗೆ ʻಥಾಯ್ಲೆಂಡ್‌ನ ಡಿಜಿಟಲ್ ಆಗಮನ ಕಾರ್ಡ್ʼ ಕಡ್ಡಾಯಗೊಳಿಸಿದೆ.

ಥಾಯ್ಲೆಂಡ್‌ ಪ್ರವಾಸ ಕೈಗೊಳ್ಳಬೇಕೆಂಬುದು ಅನೇಕ ಭಾರತೀಯರ ಕನಸು. ಅತಿ ಕಡಿಮೆ ವೆಚ್ಚದಲ್ಲಿ ಸುತ್ತಬಹುದಾದ ದೇಶ ಎಂಬ ಯೋಚನೆ ಒಂದುಕಡೆಯಾದರೆ, ಕಡಲ ತೀರಗಳು, ನೈಟ್‌ ಲೈಫ್‌, ಥಾಯ್‌ ಫುಡ್‌ ಹೀಗೆ ಲೆಕ್ಕವಿಲ್ಲದಷ್ಟು ಖುಷಿಯ ಕ್ಷಣಗಳನ್ನು ಕೂಡಿಕೊಳ್ಳುವ ತವಕ ಮತ್ತೊಂದೆಡೆ. ಆದರೆ ಇಂತಹ ಸುಂದರ ಕ್ಷಣಗಳನ್ನು ಕಾಣುವುದಕ್ಕೆ ನೀವು ಅಷ್ಟೊಂದು ಸಲೀಸಾಗಿ ಥಾಯ್ಲೆಂಡ್‌ ಗೆ ಭೇಟಿ ನೀಡಲು ಸಾಧ್ಯವಿಲ್ಲ. ಯಾಕೆಂದರೆ ಮೇ 1 ರಿಂದ ಥಾಯ್ಲೆಂಡ್‌ ಗೆ ಭೇಟಿ ನೀಡುವ ವಿದೇಶಿ ಪ್ರವಾಸಿಗರಿಗೆ ಡಿಜಿಟಲ್ ಆಗಮನ ಕಾರ್ಡ್‌ ಕಡ್ಡಾಯಗೊಳಿಸಿರುವುದಾಗಿ ಥಾಯ್ಲೆಂಡ್‌ ನ ಪ್ರವಾಸೋದ್ಯಮ ಸಚಿವಾಲಯ ತಿಳಿಸಿದೆ.

GettyImages-2151304858-e1718301649935

ಹೌದು, ಮೇ 1 ರಿಂದ, ಥಾಯ್ಲೆಂಡ್‌ ಗೆ ಬರುವ ಎಲ್ಲಾ ವಿದೇಶಿ ಸಂದರ್ಶಕರು ಪ್ರವೇಶಕ್ಕೂ ಮೊದಲು ಡಿಜಿಟಲ್ ಆಗಮನ ಕಾರ್ಡನ್ನು ಪಡೆದುಕೊಂಡಿರಬೇಕು. "ಥಾಯ್ಲೆಂಡ್‌ ಡಿಜಿಟಲ್ ಆಗಮನ ಕಾರ್ಡ್" (Thailand Digital Arrival Card- TDAC) ದೇಶದಲ್ಲಿ ಪ್ರವೇಶ ಕಾರ್ಯವಿಧಾನಗಳನ್ನು ಸುಗಮಗೊಳಿಸಲು ಬಳಕೆ ಮಾಡಲಾಗುವ ಒಂದು ಡಿಜಿಟಲ್ ವೇದಿಕೆಯಾಗಿದ್ದು, ಡಿಜಿಟಲ್ ಕಾರ್ಡ್‌ಗೆ ಅರ್ಜಿ ಸಲ್ಲಿಸಲು ಅಧಿಕೃತ ಸೈಟ್ ಈಗಾಗಲೇ ಕಾರ್ಯನಿರ್ವಹಿಸುತ್ತಿದೆ.

https://tdac.immigration.go.th/arrival-card/#/home

ಯಾವೆಲ್ಲಾ ಮಾಹಿತಿಗಳನ್ನು ಒದಗಿಸಬೇಕು? ಪ್ರಯಾಣಿಕರು ಆಗಮನದ ಮೂರು ದಿನಗಳ ಮೊದಲು ಆನ್‌ಲೈನ್‌ನಲ್ಲಿ ಅಧಿಕೃತ ಸೈಟ್‌ ಮೂಲಕ ಪೂರ್ವ-ನೋಂದಣಿ ಮಾಡಿಕೊಳ್ಳಬೇಕಾಗುತ್ತದೆ. ಹೆಸರು, ಪಾಸ್‌ಪೋರ್ಟ್ ಹಾಗೂ ವೀಸಾ ಮಾಹಿತಿ, ಮತ್ತು ವಸತಿ ವಿಳಾಸಗಳಂತಹ ವೈಯಕ್ತಿಕ ಮತ್ತು ಪ್ರಯಾಣ ವಿವರಗಳನ್ನು ಒದಗಿಸಬೇಕಾಗುತ್ತದೆ.

1712554942-7856

ಸಾಂಪ್ರದಾಯಿಕ ಕಾಗದ ಆಧಾರಿತ `TM6 ಆಗಮನ ಫಾರ್ಮ್' ಗೆ ಬದಲಿಯಾಗಿ ಈ ಕಾರ್ಡ್ ಬಳಕೆ ಮಾಡಲಾಗುತ್ತಿದೆ. ಇದು ವಲಸೆ ಪ್ರಕ್ರಿಯೆಯನ್ನು ತ್ವರಿತಗೊಳಿಸಲು ಮತ್ತು ಡೇಟಾ ಸಂಗ್ರಹಣೆಯನ್ನು ಸುಧಾರಿಸುವ ಉದ್ದೇಶವನ್ನು ಹೊಂದಿದೆ. ಕಳೆದ ವರ್ಷ ಏಪ್ರಿಲ್ 15 ರಂದು TM6 ವಲಸೆ ಫಾರ್ಮ್‌ಗಳನ್ನು ಸ್ಥಗಿತಗೊಳಿಸಲಾಯಿತು.

ಒಟ್ಟಿನಲ್ಲಿ ಅಭಿವೃದ್ಧಿ ಹೊಂದುತ್ತಿರುವ ಪ್ರಪಂಚದೊಂದಿಗೆ "ಸ್ಮಾರ್ಟ್ ಪ್ರವಾಸೋದ್ಯಮ ತಾಣ" ವಾಗಿ ಬದಲಾಗುವ ಉದ್ದೇಶವನ್ನು ಥಾಯ್ಲೆಂಡ್‌ ಹೊಂದಿದ್ದು, ಅಂತರರಾಷ್ಟ್ರೀಯ ಪ್ರವಾಸಿಗರನ್ನು ಹೆಚ್ಚು ಸೆಳೆಯುತ್ತಿದೆ.

Bhagyalakshmi N

Bhagyalakshmi N

Travel blogger and adventurer passionate about exploring new cultures and sharing travel experiences.

ಇದು 1753ರ ಮನೆ, ಗೊತ್ತಿರಲಿ!

Read Previous

ಇದು 1753ರ ಮನೆ, ಗೊತ್ತಿರಲಿ!

ಅಚ್ಚರಿ ಮೂಡಿಸುವ ʻಬ್ಲೂ ಡ್ರ್ಯಾಗನ್‌ ನದಿʼ...

Read Next

ಅಚ್ಚರಿ ಮೂಡಿಸುವ ʻಬ್ಲೂ ಡ್ರ್ಯಾಗನ್‌ ನದಿʼ...