Wednesday, August 19, 2026
Wednesday, August 19, 2026

ಐಆರ್‌ಸಿಟಿಸಿ ಕಟ್ಟುನಿಟ್ಟಿನ ಕ್ರಮ: ಅನಧಿಕೃತ ಬ್ರ್ಯಾಂಡ್‌ನ 8,300ಕ್ಕೂ ಹೆಚ್ಚು ಕುಡಿಯುವ ನೀರಿನ ಬಾಟಲಿಗಳು ಜಪ್ತಿ!

ರೈಲುಗಳಲ್ಲಿ ಹಾಗೂ ಸ್ಟೇಷನ್‌ಗಳ ಕ್ಯಾಟರಿಂಗ್ ಘಟಕಗಳಲ್ಲಿ ಪ್ರಯಾಣಿಕರಿಗೆ ಯಾವುದೇ ಗುಣಮಟ್ಟವಿಲ್ಲದ, ಅನಧಿಕೃತ ಬ್ರ್ಯಾಂಡ್‌ಗಳ ಕುಡಿಯುವ ನೀರು ಮತ್ತು ಕಳಪೆ ಆಹಾರ ಪದಾರ್ಥಗಳನ್ನು ಮಾರಾಟ ಮಾಡುವುದನ್ನು ತಡೆಯಲು ಮತ್ತು ಆಹಾರ ಸುರಕ್ಷತಾ ಮಾನದಂಡಗಳನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸಲು ಈ ವಿಶೇಷ ತಪಾಸಣೆ ಹಮ್ಮಿಕೊಳ್ಳಲಾಗಿದೆ.

ರೈಲು ಪ್ರಯಾಣಿಕರಿಗೆ ಗುಣಮಟ್ಟದ ಹಾಗೂ ಸುರಕ್ಷಿತ ಆಹಾರ ಮತ್ತು ಕುಡಿಯುವ ನೀರು ಒದಗಿಸುವ ನಿಟ್ಟಿನಲ್ಲಿ ಭಾರತೀಯ ರೈಲ್ವೆ ಕ್ಯಾಟರಿಂಗ್ ಮತ್ತು ಪ್ರವಾಸೋದ್ಯಮ ನಿಗಮ (IRCTC) ಕಟ್ಟುನಿಟ್ಟಿನ ತಪಾಸಣಾ ಅಭಿಯಾನವನ್ನು ತೀವ್ರಗೊಳಿಸಿದೆ. ದೇಶಾದ್ಯಂತ ರೈಲುಗಳು ಹಾಗೂ ರೈಲು ನಿಲ್ದಾಣಗಳಲ್ಲಿ ನಡೆಸಿದ ದಿಢೀರ್ ತಪಾಸಣೆಯ ವೇಳೆ ಅನುಮೋದನೆ ಪಡೆಯದ 8,300 ಕ್ಕೂ ಹೆಚ್ಚು ಪ್ಯಾಕೇಜ್ಡ್ ಕುಡಿಯುವ ನೀರಿನ ಬಾಟಲಿಗಳನ್ನು ಐಆರ್‌ಸಿಟಿಸಿ ಅಧಿಕಾರಿಗಳು ವಶಪಡಿಸಿಕೊಂಡಿದ್ದಾರೆ.

ಇದನ್ನೂ ಓದಿ: ಹಬ್ಬದ ಪ್ರಯಾಣಕ್ಕೆ ರೈಲುಗಳಿಗೆ ಬೇಡಿಕೆ

ರೈಲುಗಳಲ್ಲಿ ಹಾಗೂ ಸ್ಟೇಷನ್‌ಗಳ ಕ್ಯಾಟರಿಂಗ್ ಘಟಕಗಳಲ್ಲಿ ಪ್ರಯಾಣಿಕರಿಗೆ ಯಾವುದೇ ಗುಣಮಟ್ಟವಿಲ್ಲದ, ಅನಧಿಕೃತ ಬ್ರ್ಯಾಂಡ್‌ಗಳ ಕುಡಿಯುವ ನೀರು ಮತ್ತು ಕಳಪೆ ಆಹಾರ ಪದಾರ್ಥಗಳನ್ನು ಮಾರಾಟ ಮಾಡುವುದನ್ನು ತಡೆಯಲು ಮತ್ತು ಆಹಾರ ಸುರಕ್ಷತಾ ಮಾನದಂಡಗಳನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸಲು ಈ ವಿಶೇಷ ತಪಾಸಣೆ ಹಮ್ಮಿಕೊಳ್ಳಲಾಗಿದೆ.

ಐಆರ್‌ಸಿಟಿಸಿಯು ರೈಲ್ವೆಯ ವಾಣಿಜ್ಯ ವಿಭಾಗದ ಜತೆಗೂಡಿ ವಿಶೇಷ 'ತ್ವರಿತ ಕಾರ್ಯಪಡೆ' ಗಳನ್ನು ರಚಿಸಿದೆ. ಲಕ್ನೋ ಹಾಗೂ ಚಂಡೀಗಢ ಪ್ರಾದೇಶಿಕ ಕಚೇರಿಗಳ ವ್ಯಾಪ್ತಿಯಲ್ಲಿ ನಡೆಸಿದ ತಪಾಸಣೆಯಲ್ಲಿ ಸಾವಿರಾರು ಅನಧಿಕೃತ ನೀರಿನ ಬಾಟಲಿಗಳು, ಐಸ್‌ಕ್ರೀಮ್‌ಗಳು ಹಾಗೂ ಇತರ ಪಾನೀಯಗಳನ್ನು ಜಪ್ತಿ ಮಾಡಲಾಗಿದೆ. ಕೇವಲ ಲಕ್ನೋ ವಲಯದ ರೈಲುಗಳಲ್ಲಿಯೇ 5,241 ಅನಧಿಕೃತ ನೀರಿನ ಬಾಟಲಿಗಳನ್ನು ವಶಪಡಿಸಿಕೊಳ್ಳಲಾಗಿದೆ. ಸಬರಮತಿ ರೈಲು ನಿಲ್ದಾಣ ಹಾಗೂ ಹೌರಾ ಸೇರಿದಂತೆ ವಿವಿಧ ಪ್ರಮುಖ ನಿಲ್ದಾಣಗಳಲ್ಲಿ ನಡೆದ ದಿಢೀರ್ ದಾಳಿಗಳಲ್ಲಿ ಅನಧಿಕೃತವಾಗಿ ಲೋಡ್ ಮಾಡಲಾಗಿದ್ದ ಕುಡಿಯುವ ನೀರಿನ ಬಾಟಲಿಗಳು ಮತ್ತು ಮಜ್ಜಿಗೆ ಪ್ಯಾಕೆಟ್‌ಗಳನ್ನು ವಶಪಡಿಸಿಕೊಳ್ಳಲಾಗಿದೆ.

ಗುವಾಹಟಿ, ಕಾಮಾಖ್ಯ, ಅಗರ್ತಲಾ, ಕಟಿಹಾರ್ ಮತ್ತು ದಿಬ್ರುಗಢ ಸೇರಿದಂತೆ ಈಶಾನ್ಯ ರಾಜ್ಯಗಳ ರೈಲುಗಳು ಹಾಗೂ ಸ್ಟೇಷನ್‌ಗಳಲ್ಲೂ ಸಿಬ್ಬಂದಿ ದಾಖಲೆಗಳು, ನೈರ್ಮಲ್ಯ ಹಾಗೂ ಅನಧಿಕೃತ ಕುಡಿಯುವ ನೀರಿನ ಮಾರಾಟದ ವಿರುದ್ಧ ತಪಾಸಣೆ ನಡೆಸಲಾಗಿದೆ.

ಯಾವುದೇ ಅನಧಿಕೃತ ಆಹಾರ ಅಥವಾ ಪಾನೀಯ ವಸ್ತುಗಳನ್ನು ರೈಲುಗಳಲ್ಲಿ ಸಂಗ್ರಹಿಸಬಾರದು ಅಥವಾ ಮಾರಾಟ ಮಾಡಬಾರದು ಎಂದು ಐಆರ್‌ಸಿಟಿಸಿ ಎಲ್ಲಾ ಕ್ಯಾಟರಿಂಗ್ ಗುತ್ತಿಗೆದಾರರಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದೆ. ನಿಯಮ ಉಲ್ಲಂಘಿಸುವವರ ವಿರುದ್ಧ ಲೈಸೆನ್ಸ್ ರದ್ದುಪಡಿಸುವಂತಹ ಕಠಿಣ ದಂಡನಾ ಕ್ರಮಗಳನ್ನು ಕೈಗೊಳ್ಳಲಾಗುವುದು ಎಂದು ಅಧಿಕಾರಿಗಳು ಎಚ್ಚರಿಸಿದ್ದಾರೆ.

Pramod Mohan Hegde

Pramod Mohan Hegde

A media professional with four years of experience in journalism, having worked with leading Kannada publications such as Vistara, Vijayavani, and Vijaya Karnataka as a cinema journalist. Also an author with a keen interest in travel and cinema. Currently serving as Senior Sub Editor at Pravasi Prapancha, contributing editorial expertise and engaging storytelling to the media industry.

ಮೇ 1 ರಿಂದ ವಿದೇಶಿ ಪ್ರವಾಸಿಗರಿಗೆ ಥಾಯ್ಲೆಂಡ್‌ನಲ್ಲಿ ಡಿಜಿಟಲ್ ಆಗಮನ ಕಾರ್ಡ್ ಕಡ್ಡಾಯ

Read Previous

ಮೇ 1 ರಿಂದ ವಿದೇಶಿ ಪ್ರವಾಸಿಗರಿಗೆ ಥಾಯ್ಲೆಂಡ್‌ನಲ್ಲಿ ಡಿಜಿಟಲ್ ಆಗಮನ ಕಾರ್ಡ್ ಕಡ್ಡಾಯ

ಬೇಸಿಗೆಯ ಪ್ರವಾಸಕ್ಕಿದು ಸೂಕ್ತ ಸಮಯ; ತೆರಳುವ ಮುನ್ನ ಪೊಲೀಸರ ಈ ಸಲಹೆಗಳನ್ನು ಪಾಲಿಸಿ

Read Next

ಬೇಸಿಗೆಯ ಪ್ರವಾಸಕ್ಕಿದು ಸೂಕ್ತ ಸಮಯ; ತೆರಳುವ ಮುನ್ನ ಪೊಲೀಸರ ಈ ಸಲಹೆಗಳನ್ನು ಪಾಲಿಸಿ