Friday, October 2, 2026
Friday, October 2, 2026

ಕ್ಯಾಮೆರ ಅಪಾರ್ಚರ್‌

ಒಂದು ಕ್ಯಾಮೆರಾವು ತನ್ನಲ್ಲಿರುವ ಲೆನ್ಸ್‌ನ ಮೂಲಕ ಬೆಳಕನ್ನು ಒಳಗೆ ಪಡೆದು, ಸೆನ್ಸಾರ್ ಮೇಲೆ ಚಿತ್ರದ ಬಿಂಬವನ್ನು ಮೂಡಿಸುತ್ತದೆ. ಸೆನ್ಸಾರ್‌ಗೆ ತಲುಪುವ ಬೆಳಕಿನ ಪ್ರಮಾಣವನ್ನು ನಿಯಂತ್ರಿಸಲು ಲೆನ್ಸ್‌ನೊಳಗೆ ಹಲವಾರು ತೆಳುವಾದ ಅಪಾರ್ಚರ್ ಬ್ಲೇಡ್‌ಗಳನ್ನು ಅಳವಡಿಸಲಾಗಿರುತ್ತದೆ. ಈ ಬ್ಲೇಡ್‌ಗಳು ಒಂದರ ಮೇಲೊಂದು ಚಲಿಸಿ ಬೆಳಕು ಹಾದುಹೋಗುವ ರಂಧ್ರವನ್ನು ಹಿಗ್ಗಿಸಬಲ್ಲವು-ಕುಗ್ಗಿಸಬಲ್ಲವು. ಈ ರಂಧ್ರವನ್ನೇ ಲೆನ್ಸ್‌ನ ಅಪಾರ್ಚರ್ ಎಂದು ಕರೆಯಲಾಗುತ್ತದೆ.

  • ಅನಂತ್‌ ಹರಿತ್ಸ

1930ರವರೆಗೆ ಮಸೂರಗಳ ಅಭಿವೃದ್ಧಿಗೆ ಶ್ರಮಿಸುತ್ತಿದ್ದರೂ ಅದು ಕ್ಲೀಷೆಯಿಂದ ಕೂಡಿತ್ತು. ಅನೇಕ ಅಂಶಗಳನ್ನು ಸೇರಿಸಿದರೂ ಅದನ್ನು ವ್ಯವಸ್ಥಿತವಾಗಿ ರೂಪುಗೊಳಿಸಲು ಸರಿಯಾಗಿ ಆಗಿರಲಿಲ್ಲ. ಆದರೂ ನಂತರ ಕ್ಯಾಮೆರಾದ ಲೆನ್ಸ್‌ ತಂತ್ರಜ್ಞಾನದಲ್ಲಿ ಪ್ರಗತಿಯಾಯಿತು. ಎಲ್ಲರ ಬಳಿಯೂ ಕ್ಯಾಮೆರಾ ಹೊಂದಿರುವುದು ಸಾಮಾನ್ಯವಾಯಿತು. ಹವ್ಯಾಸಿ ಛಾಯಾಗ್ರಾಹಕರು ಹೆಚ್ಚಾದರು.

1905, ಜರ್ಮನಿಯಲ್ಲಿ ಟೆಲಿಫೊಟೋ ಲೆನ್ಸ್ ಅನ್ನು ಕಂಡುಹಿಡಿಯಲಾಯಿತು. ಅದರ ಮಸೂರವನ್ನು ತಿರುವು ಮುರುವಾಗಿ ಅಳವಡಿಸಿ ಹತ್ತಿರದ ದೃಶ್ಯಗಳನ್ನು ತೆಗೆಯಲು ಪ್ರಯತ್ನಿಸಲಾಯಿತು.

ಇದನ್ನೂ ಓದಿ: ಶ್ರಾವಣದ ದಿವ್ಯತೆ, ಶಿವನಿಗೆ ಧನ್ಯತೆ!

1934ರಲ್ಲಿ ಗಾಜಿಗೆ ಬದಲಾಗಿ ಫರ್ಸ್ ಫೆಕ್ಸ್ ಮಸೂರಗಳನ್ನು ಕಂಡುಹಿಡಿಯಲಾಯಿತು. ನಂತರದಲ್ಲಿ ಫ್ಲೆಕ್ಸಿಗ್ಲಾಸ್ ಮಸೂರಗಳು ಮಾರುಕಟ್ಟೆಗೆ ಬಂದವು. ಆಗ ಪ್ಲಾಸ್ಟಿಕ್ ಆಕ್ರಾಲಿಕ್ ಮತ್ತು ಲೂಸೈಟ್ ಮಸೂರಗಳಿಗೆ ಹೆಚ್ಚು ಮಹತ್ವ ನೀಡಲಾಯಿತು. ಜಪಾನಿಗರು ಮಸೂರ ಹಾಗೂ ಕ್ಯಾಮೆರಾ ತಯಾರಿಕೆಯಲ್ಲಿ ಮುಂಚೂಣಿಗೆ ಬಂದರು.

ಅಪಾರ್ಚರ್ ಅಂದರೆ ಏನು?

ನಾವು ನಮ್ಮ ಕಣ್ಣಿನಿಂದ ನೋಡುವಾಗ, ಕಣ್ಣಿನ ಒಳಗೆ ಪ್ರವೇಶಿಸುವ ಬೆಳಕನ್ನು ಹೇಗೆ ನಮ್ಮ ಕಣ್ಣಿನ ಐರಿಸ್ ಒಳಗಿನ ಪ್ಯೂಪಿಲ್ (Pupil) ಹಿಗ್ಗಿ-ಕುಗ್ಗಿ ಬೆಳಕನ್ನು ನಿಯಂತ್ರಿಸುತ್ತದೆಯೋ ಹಾಗೆ ಕ್ಯಾಮೆರಾದ ಅಪಾರ್ಚರ್ ಕೆಲಸ ಮಾಡುತ್ತದೆ.

Untitled design - 2026-10-02T202639.454

ಒಂದು ಕ್ಯಾಮೆರಾವು ತನ್ನಲ್ಲಿರುವ ಲೆನ್ಸ್‌ನ ಮೂಲಕ ಬೆಳಕನ್ನು ಒಳಗೆ ಪಡೆದು, ಸೆನ್ಸಾರ್ ಮೇಲೆ ಚಿತ್ರದ ಬಿಂಬವನ್ನು ಮೂಡಿಸುತ್ತದೆ. ಸೆನ್ಸಾರ್‌ಗೆ ತಲುಪುವ ಬೆಳಕಿನ ಪ್ರಮಾಣವನ್ನು ನಿಯಂತ್ರಿಸಲು ಲೆನ್ಸ್‌ನೊಳಗೆ ಹಲವಾರು ತೆಳುವಾದ ಅಪಾರ್ಚರ್ ಬ್ಲೇಡ್‌ಗಳನ್ನು ಅಳವಡಿಸಲಾಗಿರುತ್ತದೆ. ಈ ಬ್ಲೇಡ್‌ಗಳು ಒಂದರ ಮೇಲೊಂದು ಚಲಿಸಿ ಬೆಳಕು ಹಾದುಹೋಗುವ ರಂಧ್ರವನ್ನು ಹಿಗ್ಗಿಸಬಲ್ಲವು-ಕುಗ್ಗಿಸಬಲ್ಲವು. ಈ ರಂಧ್ರವನ್ನೇ ಲೆನ್ಸ್‌ನ ಅಪಾರ್ಚರ್ ಎಂದು ಕರೆಯಲಾಗುತ್ತದೆ.

ಅಪಾರ್ಚರ್ ಸಂಖ್ಯೆ (F/1.8) ಕಡಿಮೆಯೆಂದರೆ ಸೆನ್ಸಾರ್‌ಗೆ ಹೆಚ್ಚು ಬೆಳಕನ್ನು ಹರಿಸುವುದು. ಇಲ್ಲಿ ಅಪಾರ್ಚರ್ ಚಕ್ರದ ರಂಧ್ರದ ವ್ಯಾಸವು ಹೆಚ್ಚಾಗಿರುತ್ತದೆ. ಇದರಿಂದ ಚಿತ್ರದ ಮುಖ್ಯ ಭಾಗವು ಪ್ರಜ್ವಲಿಸಿ ಹಿಂಭಾಗ ಬ್ಲರ್‌ ಆಗುತ್ತದೆ.

ಅಪಾರ್ಚರ್ ಸಂಖ್ಯೆ ಹೆಚ್ಚಾದಷ್ಟೂ (F/16) ಅಳವಡಿಸಲಾದ ಚಕ್ರದ ಸಹಾಯದಿಂದ ರಂಧ್ರದ ವ್ಯಾಸ ಕಡಿಮೆಯಾಗುತ್ತದೆ. ಸೆನ್ಸಾರ್‌ಗೆ ಕಡಿಮೆ ಬೆಳಕು ಹರಿಯುತ್ತದೆ. ಇದನ್ನು F ಸ್ಟಾಪ್‌ ಎಂದು ಕರೆಯಲಾಗುತ್ತದೆ. (ಉದಾಹರಣೆ F/1.8, F/16 ಇತ್ಯಾದಿ) ಫೋಕಲ್ ಲೆನ್ತ್, ಅಂದರೆ ಮಸೂರದಿಂದ ಸೆನ್ಸಾರ್‌ಗೆ ಇರುವ ದೂರ (ಮಿಲಿ ಮೀಟರ್ ನಲ್ಲಿ). ಅಪಾರ್ಚರ್ ಚಕ್ರದ ರಂಧ್ರದ ವ್ಯಾಸದಿಂದ ಭಾಗಿಸಿದರೆ‌ ಬರುವ ಉತ್ತರವೇ F ಸ್ಟಾಪ್ ಸಂಖ್ಯೆಗಳು.

Untitled design - 2026-10-02T202623.722

ಕ್ಯಾಮೆರಾದ ಲೆನ್ಸ್‌ನ ರಚನೆ ಬಹಳ ಕ್ಲಿಷ್ಟಕರ. ಬೆಳಕಿನ ವಿಭಜನೆಯನ್ನು ತಡೆಗಟ್ಟುವಂಥ ಸುಮಾರು ಐದರಿಂದ ಇಪ್ಪತ್ತೈದು ಅಂಶದ ಗಾಜಿನ ಮಸೂರಗಳನ್ನು ಬಳಸಿ ತಯಾರಿಸಿರುತ್ತಾರೆ. ಒಂದೇ ಜಾಗದಲ್ಲಿ ವಿವಿಧ ವೇವ್ ಲೆನ್ತ್‌ನ ಬೆಳಕು ಬೀಳದಂತೆ, ವರ್ಣೀಯ ವ್ಯತ್ಯಾಸವಾಗದಂಥ ವಿಶೇಷವಾದ ಗಾಜಿನ ಮಸೂರಗಳನ್ನು ಬಳಸಿರುತ್ತಾರೆ. ಮುಂದೆ ಮತ್ತು ಹಿಂದಿನ ಪದರದಲ್ಲಿ ನೀರು, ಎಣ್ಣೆ, ದೂಳಿನಂಥ ವಸ್ತುಗಳಿಂದ, ಬೆಳಕಿನ ತೀಕ್ಷ್ಣ ಕಿರಣಗಳಿಂದ ರಕ್ಷಿಸಲು ಪ್ಲೋರೈಟ್ ಕೋಟಿಂಗ್ ಮಾಡಲಾಗಿರುತ್ತದೆ. ಅಪಾರ್ಚರ್ ನಿರ್ವಹಿಸಲು ಒಂದರಮೇಲೊಂದರಂತೆ ಏಳರಿಂದ ಹನ್ನೊಂದು ಬ್ಲೇಡಿನ, ವಿವಿಧ ಅಳತೆಯ ರಂಧ್ರ ಮೂಡುವಂಥ, ಬೆಳಕನ್ನು ನಿಯಂತ್ರಿಸಲಾಗುವ ರಚನೆಯಿರುತ್ತದೆ. ಆಟೋ ಫೋಕಸ್‌ಗಾಗಿ ಮೋಟರುಗಳನ್ನು ಅಳವಡಿಸಲಾಗಿರುತ್ತದೆ. ಕ್ಯಾಮೆರಾದಲ್ಲಿ ಮೊದಲು ಕಾನ್ವೆಕ್ಸ್ ಲೆನ್ನ್ ಅನ್ನು ಬಳಸಲಾಗುತ್ತಿತ್ತು. ಈಗ ಕಾನ್ವೆಕ್ಸ್ ಸಹಿತ ಕಾನ್ಕೇವ್ ಲೆನ್ಸ್ ಅನ್ನೂ ಬಳಸಲಾಗುತ್ತಿದೆ.

ವಿವಿಧ ರೀತಿಯ ಲೆನ್ಸ್‌ಗಳನ್ನು ಕಂಡುಹಿಡಿಯಲಾಗಿದೆ. ಪ್ರೈಮ್ ಲೆನ್ಸ್‌ನಲ್ಲಿನ ಫೋಕಲ್ ಲೆನ್ತ್‌ ಅನ್ನು ಬದಲಾಯಿಸಲು ಸಾಧ್ಯವಿಲ್ಲ. ಅದನ್ನು ಶಾಶ್ವತವಾಗಿ ಅಳವಡಿಸಲಾಗಿರುತ್ತದೆ. ಜೂಮ್ ಲೆನ್ಸ್ (ಟೆಲಿ ಫೊಟೋ ಲೆನ್ಸ್)‌ ನಲ್ಲಿ ಫೋಕಲ್ ಲೆನ್ತ್ ಅನ್ನು ಬದಲಾಯಿಸಿಕೊಳ್ಳಬಹುದು. ಫಿಶ್ ಐ ಲೆನ್ಸ್ ಅತ್ಯಂತ ಹೆಚ್ಚಿನ ವೈಡ್ ಆಂಗಲ್ ಚಿತ್ರಗಳನ್ನು ತೆಗೆಯಬಹುದು. ಮ್ಯಾಕ್ರೋ ಲೆನ್ಸ್‌ನಿಂದ ಅತ್ಯಂತ ಸೂಕ್ಷ್ಮ ಗಾತ್ರದ ವಿವರದ ಚಿತ್ರಗಳನ್ನು ತೆಗೆಯಬಹುದು.

Admin

Admin

Pravasi Prapancha – A pioneering initiative led by Vishweshwar Bhat, the esteemed journalist and head of the Vishwavani Group. It is the first and only travel-focused publication in Kannada journalism, dedicated exclusively to news, information, and travel narratives about various destinations. The digital media counterpart of this venture is Pravasi Prapancha Digital Channel, which brings travel-related news from across the state, country, and world. It features fascinating insights, traveler experiences, interviews related to travel, entertainment segments, and much more. Editor-in-Chief: Shri Vishweshwar Bhat

ವ್ಹಾವ್..ವ್ಹಾವ್..ಗೋವಾ!

Read Previous

ವ್ಹಾವ್..ವ್ಹಾವ್..ಗೋವಾ!

ಮಾರಿಷಸ್‌ ಎಂಬ ಸ್ವರ್ಗಸೀಮೆ!

Read Next

ಮಾರಿಷಸ್‌ ಎಂಬ ಸ್ವರ್ಗಸೀಮೆ!