Friday, October 2, 2026
Friday, October 2, 2026

ಲೋಕದಲ್ಲೆಲ್ಲೂ ಸಿಗದು ಲೋಕಲ್‌ ತಿಂಡಿ ರುಚಿ

ಒಂದೆಡೆ ನೀವು ಊಹಿಸಬಹುದಾದ ಮೆನು ಕಾರ್ಡ್‌ನಿಂದ ಆರ್ಡರ್‌ಮಾಡಿ ತಿನ್ನುವ ಟೇಸ್ಟ್‌ ಇದ್ದರೆ, ಇನ್ನೊಂದೆಡೆ‌ ಅದೇ ಊರಿನ ಟೇಸ್ಟ್‌ ಕೊಡುವ ಹೊಸ ಅನುಭವ ನಿಮ್ಮ ಟ್ರಿಪ್‌ ಅನ್ನು ಕಂಪ್ಲೀಟ್‌ ಅನಿಸಿಬಿಡುತ್ತದೆ. ಆ ಊರಿನ ನೋಟ, ಆ ಊರಿನ ಸುವಾಸನೆ, ಆ ಊರಿನ ಧ್ವನಿ ನಿಮ್ಮ ಪಂಚೇಂದ್ರಿಯಗಳಿಗೆ ಕೊಡುವ ಫೀಲ್‌

  • ಬಡೆಕ್ಕಿಲ ಪ್ರದೀಪ

ಟ್ರಾವೆಲ್‌ ಡೀಪ್‌

ಯಾವುದೇ ಊರಿಗೆ ಹೋಗಿ, ಯಾವುದೇ ಟ್ರಿಪ್ಪಿಗೆ ಹೋಗಿ, ಹೊಟೇಲ್‌ ಹೋಗಿ ಮೆನು ನೋಡಿದರೆ ಹೆಚ್ಚೂಕಮ್ಮಿ ಎಲ್ಲವೂ ಒಂದೇ ರೀತಿ. ಇದು ಮಲ್ಟಿಕ್ವಿಸೀನ್‌ ರೆಸ್ಟೋರೆಂಟ್‌ಗಳ ಜಮಾನಾ. ಯಾವ ಮಟ್ಟಿಗೆ ಅಂದರೆ ಮೆನು ನೋಡೋದೇ ಬೇಡ ಅದರಲ್ಲೇನಿದೆ ಅನ್ನೋದನ್ನು ಊಹಿಸಬಹುದು. ರುಚಿಯ ಸ್ವಾದದಲ್ಲಿ ಒಂದಷ್ಟು ಖಾರ, ಸ್ವೀಟು, ಒಗರು ಹೆಚ್ಚು-ಕಮ್ಮಿ ಬಿಟ್ರೆ ಮತ್ತೆಲ್ಲಾ ಸೇಮ್‌ ಟು ಸೇಮ್‌.

ಹಾಗಂತ ಈ ಬಾರಿ ನಾನು ನಿಮ್ಮನ್ನು ಯಾವುದೋ ಊರಿಗೆ ಹೋಗಿ, ಅಲ್ಲಿನ ಲೋಕಲ್‌ ಫ್ಲೇವರ್‌ ನೀಡುವ ಒಂದು ಫೇಮಸ್‌ ಊಟದ ಪಾಯಿಂಟ್‌ ಹೋಗಿ ಅಂದರೆ, ತಿಂಡಿ ಪ್ಲೇಸ್‌ಗೆ ಭೇಟಿನೀಡಿ ಅಂದರೆ, ಹಿಂದೆ ನಾವು ಮಾಡಿದ ಆಲ್ಗಾರಿದಂ ಬಿಟ್ಟು ಹೊಸ ರಿದಂ ಅನ್ನು ಕಾಣುವ ಹಾದಿ ಕಷ್ಟವಾದೀತು. ಬದಲಿಗೆ, ನಾವು ಟೂರಿಸ್ಟ್‌ ಆಗಿ ಹೋಗುವಾಗ ಸುಲಭದಲ್ಲಿ ಕೈಗೆಟುವ ಆಯ್ಕೆಗಳನ್ನು ಬಿಟ್ಟು ಮತ್ತೊಂದಿಷ್ಟನ್ನು ಹುಡುಕುವ ತವಕವನ್ನು ಬೆಳೆಸೋಣ ಅನ್ನುವ ಕಾಳಜಿ ಅಷ್ಟೇ!

ಇದನ್ನೂ ಓದಿ: ಕ್ಯಾಮೆರ ಅಪಾರ್ಚರ್‌

ಅದೇ ಜಾಗ, ಹೊಸ ಸ್ವಾದ

ಒಂದು ಹೊಸ ಊರಿಗೆ ಹೋದಾಗ, ಸುಲಭದಲ್ಲಿ ಆಯ್ಕೆ ಮಾಡಬಹುದಾದ, ಪ್ರೆಡಿಕ್ಟೆಬಲ್‌ ಅನಿಸುವ ಪನೀರ್‌ ಬಟರ್‌ ಮಸಾಲಾ, ರೋಟಿ ಆರ್ಡರ್‌ ಮಾಡುವ ಬದಲು, ಚಿಕನ್‌ ಬಿರಿಯಾನಿ ಆಯ್ಕೆಮಾಡುವ ಮೊದಲು, ಅದೇ ಊರಿನಲ್ಲಿ ಬೆಳೆಯುವ ತರಕಾರಿ, ಬೇಳೆ, ಕಾಳುಗಳಿಂದ ಮಾಡಿದ ಸ್ಪೆಷಲ್‌ ರೆಸಿಪಿಯನ್ನು ಟ್ರೈ ಮಾಡುವತ್ತ ಯೋಚಿಸಿದರೆ ಹೇಗೆ? ವಿಶ್ವದೆಲ್ಲೆಡೆ ಇರುವ ಅದೇ ಕೆಫೆ ಚೈನ್‌ ಅಥವಾ ಚಿಕನ್-ಬರ್ಗರ್‌ ರೆಸ್ಟೋರೆಂಟ್‌ಗಳ ಚೈನ್‌ಗೆ ಮತ್ತೆ ಮೊರೆಹೊಕ್ಕುವ ಬದಲು ಅದೇ ಊರಿನ ರೆಸ್ಟೋರೆಂಟ್‌ನಲ್ಲಿ ನೀವು ಇಂದಿನವರೆಗೆ ಟ್ರೈ ಮಾಡದ ಹೊಸದೇನಿದೆ ಅನ್ನುವುದನ್ನು ಟೇಸ್ಟ್‌ ಮಾಡಿ ನೋಡಿ. ನಿಮ್ಮ ಸಿಟಿಯಲ್ಲೇ ಸಿಗುವ ಫುಡ್‌ ತಿಂದರೆ ಮಜವಿರುವುದಿಲ್ಲ.

ನೀವೂ ಮಾಡಿ, ಹೊಸದನ್ನೂ ಟ್ರೈ ಮಾಡಿ

ಅಡುಗೆ ಮಾಡಿದರೆ ತಿನ್ನೋ ಮಜ ನಮಗೆಲ್ಲಾ ಸಿಗುತ್ತದೆ. ಆದರೆ, ಆ ಅಡುಗೆಯನ್ನು ಮಾಡುವ ಮಜ ಅನುಭವಿಸುವವರು ನಮ್ಮ ಹಲವು ಮಂದಿ, ಅವರಿಂದಲೇ ಹೊಸ ಹೊಸ ರೆಸಿಪಿಗಳಿಗೆ ಜೀವ ಸಿಗುವುದು. ಮನೆಯಲ್ಲಿ ಹೊಸದೇನಾದರೂ ಟ್ರೈ ಮಾಡಿದ ಹಾಗಾಗುವುದು. ಈಗಂತೂ ಸೋಷಿಯಲ್‌ ಮೀಡಿಯಾದಲ್ಲಿ ಸಿಗುವ ರೆಸಿಪಿ ವಿಡಿಯೋಗಳನ್ನು ನೋಡಿ ಅದರಿಂದ ಇನ್‌ಸ್ಪೈರ್‌ ಆಗಿ ಹೊಸ ಹೊಸ ರುಚಿಯನ್ನು ಟ್ರೈ ಮಾಡುವುದು ಹೆಚ್ಚಾಗಿದೆ. ಆದರೂ ಒಂದೂರಿಗೆ ಹೋಗಿದ್ದಾಗ ಅಲ್ಲಿನ ರೆಸಿಪಿಯನ್ನು ಅಲ್ಲಿನದೇ ಅಡುಗೆ ಮನೆಯೊಂದರಲ್ಲಿ ಹೋಗಿ ಟ್ರೈ ಮಾಡುವುದು ಇನ್ನಷ್ಟು ಮಜ ನೀಡುತ್ತದೆ. ನೀವು ಸ್ಟೇ ಮಾಡಿದ ಹೋಮ್‌ ಸ್ಟೇ ನೋಡಿಕೊಳ್ಳುವ ಆಂಟಿ ನಿಮಗೆ ಹೇಳಿಕೊಟ್ಟ ಮಸಾಲೆಯ ರುಚಿ ಬೇರೇಯೇ ಬಿಡಿ. ಆನ್‌ಲೈನ್‌ ನೋಡಿ ಕಲಿತರೂ ನೀವು ಅದೇ ರುಚಿ ಪಡೆಯಬಹುದು. ಅದು ನಿಮ್ಮ ಟ್ಯಾಲೆಂಟು. ಆದರೆ ಅವರು ಹೇಳಿದ ಹಾಗೆ ಮಾಡಿ ಅಡುಗೆ ತಯಾರಿಸಿದರೆ ಅದು ಕೊಡುವ ತೃಪ್ತಿ ನೆಕ್ಸ್ಟ್‌ ಲೆವೆಲ್‌ ಆಗಿರುತ್ತದೆ.

ನಿರೀಕ್ಷಿತ - ಅನಿರೀಕ್ಷಿತ

ಒಂದೆಡೆ ನೀವು ಊಹಿಸಬಹುದಾದ ಮೆನು ಕಾರ್ಡ್‌ನಿಂದ ಆರ್ಡರ್‌ಮಾಡಿ ತಿನ್ನುವ ಟೇಸ್ಟ್‌ ಇದ್ದರೆ, ಇನ್ನೊಂದೆಡೆ‌ ಅದೇ ಊರಿನ ಟೇಸ್ಟ್‌ ಕೊಡುವ ಹೊಸ ಅನುಭವ ನಿಮ್ಮ ಟ್ರಿಪ್‌ ಅನ್ನು ಕಂಪ್ಲೀಟ್‌ ಅನಿಸಿಬಿಡುತ್ತದೆ. ಆ ಊರಿನ ನೋಟ, ಆ ಊರಿನ ಸುವಾಸನೆ, ಆ ಊರಿನ ಧ್ವನಿ ನಿಮ್ಮ ಪಂಚೇಂದ್ರಿಯಗಳಿಗೆ ಕೊಡುವ ಫೀಲ್‌ ಅನ್ನು ಇನ್ನೊಂದು ಲೆವೆಲ್‌ಗೆ ಕೊಂಡೊಯ್ಯುವುದು ಅಲ್ಲಿನ ಊಟದ ರುಚಿ, ಸುವಾಸನೆ ಹಾಗೂ ಅದರ ಪರಿಮಳ.‌

Untitled design (71)

ಲೋಕಲ್‌ಗೆ ಲೋಕಲ್‌

ನಾವು ಒಂದೂರಿನ ರೆಸಿಪಿ ಇನ್ನೊಂದೂರಿನಲ್ಲಿ ಎಷ್ಟೇ ಟ್ರೈ ಮಾಡಿದರೂ ಆ ಊರಿನ ಥರವೇ ಮಾಡುವುದು ಕಷ್ಟ. ಅದಕ್ಕೆ ಅಲ್ಲಿನ ನೀರು, ಬೇಳೆ, ಕಾಳು, ತರಕಾರಿ, ಮಸಾಲೆಗಳ ಮಿಶ್ರಣ ಬೇಕೇ ಬೇಕು. ಪ್ರತಿ ಫುಡ್‌ ಕೂಡ ಇನ್ನೊಂದೂರಿಗೆ ಹೋಗುವಾಗ ಅಲ್ಲಿನ ಫ್ಲೇವರ್‌ನ ನೂರಕ್ಕೆ ನೂರು ಮ್ಯಾಚ್‌ ಮಾಡುವುದು ಕಷ್ಟ. ಅಂತೂ ಅದನ್ನೆಲ್ಲಾ ಮಾಡಿದಿರಿ ಅಂದುಕೊಳ್ಳೋಣ, ಅದು ಕಂಪ್ಲೀಟ್‌ ಅನಿಸೋದು ಅದೇ ಊರಿನಲ್ಲಿ ಕುಳಿತು, ಅದೇ ವಾತಾವಾರಣದಲ್ಲೇ ಸೇವಿಸಿದಾಗ. ಹಾಗಾಗಿ ಒಂದೂರಿನ ಪೂರ್ತಿ ಅನುಭವ ನಿಮಗಾಗಬೇಕು ಅಂದರೆ ಅಲ್ಲಿನ ಆಹಾರ ಅಲ್ಲೇ ಆಸ್ವಾದಿಸಿ ನೋಡಿ.

ಮಂಗಳೂರಿನ ನೀರ್‌ ದೋಸೆಯನ್ನು ಬೆಂಗಳೂರಲ್ಲಿ ತಿನ್ನೋದು ಸರಿಯೇ. ಆದರೆ ಮಂಗಳೂರಿನ ಹೊಟೇಲ್‌ನಲ್ಲೂ ಅದು ಹೊಟೇಲ್‌ನ ರುಚಿ ಹೊಂದಿರುತ್ತದೆ. ಅದೇ ಸ್ಥಳೀಯರ ಮನೆಯಲ್ಲಿ ಅದನ್ನು ಸವಿದರೆ ಅದಕ್ಕೆ ಬೇರೆಯದೇ ಅಥೆಂಟಿಸಿಟಿ ಇರುತ್ತದೆ. ಈಗ ಮದ್ದೂರು ವಡೆ ಸಿಗದೇ ಇರೋ ಹೊಟೇಲ್‌ಗಳೇ ಕಡಿಮೆ. ಪ್ಯಾಕ್‌ ಆಗಿ ಬೇಕರಿ, ಅಂಗಡಿಗಳಲ್ಲೂ ಅದು ರಾರಾಜಿಸುತ್ತಿದೆ. ಇದು ಬರೀ ಮದ್ದೂರು ವಡೆ ಕಥೆ ಅಲ್ಲ, ಬೆಂಗಳೂರು- ಮೈಸೂರಿನ ನಿಪ್ಪಟ್ಟು, ಧಾರವಾಡ ಪೇಢಾ, ಬೆಳಗಾವಿ ಕುಂದಾ, ಮೈಸೂರುಪಾಕ್‌, ಮಸಾಲೆ ಮಂಡಕ್ಕಿ, ಮಂಗಳೂರು ಬನ್ಸ್‌, ಬಿಡದಿಯ ತಟ್ಟೆ ಇಡ್ಲಿ, ಉತ್ತರ ಕರ್ನಾಟಕದ ಜೋಳದ ರೊಟ್ಟಿ ಹೀಗೆ ಒಂದಾ ಎರಡಾ, ನೂರಾರು ರೆಸಿಪಿಗಳು ತಮ್ಮೂರನ್ನು ಬಿಟ್ಟು, ವಲಸೆ ಬಂದ ನಮ್ಮೆಲ್ಲರ ಹಾಗೇ ಊರೂರನ್ನು ಸೇರಿಕೊಂಡಿವೆ. ಅವುಗಳ ಸ್ವಾದ ನಮಗೆ ಸಿಗಬಹುದು. ಆದರೆ, ಅವು ಹುಟ್ಟಿದೂರಿನ ಟೇಸ್ಟ್‌ ಮಾತ್ರ ಅಲ್ಲಿಯೇ ಉಳಿದಿರುತ್ತದೆ.

ಪಂಚ್-ರ್‌ ಶಾಪ್

ಸಾವಿರಾರು ರುಪಾಯಿ ಖರ್ಚುಮಾಡಿ ಒಂದೂರಿಗೆ ಹೋಗಿ, ಅಲ್ಲಿನ ಲೋಕಲ್‌ ಮಸಾಲೆ ಸವಿಯಲಿಲ್ಲ ಅಂದರೆ, ಪೆಟ್ರೋಲ್‌ ಖರ್ಚಾದದ್ದು ಮಾತ್ರ ಲೆಕ್ಕ ಅಂತಾಯ್ತು!

Admin

Admin

Pravasi Prapancha – A pioneering initiative led by Vishweshwar Bhat, the esteemed journalist and head of the Vishwavani Group. It is the first and only travel-focused publication in Kannada journalism, dedicated exclusively to news, information, and travel narratives about various destinations. The digital media counterpart of this venture is Pravasi Prapancha Digital Channel, which brings travel-related news from across the state, country, and world. It features fascinating insights, traveler experiences, interviews related to travel, entertainment segments, and much more. Editor-in-Chief: Shri Vishweshwar Bhat

ಕೈ ಸವೆಯುವವರೆಗೂ ನಿರಂತರ ಬರೆಯಲು ಸೈ !

Read Previous

ಕೈ ಸವೆಯುವವರೆಗೂ ನಿರಂತರ ಬರೆಯಲು ಸೈ !

ವಿಮಾನದಲ್ಲಿ ಮುಂಭಾಗದ ಆಸನಗಳು ಸುರಕ್ಷಿತವೇ ?

Read Next

ವಿಮಾನದಲ್ಲಿ ಮುಂಭಾಗದ ಆಸನಗಳು ಸುರಕ್ಷಿತವೇ ?