Friday, February 13, 2026
Friday, February 13, 2026

ಕಾಜಿರಂಗದಲ್ಲಿ ಪ್ರಿಯಾಂಶಿಯ ಮೊದಲ ಹುಟ್ಟುಹಬ್ಬ

ಅಸ್ಸಾಂನ ಕಾಜಿರಂಗ ದೇಶೀಯ ಉದ್ಯಾನವನದಲ್ಲಿರುವ ಪ್ರಿಯಾಂಶಿ ಎನ್ನುವ ಮುದ್ದಾದ ಆನೆ ಮರಿಯ ಹುಟ್ಟು ಹಬ್ಬವನ್ನು ಇಲಾಖೆಯ ಸಿಬ್ಬಂದಿ ವಿಶೇಷವಾಗಿ ಆಚರಣೆ ಮಾಡಿದ್ದಾರೆ. ಮೊಮೊ ಎಂದರೆ ಓಡೋಡಿ ಬರುವ ಈ ಪುಟ್ಟ ಆನೆ ಮರಿಗಾಗಿ ಫೋರೆಸ್ಟ್‌ ಥೀಮ್‌ನ ಕೇಕ್‌ ಸಿದ್ಧಪಡಿಸಿ, ಅದಕ್ಕಿಷ್ಟವಾದ ಖಾದ್ಯಗಳನ್ನೂ ಮುಂದಿಟ್ಟು ಹುಟ್ಟುಹಬ್ಬವನ್ನು ಸಂಭ್ರಮಿಸಿದ್ದಾರೆ.

ಮನುಷ್ಯರಂತೆಯೇ ಪ್ರಾಣಿಗಳನ್ನು ಪ್ರೀತಿಸಿ, ಆರೈಕೆ ಮಾಡುವವರು, ಪ್ರಾಣಿಗಳಿಗೆ ವಿಶೇಷವಾದ ಉಡುಗೆಯನ್ನು ಹಾಕಿ ಸಂಭ್ರಮಿಸುವವರು, ಪ್ರಯಾಣದಲ್ಲೂ ಅವುಗಳನ್ನು ಜತೆಗೆ ಕರೆದುಕೊಂಡು ಹೋಗುವಂಥ ಅನೇಕ ಮಂದಿ ನಮ್ಮ ನಡುವೆಯೇ ಇದ್ದಾರೆ. ಅದರಲ್ಲೂ ಸಾಕು ಪ್ರಾಣಿಗಳ ಹುಟ್ಟುಹಬ್ಬವನ್ನು ಆಚರಿಸುವುದಂತೂ ಈಗ ಟ್ರೆಂಡ್‌ ಆಗಿಬಿಟ್ಟಿದೆ. ಆದರೆ ಒಂದು ವರ್ಷ ತುಂಬಿದ ಆನೆಮರಿಯ ಹುಟ್ಟುಹಬ್ಬದ ವಿಡಿಯೋವೊಂದು ಸದ್ಯ ಸಾಮಾಜಿಕ ಜಾಲತಾಣದಲ್ಲಿ ಸದ್ದು ಮಾಡುತ್ತಿದೆ.

ಅಸ್ಸಾಂನ ಕಾಜಿರಂಗ ದೇಶೀಯ ಉದ್ಯಾನವನದಲ್ಲಿರುವ ಪ್ರಿಯಾಂಶಿ ಎನ್ನುವ ಮುದ್ದಾದ ಆನೆ ಮರಿಯ ಹುಟ್ಟು ಹಬ್ಬವನ್ನು ಇಲಾಖೆಯ ಸಿಬ್ಬಂದಿ ವಿಶೇಷವಾಗಿ ಆಚರಣೆ ಮಾಡಿದ್ದಾರೆ. ಮೊಮೊ ಎಂದರೆ ಓಡೋಡಿ ಬರುವ ಈ ಪುಟ್ಟ ಆನೆ ಮರಿಗಾಗಿ ಫೋರೆಸ್ಟ್‌ ಥೀಮ್‌ನ ಕೇಕ್‌ ಸಿದ್ಧಪಡಿಸಿ, ಅದಕ್ಕಿಷ್ಟವಾದ ಖಾದ್ಯಗಳನ್ನೂ ಮುಂದಿಟ್ಟು ಹುಟ್ಟುಹಬ್ಬವನ್ನು ಸಂಭ್ರಮಿಸಿದ್ದಾರೆ. ಈ ಬಗ್ಗೆ ಆನೆ ಮರಿಯ ಕೇರ್‌ ಟೇಕರ್‌ ಬಿಬಿನ್‌ ಕಶ್ಯಪ್‌ ಎನ್ನುವ ವ್ಯಕ್ತಿ ಸಾಮಾಜಿಕ ಜಾಲತಾಣದಲ್ಲಿ ವಿಡಿಯೋವನ್ನು ಹಂಚಿಕೊಂಡಿದ್ದು, ಲಕ್ಷಗಟ್ಟಲೆ ವೀಕ್ಷಣೆ ಪಡೆದುಕೊಂಡಿದೆ.

Bhagya Divana

Bhagya Divana

Bhagya Divana is a Professional Journalist. Working in Pravasi Prapancha.

ಮೇ 1 ರಿಂದ ವಿದೇಶಿ ಪ್ರವಾಸಿಗರಿಗೆ ಥಾಯ್ಲೆಂಡ್‌ನಲ್ಲಿ ಡಿಜಿಟಲ್ ಆಗಮನ ಕಾರ್ಡ್ ಕಡ್ಡಾಯ

Read Previous

ಮೇ 1 ರಿಂದ ವಿದೇಶಿ ಪ್ರವಾಸಿಗರಿಗೆ ಥಾಯ್ಲೆಂಡ್‌ನಲ್ಲಿ ಡಿಜಿಟಲ್ ಆಗಮನ ಕಾರ್ಡ್ ಕಡ್ಡಾಯ

ಗೋವಾ ಹೋದರೆ ಈ ಬೀಚ್‌ಗಳನ್ನು ಮಿಸ್‌ ಮಾಡಿಕೊಳ್ಳಲೇಬೇಡಿ!

Read Next

ಗೋವಾ ಹೋದರೆ ಈ ಬೀಚ್‌ಗಳನ್ನು ಮಿಸ್‌ ಮಾಡಿಕೊಳ್ಳಲೇಬೇಡಿ!