Saturday, February 14, 2026
Saturday, February 14, 2026

ಕಾಡು ನೋಡಲು ಹೋದವರು ಕವಿತೆಯೊಡನೆ ಬರದಿದ್ದರೆ?..

ಹಾಸನ ಜಿಲ್ಲೆಯ ಸಕಲೇಶಪುರ ತಾಲೂಕಿನ ಕಾಡುಮನೆ ಹಳ್ಳಿಯಲ್ಲಿ ಇರುವ ಈ ರೆಸಾರ್ಟ್‌ ಪ್ರಕೃತಿ ಪ್ರಿಯರ ದಿಲ್ ಕಿ ಧಡ್ಕನ್ ಆಗುವುದರಲ್ಲಿ ಅನುಮಾನವಿಲ್ಲ. ಹಸಿರು ಶ್ಯಾಮಲೆ ಅಲ್ಲಿ ನಸು ನಗುತ್ತಾಳೆ. ನವಿಲುಗಳು ಗರಿಬಿಚ್ಚಿ ನರ್ತಿಸುತ್ತವೆ. ಕೋಗಿಲೆ ಉಲಿಯುತ್ತದೆ. ಬಗೆಬಗೆಯ ಹಕ್ಕಿಗಳು ಕೆಂಬಣ್ಣದ ಮೋಡ ಎಬ್ಬಿಸಿ ಹಾರುತ್ತವೆ. ತುಂತುರು ಮಳೆಯ ಹನಿ ಮುತ್ತಿಕ್ಕುತ್ತದೆ. ತಣ್ಣನೆಯ ಬಯಲ ಗಾಳಿ ನಮ್ಮ ಹೆಗಲು ಹತ್ತುತ್ತದೆ. ತೊರೆಯ ನೀರು ಶೃತಿಬದ್ಧವಾಗಿ ಹರಿಯುತ್ತದೆ. ಕಾಡುಮನೆಗೆ ಹೋದವರು ಕವಿತೆಯೊಡನೆ ಬರದಿದ್ದರೆ ಹೇಗೆ?

‘ಕಾಡು ನೋಡ ಹೋದೆ ಕವಿತೆಯೊಡನೆ ಬಂದೆ’ ಈ ಹಾಡನ್ನು ಅಪರೂಪಕ್ಕೆ ಒಮ್ಮೆಯಾದರೂ ನಿಮ್ಮಿಷ್ಟಕ್ಕೆ ನೀವೇ ಗುನುಗಿರುತ್ತೀರಿ ಅಲ್ಲವೇ? ನಾವು ಹೇಳುವ ಜಾಗಕ್ಕೆ ನೀವು ಹೋದರಂತೂ ಮತ್ತೆ ಮತ್ತೆ ಇದೇ ಹಾಡನ್ನು ಹಾಡುತ್ತೀರಿ. ಅಲ್ಲಿ ನಿಮಗೆ ಧ್ಯಾನಿಸಲು ಕಾಡಿನ ಹೊರತಾಗಿ ಮತ್ತೇನೂ ಕಾಣುವುದಿಲ್ಲ. ಕಣ್ಣು ನೆಟ್ಟಷ್ಟು ದೂರಕ್ಕೂ ಕಾಡು ಮತ್ತು ಹಸಿರು. ಅಲ್ಲಿ ಕಾಡು ಮತ್ತು ಹಸಿರು ಶ್ಯಾಮಲೆ ತಪಸ್ಸಿಗೆ ಕೂತಂತಿದೆ. ಇದೇನಿದು ಕಾಡು ಬಿಟ್ಟು ಮುಂದಕ್ಕೆ ಹೋಗ್ತಿಲ್ಲವಲ್ಲ ಅಂದುಕೊಂಡಿರಾ? ನಾವು ಮಾತನಾಡುತ್ತಿರುವುದು ಕಾಡು ಮನೆ ಹಿಲ್ಸ್‌ ರೆಸಾರ್ಟ್‌ ಬಗ್ಗೆ. ತನ್ನ ಹೆಸರಿಗೆ ಕಾಡನ್ನು ಅಂಟಿಸಿಕೊಂಡಿರುವ ರೆಸಾರ್ಟ್‌ ಬಗ್ಗೆ ಹೇಳುವಾಗ ಕಾಡಿನ ಜಪವಲ್ಲದೆ ಮತ್ತೇನನ್ನು ಮಾಡಲು ಸಾಧ್ಯ ಹೇಳಿ?

ಇದನ್ನೂ ಓದಿ: ನೆಲದ ಸಿರಿಯೆಂಬ ಹಸಿರು ತೋಟ

ಸಕಲೇಶಪುರದ ಬ್ರಾಂಡ್‌ ರೆಸಾರ್ಟ್‌

'ಕಾಡುಮನೆ ಹಿಲ್ಸ್' ಈ ಜಾಗ ಹಲವು ಪ್ರವಾಸಿಗರಿಗೆ ಅಚ್ಚುಮೆಚ್ಚು. ಅಲ್ಲಿನ ಪ್ರಶಾಂತ ವಾತಾವರಣ, ರೆಸಾರ್ಟ್‌ನ ಸಿಬ್ಬಂದಿ ನೀಡುವ ಆತ್ಮೀಯ ಆತಿಥ್ಯ ಮತ್ತು ಒದಗಿಸುವ ಸೇವೆ ಎಂಥವರನ್ನೂ ಆಕರ್ಷಿಸುತ್ತದೆ. ಕಾಡಿನ ಜೀವನವನ್ನು ಅರೆಕಾಲವಾದರೂ ಜೀವಿಸಲು ಕಾಡುಮನೆ ಹಿಲ್ಸ್‌ ರೆಸಾರ್ಟ್‌ಗೆ ಹೋಗಲು ಪ್ರವಾಸಿ ಪ್ರಿಯರು ಬಯಸುತ್ತಾರೆ. ನೂರಾರು ಕಮರ್ಷಿಯಲ್‌ ರೆಸಾರ್ಟ್‌ಗಳ ಮಧ್ಯೆ ಕಾಡುಮನೆ ಹಿಲ್ಸ್‌ ನೆಲದ ಸೊಗಡನ್ನು ಉಳಿಸಿಕೊಂಡು ಇಂದು ಹೆಸರುವಾಸಿಯಾಗಿದೆ. ಕೇವಲ ವ್ಯಾವಹಾರಿಕತೆಯ ರೆಸಾರ್ಟ್‌ ಆಗಿರದೆ ಆತಿಥ್ಯ ಕ್ಷೇತ್ರದಲ್ಲಿ ಹೊಸ ಭಾಷ್ಯ ಬರೆದಿದೆ. ಅಷ್ಟಕ್ಕೂ ಈ ʼಕಾಡುಮನೆ ಹಿಲ್ಸ್ʼ ಎಂಬ ಅದ್ಭುತ ರೆಸಾರ್ಟ್‌ ಇರುವುದು ಹಾಸನ ಜಿಲ್ಲೆಯ ಸಕಲೇಶಪುರದ ಬಳಿ. ಕಾಡುಮನೆ ಹಿಲ್ಸ್‌ ಸಕಲೇಶಪುರದ್ದೇ ಬ್ರಾಂಡ್‌ ಆಗಿ ಇಂದು ದೇಶವ್ಯಾಪಿ ಖ್ಯಾತಿಗಳಿಸಿದೆ. ಇಲ್ಲಿಗೆ ಹೈದರಾಬಾದ್‌, ಕೇರಳ, ಚೆನ್ನೈ, ಪಾಂಡಿಚೇರಿ, ಗೋವಾ ಮತ್ತು ಇನ್ನಿತರ ರಾಜ್ಯಗಳಿಂದ ಪ್ರವಾಸಿಗರು ಆತಿಥ್ಯ ಮತ್ತು ವಾಸ್ತವ್ಯಕ್ಕಾಗಿ ಬರುತ್ತಾರೆ. ಕಾಡುಮನೆ ರಾಜಧಾನಿ ಬೆಂಗಳೂರಿನಿಂದ 245 ಕಿಮೀ ದೂರದಲ್ಲಿದೆ. ಸಕಲೇಶಪುರದಿಂದ ಕೇವಲ 24 ಕಿಮೀ ಇದೆ. ಬೆಂಗಳೂರು ಮತ್ತು ಮಂಗಳೂರು ಹೈವೇ ರಸ್ತೆಯ ಮಧ್ಯದಲ್ಲಿರುವ ಈ ಕಾಡುಮನೆಯ Centre Of Attraction ಎಂದರೆ ದಟ್ಟ ಕಾಡು, ಬೆಟ್ಟ ಗುಡ್ಡ ಮತ್ತು ಪರ್ವತಗಳು. ಬರೋಬ್ಬರಿ ಇಪ್ಪತ್ತೈದು ಎಕರೆ ವಿಸ್ತೀರ್ಣದಲ್ಲಿರುವ ಈ ರೆಸಾರ್ಟ್ ಅನ್ನು ವಿಶೇಷ ವಿನ್ಯಾಸದೊಂದಿಗೆ ನಿರ್ಮಿಸಲಾಗಿದೆ. ಆಧುನಿಕತೆಗೆ ತಕ್ಕುದಾದ ಅತಿಥಿ ಕೋಣೆಗಳು ಪ್ರವಾಸಿಗರನ್ನು ಮತ್ತಷ್ಟು ಸೆಳೆಯುತ್ತವೆ. ವಿಶಾಲವಾದ ಹದಿಮೂರಕ್ಕೂ ಹೆಚ್ಚು ಕೋಣೆಗಳು, ಒಳಂಗಾಣ, ಹೊರಾಂಗಣ ಆಟಗಳು ಮತ್ತು ಸ್ವಿಮ್ಮಿಂಗ್‌ ಪೂಲ್‌ ಇರುವುದರಿಂದ ಪ್ರವಾಸಿಗರು ಇಲ್ಲಿ ಆರಾಮವಾಗಿ ತಮ್ಮ ವೀಕೆಂಡ್‌ ದಿನಗಳನ್ನು ಕಳೆಯಬಹುದು. ಗೋಡೆಗಳಿಲ್ಲದ, ಈ ಹಿಂದೆ ಹಳ್ಳಿಗಳಲ್ಲಿರುತ್ತಿದ್ದ ಸಣ್ಣ ಸಣ್ಣ ತೊಟ್ಟಿಗಳ ಮಧ್ಯೆ ಕಾಲು ಚಾಚಿಕೊಂಡು ಹಬೆಯಾಡುವ ಕಾಫಿ ಹೀರುತ್ತಿದ್ದರೆ ಆಹಾ ಎಂಥ ಮಜ ಅಲ್ವಾ? ಹಾಂ… ಇಲ್ಲಿ ಸಿಗುವುದು ಸಸ್ಯಾಹಾರಿ ಆಹಾರ ಮಾತ್ರ. ಇದು ಕಾಡುಮನೆ ಹಿಲ್ಸ್‌ ವೆಜಿಟೇರಿಯನ್‌ ರೆಸಾರ್ಟ್‌ ಎಂಬುದು ನೆನಪಿನಲ್ಲಿರಲಿ.

Untitled design (51)

ವೆಲ್‌ನೆಸ್‌ ಟೂರಿಸಂಗೂ ಸೈ

ಕಾಡುಮನೆಯಲ್ಲಿ ಆತಿಥ್ಯವಷ್ಟೇ ಅಲ್ಲ ವೆಲ್‌ನೆಸ್‌ ಕೂಡ ಇದೆ. ಆಯುರ್ವೇದ ಚಿಕಿತ್ಸೆ ಮತ್ತು ಪಂಚಕರ್ಮವಿದೆ. ವಿವಿಧ ಆಹಾರ ಪದ್ಧತಿಯೂ ಇದೆ. ರಕ್ತದೊತ್ತಡ, ಮಧುಮೇಹ ಕಾಯಿಲೆ ಇರುವವರೂ ಇಲ್ಲಿ ಚಿಕಿತ್ಸೆ ಪಡೆಯಬಹುದು. ನೈಸರ್ಗಿಕ ಚಿಕಿತ್ಸೆ ಮೂಲಕವೇ ಕಾಯಿಲೆಗಳನ್ನು ಸುಧಾರಿಸಲಾಗುತ್ತದೆ. ಮಸಾಜ್‌, ಡಿಜಿಟಲ್‌ ಡಿಟಾಕ್ಸ್‌ ಥೆರಪಿ ಮತ್ತು ಓವರ್‌ ಆಲ್‌ ರಿಲ್ಯಾಕ್ಸ್‌ಗಾಗಿ ಇಲ್ಲಿ ಬಗೆಬಗೆಯ ಥೆರಪಿಗಳಿವೆ. ಪುನರ್ಪುಳಿ ಕುಡಿಯುತ್ತಾ, ಆಯಾಸ ಕಳೆದುಕೊಳ್ಳುತ್ತಾ ಕಾಡುಮನೆಯಲ್ಲಿ ನಿಮ್ಮ ಮನಸಿಗೆ ʼಓ ಮನಸೇ ರಿಲ್ಯಾಕ್ಸ್‌ʼ ಎಂದು ಹೇಳಬಹುದು.

ಹತ್ತಿರದ ತಾಣಗಳು

ಕಾಡುಮನೆ ಹಿಲ್ಸ್‌ಗೆ ಹೋದವರು ರೆಸಾರ್ಟ್‌ನಲ್ಲಷ್ಟೇ ಉಳಿದುಕೊಂಡು ಬರಬೇಕು ಅಂತಿಲ್ಲ. ಕಾಡುಮನೆಯಿಂದ ಸಮೀಪದಲ್ಲಿಯೇ ಟ್ರೆಕ್ಕಿಂಗ್‌ಗಾಗಿ ಹಲವು ತಾಣಗಳಿವೆ. ಹೌದು, ಚಾರಣದಲ್ಲಿ ಆಸಕ್ತಿ ಇರುವವರು ರೆಸಾರ್ಟ್‌ನಿಂದ ಅನತಿ ದೂರದಲ್ಲಿರುವ ಮೂರ್ಕಲ್ಲು ಬೆಟ್ಟ ಮತ್ತು ಎತ್ತಿನ ಭುಜದತ್ತ ಹೆಜ್ಜೆ ಹಾಕಬಹುದು. ದಾರಿ ಮಧ್ಯೆ ಹತ್ತಾರು ಸಣ್ಣ ಸಣ್ಣ ತೊರೆಗಳು ಕಾಣಿಸುತ್ತವೆ. ವಾಟರ್‌ ಫಾಲ್ಸ್‌ ಅಡಿಯಲ್ಲಿ ನಿಂತು ಕೆಲ ಹೊತ್ತು ಆಟವಾಡಿಕೊಂಡು ದಾರಿ ಬೆಳೆಸಬಹುದು. ಕಾಡುಮನೆ ಹಳ್ಳಿಯಲ್ಲಿ ಇರುವ ಈ ರೆಸಾರ್ಟ್‌ ಪ್ರಕೃತಿ ಪ್ರಿಯರ ದಿಲ್ ಕಿ ಧಡ್ಕನ್ ಆಗುವುದರಲ್ಲಿ ಅನುಮಾನವಿಲ್ಲ. ಹಸಿರು ಶ್ಯಾಮಲೆ ಅಲ್ಲಿ ನಸು ನಗುತ್ತಾಳೆ. ನವಿಲುಗಳು ಗರಿಬಿಚ್ಚಿ ನರ್ತಿಸುತ್ತವೆ. ಕೋಗಿಲೆ ಉಲಿಯುತ್ತದೆ. ಬಗೆಬಗೆಯ ಹಕ್ಕಿಗಳು ಕೆಂಬಣ್ಣದ ಮೋಡ ಎಬ್ಬಿಸಿ ಹಾರುತ್ತವೆ. ತುಂತುರು ಮಳೆಯ ಹನಿ ಮುತ್ತಿಕ್ಕುತ್ತದೆ. ತಣ್ಣನೆಯ ಬಯಲ ಗಾಳಿ ನಮ್ಮ ಹೆಗಲು ಹತ್ತುತ್ತದೆ. ತೊರೆಯ ನೀರು ಶೃತಿಬದ್ಧವಾಗಿ ಹರಿಯುತ್ತದೆ. ಕಾಡುಮನೆಗೆ ಹೋಗಿ ಬನ್ನಿ.

Untitled design (52)

ಕಾಡುಮನೆ ರೆಸಾರ್ಟ್‌ ಇಂದು ರಾಜ್ಯವಷ್ಟೇ ಅಲ್ಲದೆ ಹೊರರಾಜ್ಯಗಳಲ್ಲೂ ಪ್ರಸಿದ್ಧಿಗಳಿಸಿದೆ. ನಾವು ನೀಡುವ ಆತಿಥ್ಯ ಮತ್ತು ನಮ್ಮ ರೆಸಾರ್ಟ್‌ನಲ್ಲಿರುವ ಸೌಲಭ್ಯಗಳು ಪ್ರವಾಸಿಗರನ್ನು ಆಕರ್ಷಿಸುತ್ತವೆ. ಶುದ್ಧ ಹಸಿರು ವಾತಾವರಣದಲ್ಲಿ ಕಾಲ ಕಳೆಯಲು ಬಯಸುವವರು ಇಲ್ಲಿಗೆ ಬರುತ್ತಾರೆ. ನಮ್ಮಲ್ಲಿ ಆಯುರ್ವೇದ, ಪಂಚಕರ್ಮವಿದೆ. ವೆಲ್‌ನೆಸ್‌ ಟೂರಿಸಂ ಕೂಡ ಇದೆ. ಸ್ಥಳೀಯ ಆರ್ಥಿಕತೆಯನ್ನು ಅಭಿವೃದ್ಧಿಗೊಳಿಸುವುದು ನಮ್ಮ ಉದ್ದೇಶ. ಹಾಗಾಗಿ ಇಲ್ಲಿನ ಸ್ಥಳೀಯರಿಗೆ ನಮ್ಮಲ್ಲಿ ಉದ್ಯೋಗವಕಾಶಗಳನ್ನು ನೀಡಿದ್ದೇವೆ. ಮೂರು ಸಾವಿರ ಎಕರೆ ಅರಣ್ಯ ಪ್ರದೇಶದಲ್ಲಿ ನಮ್ಮ ರೆಸಾರ್ಟ್‌ ಇರುವುದರಿಂದ ಇಲ್ಲಿ ಪ್ರಕೃತಿ ಮೈತಳೆದಿದೆ.

ಕೆ ವಿ ರಾಘವೇಂದ್ರ ಪ್ರಸಾದ್
ಮಾಲೀಕರು, ಕಾಡುಮನೆ ಹಿಲ್ಸ್‌


ಹೆಚ್ಚಿನ ಮಾಹಿತಿಗಾಗಿ:
9035255711
Info@kadumanehills.com

Deekshith Nair

Deekshith Nair

Travel blogger and adventurer passionate about exploring new cultures and sharing travel experiences.

ಪ್ರವಾಸಿಗರ ನೆಚ್ಚಿನ ಎವರ್ ಗ್ರೀನ್ ಕೌಂಟಿ...

Read Previous

ಪ್ರವಾಸಿಗರ ನೆಚ್ಚಿನ ಎವರ್ ಗ್ರೀನ್ ಕೌಂಟಿ...

ಪ್ರಕೃತಿಯ ಮೈಮಾಟವನ್ನು ನೋಡಬೇಕೆ? ಸಮತಗೆ ಬನ್ನಿ

Read Next

ಪ್ರಕೃತಿಯ ಮೈಮಾಟವನ್ನು ನೋಡಬೇಕೆ? ಸಮತಗೆ ಬನ್ನಿ