ನೆಲದ ಸಿರಿಯೆಂಬ ಹಸಿರು ತೋಟ
ಅದೆಷ್ಟೇ ಅಭಿವೃದ್ಧಿಹೊಂದಿರುವ ನಗರದಲ್ಲಿ ನಾವು ವಾಸಿಸುತ್ತಿದ್ದೇವೆಂದರೂ ಗ್ರಾಮೀಣ ಸೊಗಡಿಗೆ ಮೋಡಿಗೆ ಒಳಗಾಗದೇ ಇರುವುದು ಕಷ್ಟ. ಹಳ್ಳಿಯ ವಾತಾವರಣದಲ್ಲಿ ಕಾಲ ಕಳೆಯುವ ಖುಷಿ ಬೇರೆಲ್ಲೂ ಸಿಗುವುದೇ ಇಲ್ಲ. ಬೆಂಗಳೂರು ಸಮೀಪದಲ್ಲೇ ಹಳ್ಳಿಯ ವಾತಾವರಣವನ್ನು ನೀಡುವ ರೆಸಾರ್ಟ್ ಇದೆಯಾ ಎಂದು ಹುಡುಕಾಡುತ್ತಿದ್ದೀರಾ? ಹಾಗಾದರೆ ಮಾಗಡಿರಸ್ತೆಯ ತಾವರೆಕೆರೆಯಲ್ಲಿರುವ ʻನೆಲದ ಸಿರಿ ಆಗ್ರೋ ರೆಸಾರ್ಟ್ʼಗೆ ಒಮ್ಮೆ ಭೇಟಿ ನೀಡಿ.
ಇತ್ತೀಚೆಗಷ್ಟೇ ಸ್ನೇಹಿತೆಯೊಬ್ಬಳು ನೆಲದ ಸಿರಿ ಆಗ್ರೋ ರೆಸಾರ್ಟ್ ಬಗ್ಗೆ ಅನುಭವವನ್ನು ಹಂಚಿಕೊಂಡಿದ್ದಳು. ಅದಾಗಿ ಒಂದು ವಾರದಲ್ಲೇ ಬಿಡುವು ಮಾಡಿಕೊಂಡು ನಮ್ಮ ಗರ್ಲ್ಸ್ ಗ್ಯಾಂಗ್ ಜತೆಗೆ ಬೆಂಗಳೂರಿನಿಂದ ಸುಮಾರು 12ಕಿಮೀ ದೂರದಲ್ಲಿ ಮಾಗಡಿರಸ್ತೆಯ ತಾವರೆಕೆರೆಯಲ್ಲಿರುವ ʻನೆಲದ ಸಿರಿ ಆಗ್ರೋ ರೆಸಾರ್ಟ್ʼಗೆ ಭೇಟಿ ನೀಡಿದೆವು. ಮುಂಚಿತವಾಗಿ ಡೇ ಔಟ್ ಪ್ಯಾಕೇಜ್ ಬುಕಿಂಗ್ ಮಾಡಿಕೊಂಡಿದ್ದೆವು.
ಹೋಗುವ ಮುನ್ನವೇ ರೆಸಾರ್ಟ್ ಬಗ್ಗೆ ಸಾಕಷ್ಟು ಮಾಹಿತಿಯನ್ನು ಕಲೆ ಹಾಕಿದ್ದರಿಂದ ಬೆಳಗ್ಗೆಯಿಂದ ಸಂಜೆಯವರೆಗೂ ಅಲ್ಲಿ ಕಾಲ ಕಳೆಯುವುದಕ್ಕಿರುವ ಎಲ್ಲ ತಯಾರಿಯನ್ನೂ ಮಾಡಿಕೊಂಡಿದ್ದೆವು. ನಾವು ಆರು ಮಂದಿಯ ಇದ್ದ ತಂಡ ರೆಸಾರ್ಟ್ ತಲುಪುತ್ತಲೇ ಕೈಗೊಂದು ಟ್ಯಾಗ್ ಅಂಟಿಸಿಬಿಟ್ಟು ನಮ್ಮ ಆಯ್ಕೆಯ ವೆಲ್‌ಕಮ್ ಡ್ರಿಂಕ್ ಕೊಟ್ಟುಬಿಟ್ಟರು.
ಬೆಳಗ್ಗೆ 10.30ರಿಂದ ಸಂಜೆ 5.30ರವೆಗೂ ಅಲ್ಲಿ ಎಂಜಾಯ್ ಮಾಡುವ ಅವಕಾಶವಿದ್ದರಿಂದ ಹೋದ ತಕ್ಷಣ ಬೆಳಗ್ಗಿನ ಉಪಾಹಾರವನ್ನು ಮುಗಿಸಿಕೊಂಡೆವು. ರೈಸ್ ಐಟಂ, ದೋಸೆ, ಇಡ್ಲಿ ಹೀಗೆ ರುಚಿಕರವಾದ ಬ್ರೇಕ್ ಫಾಸ್ಟ್ ಸೇವಿಸಿಕೊಂಡು ರೆಸಾರ್ಟ್‌ಗೆ ಒಂದು ಸುತ್ತು ಹಾಕಿ ಬರಲು ಹೊರಟೆವು.
ಜಾನಪದ ಕಲೆಯ ನೆಲೆ

ಕರುನಾಡಿನ ಹೆಮ್ಮೆಯ ಜಾನಪದ ಕಲಾ ಪ್ರಕಾರಗಳನ್ನು ನೋಡುವ ಅವಕಾಶ ಮಿಸ್ ಮಾಡಿಕೊಂಡಿದ್ದರೆ ಬೇಸರಪಡಬೇಕಿಲ್ಲ. ಇಲ್ಲಿ ಸುತ್ತಲೂ ಇರುವ ಅಡಿಕೆ ತೋಟದ ನಡುವೆ ವೀರಗಾಸೆ, ಯಕ್ಷಗಾನ, ಕರಗ, ಬುಡುಬುಡಿಕೆಯವರು ಅಥವಾ ಶಕುನ ಸಾರುವ ಹಾಲಕ್ಕಿಗಳ ಪ್ರತಿಕೃತಿಗಳನ್ನು ತಯಾರಿಸಿ, ಪಕ್ಕದಲ್ಲೇ ಸಂಪೂರ್ಣ ಮಾಹಿತಿಯನ್ನೂ ನೀಡಿದ್ದಾರೆ. ಅಲ್ಲದೆ ಗ್ರಾಮೀಣ ಭಾಗದ ಜೀವನಶೈಲಿ ಹೇಗಿದೆ ಎಂಬುದನ್ನು ಇಂದಿನ ಯುವ ಜನತೆಗೆ ತಿಳಿಹೇಳುವ ಸಲುವಾಗಿ ಉಳುಮೆ ಮಾಡುತ್ತಿರುವ ರೈತರು, ಗ್ರಾಮೀಣ ಭಾಗದ ಗೃಹಿಣಿಯರು, ಹಾಲು ಕರೆಯುವುದು, ಕುಂಬಾರಿಕೆ ವೃತ್ತಿಯ ಪ್ರತಿಕೃತಿಗಳೂ ಇಲ್ಲಿವೆ. ಪ್ರತಿಯೊಂದರ ಬಗೆಗೂ ಹೆಚ್ಚು ತಿಳಿದುಕೊಳ್ಳುತ್ತಾ, ಪಕ್ಕದಲ್ಲೇ ನಿಂತು ಒಂದಷ್ಟು ಫೊಟೋ ಕ್ಲಿಕ್ಕಿಸಿಕೊಂಡೆವು.
ನೆಲದ ಸಿರಿಯಲ್ಲಿ ಮಿಸ್ ಮಾಡಿಕೊಳ್ಳಬೇಡಿ

ಆಹಾರದ ಲೈವ್ ಕೌಂಟರ್, ವೆಜ್ ಹಾಗೂ ನಾನ್ ವೆಜ್ ಊಟವಿದ್ದುದರಿಂದ ಊಟ ಮುಗಿಸಿಕೊಂಡು ಸ್ವಿಮ್ಮಿಂಗ್ ಪೂಲ್, ವಾಟರ್ ಆಕ್ಟಿವಿಟೀಸ್, ಬೋಟಿಂಗ್, ಪಿಶ್ ಸ್ಪಾ, ಇಂಡೋರ್ ಹಾಗೂ ಔಟ್ ಡೋರ್ ಗೇಮ್ಸ್, ಅಡ್ವೆಂಚರಸ್ ಆಕ್ಟಿವಿಟೀಸ್, ರೋಪ್ ಸೈಕ್ಲಿಂಗ್, ಗನ್ ಶೂಟಿಂಗ್, ಆರ್ಚರಿ, ಬೆಂಗಳೂರಿನಲ್ಲೇ ಮೊದಲ ಬಾರಿಗೆ ಸೂಪರ್ ಮ್ಯಾನ್ ಜಿಪ್ ಲೈನ್ ಹೀಗೆ ಎಲ್ಲ ಚಟುವಟಿಕೆಗಳನ್ನೂ ಎಂಜಾಯ್ ಮಾಡಿಕೊಂಡು ಸಂಜೆ ವೇಳೆಗೆ ಸ್ನ್ಯಾಕ್ಸ್ ಜತೆಗೆ ದಿ ಬೆಸ್ಟ್ ಹೈ ಟೀ ಆಗಿಬಿಟ್ಟಿತ್ತು.
1200 ರುಪಾಯಿಗೆ ಡೇ ಔಟ್ ಪ್ಯಾಕೇಜ್

ನೆಲದ ಸಿರಿ ರೆಸಾರ್ಟ್‌ನಲ್ಲಿ ರೆಸಾರ್ಟ್ ಪ್ರಿಯರಿಗಾಗಿ 4 ಪ್ಯಾಕೇಜ್‌ಗಳು ಲಭ್ಯವಿದೆ. ಬೆಳಗ್ಗೆ 10:30 ರಿಂದ 5:30 ರವರೆಗೆ, ಬೆಳಗ್ಗೆ 9 ರಿಂದ 5:30 ರವರೆಗೆ(ಬೆಳಗಿನ ಉಪಾಹಾರದ ಜತೆಗೆ), ಸಂಜೆ 3ರಿಂದ ರಾತ್ರಿ 9ರ ವರೆಗೆ (ರಾತ್ರಿ ಊಟವೂ ಸೇರಿಕೊಂಡಂತೆ) ಹಾಗೂ ಡೇ ಔಟ್ ಪ್ಯಾಕೇಜ್ ಬೆಳಗ್ಗೆ 10 ರಿಂದ ಸಂಜೆ 5 ಗಂಟೆಯವರೆಗೆ.
ಇನ್ನು ರಾತ್ರಿ ಸ್ಟೇ ಮಾಡಿ ಇಲ್ಲಿನ ಸ್ಟಾಂಡರ್ಡ್ ರೂಮ್, ಟ್ರೀ ಹೌಸ್ಸ್ ಅಥವಾ ಬ್ಯಾಂಬೂ ಕಾಟೇಜಸ್, ಡಾರ್ಮೆಟ್ರಿ ಅನುಭವವನ್ನು ಪಡೆಯಬೇಕು ಅಂದುಕೊಳ್ಳುವವರಿಗಾಗಿ ಇಲ್ಲಿ ವಿಶೇಷ ಸೌಲಭ್ಯಗಳಿವೆ. ಕ್ಯಾಂಪ್ ಫೈರ್ ಪ್ರಿಯರಿಗೂ ಇಲ್ಲಿ ಅವಕಾಶವಿದ್ದು ಹೆಚ್ಚುವರಿ ಶುಲ್ಕವನ್ನು ವಿಧಿಸಲಾಗುತ್ತದೆ.

ರೆಟ್ರೋ ಸ್ಟೈಲ್ ನಲ್ಲಿ ಸುಂದರವಾದ ಈ ಪ್ರಾಪರ್ಟಿಯಲ್ಲಿ ಕನ್ನಡ ನೆಲದ ಸಂಸ್ಕೃತಿ, ಪರಂಪರೆ, ಜನಪದ ಕಲಾ ಪ್ರಕಾರಗಳನ್ನು ನೋಡಿ ಜಾನಪದ ಲೋಕದಲ್ಲೇ ಇರುವ ಅನುಭವವಾಗಿತ್ತು. ಪಕ್ಷಿ ಹಾಗೂ ಪ್ರಾಣಿ ಪ್ರಿಯರಿಗೂ ಈ ರೆಸಾರ್ಟ್ ಮೆಚ್ಚುಗೆಯಾದೀತು. ಯಾಕೆಂದರೆ ಮುದ್ದಾದ ಹಕ್ಕಿಗಳು, ಸಾಕು ಪ್ರಾಣಿಗಳೂ ಇಲ್ಲಿನ ಪ್ರಮುಖ ಆಕರ್ಷಣೆಗಳು. ಇವೆಲ್ಲದಕ್ಕೂ ಹೊರತಾಗಿ ಡೆಸ್ಟಿನೇಷನ್ ವೆಡ್ಡಿಂಗ್, ಬರ್ತ್ ಡೇ ಸೆಲೆಬ್ರೇಷನ್, ಗೆಟ್‌ಟುಗೆದರ್, ಕಾರ್ಪರೇಟ್ ಪಾರ್ಟಿಗಳನ್ನು ಮಾಡಬೇಕೆಂದುಕೊಳ್ಳುವವರಿಗೆ ಇದು ಬಜೆಟ್ ಫ್ರೆಂಡ್ಲೀ ರೆಸಾರ್ಟ್.
ಒಟ್ಟಿನಲ್ಲಿ ಬಂದಿದ್ದಷ್ಟೇ ಗೊತ್ತು, ಸಂಜೆ 5.30 ಆಗಿದ್ದು ಗೊತ್ತೇ ಆಗಿರಲಿಲ್ಲ. ಇನ್ನೂ ಒಂದಷ್ಟು ಸಮಯ ಬೇಕಿತ್ತು, ಮುಂದಿನ ಬಾರಿ ರಾತ್ರಿ ಉಳಿದುಕೊಳ್ಳುವುದಕ್ಕೆ ಬುಕ್ ಮಾಡಿಕೊಳ್ಳಬೇಕು ಎನಿಸಿತ್ತು. ನೀವೂ ಬೆಂಗಳೂರಿನವರಾದರೆ ವೀಕ್ ಎಂಡ್ ಕಳೆಯುವುದು ಹೇಗೆಂದು ಯೋಚಿಸುತ್ತಿದ್ದರೆ ಸಮೀಪದಲ್ಲೇ ಇರುವ ನೆಲದ ಸಿರಿಯನ್ನು ಮುಂಗಡವಾಗಿ ಬುಕ್ ಮಾಡಿಕೊಳ್ಳಿ.
ವಿಳಾಸ: ನೆಲದ ಸಿರಿ ಆಗ್ರೋ ರೆಸಾರ್ಟ್, ಮಾಗಡಿ ಮುಖ್ಯ ರಸ್ತೆ, ತಾವರೆಕೆರೆ ಹತ್ತಿರ, ಬೆಂಗಳೂರು
ಸಂಪರ್ಕ ಸಂಖ್ಯೆ: +91 72048 99097, 7619299097