Friday, February 13, 2026
Friday, February 13, 2026

ಯೂಟ್ಯೂಬ್ ಪ್ರವಾಸಿಗರಿಗೆ ಜೈ!

ಕೇವಲ ಪ್ರವಾಸಿ ಸ್ಥಳಗಳ ಫೊಟೋ ನೋಡಿ, ಯೂಟ್ಯೂಬ್‌ಗಳಲ್ಲಿ ಪ್ರವಾಸದ ವಿಡಿಯೋ ನೋಡಿ, ನಮ್ಮಿಂದ ಹೋಗೋಕೆಲ್ಲ ಆಗಲ್ಲ, ನಾವು ನೋಡಿ ಖುಷಿಪಡೋಣ ಸಾಕು ಎಂಬ ಅಲ್ಪತೃಪ್ತರನ್ನು, ಪ್ರವಾಸದ ಆಸೆ ಇದ್ದರೂ ಮಾಡಲಾಗದೇ ವಿಡಿಯೋ ಫೊಟೋ ನೋಡಿ ಸಮಾಧಾನ ಪಟ್ಟುಕೊಳ್ಳುವವರನ್ನು ವಿಂಡೋಟೂರಿಸ್ಟ್ ಅನ್ನಬಹುದು.

నిಮಗೊಂದು ಪ್ರಶ್ನೆ. ನೀವು ವಿಂಡೋ ಟೂರಿಸಂ ಬಗ್ಗೆ ಕೇಳಿದೀರಾ? ಟೂರಿಸಂ ವಿಂಡೋ ಬಗ್ಗೆ ಕೇಳಿದ್ದಿರಬಹುದು. ಆದರೆ ವಿಂಡೋ ಟೂರಿಸಂ ಗೊತ್ತಿರಲು ಸಾಧ್ಯವಿಲ್ಲ. ಬಾಂಗ್ಲಾದಲ್ಲಿರುವ ಅಧಿಕೃತ ಟೂರ್ ಆಪರೇಟರ್ ಹೆಸರು 'ಟೂರಿಸಂ ವಿಂಡೋ' ಅಂತ. ಅದೇ ರೀತಿ ಸಿಕ್ಕಿಂನಲ್ಲಿ ಟೂರಿಸಂ ವಿಂಡೋ ಹೆಸರಿನ ಖ್ಯಾತ ಟ್ರಾವೆಲ್ ಏಜೆನ್ಸಿ ಇದೆ. ಇನ್ನು ಪ್ರವಾಸೋದ್ಯಮದಲ್ಲಿ ಟೂರಿಸಂ ವಿಂಡೋ ಅನ್ನೋ ಪದ ಬಳಕೆಯಲ್ಲಿದೆ. ಆದರೆ ವಿಂಡೋ ಟೂರಿಸಂ ಎಂಬ ಪದ ಬಹುಶಃ ಹೊಸತು. ನಿಮಗೆ ವಿಂಡೋಶಾಪಿಂಗ್ ಗೊತ್ತಲ್ವಾ? ಅದೇ ಥರ ವಿಂಡೋಟೂರಿಸಂ ಪದವನ್ನು ಯಾಕೆ ಹುಟ್ಟು ಹಾಕಬಾರದು ಎಂಬ ಜಿಜ್ಞಾಸೆಯಲ್ಲಿ ಈ ಪದ ಇಂದು ಪ್ರಸ್ತಾಪಿಸಿದ್ದೇನೆ.

ಇದನ್ನೂ ಓದಿ: ಚಾರಣವೆಂದರೆ ಕೇವಲ ಕುಮಾರಪರ್ವತವಾಗದಿರಲಿ

ವಿಂಡೋಟೂರಿಸಂಗೆ ನಾವು ಎರಡು ಅರ್ಥ ಕೊಡಬಹುದು. ಚಿಕ್ಕಂದಿನಿಂದ ಇಂದಿನ ತನಕ ಬಹಳಷ್ಟು ಪ್ರವಾಸಿಗರು ವಿಂಡೋ ಸೀಟ್ ಬೇಕು ಎಂದು ಹಪಹಪಿಸುತ್ತಾರೆ. ಅದಕ್ಕೆ ಕಾರಣ ಹಲವು, ಶುದ್ಧ ಗಾಳಿಗೆ ಮುಖ ಒಡ್ಡಬಹುದು, ಸಹಪ್ರಯಾಣಿಕರ ಮುಖ, ಬೆವರವಾಸನೆ, ಬಾಯಿವಾಸನೆ ಇತ್ಯಾದಿಗಳಿಂದ ತಪ್ಪಿಸಿಕೊಳ್ಳಬಹುದು, ಉಗಿಯುವ ಅಭ್ಯಾಸವಿದ್ದರೆ ಉಗೀತಾ ಇರಬಹುದು! ಪ್ರಯಾಣದ ಮಾರ್ಗ ಮತ್ತು ರಸ್ತೆಬದಿಗಿನ ಪ್ರಕೃತಿ, ಜನಜೀವನ, ಅಂಗಡಿ, ಸಿನಿಮಾ ಥಿಯೇಟರ್, ಚೆಂದದ ಹುಡುಗಿ ಎಲ್ಲವನ್ನೂ ನೋಡಬಹುದು ಅಂತ. ಇದರ ಜತೆಗೆ ವಿಂಡೋಸೀಟ್ ಗಾಗಿ ಹೋರಾಡುವವರ ಇನ್ನೊಂದು ಕೆಟಗರಿ ಇದೆ. ಅವರನ್ನು ಪ್ಯೂಕರ್ ಬರ್ಗ್ ಅಥವಾ ವಾಂತಿಕಾರಿಗಳು ಅನ್ನಬಹುದು. ಅವರಿಗೆ ಗಾಡಿ ಚಾಲೂ ಆದಕೂಡಲೇ ಹೊಟ್ಟೆ ತೊಳೆಸಲು ಶುರುವಾಗುತ್ತದೆ. ವಿಂಡೋಸೀಟ್ ಕೊಟ್ಟರೆ ವಾಹನ ಸೇಫ್! ಇಂಥ ಪ್ರಜೆಗಳನ್ನು ವಿಂಡೋಟೂರಿಸ್ಟ್‌ಗಳು ಅನ್ನಬಹುದು. ಇವರ ಪ್ರವಾಸವನ್ನು ವಿಂಡೋಟೂರಿಸಂ ಅನ್ನಬಹುದು.

Untitled design (27)

ಇನ್ನೊಂದು ಅರ್ಥದಲ್ಲಿ ವಿಶ್ಲೇಷಿಸುವುದಾದರೆ, ಕೇವಲ ಪ್ರವಾಸಿ ಸ್ಥಳಗಳ ಫೊಟೋ ನೋಡಿ, ಯೂಟ್ಯೂಬ್‌ಗಳಲ್ಲಿ ಪ್ರವಾಸದ ವಿಡಿಯೋ ನೋಡಿ, ನಮ್ಮಿಂದ ಹೋಗೋಕೆಲ್ಲ ಆಗಲ್ಲ, ನಾವು ನೋಡಿ ಖುಷಿಪಡೋಣ ಸಾಕು ಎಂಬ ಅಲ್ಪತೃಪ್ತರನ್ನು, ಪ್ರವಾಸದ ಆಸೆ ಇದ್ದರೂ ಮಾಡಲಾಗದೇ ವಿಡಿಯೋ ಫೊಟೋ ನೋಡಿ ಸಮಾಧಾನ ಪಟ್ಟುಕೊಳ್ಳುವವರನ್ನು ವಿಂಡೋಟೂರಿಸ್ಟ್ ಅನ್ನಬಹುದು. ಅವರ ಪ್ರವಾಸ ರೀತಿಯನ್ನು ವಿಂಡೋಟೂರಿಸಂ ಅನ್ನಬಹುದು. ವಿಂಡೋ ಟೂರಿಸಂ ತಪ್ಪೇನಲ್ಲ, ಆದರೆ ವಿಂಡೋ ಟೂರಿಸಂ ಮಾಡಿ ಪ್ರತ್ಯಕ್ಷ ಹೋಗಿಬಂದವರಿಗಿಂತ ಹೆಚ್ಚಾಗಿ ಮಾತನಾಡುವುದು ಮತ್ತು ಬರೆಯುವುದು ಮಾತ್ರ ಘೋರ ಅಪರಾಧ ಪ್ರವಾಸಕ್ಷೇತ್ರಕ್ಕೆ ಮಾಡೋ ದೊಡ್ಡ ಅಪಚಾರ. ಅಂದಹಾಗೆ ವಿಂಡೋಟೂರಿಸಂ ಎಂಬ ಪದ ಗೂಗಲಲ್ಲೂ ಇಲ್ಲ. ಹುಡುಕಲು ಹೋಗಬೇಡಿ. ಬೇಕಾದರೆ ಇನ್ನು ಮುಂದೆ ಈ ಪದವನ್ನು ಶಬ್ದಕೋಶಕ್ಕೆ ಸೇರಿಸಬಹುದು.

Admin

Admin

Pravasi Prapancha – A pioneering initiative led by Vishweshwar Bhat, the esteemed journalist and head of the Vishwavani Group. It is the first and only travel-focused publication in Kannada journalism, dedicated exclusively to news, information, and travel narratives about various destinations. The digital media counterpart of this venture is Pravasi Prapancha Digital Channel, which brings travel-related news from across the state, country, and world. It features fascinating insights, traveler experiences, interviews related to travel, entertainment segments, and much more. Editor-in-Chief: Shri Vishweshwar Bhat

ಜಪಾನಿನಲ್ಲಿ ಬೀದಿಯಲ್ಲಿಟ್ಟ ಕಸದ ತೊಟ್ಟಿಗಳೂ ಮಾತಾಡುತ್ತವೆ!

Read Previous

ಜಪಾನಿನಲ್ಲಿ ಬೀದಿಯಲ್ಲಿಟ್ಟ ಕಸದ ತೊಟ್ಟಿಗಳೂ ಮಾತಾಡುತ್ತವೆ!

ಒಂದು ಮರದ ಕೊಂಬೆ ಅಲ್ಲಾಡಿಸಿದ್ದಕ್ಕೆ ಕ್ಯಾತೆ ತೆಗೆದಿದ್ದ ಜಪಾನಿಯರು!

Read Next

ಒಂದು ಮರದ ಕೊಂಬೆ ಅಲ್ಲಾಡಿಸಿದ್ದಕ್ಕೆ ಕ್ಯಾತೆ ತೆಗೆದಿದ್ದ ಜಪಾನಿಯರು!