Monday, June 22, 2026
Monday, June 22, 2026

ಬೆಳಕಿನಿಂದ ಕತ್ತಲಿನೆಡೆಗೆ ಪ್ರವಾಸ!

ಹಗಲು ಪ್ರವಾಸದಲ್ಲಿ ನಾವು ಸ್ಥಳವನ್ನು ನೋಡುತ್ತೇವಾದರೆ, ರಾತ್ರಿ ಪ್ರವಾಸದಲ್ಲಿ ನಮ್ಮನ್ನು ನಾವು ನೋಡಿಕೊಳ್ಳುತ್ತೇವೆ. ಈ ಹೊಸ ಪ್ರವಾಸ ಸಂಸ್ಕೃತಿಯ ಮತ್ತೊಂದು ಆಸಕ್ತಿದಾಯಕ ವಿಷಯ ಏನೆಂದರೆ ಅದು ಸ್ಲೋ ಟ್ರಾವೆಲ್ ಎಂಬ ಪರಿಕಲ್ಪನೆಗೂ ಪೂರಕವಾಗಿದೆ. ಈಗಿನ ಪ್ರವಾಸಿಗರಿಗೆ ಐದು ದಿನಗಳಲ್ಲಿ ಹತ್ತು ನಗರ ನೋಡಬೇಕೆಂಬ ಆಸಕ್ತಿ ಕಡಿಮೆಯಾಗುತ್ತಿದೆ. ಅದರ ಬದಲು ಒಂದು ಜಾಗದಲ್ಲಿ ನಿಧಾನವಾಗಿ ಇರಬೇಕು, ಸ್ಥಳದ ರಿದಮ್‌ಗೆ ಹೊಂದಿಕೊಳ್ಳಬೇಕು, ರಾತ್ರಿ ಆಕಾಶದ ಕೆಳಗೆ ಮಾತಿಲ್ಲದೆ ಕುಳಿತುಕೊಳ್ಳಬೇಕು ಎಂದು ಬಯಸುತ್ತಿದ್ದಾನೆ ಪ್ರವಾಸಿ. ಹಲವಾರು ರಾಜ್ಯಗಳು ಈಗ ನೈಟ್ ಟೂರಿಸಂ ಮೇಲೆ ಗಮನ ಹರಿಸುತ್ತಿವೆ.

ಮನುಷ್ಯನ ದೈನಂದಿನ ಬದುಕು ಹಲವಾರು ಕಾರಣಗಳಿಗೆ ಒತ್ತಡಕ್ಕೊಳಗಾಗುತ್ತಿದೆ. ಒತ್ತಡದಿಂದ ಮುಕ್ತವಾಗಲು ಮನುಷ್ಯ ಪ್ರವಾಸದ ಮೊರೆ ಹೊಗುತ್ತಿದ್ದಾನೆ. ಆದರೆ ಪ್ರವಾಸಗಳೂ ಆತನ ಮೇಲೆ ಸಲ್ಲದ ಒತ್ತಡ ಹೇರುತ್ತಿದ್ದರೆ ಹೇಗಾಗಬಹುದು? ಹೌದು. ಸಾಮಾಜಿಕ ಜಾಲತಾಣಗಳಲ್ಲಿ ಇರುವಿಕೆ ತೋರಿಸಿಕೊಳ್ಳಲು, ಡಿಜಿಟಲ್ ಪ್ಲಾಟ್ ಫಾರ್ಮ್ ಮೂಲಕ ಹಣ ಮತ್ತು ಖ್ಯಾತಿ ಗಳಿಸಲು ಅನಗತ್ಯ ಒತ್ತಡ ಉಂಟುಮಾಡಿಕೊಳ್ಳುತ್ತಿದ್ದಾನೆ ಪ್ರವಾಸಿ. ಅಂಥವರ ಇಂದಿನ ಅಗತ್ಯ ನೈಟ್ ಟೂರಿಸಂ.

ನೈಟ್ ಟೂರಿಸಂ ಅಂದ್ರೆ ಪಬ್, ಪಾರ್ಟಿ ಅಥವಾ ರಾತ್ರಿಯ ಮೋಜುಮಸ್ತಿಯಲ್ಲ. ಮನಸಿನ ನೆಮ್ಮದಿ ಮತ್ತು ಶಾಂತಿಗಾಗಿ ಮಾಡುವ ಪ್ರವಾಸವಿದು. ಹಲವರ ಪ್ರಕಾರ, ಪ್ರವಾಸ ಎಂದರೆ ಬೆಳಕಿನ ಸಮಯದಲ್ಲಿ ನಡೆಯುವ ಚಟುವಟಿಕೆ. ಸೂರ್ಯಾಸ್ತವಾಯಿತೆಂದರೆ ಆ ದಿನದ ಪ್ರವಾಸ ಅಂತ್ಯ ಎಂಬ ಮನಸ್ಥಿತಿಯಿದೆ. ಅಂಥವರಿಗೆ ಸೂರ್ಯೋದಯ, ಕಡಲತೀರ, ಪ್ರಕೃತಿಯ ನಡುವೆ ಮಧ್ಯಾಹ್ನದ ಬಿಸಿಲಿನ ಫೊಟೋ, ಗಿಜಿಗಿಜಿ ವಾತಾವರಣ, ಇವೇ ಪ್ರವಾಸದ ಮಾನದಂಡ. ಆದರೆ ಈಗ ಜಗತ್ತು ನಿಧಾನವಾಗಿ ಮತ್ತೊಂದು ದಿಕ್ಕಿಗೆ ತಿರುಗುತ್ತಿದೆ. ಬೆಳಕಿನಿಂದ ಕತ್ತಲಿನ ಕಡೆಗೆ. ಇತ್ತೀಚಿನ ದಿನಗಳಲ್ಲಿ ಭಾರತದಲ್ಲೂ ನೈಟ್ ಟೂರಿಸಂ ಅಥವಾ ನೋಕ್ಟೋಟೂರಿಸಂ ಎಂಬ ಹೊಸ ಪ್ರವಾಸ ಸಂಸ್ಕೃತಿ ವೇಗವಾಗಿ ಬೆಳೆಯುತ್ತಿದೆ. ಮನಸಿನ ಶಾಂತಿಗಾಗಿ ನಗರಗಳ ಗದ್ದಲದಿಂದ ತಪ್ಪಿಸಿಕೊಂಡು, ಮೌನದೊಳಗೆ ಸ್ವಲ್ಪ ಹೊತ್ತು ಬದುಕಬೇಕೆನ್ನುವ ಮನುಷ್ಯನ ಹುಡುಕಾಟವೇ ಈ ರಾತ್ರಿಪ್ರವಾಸ.

ಇದನ್ನೂ ಓದಿ: ಬ್ಯಾನೆಂಬ ಬ್ಯಾನೆಗೆ ಪರಿಹಾರವೆಂತು?

ನಿಜ ಹೇಳುವುದಾದರೆ, ಇಂದು ಮನುಷ್ಯ ದಿನದ ಹೊತ್ತಿನಲ್ಲಿ ಬದುಕುವುದೇ ಕಡಿಮೆ. ಆತನ ಬದುಕು ಒಂದು ಓಟವಾಗಿ ಹೋಗಿದೆ. ಮೀಟಿಂಗ್‌ಗಳು, ಮೊಬೈಲ್ ನೋಟಿಫಿಕೇಶನ್‌ಗಳು, ಟ್ರಾಫಿಕ್‌, ಡೆಡ್‌ಲೈನ್‌, ಸೋಷಿಯಲ್ ಮೀಡಿಯಾ ಇವೆಲ್ಲದರ ಮಧ್ಯೆ ಬದುಕು ಕಳೆದುಹೋಗಿದೆ. ಪ್ರವಾಸದಲ್ಲೂ ಅದೇ ಎಂಬಂತಾಗಿದೆ. ಹೀಗಾಗಿ ಮನುಷ್ಯ ಈಗ ಪ್ರವಾಸದಲ್ಲಿ ಏನು ನೋಡಬೇಕು? ಅನ್ನೋದಕ್ಕಿಂತ ಎಲ್ಲಿ ಸ್ವಲ್ಪ ಶಾಂತಿಯಾಗಿ ಉಸಿರಾಡಬಹುದು? ಎಂಬುದನ್ನು ಹುಡುಕುತ್ತಿದ್ದಾನೆ. ಇದೇ ಕಾರಣಕ್ಕೆ ಈಗ ಚಂದ್ರನ ಬೆಳಕಿನಲ್ಲಿ ನಡೆಯುವ ಹೆರಿಟೇಜ್ ವಾಕ್‌ಗಳು ಜನಪ್ರಿಯವಾಗುತ್ತಿವೆ. ನಕ್ಷತ್ರಗಳ ಕೆಳಗೆ ಮಲಗಿ ಆಕಾಶ ನೋಡುವ ಸ್ಟಾರ್ ಗೇಜಿಂಗ್ ಕ್ಯಾಂಪ್‌ಗಳು ಬೇಡಿಕೆಯಲ್ಲಿವೆ. ಕಾಡಿನ ಮಧ್ಯೆ ನಡೆಯುವ ನೈಟ್ ಸಫಾರಿ, ನದಿತೀರದ ಮೌನ ನಡಿಗೆ, ದೇವಾಲಯದ ರಾತ್ರಿ ಆರತಿ—ಇವೆಲ್ಲ ಈಗ ಹೊಸ ಪ್ರವಾಸ ಅನುಭವಗಳಾಗುತ್ತಿವೆ. ಹಳೆಯ ಕಾಲದ ಬದುಕು ಹುಡುಕಿಕೊಂಡು ಹೋಗುವ ಪ್ರವಾಸವೇ ಈ ನೈಟ್ ಟೂರಿಸಂ. ನಗರ ಜೀವನ ನಮ್ಮ ರಾತ್ರಿಗಳನ್ನೇ ಕೊಂದುಹಾಕಿದೆ. 24 ಗಂಟೆ ಬೆಳಗುವ ಎಲ್ ಇ ಡಿ ಲೈಟ್‌ಗಳು, ನಿದ್ರಿಸದ ರಸ್ತೆಗಳು, ನಿರಂತರ ಸ್ಕ್ರೀನ್‌ಗಳ ಬೆಳಕು ಇವೆಲ್ಲವೂ ಮನುಷ್ಯನ ದೇಹದ ಸಹಜ ರಿದಮ್‌ನ್ನೇ ಬದಲಿಸಿಬಿಟ್ಟಿವೆ. ಹೀಗಾಗಿ ಇಂದು ಜನರು ಮತ್ತೆ ಕತ್ತಲನ್ನು ಹುಡುಕುತ್ತಿದ್ದಾರೆ. ಕತ್ತಲೆ ಎಂಬುದು ಈಗ ಐಷಾರಾಮಿ ಅನುಭವದಂತಾಗಿದೆ.

Untitled design (56)

ಹಗಲು ಪ್ರವಾಸದಲ್ಲಿ ನಾವು ಸ್ಥಳವನ್ನು ನೋಡುತ್ತೇವಾದರೆ, ರಾತ್ರಿ ಪ್ರವಾಸದಲ್ಲಿ ನಮ್ಮನ್ನು ನಾವು ನೋಡಿಕೊಳ್ಳುತ್ತೇವೆ. ಈ ಹೊಸ ಪ್ರವಾಸ ಸಂಸ್ಕೃತಿಯ ಮತ್ತೊಂದು ಆಸಕ್ತಿದಾಯಕ ವಿಷಯ ಏನೆಂದರೆ ಅದು ಸ್ಲೋ ಟ್ರಾವೆಲ್ ಎಂಬ ಪರಿಕಲ್ಪನೆಗೂ ಪೂರಕವಾಗಿದೆ. ಈಗಿನ ಪ್ರವಾಸಿಗರಿಗೆ ಐದು ದಿನಗಳಲ್ಲಿ ಹತ್ತು ನಗರ ನೋಡಬೇಕೆಂಬ ಆಸಕ್ತಿ ಕಡಿಮೆಯಾಗುತ್ತಿದೆ. ಅದರ ಬದಲು ಒಂದು ಜಾಗದಲ್ಲಿ ನಿಧಾನವಾಗಿ ಇರಬೇಕು, ಸ್ಥಳದ ರಿದಮ್‌ಗೆ ಹೊಂದಿಕೊಳ್ಳಬೇಕು, ರಾತ್ರಿ ಆಕಾಶದ ಕೆಳಗೆ ಮಾತಿಲ್ಲದೆ ಕುಳಿತುಕೊಳ್ಳಬೇಕು ಎಂದು ಬಯಸುತ್ತಿದ್ದಾನೆ ಪ್ರವಾಸಿ. ಹಲವಾರು ರಾಜ್ಯಗಳು ಈಗ ನೈಟ್ ಟೂರಿಸಂ ಮೇಲೆ ಗಮನ ಹರಿಸುತ್ತಿವೆ. ರಾತ್ರಿ ಹೆರಿಟೇಜ್ ವಾಕ್‌, ನೈಟ್ ಕ್ರೂಸ್, ಅಸ್ಟ್ರೋ ಟೂರಿಸಂ, ಡಾರ್ಕ್ ಸ್ಕೈ ಪಾರ್ಕ್‌ಗಳು, ರಾತ್ರಿ ಮಾರುಕಟ್ಟೆಗಳು ಇವೆಲ್ಲ ಪರಿಚಯವಾಗುತ್ತಿವೆ.

ಆದರೆ ಪ್ರವಾಸಿಗರು ಇದನ್ನು ಸರಿಯಾದ ದಿಸೆಯಲ್ಲಿ ಸ್ವೀಕರಿಸಿದರೆ ಮಾತ್ರ ನೈಟ್ ಟೂರಿಸಂ ಎಂಬುದು ನಿಜಾರ್ಥದಲ್ಲಿ ಕ್ಲಿಕ್ ಆಗುತ್ತದೆ. ಕಾಡಿನೊಳಗೆ ಮೌನ ಅನುಭವಿಸಲು ಹೋಗುವ ಪ್ರವಾಸಿಗರೇ ಅಲ್ಲಿ ಸ್ಪೀಕರ್‌ಗಳಲ್ಲಿ ಮ್ಯೂಸಿಕ್ ಹಾಕಿ ಫೊಟೋಶೂಟ್ ಮಾಡಿದರೆ, ಪ್ರವಾಸದ ಆಶಯವೇ ನಾಶವಾಗುತ್ತದೆ. ಹೀಗಾಗಿ ನೈಟ್ ಟೂರಿಸಂ ಯಶಸ್ವಿಯಾಗಬೇಕಾದರೆ, ಪ್ರವಾಸಿಯು ಪ್ರಕೃತಿಯ ಕತ್ತಲನ್ನು, ಮೌನವನ್ನು, ಸ್ಥಳದ ಸಂವೇದನೆಯನ್ನು ಗೌರವಿಸಬೇಕು. ಬೆಳಕು ಮತ್ತು ಶಬ್ದ ಮಾಲಿನ್ಯ ಕಡಿಮೆಯಾಗಬೇಕು. ಸ್ಥಳೀಯ ಪರಿಸರ ಹಾಳಾಗಬಾರದು. ರಾತ್ರಿ ಎಂದರೆ ಕೇವಲ ಮನೋರಂಜನೆ ಅಲ್ಲ, ಒಂದು ಸಂವೇದನಾತ್ಮಕ ಅನುಭವ ಎಂಬ ಅರಿವು ಇರಬೇಕು. ಮಾನವನು ಜಗತ್ತನ್ನು ಗೆದ್ದಿದ್ದಾನೆ. ಆದರೆ ತನ್ನ ಮನಸಿನ ಶಾಂತಿ ಕಳೆದುಕೊಂಡಿದ್ದಾನೆ. ಈಗ ಆತ ಮತ್ತೆ ಅದನ್ನೇ ಹುಡುಕಲು ಹೊರಟಿದ್ದಾನೆ. ಹಿಮಾಲಯದ ರಾತ್ರಿ ಆಕಾಶದಲ್ಲಿ, ಸಮುದ್ರದ ಅಲೆಗಳ ನಡುವೆ, ಕಾಡಿನ ಮೌನದಲ್ಲಿ..!

Admin

Admin

Pravasi Prapancha – A pioneering initiative led by Vishweshwar Bhat, the esteemed journalist and head of the Vishwavani Group. It is the first and only travel-focused publication in Kannada journalism, dedicated exclusively to news, information, and travel narratives about various destinations. The digital media counterpart of this venture is Pravasi Prapancha Digital Channel, which brings travel-related news from across the state, country, and world. It features fascinating insights, traveler experiences, interviews related to travel, entertainment segments, and much more. Editor-in-Chief: Shri Vishweshwar Bhat

ಜಪಾನಿನಲ್ಲಿ ಬೀದಿಯಲ್ಲಿಟ್ಟ ಕಸದ ತೊಟ್ಟಿಗಳೂ ಮಾತಾಡುತ್ತವೆ!

Read Previous

ಜಪಾನಿನಲ್ಲಿ ಬೀದಿಯಲ್ಲಿಟ್ಟ ಕಸದ ತೊಟ್ಟಿಗಳೂ ಮಾತಾಡುತ್ತವೆ!

ಒಂದು ಮರದ ಕೊಂಬೆ ಅಲ್ಲಾಡಿಸಿದ್ದಕ್ಕೆ ಕ್ಯಾತೆ ತೆಗೆದಿದ್ದ ಜಪಾನಿಯರು!

Read Next

ಒಂದು ಮರದ ಕೊಂಬೆ ಅಲ್ಲಾಡಿಸಿದ್ದಕ್ಕೆ ಕ್ಯಾತೆ ತೆಗೆದಿದ್ದ ಜಪಾನಿಯರು!