ಓಣಂ: ಬೆಂಗಳೂರು-ಎರ್ನಾಕುಲಂ ವಂದೇ ಭಾರತ್ ರೈಲಿನ ಬೋಗಿಗಳ ಸಂಖ್ಯೆ ಏರಿಕೆ
ಓಣಂ ಹಬ್ಬದ ಪ್ರಯುಕ್ತ ಆ 21, 22 ರ ಪ್ರಯಾಣದ ದಿನಾಂಕಗಳಿಗೆ ಕಾಯುವಿಕೆ ಪಟ್ಟಿ 100 ಕ್ಕೂ ಮೀರಿತ್ತು ಮತ್ತು ಆ 29 ರಿಂದ 31 ರವರೆಗಿನ ರಿಟರ್ನ್ ಟಿಕೆಟ್‌ಗಳು ಸಂಪೂರ್ಣ ಭರ್ತಿಯಾಗಿದ್ದವು. ಹೀಗಾಗಿ ಈ ನಿರ್ಧಾರ ಕೈಗೊಳ್ಳಲಾಗಿದೆ.
ಓಣಂ ಹಬ್ಬದ ಪ್ರಯುಕ್ತ ಬೆಂಗಳೂರಿನಿಂದ ಕೇರಳಕ್ಕೆ ಪ್ರಯಾಣಿಸುವ ಪ್ರವಾಸಿಗರ ಭಾರಿ ನೂಕುನುಗ್ಗಲನ್ನು ಸರಿದೂಗಿಸಲು ರೈಲ್ವೇ ಮಂಡಳಿಯು ಮಹತ್ವದ ನಿರ್ಧಾರ ಕೈಗೊಂಡಿದೆ. ಬೆಂಗಳೂರು-ಎರ್ನಾಕುಲಂ ವಂದೇ ಭಾರತ್ ಎಕ್ಸ್‌ಪ್ರೆಸ್ (Bengaluru-Ernakulam Vande Bharat Express) ರೈಲಿನ ಬೋಗಿಗಳ ಸಂಖ್ಯೆಯನ್ನು 8 ರಿಂದ 16ಕ್ಕೆ ದುಪ್ಪಟ್ಟುಗೊಳಿಸಲಾಗಿದ್ದು, ಆ 17 ರಿಂದ ನೂತನ 16 ಬೋಗಿಗಳ ಸೇವೆ ಜಾರಿಗೆ ಬಂದಿದೆ.
ಇದನ್ನೂ ಓದಿ: ರಷ್ಯಾದಿಂದ ಭಾರತಕ್ಕೆ ಹೊಸ ರೈಲು ಬರುತ್ತಾ?
ಓಣಂ ಹಬ್ಬದ ಪ್ರಯುಕ್ತ ಆ 21, 22 ರ ಪ್ರಯಾಣದ ದಿನಾಂಕಗಳಿಗೆ ಕಾಯುವಿಕೆ ಪಟ್ಟಿ 100 ಕ್ಕೂ ಮೀರಿತ್ತು ಮತ್ತು ಆ 29 ರಿಂದ 31 ರವರೆಗಿನ ರಿಟರ್ನ್ ಟಿಕೆಟ್‌ಗಳು ಸಂಪೂರ್ಣ ಭರ್ತಿಯಾಗಿದ್ದವು. ಹೀಗಾಗಿ ಈ ನಿರ್ಧಾರ ಕೈಗೊಳ್ಳಲಾಗಿದೆ.
ರೈಲಿನ ಸಮಯ ಮತ್ತು ಮಾರ್ಗ:
- ಬುಧವಾರ ಹೊರತುಪಡಿಸಿ ವಾರದ 6 ದಿನ ಈ ರೈಲು (Train No. 26651/26652) ಸಂಚರಿಸಲಿದೆ.
- ಸಮಯ: ಬೆಂಗಳೂರಿನಿಂದ (KSR Bengaluru) ಬೆಳಿಗ್ಗೆ 5.10 ಕ್ಕೆ ಹೊರಟು ಮಧ್ಯಾಹ್ನ 1.50 ಕ್ಕೆ ಎರ್ನಾಕುಲಂ ತಲುಪಲಿದೆ.
- ನಿಲುಗಡೆಗಳು: ಕೃಷ್ಣರಾಜಪುರಂ, ಸೇಲಂ, ಈರೋಡ್, ತಿರುಪ್ಪೂರ್, ಕೊಯಮತ್ತೂರು, ಪಾಲಕ್ಕಾಡ್ ಮತ್ತು ತ್ರಿಶ್ಶೂರ್.
- ಕರ್ನಾಟಕ, ತಮಿಳುನಾಡು ಮತ್ತು ಕೇರಳ - ಈ ಮೂರು ದಕ್ಷಿಣ ರಾಜ್ಯಗಳನ್ನು ಸಂಪರ್ಕಿಸುವ ಅತ್ಯಂತ ಜನಪ್ರಿಯ ಪ್ರೀಮಿಯಂ ರೈಲಿಗೆ ಹೆಚ್ಚುವರಿ ಬೋಗಿಗಳನ್ನು ಸೇರಿಸಿರುವುದು ಹಬ್ಬದ ಸಮಯದಲ್ಲಿ ಸಾರ್ವಜನಿಕರಿಗೆ ದೊಡ್ಡ ಕೊಡುಗೆಯಾಗಿದೆ.