ನಾಡು ಕಂಡ ಮಾಸ್ ಲೀಡರ್ ಬಿಎಸ್‌ವೈ ಅಭಿಮಾನೋತ್ಸವ
ಬಿ.ಎಸ್.ಯಡಿಯೂರಪ್ಪ ಅವರ 50 ವರ್ಷಗಳ ಸಮಾಜಸೇವೆ, ಜೀವನಚರಿತ್ರೆಯನ್ನು ನಾವು ಐತಿಹಾಸಿಕ ನಗರ ಚಿತ್ರದುರ್ಗದಲ್ಲಿ ಒಂದು ಸಾಂಸ್ಕೃತಿಕ ಹಬ್ಬದ ರೀತಿಯಲ್ಲಿ ಆಚರಿಸಲು ನಿರ್ಧರಿಸಲಾಗಿದ್ದು, ಅವರ ಜೀವನಚರಿತ್ರೆ ಮತ್ತು ಸದನದಲ್ಲಿ ಯಡಿಯೂರಪ್ಪನವರು ಎಂಬ ಸಂಬಂಧ ʼಕೆಂದಾವರೆ- ಕಮಲದಲ್ಲಿ ಅರಳಿದ ಹೂʼ ಹಾಗೂ ʼಸದನದಲ್ಲಿ ಶಿಕಾರಿʼ ಎಂಬ 2 ಗ್ರಂಥಗಳನ್ನು ಬಿಡುಗಡೆ ಮಾಡಲಾಗುತ್ತಿದೆ.
ರಾಜಕರಣಕ್ಕೆ ಬರುವ ಹಾದಿ ಕಷ್ಟವಲ್ಲ. ಆದರೆ ಬಂದ ಬಳಿಕ ಆ ಹಾದಿಯಲ್ಲಿ ಅಭಿವೃದ್ಧಿ ಮಾಡುತ್ತಾ, ಜನರ ಪ್ರೀತಿ ಹಾಗೂ ನಂಬಿಕೆ ಗಳಿಸಿ ಎಷ್ಟು ದೂರ ಕ್ರಮಿಸಲು ಸಾಧ್ಯವೆನ್ನುವುದೇ ಸವಾಲು. ಈ ಸವಾಲನ್ನು ಮೆಟ್ಟಿನಿಂತು, ರಾಜ್ಯವೇ ಮೆಚ್ಚುವಂತೆ ಜನಪರ ಧ್ವನಿಯಾಗಿ ಕರ್ನಾಟಕದ ʼಮಾಸ್ ಲೀಡರ್ʼ ಎಂಬ ಹೆಸರು ಪಡೆದ ಬೂಕನಕೆರೆ ಸಿದ್ದಲಿಂಗಯ್ಯ ಯಡಿಯೂರಪ್ಪ(ಬಿ.ಎಸ್.ಯಡಿಯೂರಪ್ಪ) ಸಾಕಷ್ಟು ಅಭಿವೃದ್ಧಿ ಕೆಲಸಗಳನ್ನು ಮಾಡಿದ್ದಾರೆ. ರಾಜ್ಯದ ಪ್ರವಾಸೋದ್ಯಮಕ್ಕೂ ದಾರಿದೀಪದಂತಿದ್ದ ಅವರ ದೂರದೃಷ್ಟಿ ಈಗಲೂ ಪ್ರಸ್ತುತ.
ಅದ್ದೂರಿ ಕಾರ್ಯಕ್ರಮ
ರಾಜಕೀಯ ಜೀವನದಲ್ಲಿ 50 ವರ್ಷಗಳನ್ನು ಪೂರೈಸಿರುವ ಯಡಿಯೂರಪ್ಪನವರು ಪ್ರವಾಸೋದ್ಯಮಕ್ಕೆ ನೀಡಿರುವ ಕೊಡುಗೆಯೂ ಅಪಾರ. ಅವರ ಆಡಳಿತಾವಧಿಯಲ್ಲಿ ಅವರು ಮಾಡಿದ ಸಾಧನೆಗಳನ್ನು ಹಾಗೂ ಅವರಿಗಿದ್ದ ಯೋಚನೆಗಳನ್ನು ನೆನಪಿಸಿಕೊಳ್ಳಲು ಇದು ಸೂಕ್ತ ಸಮಯ. ರಾಜಕೀಯ ಸೇವೆ ಮತ್ತು ಸಾಧನೆಯನ್ನು ಗೌರವಿಸಲು, ಮೇ 9, 2026 ರಂದು ಚಿತ್ರದುರ್ಗದ ಚಳ್ಳಕೆರೆ ರಸ್ತೆಯಲ್ಲಿರುವ ಮುರುಘಾ ಮಠದ ಮೈದಾನ ಹಾಗೂ ನಗರದ ಪ್ರಮುಖ ಆವರಣದಲ್ಲಿ ʼಬಿಎಸ್‌ವೈ ಅಭಿಮಾನೋತ್ಸವʼ ಆಯೋಜಿಸಲಾಗಿದೆ. ಈಗಾಗಲೇ ಸಕಲ ಸಿದ್ಧತೆಗಳು ಭರದಿಂದ ಸಾಗಿದ್ದು, ಈ ಕಾರ್ಯಕ್ರಮವನ್ನು ಕೇಂದ್ರ ಗೃಹ ಸಚಿವ ಅಮಿತ್ ಶಾ ಉದ್ಘಾಟಿಸಲಿದ್ದು, ಯಡಿಯೂರಪ್ಪನವರನ್ನು ಸನ್ಮಾನಿಸಲಿದ್ದಾರೆ. ಸಮಾರಂಭದಲ್ಲಿ ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ, ಮಾಜಿ ಸಿಎಂ ಎಚ್.ಡಿ. ಕುಮಾರಸ್ವಾಮಿ ಸೇರಿದಂತೆ ರಾಜ್ಯ ಮತ್ತು ರಾಷ್ಟ್ರ ಮಟ್ಟದ ಹಲವು ಪ್ರಮುಖ ನಾಯಕರು ಭಾಗವಹಿಸಲಿದ್ದಾರೆ. ಹಾಗೆಯೇ ರಾಜ್ಯದಾದ್ಯಂತ ಯಡಿಯೂರಪ್ಪನವರಿಗೆ ಲಕ್ಷಾಂತರ ಅಭಿಮಾನಿಗಳಿದ್ದು, ಸುಮಾರು 10 ಲಕ್ಷಕ್ಕೂ ಅಧಿಕ ಜನರು ಸೇರುವ ನಿರೀಕ್ಷೆಯಿದೆ.
ಇದನ್ನೂ ಓದಿ: ಹಿತವಾದ ಮನಸಿಗೆ ಹದವಾದ ಕಾಫಿ
ರಾಜ್ಯದ ವಿವಿಧೆಡೆಯಿಂದ ಸಾವಿರಾರು ರೈತರು ಮತ್ತು ಮಹಿಳೆಯರು ಪಾಲ್ಗೊಳ್ಳುವ ನಿರೀಕ್ಷೆಯಿದೆ. ಈ ಕಾರ್ಯಕ್ರಮವು ಯಡಿಯೂರಪ್ಪನವರ ಐದು ದಶಕಗಳ ಸುದೀರ್ಘ ರಾಜಕೀಯ ಹಾದಿ ಮತ್ತು ಸಂಘಟನಾ ಶಕ್ತಿಯನ್ನು ಬಿಂಬಿಸುವ ಉದ್ದೇಶ ಹೊಂದಿದ್ದು, ಆರು ಆಕರ್ಷಕ ಸ್ತಬ್ದಚಿತ್ರಗಳ ಮೆರವಣಿಗೆ ನಡೆಯಲಿದೆ. ಮಧ್ಯಾಹ್ನ 1 ಗಂಟೆ ಮೇಲೆ ಕಾರ್ಯಕ್ರಮ ಶುರುವಾಗಲಿದ್ದು, ಕಾರ್ಯಕ್ರಮಕ್ಕೆ ಆಗಮಿಸುವ ಎಲ್ಲ ಕಾರ್ಯಕರ್ತರು ಹಾಗೂ ಅಭಿಮಾನಿಗಳಿಗೆ ಊಟೋಪಚಾರದ ವ್ಯವಸ್ಥೆ ಇರಲಿದೆ. ಈಗಾಗಲೇ ಪ್ರತಿ ಜಿಲ್ಲೆಗೆ ಹೋಗಿ ಸ್ವಾಮೀಜಿಗಳಿಗೆ ಆಮಂತ್ರಣಪತ್ರ ನೀಡಲಾಗಿದ್ದು, ನಾಡಿನ ಮಠಾಧೀಶರು, ಸ್ವಾಮೀಜಿಗಳಿಗೆ ಪಾಲ್ಗೊಳ್ಳಲು ವಿನಂತಿಸಲಾಗಿದೆ. ಎಲ್ಲ ಸಮಾಜದ ಗುರುಗಳು ಬಂದು ಆಶೀರ್ವದಿಸಬೇಕೆಂದು ಮನವಿ ಮಾಡಲಾಗಿದೆ. ಅಭಿಮಾನಿಗಳು ಆಗಮಿಸಲು 10 ಸಾವಿರ ಬಸ್‌ಗಳನ್ನು ಬುಕಿಂಗ್ ಮಾಡಲಾಗಿದ್ದು. 45ರಿಂದ 50 ಸಾವಿರ ಕಾರು ಮತ್ತಿತರ ವಾಹನಗಳು ಬರಲಿವೆ. ನಮ್ಮ ನಿರೀಕ್ಷೆಗೂ ಮೀರಿ ಸ್ಪಂದನೆ ಲಭಿಸುತ್ತಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಹೇಳಿದ್ದು ಸ್ವಾಮೀಜಿಗಳು, ದೊಡ್ಡ ಸಂಖ್ಯೆಯಲ್ಲಿ ಅಭಿಮಾನಿಗಳು ಬರಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಮೇ 8ರಂದು ಸಂಜೆ ಯಡಿಯೂರಪ್ಪನವರ ಪುರಪ್ರವೇಶವಾಗಿದ್ದು, ಇದನ್ನು ನಾಡಿನ ಸಾಂಸ್ಕೃತಿಕ ಹಬ್ಬದ ರೀತಿಯಲ್ಲಿ ಆಚರಿಸಲಾಯಿತು. 24 ಜಾನಪದ ಕಲಾತಂಡಗಳು ಮೆರವಣಿಗೆಯಲ್ಲಿ ಭಾಗವಹಿಸಿತ್ತು.

ಎರಡು ಗ್ರಂಥಗಳ ಬಿಡುಗಡೆ
ಬಿ.ಎಸ್.ಯಡಿಯೂರಪ್ಪ ಅವರ 50 ವರ್ಷಗಳ ಸಮಾಜಸೇವೆ, ಜೀವನಚರಿತ್ರೆಯನ್ನು ನಾವು ಐತಿಹಾಸಿಕ ನಗರ ಚಿತ್ರದುರ್ಗದಲ್ಲಿ ಒಂದು ಸಾಂಸ್ಕೃತಿಕ ಹಬ್ಬದ ರೀತಿಯಲ್ಲಿ ಆಚರಿಸಲು ನಿರ್ಧರಿಸಲಾಗಿದ್ದು, ಅವರ ಜೀವನಚರಿತ್ರೆ ಮತ್ತು ಸದನದಲ್ಲಿ ಯಡಿಯೂರಪ್ಪನವರು ಎಂಬ ಸಂಬಂಧ ʼಕೆಂದಾವರೆ- ಕಮಲದಲ್ಲಿ ಅರಳಿದ ಹೂʼ ಹಾಗೂ ʼಸದನದಲ್ಲಿ ಶಿಕಾರಿʼ ಎಂಬ 2 ಗ್ರಂಥಗಳನ್ನು ಬಿಡುಗಡೆ ಮಾಡಲಾಗುತ್ತಿದೆ.
ಹೋರಾಟದ ಹಾದಿ
ಯಡಿಯೂರಪ್ಪನವರ ಹೋರಾಟಗಳು ಸದನದೊಳಗೆ ಎಷ್ಟು ಸದ್ದು ಮಾಡಿವೆಯೋ ಅದಕ್ಕೆ 10 ಪಟ್ಟು ರಸ್ತೆಯಲ್ಲಿ ನಡೆಸಿರುವ ಹೋರಾಟಗಳು ಸದ್ದು ಮಾಡಿವೆ. ರೈತರ ಸಮಸ್ಯೆ, ಕಾರ್ಮಿಕರ ಮೇಲಿನ ದೌರ್ಜನ್ಯ, ನೀರಾವರಿ ಯೋಜನೆ, ಸರಕಾರದ ಭಷ್ಟಾಚಾರ ನೀತಿ ಸೇರಿದಂತೆ ವಿವಿಧ ವಿಷಯಗಳನ್ನು ಮುಂದಿಟ್ಟುಕೊಂಡು ರಾಜ್ಯದ ಒಂದು ಮೂಲೆಯಿಂದ ಇನ್ನೊಂದು ಮೂಲೆಗೆ ಪಾದಯಾತ್ರೆ ನಡೆಸಿರುವ, ಸರಕಾರವನ್ನು `ಒಂಟಿಕಾಲಿ'ನಲ್ಲಿ ನಿಲ್ಲಿಸಿ ಕೆಲಸ ಮಾಡುವಂತೆ ಮಾಡಿರುವ ಅದೆಷ್ಟೋ ಉದಾಹರಣೆಗಳಿವೆ.
ಶಿಕಾರಿಪುರದಲ್ಲಿ ತಮ್ಮ ಸ್ಥಾನ ಭದ್ರಪಡಿಸುವ ಜತೆಜತೆಗೆ ದಕ್ಷಿಣ ಭಾರತದಲ್ಲಿ ನೆಲೆಕಂಡುಕೊಳ್ಳಲು ಪರದಾಡುತ್ತಿದ್ದ ಬಿಜೆಪಿಯನ್ನು ಕರ್ನಾಟಕದಲ್ಲಿ `ಬಲಿಷ್ಠ ಪಕ್ಷವನ್ನಾಗಿ' ರೂಪಿಸುವಲ್ಲಿ, ಪಕ್ಷದ ಬಾವುಟ ಕಟ್ಟಲು ಜನರಿಲ್ಲದ ರಾಜ್ಯದಲ್ಲಿ ಮೂರು ಬಾರಿ ಅಧಿಕಾರದ ಗದ್ದುಗೆಯನ್ನು ಏರಿಸುವಲ್ಲಿ ಯಡಿಯೂರಪ್ಪನವರ ಪಾತ್ರ ಮಹತ್ವದಾಗಿದೆ. ಸಣ್ಣ ವಯಸ್ಸಿನಲ್ಲಿಯೇ ಸಂಘ ಪರಿವಾರದ ಒಡನಾಟವನ್ನು ಹೊಂದಿದ್ದ ಯಡಿಯೂರಪ್ಪನವರಲ್ಲಿ ಭವಿಷ್ಯದ ನಾಯಕನನ್ನು ಕಂಡ ವರಿಷ್ಠರು, ಕರ್ನಾಟಕದಲ್ಲಿ ಬಿಜೆಪಿಯನ್ನು ಕಟ್ಟುವ ಜವಾಬ್ದಾರಿ ನೀಡಿದ್ದರು. ಕೇವಲ ಒಂದು ಸೀಟು ಗೆಲ್ಲುವುದರೊಂದಿಗೆ ಕಮಲವನ್ನು ವಿಧಾನಸಭೆಗೆ ಪ್ರವೇಶಮಾಡುವಂತೆ ಮಾಡಿದ್ದ ಯಡಿಯೂರಪ್ಪ ಅವರು ಮುಂದಿನ ಎರಡುವರೆ ಮೂರು ದಶಕದಲ್ಲಿ, ಬಿಜೆಪಿ ಸ್ವಂತ ಶಕ್ತಿಯ ಮೇಲೆ ಅಧಿಕಾರದ ಗದ್ದುಗೆ ಹಿಡಿಯುವಂತೆ ಮಾಡಿದ್ದು ಇಂದಿಗೂ ಇತಿಹಾಸ.

ಮುಖ್ಯಮಂತ್ರಿಯಾಗಿದ್ದ ಅವಧಿ
* ನ.07,2007ರಿಂದ ನ.19, 2007(ಎಂಟು ದಿನ)
* ಮೇ.30,2008ರಿಂದ ಆ.04, 2011 (734 ದಿನ)
* ಮೇ.17, 2018ರಿಂದ ಮೇ.23, 2018 (6 ದಿನ)
* ಜುಲೈ.26, 2019ರಿಂದ ಜುಲೈ. 28,2021 (733 ದಿನ)
ಬಂಗಾರ ಗ್ರಾಮ
ಸುವರ್ಣ ಗ್ರಾಮೋದಯ ಯೋಜನೆಯಲ್ಲಿ ಒಟ್ಟು 500 ಕೋಟಿ ರು ಹಣ ವಿನಿಯೋಗಿಸುವ ಮೂಲಕ ವಿವಿಧ ಗ್ರಾಮಗಳಲ್ಲಿನ 471 ರಸ್ತೆ, ಚರಂಡಿ ಸೇರಿದಂತೆ ಮೂಲಸೌಕರ್ಯ ಅಭಿವೃದ್ಧಿಗೆ ಹೆಚ್ಚಿನ ಆದ್ಯತೆ ನೀಡಲಾಗಿತ್ತು. ಅಲ್ಲದೆ 2009ರ ಜನವರಿಯಲ್ಲಿ ರಾಜ್ಯದ 15,049 ಗ್ರಾಮಗಳನ್ನು ಮೂರನೆಯ ಹಂತದ ಗ್ರಾಮೋದಯ ಯೋಜನೆಯಡಿ ಅಭಿವೃದ್ಧಿ ಕಾರ್ಯಕ್ರಮಗಳನ್ನು ಪೂರ್ಣಗೊಳಿಸಲಾಗಿತ್ತು. ಇಷ್ಟೇ ಅಲ್ಲದೆ ಕಲಬುರಗಿ ವಿಭಾಗದ 6 ಜಿಲ್ಲೆಗಳ 131 ಗ್ರಾಮಗಳಲ್ಲಿ 4ನೆಯ ಹಂತ ಗ್ರಾಮೋದಯ ಯೋಜನೆ ಜಾರಿಗೊಳಿಸಲಾಗಿತ್ತು.
ಜಾಗತಿಕ ಬಂಡವಾಳ ಹೂಡಿಕೆ
ರಾಜ್ಯದಲ್ಲಿ ಕೈಗಾರಿಕಾ ಹೊಸ ಪರ್ವವನ್ನು ಸೃಷ್ಟಿಸಿದ ಶ್ರೇಯಸ್ಸು ಬಿ.ಎಸ್.ಯಡಿಯೂರಪ್ಪನವರಿಗೆ ಸಲ್ಲುತ್ತದೆ. ಕೈಗಾರಿಕೆಗಳ ಸರ್ವಾಂಗೀಣ ಅಭಿವೃದ್ದಿಗೆ ಮತ್ತು ಐ.ಟಿ ಮತ್ತು ಬಿ.ಟಿ ಉತ್ತೇಜನಕ್ಕಾಗಿ ಲಕ್ಷಾಂತರ ಕೋಟಿ ರು.ಗಳ ಜಾಗತಿಕ ಬಂಡವಾಳ ಹೂಡಿಕೆಗೆ ಅವರು ಅವಕಾಶ ಮಾಡಿಕೊಟ್ಟರು. ಕೈಗಾರಿಕಾ ರಂಗದ ಉತ್ತೇಜನಕ್ಕಾಗಿ ಉದ್ದಿಮೆದಾರರುಗಳ ಬಂಡವಾಳ ಹೂಡಿಕೆಗೆ ಸರಕಾರ ತೆರಿಗೆ ವಿನಾಯಿತಿ ಸಬ್ಸಿಡಿ ನೀಡಿಕೆ ಮತ್ತು ರಾಜ್ಯದಲ್ಲಿ ಹಸಿರು ಕೈಗಾರಿಕೆಗಳಿಗೆ ಪ್ರೋತ್ಸಾಹ ನೀಡಲಾಗಿತ್ತು. ಕರ್ನಾಟಕವು ಬಂಡವಾಳ ಹೂಡಿಕೆಗೆ ಅತ್ಯಂತ ಪ್ರಶಸ್ತ ಸ್ಥಳವಾಗಿರುತ್ತದೆ ಎಂದು ಭಾರತೀಯ ಕೈಗಾರಿಕಾ ಮತ್ತು ವಾಣಿಜ್ಯ ಸಂಸ್ಥೆಗಳ ಮಹಾ ಮಂಡಳಿಯ ಏಪ್ರಿಲ್ 7, 2011ರ ವರದಿಯಲ್ಲಿ ಪ್ರಕಟಿತವಾಗಿದೆ. ಇದಕ್ಕೆಲ್ಲಾ ಬಿಎಸ್‌ವೈ ಕಾರಣರಾಗಿದ್ದಾರೆ.
ಕ್ರಾಂತಿಕಾರಕ ಅಭಿವೃದ್ಧಿ ಯೋಜನೆಗಳು
- ಭಾಗ್ಯಲಕ್ಷ್ಮಿ ಯೋಜನೆಯಿಂದ 11.4 ಲಕ್ಷ ಹೆಣ್ಣು ಮಕ್ಕಳಿಗೆ ಪ್ರಯೋಜನ.
- 14 ಲಕ್ಷ ರೈತರಿಗೆ 7 ಸಾವಿರ ಕೋಟಿ ರು. ಕೃಷಿ ಸಾಲ.
- 6.41 ಲಕ್ಷ ಮಹಿಳಾ ಸಹಕಾರಿ ಸಂಘಗಳ ಹಾಲು ಉತ್ಪಾದಕರಿಗೆ 400 ಕೋಟಿ ರು ಪ್ರೋತ್ಸಾಹ ಧನ ವಿತರಣೆ.
- ಸುವರ್ಣ ಗ್ರಾಮೋದಯ ಯೋಜನೆಗೆ 400 ಕೋಟಿ ರು. ನೀಡಿಕೆ
- ಪಂಚಾಯತ್ ರಾಜ್ ವ್ಯವಸ್ಥೆಯಲ್ಲಿ ಶೇ.50 ಮಹಿಳೆಯರಿಗೆ ಮೀಸಲು
- ಆರೋಗ್ಯ ಕವಚದಿಂದ 7.6 ಲಕ್ಷ ಜೀವಗಳ ರಕ್ಷಣೆ
- 12 ಲಕ್ಷ ವಿದ್ಯಾರ್ಥಿಗಳಿಗೆ ಉಚಿತ ಸೈಕಲ್ ವಿತರಣೆ
- ಸಾಮಾಜಿಕ ಭದ್ರತೆ, ಹಿರಿಯ ನಾಗರಿಕರು, ಅಂಗವಿಕಲರು, ವಿಧವೆಯರು ಮುಂತಾದ 45ಲಕ್ಷ ಬಡ ಮಂದಿಗೆ ಪಿಂಚಣಿ
- ಸಾವಯವ ಕೃಷಿಯಲ್ಲಿ 2011-12ನೆಯ ಸಾಲಿನಲ್ಲಿ 200 ಕೋಟಿ ರು ನೀಡಿಕೆ
- ನಿರಂತರ ಜ್ಯೋತಿ, ಸತತ 24 ಗಂಟೆ 3 ಫೇಸ್ ವಿದ್ಯುತ್ ಪೂರೈಕೆ
- ಕೌಶಲ್ಯ ಅಭಿವೃದ್ಧಿ ಯೋಜನೆಯಡಿ 10 ಸಾವಿರಕ್ಕೂ ಅಧಿಕ ಫಲಾನುಭವಿಗಳಿಗೆ ಲಾಭ
- ಕೆರೆಗಳ ಪುನಶ್ಚೇತನಕ್ಕೆ 1,000 ಕೋಟಿ ರು. ಅನುದಾನ

ಪ್ರಮುಖಾಂಶ
- ಯಡಿಯೂರಪ್ಪ ಅಧಿಕಾರದಲ್ಲಿದ್ದ ಪ್ರತಿ ಬಾರಿಯೂ ಭೀಕರ ಪ್ರವಾಹದ ಸ್ಥಿತಿ ಎದುರಾಗಿದೆ. ಪ್ರತಿ ಬಾರಿಯೂ ಅವರು ಪ್ರವಾಹ ಪೀಡಿತ ಪ್ರದೇಶಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರಲ್ಲದೇ, ಸಂತ್ರಸ್ತರ ನೆರವಿಗೆ ಧಾವಿಸಿದ್ದಾರೆ. ಕರೋನಾ ಸಂಕಷ್ಟವನ್ನು ಸಮರ್ಥವಾಗಿ ಎದುರಿಸಿದ್ದಾರೆ. ಆರೋಗ್ಯ ಕವಚ ಯೋಜನೆಯಡಿ ಸರಕಾರ ಮತ್ತು ಖಾಸಗಿ ಸಹಭಾಗಿತ್ವದಲ್ಲಿ ತುರ್ತು ಸೇವೆ ವಾಹನಗಳು ಜನರ ಬಳಕೆಗೆ ಬಿಡುಗಡೆ. 2008ರಿಂದ 2015ರವರೆಗೆ 28 ಲಕ್ಷ ಜನರು ಇದರ ಪ್ರಯೋಜನ ಪಡೆದಿದ್ದಾರೆ.
- ಕರೋನಾದಿಂದ ಮೃತಪಟ್ಟ ವ್ಯಕ್ತಿಯ ಬಿಪಿಎಲ್ ಕುಟುಂಬಕ್ಕೆ ತಲಾ 1 ಲಕ್ಷ ರುಪಾಯಿ ಆರ್ಥಿಕ ನೆರವಿನ ಯೋಜನೆ ಕೂಡ ಬಿಎಸ್‌ವೈ ಸರಕಾರದ ಪ್ರಮುಖ ನಿರ್ಧಾರ.
- ನೇಕಾರರ 1 ಲಕ್ಷ ರು.ವರೆಗಿನ ಸಾಲ ಮನ್ನಾ, ಮೀನುಗಾರರ ಸಾಲ ಮನ್ನಾ, ರೈತ ಸುರಕ್ಷಾ ಫಸಲ್ ವಿಮಾ ಯೋಜನೆಯ ವಿಮೆ ಕಂತು ಪಾವತಿ, ಕೆರೆಗಳ ಪುನಶ್ಚೇತನಕ್ಕೆ ಮಿಷನ್ ಕಲ್ಯಾಣಿ ಯೋಜನೆ ಜಾರಿ.
- ಕರೋನಾ ಸೋಂಕಿನಿಂದ ತಂದೆ-ತಾಯಿ ಇಬ್ಬರನ್ನೂ ಕಳೆದುಕೊಂಡು ಅನಾಥರಾದ ಮಕ್ಕಳಿಗೆ ಶಿಕ್ಷಣ ಒದಗಿಸಲು ತಿಂಗಳಿಗೆ 3,500 ರು. ನೀಡುವ `ಮುಖ್ಯಮಂತ್ರಿ ಬಾಲಸೇವಾ ಯೋಜನೆ' ಜಾರಿ. ಅಲ್ಲದೇ 21 ವರ್ಷ ತುಂಬಿದ ಹೆಣ್ಣುಮಕ್ಕಳಿಗೆ 1 ಲಕ್ಷ ರು. ನೆರವು ಘೋಷಣೆ.
- ಸಂಧ್ಯಾ ಸುರಕ್ಷಾ ಯೋಜನೆಯಡಿ 65 ವರ್ಷ ಮೇಲ್ಪಟ್ಟ ಕಡು ಬಡವರಿಗೆ 400 ರು. ಮಾಸಿಕ ಪಿಂಚಣಿ ದೊರಕುವಂತೆ ಅನುಷ್ಠಾನ. 13.79 ಲಕ್ಷ ಜನರಿಗೆ ಇದರ ಲಾಭ ಲಭಿಸುವಂತೆ ಮಾಡಲಾಗಿದೆ.
- ಯೋಜನೆ ಸರಕಾರಿ ಶಾಲೆ ಹಾಗೂ ಅನುದಾನಿತ ಖಾಸಗಿ ಶಾಲೆಗಳ 8ನೆಯ ತರಗತಿ ವಿದ್ಯಾರ್ಥಿಗಳಿಗೆ ಉಚಿತವಾಗಿ ಬೈಸಿಕಲ್ ವಿತರಣೆ. ಇದಕ್ಕಾಗಿ 125 ಕೋಟಿ ರು. ವೆಚ್ಚ. 7 ಲಕ್ಷ ವಿದ್ಯಾರ್ಥಿಗಳಿಗೆ ಇದರ ಪ್ರಯೋಜನ.
ವಿಶ್ವಕನ್ನಡ ಸಮ್ಮೇಳನ
ರಾಜ್ಯದಲ್ಲಿ ಕನ್ನಡವನ್ನು ಉಳಿಸಿ ಬೆಳೆಸುವಲ್ಲಿ ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರ ಕ್ರಮಗಳು ಅನುಕರಣೀಯವಾಗಿವೆ. ಗಡಿ ಸಮಸ್ಯೆ, ಇಂಗ್ಲಿಷ್ ಹಾಗೂ ಹಿಂದಿ ಭಾಷೆಗಳ ಪ್ರಭಾವ, ಅನ್ಯಭಾಷಿಕರ ಹೆಚ್ಚಳ, ಸರಕಾರಿ ಶಾಲೆಗಳ ಮುಚ್ಚುವಿಕೆ ಸೇರಿದಂತೆ ಕನ್ನಡ ಭಾಷೆಯ ಸಮಸ್ಯೆಗಳು ದಿನೇ ದಿನೇ ಹೆಚ್ಚುತ್ತಿವೆ. ಇಂಥ ಸಂದಿಗ್ಧ ಸಮಯದಲ್ಲಿ ಕನ್ನಡ ಭಾಷೆಯನ್ನು ಮೇಲ್ಕಕ್ಕೆತ್ತಲು ಬಿ.ಎಸ್.ಯಡಿಯೂರಪ್ಪ ಅವಿರತವಾಗಿ ಶ್ರಮಿಸಿದ್ದರು.
ರಾಜ್ಯದಲ್ಲಿ ೨೫ ವರ್ಷಗಳ ನಂತರ ಗಡಿ ಜಿಲ್ಲೆಯಾದ ಬೆಳಗಾವಿಯಲ್ಲಿ ಪ್ರಥಮ ಬಾರಿಗೆ ಅತ್ಯಂತ ಯಶಸ್ವಿಯಾಗಿ, ಅದ್ದೂರಿಯಾಗಿ `ವಿಶ್ವ ಕನ್ನಡ ಸಮ್ಮೇಳನ' ನಡೆಯಿತು. ಸದಾ ಮಹಾರಾಷ್ಟದ ಕಡೆಯಿಂದ ವಿರೋಧ ಎದುರಿಸುವ ಬೆಳಗಾವಿಯಲ್ಲಿ ಅಂದು ಯಾವುದೇ ಅಡೆತಡೆಯಿಲ್ಲದೆ ಸಮ್ಮೇಳನ ನಡೆದಿತ್ತು. ಈ ಸಮ್ಮೇಳನಕ್ಕೆ ಕೋಟ್ಯಂತರ ಸಂಖ್ಯೆಯಲ್ಲಿ ಕನ್ನಡಿಗರು ಭಾಗವಹಿಸಿದ್ದು, ಅತ್ಯಂತ ಯಶಸ್ವಿಯಾಗಿತ್ತು. ಈ ವಿಶ್ವ ಕನ್ನಡ ಸಮ್ಮೇಳನ ಬೆಳಗಾವಿಯಲ್ಲಿ ನಡೆಸಿರುವುದರಿಂದ ವಿಶ್ವ ಕನ್ನಡಿಗರನ್ನು ಒಗ್ಗೂಡಿಸುವ ಜತೆಗೆ, ಮೇಲಿಂದ ಮೇಲೆ ತಲೆದೋರುತ್ತಿದ್ದ ಕರ್ನಾಟಕ-ಮಹಾರಾಷ್ಟç ಗಡಿ ಸಮಸ್ಯೆಗೆ ಪರಿಹಾರ ಕಲ್ಪಿಸುವಂತಾಗಿತ್ತು. ಬೆಳಗಾವಿ ಕನ್ನಡದ ಜಿಲ್ಲೆ ಎಂಬುದನ್ನು ಸಮ್ಮೇಳನ ಸಾಧಿಸಿ ತೋರಿಸಿತ್ತು. ಕೋಟಿ ಸಂಖ್ಯೆಯಲ್ಲಿ ಸಮ್ಮೇಳನಕ್ಕೆ ಹರಿದು ಬಂದ ಕನ್ನಡಿಗರು `ನಾವೆಲ್ಲ ಒಂದೇ' ಎಂಬ ಸಂದೇಶವನ್ನು ನೀಡಿದ್ದರು. ಇದಕ್ಕೆ ಕನ್ನಡದ ಕಟ್ಟಾಳು ಬಿಎಸ್‌ವೈ ಕಾರಣರಾಗಿದ್ದರು.
ಪ್ರವಾಸೋದ್ಯಮ ಟಾಸ್ಕ್ ಫೋರ್ಸ್
ಪ್ರವಾಸೋದ್ಯಮ ಮತ್ತು ಸಾಂಸ್ಕೃತಿಕ ಅಭಿವೃದ್ಧಿಗೆ ಕೈಗೊಳ್ಳಬೇಕಿಮವ ಕ್ರಮಗಳ ಕುರಿತು ಸರಕಾರಕ್ಕೆ ವಿವರವಾದ ವರದಿಯನ್ನು ಸಲ್ಲಿಸಲು ಸುಧಾ ಮೂರ್ತಿಯವರ ಅಧ್ಯಕ್ಷತೆಯಲ್ಲಿ ವಿವಿಧ ಕ್ಷೇತ್ರಗಳಿಗೆ ಸಂಬಂಧಿಸಿದ ಸದಸ್ಯರನ್ನೊಳಗೊಂಡ ಕರ್ನಾಟಕ ಟಾಸ್ಕ್ ಪೋರ್ಸ್ ಅನ್ನು ರಚಿಸಲಾಗಿತ್ತು. ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಪ್ರವಾಸಿಗರು ಭೇಟಿ ನೀಡುವ ಪ್ರವಾಸಿತಾಣಗಳಲ್ಲಿ ಮೂಲಭೂತ ಸೌಕರ್ಯವನ್ನು ಹೆಚ್ಚಿಸಿ, ಪ್ರವಾಸೋದ್ಯಮ ಅಭಿವೃದ್ಧಿಗೆ ಸರಕಾರ ಆದ್ಯತೆ ನೀಡಿತ್ತು. 2019-20ನೆಯ ಸಾಲಿನಲ್ಲಿ ಬಂಡವಾಳ ವೆಚ್ಚಗಳ ಅಡಿ ಪ್ರವಾಸೋದ್ಯಮ ಅಭಿವೃದ್ಧಿಯ ದೃಷ್ಟಿಯಿಂದ ಒಟ್ಟು 144 ಕಾಮಗಾರಿಗಳನ್ನು 10563.00 ಲಕ್ಷಗಳ ಅಂದಾಜು ವೆಚ್ಚದಲ್ಲಿ ಕೈಗೊಳ್ಳಲು ಅನುಮೋದನೆ ನೀಡಲಾಗಿತ್ತು.

ಇಂದಿನ ಪೀಳಿಗೆಗೆ ಕೃಷಿಯ ಮಹತ್ವ ಹಾಗೂ ಗ್ರಾಮೀಣ ಪರಿಸರ ಪರಿಚಯಿಸುವ ಮಿಸುವ ಉದ್ದೇಶದಿಂದ ಬೆಂಗಳೂರು ಕೃಷಿ ವಿಶ್ವವಿದ್ಯಾಲಯ ಹಾಗೂ ಪ್ರವಾಸೋದ್ಯಮ ಇಲಾಖೆಗಳ ಸಹಯೋಗದಲ್ಲಿ 'ಅಗ್ರಿ ಟೂರಿಸಂ' (ಕೃಷಿ ಪ್ರವಾಸೋದ್ಯಮ) ಯೋಜನೆಯನ್ನು ಆರಂಭಿಸಲಾಯಿತು. `ಬೆಂಗಳೂರು ಕೃಷಿ ವಿಶ್ವವಿದ್ಯಾಲಯದ ಗಾಂಧಿ ಕೃಷಿ ವಿಜ್ಞಾನ ಕೇಂದ್ರ (ಜಿಕೆವಿಕೆ), ಮೈಸೂರಿನ ನಾಗೇನಹಳ್ಳಿಯಲ್ಲಿರುವ ಸಾವಯವ ವ್ಯವಸಾಯ ಸಂಶೋಧನಾ ಘಟಕ ಹಾಗೂ ಹಾಸನದ ಗುಂಜೇವು ಪ್ರದೇಶದಲ್ಲಿರುವ ಕೃಷಿ ಸಂಶೋಧನಾ ಘಟಕಗಳಲ್ಲಿ ಈ ಯೋಜನೆ ಮೊದಲಿಗೆ ಅನುಷ್ಠಾನಗೊಳಿಸಲಾಯಿತು. 'ಅಗ್ರಿ ಟೂರಿಸಂ' ಯೋಜನೆಯಲ್ಲಿ ಹಳ್ಳಿಯ ವಾತಾವರಣದೊಂದಿಗೆ ಕೃಷಿ ವಸ್ತು ಸಂಗ್ರಹಾಲಯಗಳನ್ನು ತೆರೆಯಲಾಯಿತು. ದೇಶದಲ್ಲಿ ಅನುಸರಿಸುತ್ತಿದ್ದ ಪುರಾತನ ಕೃಷಿ ಪದ್ಧತಿಗಳಿಂದ ಈಗಿನ ಆಧುನಿಕ ಕೃಷಿಯವರೆಗಿನ ಬದಲಾವಣೆಗಳನ್ನು ಈ ಕೇಂದ್ರಗಳು ಕಟ್ಟಿಕೊಟ್ಟಿರುವುದು ಪ್ರವಾಸೋದ್ಯಮಕ್ಕೆ ಸಿಕ್ಕ ದೊಡ್ಡ ಶಕ್ತಿ.
ಉತ್ತರ ಕನ್ನಡ ಜಿಲ್ಲೆಯ ಹೊನ್ನಾವರ ತಾಲೂಕಿನ ಇಕೋ ಬೀಚ್‌ಗೆ ಬ್ಲ್ಯೂ ಪ್ಲಾಗ್ ಅಂತಾರಾಷ್ಟ್ರೀಯ ಮಾನ್ಯತೆ ಸಿಕ್ಕಿದ್ದು, ಉತ್ತರ ಕನ್ನಡ ಜಿಲ್ಲಾಡಳಿತ ಮತ್ತು ಪ್ರವಾಸೋದ್ಯಮ ಇಲಾಖೆಯಿಂದ ಕಡಲತೀರದಲ್ಲಿ ಬ್ಲೂ ಫ್ಲ್ಯಾಗ್ ಅಧಿಕೃತವಾಗಿ ಹಾರಿಸಲಾಯಿತು. ವಿಶಾಲ ಕಡಲತೀರ, ಹಚ್ಚ ಹಸಿರಿನ ಸ್ವಚ್ಛ ಪರಿಸರ ಹಾಗೂ ಮೂಲಭೂತ ಸೌಲಭ್ಯಗಳನ್ನೊಳಗೊಂಡ ಉತ್ತರ ಕನ್ನಡ ಜಿಲ್ಲೆಯ ಹೊನ್ನಾವರ ತಾಲೂಕಿನ ಕಾಸರಕೋಡಿನ ಇಕೋ ಬೀಚ್ ಗೆ ಬ್ಲ್ಯೂ ಫ್ಲಾಗ್ ಬೀಚ್ ಎಂಬ ಅಂತಾರಾಷ್ಟ್ರೀಯ ಮಾನ್ಯತೆ ದೊರೆತ ಹಿನ್ನಲೆ ಅನಾವರಣ ಮಾಡಲಾಯಿತು. ಜಿಲ್ಲಾಡಳಿತ ಹಾಗೂ ಪ್ರವಾಸೋದ್ಯಮ ಇಲಾಖೆ ಶ್ರಮದಿಂದಾಗಿ ಕಾಸರಕೋಡಿನಲ್ಲಿರುವ ಇಕೋ ಬೀಚ್ ಅಂತಾರಾಷ್ಟ್ರೀಯ ಮಟ್ಟದ ಬೀಚ್ ಆಗಿ ಮೇಲ್ದರ್ಜೆಗೇರಿದೆ. ಕಡಲ ತೀರದಲ್ಲಿನ ಅಭಿವೃದ್ಧಿ ಕಾರ್ಯಗಳು ಹಾಗೂ ಬೀಚ್ ಸ್ಥಿತಿಯನ್ನು ಆಧರಿಸಿ ಬ್ಲ್ಯೂಫ್ಲಾಗ್ ಪ್ರಮಾಣಪತ್ರ ನೀಡಲಾಗಿತ್ತು. ಕಡಲ ತೀರದಲ್ಲಿ ಪ್ರವಾಸಿಗರಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಆಸನದಿಂದ ಹಿಡಿದು ಕುಡಿಯುವ ನೀರು, ಮಕ್ಕಳ ಆಟಿಕೆಗಳು, ಜೀವರಕ್ಷಕ ಸಿಬ್ಬಂದಿ ಹಾಗೂ ಮುಖ್ಯವಾಗಿ ಕಡಲ ತೀರದ ಸ್ವಚ್ಛತೆಯನ್ನು ಕಾಯ್ದುಕೊಳ್ಳಲು ಪ್ರತ್ಯೇಕ ಸಿಬ್ಬಂದಿ ಒಳಗೊಂಡು ವಿನೂತನ ಮಾದರಿಯ ವ್ಯವಸ್ಥೆ ಒದಗಿಸಲಾಗಿತ್ತು
ಕೊಡಗಿನ ಆಕರ್ಷಣೀಯ ಪ್ರವಾಸಿ ತಾಣವಾಗಿರುವ ರಾಜಾಸೀಟ್ ಸೇರಿದಂತೆ ಸುತ್ತಮುತ್ತಲಿನ ಪ್ರದೇಶದ ಅಭಿವೃದ್ಧಿಗೆ ಪ್ರವಾಸೋದ್ಯಮ ಕೆಲಸ ಮಾಡಿದೆ. ರಾಜಾಸೀಟು ಉದ್ಯಾನಕ್ಕೆ ಹೊಂದಿಕೊಂಡಿರುವ ಜಾಗದಲ್ಲಿ ಸಮಗ್ರ ಉದ್ಯಾನವನಗಳ ಅಭಿವೃದ್ಧಿಗಾಗಿ ಪ್ರವಾಸೋದ್ಯಮ ಇಲಾಖೆಯಿಂದ 4.55 ಕೋಟಿ ರು. ಕ್ರಿಯಾ ಯೋಜನೆಗೆ ಅನುಮೋದನೆಯಾಗಿದ್ದು, 3.69 ಕೋಟಿಗಳನ್ನು ಲೋಕೋಪಯೋಗಿ ಇಲಾಖೆಗೆ ಬಿಡುಗಡೆ ಮಾಡಿ ಕಾಮಗಾರಿಗಳನ್ನು ಕೈಗೊಳ್ಳಲಾಗಿತ್ತು.