Tuesday, July 14, 2026
Tuesday, July 14, 2026

ಕೆಎಸ್‌ಟಿಡಿಸಿ ಪ್ರವಾಸದಲ್ಲಿ ಮಾನ್‌ಸೂನ್‌ ರಾಗದ ಅಲೆಯಾಗಿ

KSTDC Monsoon Tour

ಇದು ಮಾನ್‌ಸೂನ್‌ ಕಾಲ. ಈ ವೇಳೆ ಪ್ರಕೃತಿಯ ರಮ್ಯತೆ ನೂರ್ಮಡಿಯಾಗಿರುತ್ತದೆ. ಬೇಸಗೆಗೆ ಎಲೆಯುದುರಿದ ಮರ- ಗಿಡಗಳು ಈ ಸಮಯದಲ್ಲಿ ಹಸಿರೊದ್ದು ಕಂಗೊಳಿಸುತ್ತವೆ. ಮಾಮರದ ಚಿಗುರುಂಡು ಕೋಕಿಲಗಳು ಹಾಡುತ್ತವೆ. ಮಾನ್‌ಸೂನ್‌ನ ಜೋರು ಗಾಳಿ- ಮಳೆಗೆ ಕಡಲ ತೆರೆಗಳ ಅಬ್ಬರವೂ ಜೋರು. ನದಿಗಳೂ ಉಕ್ಕಿ ಹರಿಯುತ್ತವೆ. ಜಲಪಾತಗಳು ತುಂತುಂಬಿ ಸುರಿಯುತ್ತವೆ. ಈ ಎಲ್ಲಾ ವಿಷಯಗಳು ಕವಿ ಹೃದಯಗಳನ್ನು ಹೊಕ್ಕು ಕವಿತೆಗಳನ್ನು ಸೃಜಿಸುತ್ತವೆ.

ಈ ವೇಳೆ ಪ್ರವಾಸ ಪರಿಸರವನ್ನು ಕಣ್ಮನಗಳೊಳಗೆ ಕಟ್ಟಿಕೊಡುತ್ತದೆ. ನೋಡುವ ಮನ ಬಿಲ್‌ಕುಲ್‌ ಸೊರಗದು. ಪ್ರವಾಸ ಆರೋಗ್ಯವನ್ನು ಸುಧಾರಿಸುತ್ತದೆ. ದೇಹದ ವಯಸ್ಸಾಗುವಿಕೆಯನ್ನೂ ನಿಧಾನಗೊಳಿಸುತ್ತದೆ. ಇದು ಸಂಶೋಧನೆಗಳಿಂದ ಹೊರಬಂದ ಸತ್ಯ. ಏಕಾಂಗಿಯಾಗಿ ಅಥವಾ ಗುಂಪಾಗಿಯೂ ಪ್ರವಾಸ ಮಾಡಬಹುದು. ಕರ್ನಾಟಕದಲ್ಲಿ ಮಾನ್‌ಸೂನ್‌ ಸಮಯದಲ್ಲೇ ವೀಕ್ಷಿಸಬೇಕಾದ ಸಾಕಷ್ಟು ಪ್ರವಾಸಿ ತಾಣಗಳಿವೆ. ಮಾನ್‌ಸೂನ್‌ನ ಮಹಿಮೆ ಅರಿತ ಕೆಎಸ್‌ಟಿಡಿಸಿ ಅವುಗಳತ್ತ ಪ್ರವಾಸಿಗರನ್ನು ಕರೆದೊಯ್ಯಲು ಒಂದಲ್ಲ ಅಂತ ಮೂರು ಪ್ಯಾಕೇಜ್‌ಗಳನ್ನು ಹೊರ ತಂದಿದೆ. ಮೂರಕ್ಕೆ ಮೂರೂ ಪರಿಸರದ ಪಲ್ಸ್‌ ನಿಮಗೆ ತೋರಿಸುವ ತಾಣಗಳು. ಇಲ್ಲಿ ಲಾಟ್‌ಗಟ್ಟಲೆ ಲವ್‌ ಆಗೋದು ಗ್ಯಾರಂಟಿ. ಹೊಗನೇಕಲ್ ಜಲಪಾತ, ಜೋಗ ಜಲಪಾತ, ಗಗನಚುಕ್ಕಿ, ಭರಚುಕ್ಕಿ ಜಲಪಾತಗಳು, ಕೃಷ್ಣಗಿರಿ, ಲಿಂಗನಮಕ್ಕಿ ಅಣೆಕಟ್ಟುಗಳು, ಸಿಗಂದೂರಿನಂಥ ಪ್ರಕೃತಿ ಸೌಂದರ್ಯದ ಸೊಬಗಿನ ತಾಣಗಳು ಈ ಪ್ಯಾಕೇಜ್‌ಗಳಲ್ಲಿವೆ. ಸಮಯ ಇಲ್ಲ ಅಂತ ಜಾರಿಕೊಳ್ಳಲು ಅವಕಾಶವೇ ಇಲ್ಲಿಲ್ಲ. ಯಾಕೆಂದರೆ ಈ ಪ್ಯಾಕೇಜ್‌ಗಳು ಬಿಸಿ ಸ್ಕೆಡ್ಯೂಲ್‌ಗಳಲ್ಲಿ ವರ್ಕ್‌ ಮಾಡುವ ಜನರಿಗೂ ಹೇಳಿ ಮಾಡಿಸಿದಂತಿವೆ. ಒಂದೇ ದಿನದ ರಜೆಯಲ್ಲಿ ಒಂದು ಪ್ರವಾಸ ಮಾಡಬಹುದು. ವಾರಾಂತ್ಯಕ್ಕೊಂದು ಪ್ರವಾಸ ಮಾಡಿ ಮತ್ತು ನಿಮ್ಮವರಿಗೂ ಇಂಥ ಪ್ರವಾಸ ಮಾಡಿಸಿ.

ಇದನ್ನೂ ಓದಿ: ಪ್ರವಾಸಿಗಳಿಗೆ ಮಳೆಯನ್ನೇ ಮಾರುವ ದೇಶಗಳ ಬಗ್ಗೆ ಗೊತ್ತಾ?

ಜೋಗ ಜಲಪಾತ

ಜೋಗ ಜಲಪಾತ, ಗೇರುಸೊಪ್ಪೆ ಜಲಪಾತ ಎಂಬ ಹೆಸರೂ ಇದಕ್ಕಿದೆ. ಕರ್ನಾಟಕದ ಶಿವಮೊಗ್ಗ ಜಿಲ್ಲೆಯ ಸಾಗರ ತಾಲ್ಲೂಕಿನಲ್ಲಿದೆ. ಭಾರತದ ಅತ್ಯಂತ ಪ್ರಸಿದ್ಧ ಜಲಪಾತಗಳಲ್ಲೊಂದು. ಶರಾವತಿ ನದಿಯಿಂದ ನಿರ್ಮಾಣವಾಗಿದೆ. ಸುಮಾರು 253 ಮೀಟರ್ ಎತ್ತರದಿಂದ ಧುಮುಕುವ ಇದರ ದೃಶ್ಯ ಅದ್ಭುತವಾಗಿರುತ್ತದೆ. ಇದು ನಾಲ್ಕು ಪ್ರಮುಖ ಧಾರೆಗಳಾಗಿ ವಿಭಜನೆಯಾಗಿದ್ದು, ಅವುಗಳನ್ನು ರಾಜಾ, ರಾಣಿ, ರೋರರ್ ಮತ್ತು ರಾಕೆಟ್ ಎಂದು ಕರೆಯುತ್ತಾರೆ. ನೀರು ಹೆಚ್ಚಾದರೆ ಧುಮುಕುಮ ಅಗಾದತೆಯೂ ಹೆಚ್ಚಲ್ಲವೇ? ಹಾಗಾಗಿ ಮಳೆಗಾಲದಲ್ಲಿ ಜೋಗ ಜಲಪಾತ ತನ್ನ ಸಂಪೂರ್ಣ ವೈಭವವನ್ನು ಪ್ರದರ್ಶಿಸುತ್ತದೆ. ಪಶ್ಚಿಮ ಘಟ್ಟಗಳ ಹಸಿರು ಪರಿಸರದ ನಡುವೆ ನೆಲೆಸಿರುವ ಈ ಜಲಪಾತ ಪ್ರವಾಸಿಗರ ಆಕರ್ಷಣೆ. ದೇಶ-ವಿದೇಶಗಳಿಂದ ಸಾವಿರಾರು ಪ್ರವಾಸಿಗರು ಇಲ್ಲಿಗೆ ಬರುತ್ತಾರೆ. ಪ್ರಕೃತಿಯ ವೈಭವವನ್ನು ಸವಿಯುತ್ತಾರೆ. ಇದು ಮಾನ್‌ಸೂನ್‌ನಲ್ಲಿ ಪ್ರವಾಸಿ ಮಿಸ್‌ ಮಾಡಲೇಬಾರದಂಥ ತಾಣ.

Untitled design (75)

ಹೊಗನೇಕಲ್ ಜಲಪಾತ

ಇದು ದಕ್ಷಿಣ ಭಾರತದ ಪ್ರಸಿದ್ಧ ಜಲಪಾತಗಳಲ್ಲೊಂದು. ಕಾವೇರಿ ನದಿಯ ಮೇಲೆ ನೆಲೆಗೊಂಡಿದೆ. ಕರ್ನಾಟಕ ಮತ್ತು ತಮಿಳುನಾಡು ರಾಜ್ಯಗಳ ಗಡಿಗಳ ಬಳಿಯಿದೆ. ʼಹೊಗನೇಕಲ್ʼ ಎಂಬ ಪದವು ಕನ್ನಡದ ʼಹೊಗೆʼ ಮತ್ತು ʼಕಲ್ಲುʼ ಎಂಬ ಪದಗಳಿಂದ ಬಂದಿದೆ. ಜಲಪಾತದಿಂದ ಧುಮುಕುವ ನೀರಿನ ತುಂತುರುಗಳು ಹೊಗೆಯಂತೆ ಕಾಣುವುದರಿಂದ ಈ ಹೆಸರು. ಅನೇಕ ಜಲಧಾರೆಗಳ ಸಮೂಹವನ್ನು ಹೊಂದಿದ್ದು, ಕಲ್ಲುಗಳ ನಡುವೆ ಹರಿಯುವ ನೀರು ಮನಮೋಹಕ ದೃಶ್ಯವನ್ನು ಸೃಷ್ಟಿಸುತ್ತದೆ. ಇದು ನೈಸರ್ಗಿಕ ಸೌಂದರ್ಯದ ಖನಿ. ವಿಶೇಷವೆಂದರೆ ಇಲ್ಲಿ ಪ್ರವಾಸಿಗರು ಕೊರಕಲ್ ರೈಡ್‌ನೊಂದಿಗೆ ಜಲಪಾತದ ಸೌಂದರ್ಯವನ್ನು ಸವಿಯಬಹುದು.

Untitled design (76)

ಗಗನಚುಕ್ಕಿ ಮತ್ತು ಭರಚುಕ್ಕಿ ಜಲಪಾತಗಳು

ಗಗನಚುಕ್ಕಿ ಮತ್ತು ಭರಚುಕ್ಕಿ, ಇವು ಕರ್ನಾಟಕದ ಮಂಡ್ಯ ಜಿಲ್ಲೆಯ ಶಿವನಸಮುದ್ರದಲ್ಲಿನ ಪ್ರಸಿದ್ಧ ಜಲಪಾತಗಳು. ಕಾವೇರಿ ನದಿಯು ಇಲ್ಲಿ ಎರಡು ಭಾಗಗಳಾಗಿ ವಿಭಜನೆಯಾಗಿ ಈ ಜಲಪಾತಗಳನ್ನು ಸೃಷ್ಟಿಸಿದೆ. ಗಗನಚುಕ್ಕಿ ಎತ್ತರದಿಂದ ಧುಮುಕಿದರೆ, ಭರಚುಕ್ಕಿ ಅನೇಕ ಸಣ್ಣ ಜಲಧಾರೆಗಳಾಗಿ ಹರಿಯುತ್ತದೆ. ಇವುಗಳ ಈ ಸೌಂದರ್ಯವೇ ಪ್ರವಾಸಿಗರನ್ನು ಆಕರ್ಷಿಸುತ್ತದೆ. ಮಳೆಗಾಲದಲ್ಲಿ ಈ ಜಲಪಾತಗಳ ಸೌಂದರ್ಯ ನೂರ್ಮಡಿಯಾಗಿರುತ್ತದೆ. ಸುತ್ತಲಿನ ಹಸಿರು ಪರಿಸರ, ಬಂಡೆಗಳ ನಡುವೆ ಹರಿಯುವ ನೀರು ಮತ್ತು ಪ್ರಕೃತಿಯ ಶಾಂತ ವಾತಾವರಣ ಪ್ರವಾಸಿಗರಿಗೆ ಮನಮೋಹಕ ಅನುಭವವನ್ನು ನೀಡುತ್ತದೆ. ನೆನಪಿರಲಿ ಶಿವನಸಮುದ್ರ ಏಷ್ಯಾದ ಮೊದಲ ಜಲವಿದ್ಯುತ್ ಕೇಂದ್ರ ಸ್ಥಾಪನೆಯಾದ ಸ್ಥಳ. ಹಾಗಾಗಿ ಇದು ಇತಿಹಾಸ, ಪ್ರಕೃತಿ ಸೌಂದರ್ಯ ಒಂದೆಡೆ ನೆಲೆನಿಂತ ತಾಣ.

---

ಪ್ಯಾಕೇಜ್‌ಗಳು

ಪ್ಯಾಕೇಜ್‌ 1: ಕೃಷ್ಣಗಿರಿ ಅಣೆಕಟ್ಟು - ಹೊಗೇನಕಲ್ ಜಲಪಾತ ಪ್ರವಾಸ

ಬೆಳಗ್ಗೆ 6.00: ಯಶವಂತಪುರದ ಬಿಎಂಟಿಸಿ ಬಸ್ ನಿಲ್ದಾಣದ ಕೆಎಸ್‌ಟಿಡಿಸಿ ಬುಕಿಂಗ್ ಕೌಂಟರ್‌ನಿಂದ ನಿರ್ಗಮನ.

ಬೆಳಗ್ಗೆ 9.00 - 9.30: ಉಪಾಹಾರ

ಬೆಳಗ್ಗೆ 10.00 - 11.00: ಕೃಷ್ಣಗಿರಿ ಅಣೆಕಟ್ಟು ಭೇಟಿ

ಮಧ್ಯಾಹ್ನ 1.00 - 2.00: ಮಧ್ಯಾಹ್ನದ ಊಟ

ಮಧ್ಯಾಹ್ನ 2.00 - ಸಂಜೆ 5.00: ಹೊಗನೇಕಲ್ ಜಲಪಾತ ಭೇಟಿ

ಸಂಜೆ 5.00 - ರಾತ್ರಿ 9.00: ಬೆಂಗಳೂರಿಗೆ ಹಿಂತಿರುಗಿ

--

ಪ್ಯಾಕೇಜ್‌ 2: ಸಿಗಂದೂರು - ಜೋಗ ಜಲಪಾತ ಪ್ರವಾಸ

ದಿನ: 1

ರಾತ್ರಿ 9.00: ಯಶವಂತಪುರದ ಬಿಎಂಟಿಸಿ ಬಸ್ ನಿಲ್ದಾಣದ ಕೆಎಸ್‌ಟಿಡಿಸಿ ಬುಕಿಂಗ್ ಕೌಂಟರ್‌ನಿಂದ ನಿರ್ಗಮನ.

ದಿನ: 2

ಬೆಳಗ್ಗೆ 5.00: ಫ್ರೆಶ್ ಅಪ್ ಆಗಲು ಸಾಗರಕ್ಕೆ ಆಗಮಿಸಿ

ಬೆಳಗ್ಗೆ 6.30: ಸಾಗರದಿಂದ ನಿರ್ಗಮನ

ಬೆಳಗ್ಗೆ 7.30 - 10.00: ಹೊಳೆಬಾಗಿಲು, ದೋಣಿ ಮೂಲಕ ಶ್ರೀ ಚೌಡೇಶ್ವರಿ ದೇವಸ್ಥಾನಕ್ಕೆ ಭೇಟಿ ನೀಡಿ

ಬೆಳಗ್ಗೆ 10.00: ದರ್ಶನದ ನಂತರ ಸಿಗಂದೂರು, ಕೆಳದಿ ಮತ್ತು ಇಕ್ಕೇರಿಯಿಂದ ನಿರ್ಗಮನ

ಮಧ್ಯಾಹ್ನ 12.30 - ಸಂಜೆ 5.00: ಜೋಗ ಜಲಪಾತ - ಲಿಂಗನಮಕ್ಕಿ ಅಣೆಕಟ್ಟಿನ ಹೊರಗಿನ ನೋಟಕ್ಕೆ ಬ್ರಿಟಿಷ್ ಬಂಗಲೆಗೆ ಭೇಟಿ ನೀಡಿ. ಜಲಪಾತದ ನೋಟ ಮತ್ತು ಊಟ

ಸಂಜೆ 5.00: ಜೋಗ ಜಲಪಾತಕ್ಕೆ ಭೇಟಿ ನೀಡಿ

ರಾತ್ರಿ 8.30: ಮಾರ್ಗಮಧ್ಯೆ ಭೋಜನ

ರಾತ್ರಿ 9.00: ಶಿವಮೊಗ್ಗದಿಂದ ನಿರ್ಗಮನ

ದಿನ: 3

ಬೆಳಗ್ಗೆ 6.00: ಬೆಂಗಳೂರಿಗೆ ಆಗಮಿಸಿ ಪ್ರವಾಸ ಕೊನೆಗೊಳ್ಳುತ್ತದೆ

--

ಪ್ಯಾಕೇಜ್‌ 2: ಶಿವನಸಮುದ್ರ – ತಲಕಾಡು ಪ್ರವಾಸ

ಬೆಳಗ್ಗೆ 6.30: ಯಶವಂತಪುರದ ಬಿಎಂಟಿಸಿ ಬಸ್ ನಿಲ್ದಾಣದ ಕೆಎಸ್‌ಟಿಡಿಸಿ ಬುಕಿಂಗ್ ಕೌಂಟರ್‌ನಿಂದ ನಿರ್ಗಮನ.

ಬೆಳಗ್ಗೆ 9.00 - 9.30: ಮಾರ್ಗಮಧ್ಯೆ ಉಪಾಹಾರ

ಬೆಳಗ್ಗೆ 9.30: ಚನ್ನಪಟ್ಟಣದಿಂದ ನಿರ್ಗಮನ

ಬೆಳಗ್ಗೆ 11.00 - ಮಧ್ಯಾಹ್ನ 12.00: ಗಗನಚುಕ್ಕಿ ಜಲಪಾತಕ್ಕೆ ಭೇಟಿ ನೀಡಿ

ಮಧ್ಯಾಹ್ನ 12.00: ಗಗನಚುಕ್ಕಿಯಿಂದ ನಿರ್ಗಮನ

ಮಧ್ಯಾಹ್ನ 12.30 - 1.00: ಮದ್ಯರಂಗ ದೇವಸ್ಥಾನ ಭರಚುಕ್ಕಿಗೆ ಭೇಟಿ

ಮಧ್ಯಾಹ್ನ 1.15 – 2.00: ಮಯೂರ ಭರಚುಕ್ಕಿಯಲ್ಲಿ ಊಟ

ಮಧ್ಯಾಹ್ನ 2.00 – 3.30: ಭರಚುಕ್ಕಿ ಜಲಪಾತ ದರ್ಶನ

ಮಧ್ಯಾಹ್ನ 3.30: ಭರಚುಕ್ಕಿಯಿಂದ ನಿರ್ಗಮನ

ಸಂಜೆ 4.00 - 6.00: ತಲಕಾಡು ವೈದ್ಯನಾಥೇಶ್ವರ ದೇವಸ್ಥಾನಕ್ಕೆ ಭೇಟಿ

ಸಂಜೆ 6.00: ತಲಕಾಡುವಿನಿಂದ ನಿರ್ಗಮನ

ರಾತ್ರಿ 9.00: ಬೆಂಗಳೂರಿಗೆ ಮರಳಿ ಪ್ರವಾಸ ಕೊನೆಗೊಳ್ಳುತ್ತದೆ

--
ಇಲ್ಲಿ ಗಮನಿಸಿ

ಕೆಎಸ್‌ಟಿಡಿಸಿ ಬುಕ್ ಮಾಡುವವರಿಗೆ ವಿಶೇಷ ಅವಕಾಶಗಳಿವೆ.

ಡಿಲಕ್ಸ್ ಎಸಿ ಬಸ್‌ನಲ್ಲಿ ಆರಾಮದಾಯಕ ಮತ್ತು ಸುಖಕರ ಪ್ರಯಾಣ.

ಆಯ್ಕೆ ಮಾಡಿಕೊಂಡ ಪ್ಯಾಕೇಜ್​ ಅನ್ವಯ ಪ್ರವಾಸ

ರಾಜ್ಯ, ಕೇಂದ್ರ ಮತ್ತು ಸಾರ್ವಜನಿಕ ವಲಯದ ಉದ್ಯೋಗಿಗಳಿಗೆ ಎಲ್‌ಟಿಸಿ ಸೌಲಭ್ಯ

ಕೆಎಸ್‌ಟಿಡಿಸಿ ನಿಮ್ಮ ಆಯ್ಕೆಯಾಗಲಿ

ಕೆಎಸ್‌ಟಿಡಿಸಿಯ ಪ್ಯಾಕೇಜ್ ಬಜೆಟ್ ಸ್ನೇಹಿಯಾಗಿದೆ.

ಪ್ರವಾಸಿಗರಿಗೆ ಆರಾಮದಾಯಕ, ಸುರಕ್ಷಿತ ಮತ್ತು ಸುಸಜ್ಜಿತ ಯೋಜಿತ ಪ್ರವಾಸದ ಭರವಸೆಯನ್ನು ನೀಡುತ್ತದೆ.

ಆರಾಮದಾಯಕ ಪ್ರಯಾಣ: ಆಧುನಿಕ ಬಸ್‌ಗಳು ಮತ್ತು ಅನುಭವಿ ಚಾಲಕರೊಂದಿಗೆ ಇಡೀ ದಿನ ಸುರಕ್ಷಿತ ಪ್ರಯಾಣ ಮಾಡಬಹುದು.

ವಿಶೇಷ ಗೈಡ್‌ಗಳು: ತಾಣಗಳ ಇತಿಹಾಸ ಮತ್ತು ಮಹತ್ವವನ್ನು ವಿವರಿಸುವ ತಜ್ಞ ಗೈಡ್​ಗಳು ಪ್ರವಾಸಿಗರೊಂದಿಗೆ ಇರುತ್ತಾರೆ.

ಸಮಗ್ರ ಯೋಜನೆ: ಪ್ಯಾಕೇಜ್‌ನಲ್ಲಿ ಇರುವ ಎಲ್ಲ ತಾಣಗಳನ್ನೂ ಮನತಣಿಯುವವರೆಗೂ ನೋಡಬಹುದು. ಹಿತಾನುಭವ ಪಡೆಯಬಹುದು. ಸಮಯದ ಪ್ಲ್ಯಾನಿಂಗ್ ಇಲ್ಲಿ ಅತ್ಯಂತ ಶಿಸ್ತಿನಿಂದ ರೂಪಿಸಿರಲಾಗುತ್ತದೆ.

ಕೈಗೆಟುಕುವ ಬೆಲೆ: ಎಲ್ಲರಿಗೂ ಒಗ್ಗುವ, ಮಧ್ಯಮ ವರ್ಗದವರ ಕನಸು ನನಸು ಮಾಡುವ, ಕೈಗೆಟುಕುವ ದರದಲ್ಲಿ ಪ್ರಯಾಣ ಸೇವೆ ಸಿಗುತ್ತದೆ. ಮತ್ತೇನು ಯೋಚನೆ ಮಾಡ್ತಿದ್ದೀರಿ? ಕೆಎಸ್‌ಟಿಡಿಸಿ ನಿಮ್ಮ ಪ್ರವಾಸ ಸಂಗಾತಿ. ಈಗಲೇ ಬುಕ್ ಮಾಡಿ. ಹೊರಡಿ. ಜಗತ್ತು ಕೈ ಬೀಸಿ ಕರೆಯುತ್ತಿದೆ.

ಸಂಪರ್ಕ:
Yogesh. MK

Manager (Tours)

Mob No: +91 960 6987 822 | Email ID: tour.manager@kstdc.co

Karnataka State Tourism Development Corporation Ltd. (KSTDC)

Untitled design (73)

ಮಯೂರ ಭರಚುಕ್ಕಿಯಲ್ಲಿ ವಾಸ್ತವ್ಯವೂ ಪ್ರವಾಸ

ಪ್ರವಾಸಕ್ಕೆ ಬಂದವರು ಅಲ್ಲಿನ ಮಯೂರಕ್ಕೆ ಬರದಿದ್ದರೆ ಹೇಗೆ? ಊರಿಗೆ ಬಂದವರು ನೀರಿಗೆ ಬರಲಿಲ್ಲ ಅನ್ನುವಂಥಾಗುತ್ತೆ ಅಷ್ಟೆ. ಮಯೂರದ ಆತಿಥ್ಯ ಪ್ರವಾಸಿಗರಿಗಾಗಿಯೇ ಹೇಳಿ ಮಾಡಿಸಿದಂತಿದೆ. ಕರ್ನಾಟಕದ ರಾಜ್ಯಾದ್ಯಂತ ಮಯೂರ ಮನೆ ಮಾಡಿದೆ. ಅದರ ಉದ್ದೇಶ ಪ್ರವಾಸಿಗರಿಗೆ ನೈಜ ಸ್ಥಳೀಯತೆಯ ಅನುಭವ ನೀಡುವುದು. ಪ್ರವಾಸಿಗರನ್ನು ಸತ್ಕರಿಸುವುದು. ಹತ್ತಾರು ವರ್ಷಗಳಿಂದ ಈ ಇಂಡಸ್ಟ್ರಿಯಲ್ಲಿ ಕಾರ್ಯ ನಿರ್ವಹಿಸಿದೆ. ಪ್ರವಾಸಿಗರನ್ನು ನೋಡಿಕೊಳ್ಳುವುದರಲ್ಲಿ ಮಯೂರದ್ದು ಪಳಗಿದ ಕೈ.

ಹೆರಿಟೇಜ್‌ ಸೈಟ್ಸ್‌, ಕೋಟೆ- ಬೆಟ್ಟಗಳಲ್ಲೂ ನೆಲೆನಿಂತಿರುವ ಮಯೂರ ಹೊಟೇಲ್‌ಗಳು, ಪರಿಸರದ ಮಾನ್‌ಸೂನ್‌ ರಾಗ ಆಲಿಸಲು, ಆಸ್ವಾಧಿಸಲು ಹೇಳಿ ಮಾಡಿಸಿದಂಥ ತಾಣಗಳು. ಈಬಾರಿ ನೀವು ಕಾವೇರಿ ಸೃಷ್ಟಿಯ ಭರಚುಕ್ಕಿ ಜಲಪಾತದ ವೀಕ್ಷಣೆಗೆ ಹೋದಾಗ ಅಲ್ಲೇ ಇರುವ ʻಮಯೂರ ಭರಚುಕ್ಕಿ, ಶಿವನ ಸಮುದ್ರʼದಲ್ಲಿ ಉಳಿಯಿರಿ.

ಈ ಹೊಟೇಲ್‌ನಲ್ಲಿ ವಾಸ್ತವ್ಯಕ್ಕಾಗಿ ನೀವು ಯೋಚಿಸುತ್ತಿದ್ದರೆ ಆಯ್ಕೆಗಾಗಿ 4 ಎಸಿ ಡಬಲ್ ರೂಮ್‌ಗಳು, 1 ಸೂಟ್ ರೂಮ್‌ ಜತೆಗೆ ಬಾಲ್ಕನಿ ವ್ಯವಸ್ಥೆಯನ್ನು ಹೊಂದಿರುವ 3 ಎಸಿ ಡಿಲಕ್ಸ್ ಎಕ್ಸಿಕ್ಯೂಟಿವ್ ರೂಮ್‌ಗಳಿವೆ. ಥೇಟ್‌ ಮನೆಯಂತೆ ಸ್ನೇಹಶೀಲ ವಾತಾವರಣ ಇಲ್ಲಿರುತ್ತದೆ. ಪ್ರಕೃತಿಯೊಂದಿಗೆ ವಾಸ್ತವ್ಯವನ್ನೂ ಪ್ರವಾಸವನ್ನಾಗಿ ಮಾಡಿ. ಎಂಜಾಯ್‌ ಮಾಡಿ.

Admin

Admin

Pravasi Prapancha – A pioneering initiative led by Vishweshwar Bhat, the esteemed journalist and head of the Vishwavani Group. It is the first and only travel-focused publication in Kannada journalism, dedicated exclusively to news, information, and travel narratives about various destinations. The digital media counterpart of this venture is Pravasi Prapancha Digital Channel, which brings travel-related news from across the state, country, and world. It features fascinating insights, traveler experiences, interviews related to travel, entertainment segments, and much more. Editor-in-Chief: Shri Vishweshwar Bhat

ದೇಶ ಸುತ್ತಬೇಕಿಲ್ಲ, ಕರ್ನಾಟಕದಲ್ಲೇ ಇವೆ ಅನೇಕ ಡಾಲ್ಫಿನ್‌ ತಾಣಗಳು..

Read Previous

ದೇಶ ಸುತ್ತಬೇಕಿಲ್ಲ, ಕರ್ನಾಟಕದಲ್ಲೇ ಇವೆ ಅನೇಕ ಡಾಲ್ಫಿನ್‌ ತಾಣಗಳು..

ನೋಡಬನ್ನಿ ರಾಮನಗರ..ಇತಿಹಾಸವನ್ನು ಒಡಲಲ್ಲಿ  ಹೊತ್ತ ಬೆಟ್ಟಗಳ ತವರೂರ..

Read Next

ನೋಡಬನ್ನಿ ರಾಮನಗರ..ಇತಿಹಾಸವನ್ನು ಒಡಲಲ್ಲಿ ಹೊತ್ತ ಬೆಟ್ಟಗಳ ತವರೂರ..