Tuesday, July 14, 2026
Tuesday, July 14, 2026

ಪ್ಯಾಡಿ ಜಾಗತಿಕ 'ಅಂಬಾಸ್ಸಾಡೈವರ್' ಶೃಂಗಸಭೆ

ಗ್ರೇಟ್ ಬ್ಯಾರಿಯರ್ ರೀಫ್‌ನಲ್ಲಿ ಪ್ಯಾಡಿ ಜಾಗತಿಕ 'ಅಂಬಾಸ್ಸಾಡೈವರ್' ಶೃಂಗಸಭೆ ನಡೆಯಲಿದ್ದು, ಭಾರತದಿಂದ ಆಕಾಶ್ ಮಲ್ಹೋತ್ರಾ, ಶಾನ್ ಸಿಂಗ್ ಭಾಗವಹಿಸಲಿದ್ದಾರೆ.

ವಿಶ್ವದ ಅತಿದೊಡ್ಡ ಸ್ಕೂಬಾ ಡೈವಿಂಗ್ ತರಬೇತಿ ಸಂಸ್ಥೆಯಾದ PADI (Professional Association of Diving Instructors) ತನ್ನ ಇತಿಹಾಸದಲ್ಲೇ ಮೊದಲ ಬಾರಿಗೆ 'PADI AmbassaDiver Summit' ಎಂಬ ಜಾಗತಿಕ ಶೃಂಗಸಭೆಯನ್ನು ಆಯೋಜಿಸುತ್ತಿದೆ.

ಈ ವಿಶೇಷ ಕಾರ್ಯಕ್ರಮವು ಈ ವರ್ಷದ ಅಂತ್ಯದ ವೇಳೆಗೆ ಆಸ್ಟ್ರೇಲಿಯಾದ ಕ್ವೀನ್ಸ್‌ಲ್ಯಾಂಡ್‌ನ ಕೈರ್ನ್ಸ್ (Cairns) ಮತ್ತು ವಿಶ್ವ ಪ್ರಸಿದ್ಧ ಗ್ರೇಟ್ ಬ್ಯಾರಿಯರ್ ರೀಫ್ ನಲ್ಲಿ ನಡೆಯಲಿದೆ.

ಈ ಶೃಂಗಸಭೆಯಲ್ಲಿ ವಿಶ್ವದ ವಿವಿಧ ದೇಶಗಳ ಡೈವರ್‌ಗಳು, ಸಾಹಸ ಪ್ರವಾಸಿಗರು, ಸಮುದ್ರ ಸಂರಕ್ಷಣಾ ಹೋರಾಟಗಾರರು ಹಾಗೂ ಗಣ್ಯ ವ್ಯಕ್ತಿಗಳು ಭಾಗವಹಿಸಲಿದ್ದು, ಭಾರತವನ್ನು ಸಾಹಸಿ ಹಾಗೂ ಟ್ರಾವೆಲ್ ಕಂಟೆಂಟ್ ಕ್ರಿಯೇಟರ್ ಆಕಾಶ್ ಮಲ್ಹೋತ್ರಾ ಮತ್ತು ಖ್ಯಾತ ಡಿಜೆ ಶಾನ್ ಸಿಂಗ್ ಪ್ರತಿನಿಧಿಸಲಿದ್ದಾರೆ.

ಇದನ್ನೂ ಓದಿ: ಹಿಮಾಚಲ ಟಾಯ್‌ ಟ್ರೇನ್‌ ಪುನರಾರಂಭ

ವಿಶ್ವದ ಅತಿದೊಡ್ಡ ಹವಳದ ಬಂಡೆಯಾದ ಗ್ರೇಟ್ ಬ್ಯಾರಿಯರ್ ರೀಫ್‌ನಲ್ಲಿ ಡೈವಿಂಗ್ ಅನುಭವ, ಸಮುದ್ರ ಸಂರಕ್ಷಣಾ ಚಟುವಟಿಕೆಗಳು, ಸ್ಥಳೀಯ ಆದಿವಾಸಿ ಸಂಸ್ಕೃತಿಯ ಪರಿಚಯ ಹಾಗೂ ಸುಸ್ಥಿರ ಪ್ರವಾಸೋದ್ಯಮದ ಕುರಿತು ವಿಶೇಷ ಕಾರ್ಯಕ್ರಮಗಳನ್ನು ನಡೆಸಲಾಗುತ್ತದೆ.

ಈ ಶೃಂಗಸಭೆ PADI ಸಂಸ್ಥೆಯ 60ನೆಯ ವಾರ್ಷಿಕೋತ್ಸವ ಹಾಗೂ ಗ್ರೇಟ್ ಬ್ಯಾರಿಯರ್ ರೀಫ್‌ಗೆ ಪ್ರವೇಶ ದ್ವಾರವೆಂದೇ ಪ್ರಸಿದ್ಧವಾಗಿರುವ ಕೈರ್ನ್ಸ್ ನಗರದ 150ನೆಯ ವಾರ್ಷಿಕೋತ್ಸವದ ಅಂಗವಾಗಿಯೂ ವಿಶೇಷ ಮಹತ್ವ ಪಡೆದುಕೊಂಡಿದೆ.

PADI ವರ್ಲ್ಡ್‌ವೈಡ್ ಅಧ್ಯಕ್ಷ ಹಾಗೂ ಸಿಇಒ ಡ್ರೂ ರಿಚರ್ಡ್ಸನ್ ಮಾತನಾಡಿ, ಕಳೆದ ಆರು ದಶಕಗಳಿಂದ PADI ಲಕ್ಷಾಂತರ ಜನರಿಗೆ ಸಮುದ್ರದ ಅದ್ಭುತ ಲೋಕವನ್ನು ಪರಿಚಯಿಸಿ, ಅದನ್ನು ಸಂರಕ್ಷಿಸುವ ಜವಾಬ್ದಾರಿಯನ್ನು ಬೆಳೆಸಿದೆ ಎಂದಿದ್ದಾರೆ.

ಭಾರತದ ಪ್ರತಿನಿಧಿಯಾಗಿರುವ ಶಾನ್ ಸಿಂಗ್, ಸಮುದ್ರ ಸಂರಕ್ಷಣೆಗೆ ಶ್ರಮಿಸುತ್ತಿರುವ ಜಾಗತಿಕ ಸಮುದಾಯದ ಸದಸ್ಯರನ್ನು ನೇರವಾಗಿ ಭೇಟಿಯಾಗುವ ಅವಕಾಶ ಸಿಕ್ಕಿರುವುದು ಸಂತಸದ ಸಂಗತಿ ಎಂದಿದ್ದಾರೆ.

ಕಾರ್ಯಕ್ರಮದ ಆಯೋಜಕರು:

ಈ ಕಾರ್ಯಕ್ರಮವನ್ನು Tourism Tropical North Queensland, Tourism and Events Queensland, Neuro ಹಾಗೂ Garmin ಸಂಸ್ಥೆಗಳ ಸಹಭಾಗಿತ್ವದಲ್ಲಿ ಆಯೋಜಿಸಲಾಗುತ್ತಿದೆ.

Admin

Admin

Pravasi Prapancha – A pioneering initiative led by Vishweshwar Bhat, the esteemed journalist and head of the Vishwavani Group. It is the first and only travel-focused publication in Kannada journalism, dedicated exclusively to news, information, and travel narratives about various destinations. The digital media counterpart of this venture is Pravasi Prapancha Digital Channel, which brings travel-related news from across the state, country, and world. It features fascinating insights, traveler experiences, interviews related to travel, entertainment segments, and much more. Editor-in-Chief: Shri Vishweshwar Bhat

ಮೇ 1 ರಿಂದ ವಿದೇಶಿ ಪ್ರವಾಸಿಗರಿಗೆ ಥಾಯ್ಲೆಂಡ್‌ನಲ್ಲಿ ಡಿಜಿಟಲ್ ಆಗಮನ ಕಾರ್ಡ್ ಕಡ್ಡಾಯ

Read Previous

ಮೇ 1 ರಿಂದ ವಿದೇಶಿ ಪ್ರವಾಸಿಗರಿಗೆ ಥಾಯ್ಲೆಂಡ್‌ನಲ್ಲಿ ಡಿಜಿಟಲ್ ಆಗಮನ ಕಾರ್ಡ್ ಕಡ್ಡಾಯ

ಬೇಸಿಗೆಯ ಪ್ರವಾಸಕ್ಕಿದು ಸೂಕ್ತ ಸಮಯ; ತೆರಳುವ ಮುನ್ನ ಪೊಲೀಸರ ಈ ಸಲಹೆಗಳನ್ನು ಪಾಲಿಸಿ

Read Next

ಬೇಸಿಗೆಯ ಪ್ರವಾಸಕ್ಕಿದು ಸೂಕ್ತ ಸಮಯ; ತೆರಳುವ ಮುನ್ನ ಪೊಲೀಸರ ಈ ಸಲಹೆಗಳನ್ನು ಪಾಲಿಸಿ