ಡ್ರೋನ್ ಎಂಬ ಹಾರುವ ಕ್ಯಾಮೆರಾ
ಡ್ರೋನ್ ಛಾಯಾಗ್ರಹಣ ಕಲಿಯಲು ಬಯಸುವವರಿಗೆ, ಕಡಿಮೆ ಬಜೆಟ್ ನಲ್ಲಿ DJI Mini 4K ಆರಂಭಿಕ ಆಯ್ಕೆ. ತೂಕ ಸರಾಸರಿ 250 ಗ್ರಾಂ. ಈ ಡ್ರೋನ್ 4K ವೀಡಿಯೊ ರೆಕಾರ್ಡಿಂಗ್ ಜೊತೆಗೆ ಚಲನೆಯಲ್ಲಿದ್ದಾಗ ಸ್ಥಿರವಾದ ದೃಶ್ಯಗಳನ್ನು ಸೆರೆಹಿಡಿಯುತ್ತದೆ. ಇದು ಹಗುರಾಗಿರುವುದರಿಂದ ಪ್ರವಾಸದ ವೇಳೆಗೆ, ಲ್ಯಾಂಡ್‌ಸ್ಕೇಪ್ ಚಿತ್ರೀಕರಣಗಳಿಗೆ ಉಪಯುಕ್ತವಾಗಿದೆ. GPS ಆಧಾರಿತ ಹಾರಾಟ ಮತ್ತು ಸುಲಭ ನಿಯಂತ್ರಣ ವ್ಯವಸ್ಥೆ ಇದರಲ್ಲಿದೆ. ಇದರ ಅಂದಾಜು ಬೆಲೆ 18 ರಿಂದ 25ಸಾವಿರ.
- ಹರ್ಷದ್ ಉದಯ್ ಕಾಮತ್
ಇತ್ತೀಚಿಗೆ ಛಾಯಾಗ್ರಹಣದ ಜಗತ್ತಿನಲ್ಲಿ ಡ್ರೋನ್ ಒಂದು ಹೊಸ ಕ್ರಾಂತಿಯನ್ನೇ ಸೃಷ್ಟಿಸಿದೆ. ಹಿಂದೆ ಹೆಲಿಕಾಪ್ಟರ್ ಅಥವಾ ಕ್ರೇನ್‌ಗಳ ಸಹಾಯದಿಂದ ಮಾಡಬೇಕಾಗಿದ್ದ ವೈಮಾನಿಕ ಚಿತ್ರೀಕರಣವನ್ನು ಇಂದು ಸಣ್ಣ ಡ್ರೋನ್‌ಗಳ ಮೂಲಕವೇ ಸಲೀಸಾಗಿ ಮಾಡಬಹುದು. ಇಂದಿಗೆ ಮದುವೆ ಸಮಾರಂಭಗಳು, ಪ್ರವಾಸಿ ತಾಣಗಳು ಮತ್ತು ಸಿನಿಮಾಟೋಗ್ರಫಿಯಲ್ಲಿ ಡ್ರೋನ್‌ಗಳ ಬಳಕೆ ಹೆಚ್ಚುತ್ತಿದೆ. ನೆಲ ಮಟ್ಟದಿಂದ ಕಾಣದ ದೃಷ್ಟಿಕೋನವನ್ನು ಆಗಸದಿಂದ ತೋರಿಸುವುದೇ ಡ್ರೋನ್ ಛಾಯಾಗ್ರಹಣದ ವಿಶೇಷತೆ.
ಇದನ್ನೂ ಓದಿ: ಚೀನಾದ ಮಹಾಗೋಡೆಯಲ್ಲಿ ಆಹಾರಕ್ಕೂ ಡ್ರೋನ್ ಸೇವೆ !
ಡ್ರೋನ್ ಕಲಿಯಲು ಬಯಸುವವರು ಮೊದಲಿಗೆ ಅದರ ನಿಯಂತ್ರಣದ ಕೌಶಲ್ಯವನ್ನು ಅರ್ಥೈಸಿಕೊಳ್ಳಬೇಕು. ಡ್ರೋನ್‌ನ ಎತ್ತರ, ವೇಗ, ಮತ್ತು ಬ್ಯಾಟರಿ ಮಟ್ಟವನ್ನು ಗಮನಿಸುವ ಅಭ್ಯಾಸ ಅಗತ್ಯ. ಜತೆಗೆ ಸುರಕ್ಷಿತ ಲ್ಯಾಂಡಿಂಗ್‌ಗು ಅಷ್ಟೇ ಪ್ರಾಮುಖ್ಯವನ್ನು ಕೊಡಬೇಕಾಗುತ್ತದೆ. ಭಾರತದಲ್ಲಿ ಡ್ರೋನ್ ಹಾರಿಸುವ ಮೊದಲು DGCA ನಿಯಮಗಳನ್ನು ಪರಿಶೀಲಿಸಿ, ಅನುಮತಿಯಿಲ್ಲದ ಕಡೆ ಹಾರಾಟ ನಡೆಸಬೇಡಿ.

ಡ್ರೋನ್ ಛಾಯಾಗ್ರಹಣ ಕಲಿಯಲು ಬಯಸುವವರಿಗೆ, ಕಡಿಮೆ ಬಜೆಟ್ ನಲ್ಲಿ DJI Mini 4K ಆರಂಭಿಕ ಆಯ್ಕೆ. ತೂಕ ಸರಾಸರಿ 250 ಗ್ರಾಂ. ಈ ಡ್ರೋನ್ 4K ವೀಡಿಯೊ ರೆಕಾರ್ಡಿಂಗ್ ಜೊತೆಗೆ ಚಲನೆಯಲ್ಲಿದ್ದಾಗ ಸ್ಥಿರವಾದ ದೃಶ್ಯಗಳನ್ನು ಸೆರೆಹಿಡಿಯುತ್ತದೆ. ಇದು ಹಗುರಾಗಿರುವುದರಿಂದ ಪ್ರವಾಸದ ವೇಳೆಗೆ, ಲ್ಯಾಂಡ್‌ಸ್ಕೇಪ್ ಚಿತ್ರೀಕರಣಗಳಿಗೆ ಉಪಯುಕ್ತವಾಗಿದೆ. GPS ಆಧಾರಿತ ಹಾರಾಟ ಮತ್ತು ಸುಲಭ ನಿಯಂತ್ರಣ ವ್ಯವಸ್ಥೆ ಇದರಲ್ಲಿದೆ. ಇದರ ಅಂದಾಜು ಬೆಲೆ 18 ರಿಂದ 25ಸಾವಿರ.
ವೃತ್ತಿಪರ ಛಾಯಾಗ್ರಹಣದಲ್ಲಿ ಉತ್ತಮ ಗುಣಮಟ್ಟದ ಔಟ್‌ಪುಟ್ ನೀಡುವ ಡ್ರೋನ್‌ಗಳಲ್ಲಿ DJI Mini 4 Proನ್ನು ಆರಿಸಿಕೊಳ್ಳಬಹುದು. 48 ಮೆಗಾಪಿಕ್ಸೆಲ್ನ ಈ ಡ್ರೋನ್, 4K ವೀಡಿಯೊ ರೆಕಾರ್ಡಿಂಗ್ ಹಾಗೂ ಆಕ್ಟಿವ್ ಟ್ರ್ಯಾಕ್ 360ಡಿಗ್ರಿಯಿಂದ ತನ್ನೆಲ್ಲ ದಿಕ್ಕುಗಳಲ್ಲಿನ ಅಡೆತಡೆ ಗಳನ್ನು ಗುರುತಿಸುವ ವ್ಯವಸ್ಥೆ ಹೊಂದಿದೆ. ವ್ಯಕ್ತಿ ಅಥವಾ ವಾಹನವನ್ನು ಹಿಂಬಾಲಿಸುವಂತಹ ವೈಶಿಷ್ಟ್ಯ ಇದರಲ್ಲಿದೆ. ಮದುವೆಗಳಿಗೆ, ಪ್ರೀ-ವೆಡ್ಡಿಂಗ್ ಶೂಟ್‌ಗಳಿಗೆ ಇದು ಅತ್ಯುತ್ತಮ. ತೂಕ 250 ಗ್ರಾಂ ಹೊಂದಿದೆ. ಇದರ ಮಾರುಕಟ್ಟೆ ಬೆಲೆ 80ಸಾವಿರದಿಂದ 1ಲಕ್ಷದ 35ಸಾವಿರ.
ಹಾಗೆಯೇ ಚಿತ್ರೀಕರಣದಲ್ಲಿ ಹೆಚ್ಚಿನ ಸೃಜನಶೀಲತೆ ಬಯಸುವವರಿಗೆ DJI Air 3S ಮಾರುಕಟ್ಟೆಯಲ್ಲಿ ಲಭ್ಯವಿದೆ. ಇದು 50 ಮೆಗಾಪಿಕ್ಸೆಲ್‌ನ ವೈಡ್ ಆಂಗಲ್ ಕ್ಯಾಮೆರಾ ಮತ್ತು 48 ಮೆಗಾಪಿಕ್ಸೆಲ್‌ನ ಟೆಲಿಫೋಟೋ ಕ್ಯಾಮೆರಾವನ್ನು ಒಳಗೊಂಡಿದೆ. 700ಗ್ರಾಂ ತೂಕದಾಗಿದ್ದು, 4K ವಿಡಿಯೋ, ಅಡೆತಡೆ ಗುರುತಿಸುವ ವ್ಯವಸ್ಥೆ, ಸ್ಮಾರ್ಟ್ ಟ್ರ್ಯಾಕಿಂಗ್ ನಂತಹ ವಿಶೇಷತೆಗಳ ಜೊತೆಗೆ, ಒಮ್ಮೆಯ ಚಾರ್ಜ್ ಗೆ ಗರಿಷ್ಠ 45 ನಿಮಿಷಗಳವರೆಗೆ ಹಾರಾಟ ನಡೆಸುತ್ತದೆ. ಇದರಲ್ಲಿ ಬರ್ಡ್ಸ್-ಐ-ವ್ಯೂ, ಟಾಪ್ ಶಾಟ್ ಮತ್ತು ಸ್ಲೋ-ಮೋ ದೃಶ್ಯಗಳನ್ನು ನಿಖರವಾಗಿ ಸೆರೆಹಿಡಿಯಬಹುದು. ಅಂದಾಜು ಮೊತ್ತ 1ಲಕ್ಷದ 50 ಸಾವಿರದಿಂದ 1ಲಕ್ಷದ 80ಸಾವಿರ.
ಪ್ರೀಮಿಯಂ ಡ್ರೋನ್ ಆಸಕ್ತಿ ಹೊಂದಿರುವವರಿಗೆ DJI Mavic 4 Pro ಸೂಕ್ತ. ಇದರ ಪ್ರಮುಖ ಆಕರ್ಷಣೆ ಹೆಸ್ಸಲ್ ಬ್ಲೇಡ್ ಲೆನ್ಸಗಳು. ಇದು ಮುಖ್ಯ ಕ್ಯಾಮೆರಾದ ಲೆನ್ಸಾಗಿ ಕಾರ್ಯನಿರ್ವಹಿಸುತ್ತದೆ. ಇದರಲ್ಲಿ 100 ಮೆಗಾಪಿಕ್ಸೆಲ್ ಕ್ಯಾಮೆರಾ ಸೇರಿದಂತೆ ಮೂರು ವಿಭಿನ್ನ ಕ್ಯಾಮೆರಾಗಳಿವೆ. 6K ವೀಡಿಯೊ ಸಾಮರ್ಥ್ಯ, ಹೆಚ್ಚಿನ ಡೈನಾಮಿಕ್ ರೇಂಜ್, AI ಸುಧಾರಿತ ವ್ಯವಸ್ಥೆ, 360ಡಿಗ್ರಿ ತಿರುಗಿಸಬಹುದಾದ ಕ್ಯಾಮೆರಾವಿರುವುದರಿಂದ ವಿಶಿಷ್ಟ ಕೋನಗಳಲ್ಲಿ ಚಿತ್ರೀಕರಣ ಮಾಡಬಹುದಾಗಿದೆ. ಜಾಹೀರಾತು, ಐಷಾರಾಮಿ ಮದುವೆ ಚಿತ್ರೀಕರಣ, ಪ್ರವಾಸೋದ್ಯಮ ಮತ್ತು ಚಲನಚಿತ್ರ ನಿರ್ಮಾಣದಂತಹ ಕೆಲಸಗಳಲ್ಲಿ ಇದಕ್ಕೆ ಬೇಡಿಕೆ ಜಾಸ್ತಿ. ತೂಕ ಸರಾಸರಿ 1 ಕೆಜಿ, ಬೆಲೆ 2ಲಕ್ಷದ 70ಸಾವಿರದ ಆಸುಪಾಸು.