Monday, March 23, 2026
Monday, March 23, 2026

ಬ್ರಾಂಡೆಡ್ ಸಾರ್ವಜನಿಕ ಶೌಚಾಲಯ ಸಂಕೀರ್ಣಕ್ಕೆ ಕರ್ನಾಟಕ ಸರಕಾರ ಚಾಲನೆ

ಲೆವಾಟೊ ಬೆಂಗಳೂರು ಮೂಲದ ವಿಶೇಷ ಸಂಸ್ಥೆಯಾಗಿದ್ದು, ಆಧುನಿಕ ಸಾರ್ವಜನಿಕ ನೈರ್ಮಲ್ಯ ಮೂಲಸೌಕರ್ಯಗಳ ವಿನ್ಯಾಸ, ನಿರ್ಮಾಣ ಮತ್ತು ನಿರ್ವಹಣೆಯ ಮೇಲೆ ಗಮನ ನೀಡುತ್ತದೆ. ಭಾರತದಾದ್ಯಂತ ಸಾರ್ವಜನಿಕ ಶೌಚಾಲಯ ಸೇವೆಗಳನ್ನು ವೃತ್ತಿಪರಗೊಳಿಸುವುದು ಮತ್ತು ಗುಣಮಟ್ಟವನ್ನು ಕಾಯ್ದುಕೊಳ್ಳುವುದು ಈ ಸಂಸ್ಥೆಯ ಮುಖ್ಯ ಉದ್ದೇಶ.

ಹಂಪಿಯ ಪ್ರತಿಷ್ಠಿತ ವಿರೂಪಾಕ್ಷ ದೇವಾಲಯದ ಆವರಣದಲ್ಲಿ 'ಲೆವಾಟೊ' (LAVATO) ಬ್ರಾಂಡೆಡ್ ಸಾರ್ವಜನಿಕ ಶೌಚಾಲಯ ಮತ್ತು ಸೌಲಭ್ಯ ಕೇಂದ್ರವನ್ನು ಶುಕ್ರವಾರ (ಮಾರ್ಚ್ 20, 2026) ವಿಜಯನಗರ ಜಿಲ್ಲಾಧಿಕಾರಿ ಶ್ರೀಮತಿ ಕವಿತಾ ಮಲ್ಲಿಕೇರಿ, ಉದ್ಘಾಟನೆ ಮಾಡಲಾಯಿತು. ಈ ಸಂದರ್ಭದಲ್ಲಿ ಸಹಾಯಕ ಆಯುಕ್ತರಾದ ವಿವೇಕಾನಂದ ಮತ್ತು ಹಂಪಿ ವಿಶ್ವ ಪರಂಪರೆ ಪ್ರದೇಶ ನಿರ್ವಹಣಾ ಪ್ರಾಧಿಕಾರದ ಆಯುಕ್ತ ರಮೇಶ್ ಉಪಸ್ಥಿತರಿದ್ದರು.

Untitled design (41)

ಕಾರ್ಯಕ್ರಮದಲ್ಲಿ ಬಿಎಂಎಂ ಇಸ್ಪಾಟ್ ಲಿಮಿಟೆಡ್‌ನ ಮಾನವ ಸಂಪನ್ಮೂಲ ಮತ್ತು ಸಿಎಸ್‌ಆರ್ ವಿಭಾಗದ ಮುಖ್ಯಸ್ಥರಾದ ಗಣೇಶ್ ಹೆಗಡೆ, ಅರ್ಜುನ್ ಟೂರ್ಸ್ ವ್ಯವಸ್ಥಾಪಕ ನಿರ್ದೇಶಕರಾದ ರವಿ, ಮತ್ತು ಲೆವಾಟೊ ಸಂಸ್ಥೆಯ ಸ್ಥಾಪಕ ಮತ್ತು ವ್ಯವಸ್ಥಾಪಕ ನಿರ್ದೇಶಕರಾದ ನವೀನ್ ಸಿಂಗ್ ಸೇರಿದಂತೆ ಪ್ರಮುಖರು ಭಾಗವಹಿಸಿದ್ದರು.

ಕರ್ನಾಟಕ ಸರಕಾರ, ಹಂಪಿ ನಿರ್ವಹಣಾ ಪ್ರಾಧಿಕಾರ ಮತ್ತು ಭಾರತೀಯ ಪುರಾತತ್ವ ಸರ್ವೇಕ್ಷಣಾ ಇಲಾಖೆಯ ಸಹಯೋಗದೊಂದಿಗೆ ಈ ಯೋಜನೆಯನ್ನು ಕೈಗೊಳ್ಳಲಾಗಿದೆ. ಪಾರಂಪರಿಕ ಸಂರಕ್ಷಣಾ ನಿಯಮಗಳನ್ನು ಪಾಲಿಸುತ್ತಲೇ ಪ್ರವಾಸಿಗರಿಗೆ ಅತ್ಯುತ್ತಮ ಸೌಲಭ್ಯಗಳನ್ನು ಒದಗಿಸುವುದು ಈ ಯೋಜನೆಯ ಮುಖ್ಯ ಉದ್ದೇಶ. ಬಿಎಂಎಂ ಇಸ್ಪಾಟ್ ಲಿಮಿಟೆಡ್ ತನ್ನ ಸಿಎಸ್‌ಆರ್ ಅಡಿಯಲ್ಲಿ ಈ ಧನಸಹಾಯ ನೀಡಿದೆ.‌

ಇದನ್ನೂ ಓದಿ: ರಾಮಪುರಂ ಕುಟುಂಬದ ಕನಸಿನ ಕೂಸು ಇಂದು ಜಗತ್‌ ಪ್ರಸಿದ್ಧ ಆತಿಥ್ಯ ಕ್ಷೇತ್ರದ ಬ್ರ್ಯಾಂಡ್‌

ವಿಶೇಷ ಎಂದರೆ ಭಾರತದ ಪಾರಂಪರಿಕ ವಲಯವೊಂದರಲ್ಲಿ ಖಾಸಗಿ ಬ್ರಾಂಡ್‌ನ ಸಾರ್ವಜನಿಕ ನೈರ್ಮಲ್ಯ ಕೇಂದ್ರವನ್ನು ಅಭಿವೃದ್ಧಿಪಡಿಸಿ, ಅದನ್ನು ನೇರವಾಗಿ ಖಾಸಗಿ ಸಂಸ್ಥೆಯೇ ನಿರ್ವಹಿಸುತ್ತಿರುವುದು ದೇಶದಲ್ಲೇ ಇದೇ ಮೊದಲು. ಈ ಸಂದರ್ಭದಲ್ಲಿ ಮಾತನಾಡಿದ ಜಿಲ್ಲಾಧಿಕಾರಿ ಶ್ರೀಮತಿ ಕವಿತಾ ಮಲ್ಲಿಕೇರಿ, "ಇದು ಪ್ರವಾಸಿಗರು ಸಾರ್ವಜನಿಕ ಸೌಲಭ್ಯಗಳನ್ನು ಸುಧಾರಿಸುವಲ್ಲಿ ಸರಕಾರದ ಬದ್ಧತೆಯನ್ನು ತೋರಿಸುತ್ತದೆ. ಪ್ರವಾಸಿಗರು ಹೆಚ್ಚಿನ ಸಂಖ್ಯೆಯಲ್ಲಿ ಭಾಗಿಯಾಗಲು ಇದು ಸಹಾಯಕಾರಿ ಆಗಲಿದೆ. ಇದು ದೇಶಾದ್ಯಂತ ಯೋಜನೆಗಳಿಗೆ ಒಂದು ಮಾದರಿಯಾಗಲಿದೆ" ಎಂದರು.

Untitled design - 2026-03-23T115040.583

ಲೆವಾಟೊ ಸಂಸ್ಥೆಯ ಸ್ಥಾಪಕ ಮತ್ತು ವ್ಯವಸ್ಥಾಪಕ ನಿರ್ದೇಶಕ ನವೀನ್ ಸಿಂಗ್ "ಸಾರ್ವಜನಿಕ ನೈರ್ಮಲ್ಯವನ್ನು ಉತ್ತಮ ಗುಣಮಟ್ಟದ ಸೇವೆಯಾಗಿ ಪರಿವರ್ತಿಸುವುದು ನಮ್ಮ ಆಶಯ. ಖಾಸಗಿ ನಿರ್ವಹಣೆಯ ಸಾರ್ವಜನಿಕ ಶೌಚಾಲಯಗಳು ದೀರ್ಘಕಾಲೀನ ಸುಸ್ಥಿರತೆಯನ್ನು ನೀಡಬಲ್ಲವು ಎಂಬುದನ್ನು ನಿರೂಪಿಸಲು ಈ ಯೋಜನೆ ಪೂರಕವಾಗಲಿದೆ" ಎಂದು ಹೇಳಿದರು.

Pramod Mohan Hegde

Pramod Mohan Hegde

A media professional with four years of experience in journalism, having worked with leading Kannada publications such as Vistara, Vijayavani, and Vijaya Karnataka as a cinema journalist. Also an author with a keen interest in travel and cinema. Currently serving as Senior Sub Editor at Pravasi Prapancha, contributing editorial expertise and engaging storytelling to the media industry.

ದೇಶ ಸುತ್ತಬೇಕಿಲ್ಲ, ಕರ್ನಾಟಕದಲ್ಲೇ ಇವೆ ಅನೇಕ ಡಾಲ್ಫಿನ್‌ ತಾಣಗಳು..

Read Previous

ದೇಶ ಸುತ್ತಬೇಕಿಲ್ಲ, ಕರ್ನಾಟಕದಲ್ಲೇ ಇವೆ ಅನೇಕ ಡಾಲ್ಫಿನ್‌ ತಾಣಗಳು..

ನೋಡಬನ್ನಿ ರಾಮನಗರ..ಇತಿಹಾಸವನ್ನು ಒಡಲಲ್ಲಿ  ಹೊತ್ತ ಬೆಟ್ಟಗಳ ತವರೂರ..

Read Next

ನೋಡಬನ್ನಿ ರಾಮನಗರ..ಇತಿಹಾಸವನ್ನು ಒಡಲಲ್ಲಿ ಹೊತ್ತ ಬೆಟ್ಟಗಳ ತವರೂರ..