ನೋಯ್ಡಾದಲ್ಲಿ ಇಂಡಿಗೋ ವಿಮಾನಯಾನ ಸೇವೆ ಆರಂಭ
ಲಕ್ನೋದ ಚೌಧರಿ ಚರಣ್ ಸಿಂಗ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಹೊರಟ ಇಂಡಿಗೋದ ಚೊಚ್ಚಲ ವಿಮಾನ (6E 2278) ಬೆಳಗ್ಗೆ 8:05ಕ್ಕೆ 182 ಪ್ರಯಾಣಿಕರೊಂದಿಗೆ ನೋಯ್ಡಾ ಅಂತಾರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಯಶಸ್ವಿಯಾಗಿ ಇಳಿಯಿತು.
ಭಾರತದ ಪ್ರಮುಖ ಮತ್ತು ಅತಿ ದೊಡ್ಡ ವಿಮಾನಯಾನ ಸಂಸ್ಥೆಯಾದ ಇಂಡಿಗೋ, ಉತ್ತರ ಪ್ರದೇಶದ ಜೆವಾರ್‌ನಲ್ಲಿ ಹೊಸದಾಗಿ ನಿರ್ಮಿಸಲಾದ 'ನೋಯ್ಡಾ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ'ದಿಂದ ತನ್ನ ವಾಣಿಜ್ಯ ವಿಮಾನ ಕಾರ್ಯಾಚರಣೆಯನ್ನು ಅಧಿಕೃತವಾಗಿ ಜೂನ್ 15, 2026 ರಿಂದ ಯಶಸ್ವಿಯಾಗಿ ಪ್ರಾರಂಭಿಸಿದೆ. ಈ ಮೂಲಕ ರಾಷ್ಟ್ರೀಯ ರಾಜಧಾನಿ ವಲಯದ ಈ ನೂತನ ಗ್ರೀನ್‌ಫೀಲ್ಡ್ ವಿಮಾನ ನಿಲ್ದಾಣದಿಂದ ಸೇವೆ ಆರಂಭಿಸಿದ ದೇಶದ ಅತ್ಯಂತ ಮೊದಲ ವಿಮಾನಯಾನ ಸಂಸ್ಥೆ ಎಂಬ ಹೆಗ್ಗಳಿಕೆಗೆ ಇಂಡಿಗೋ ಪಾತ್ರವಾಗಿದೆ.
ಲಕ್ನೋದ ಚೌಧರಿ ಚರಣ್ ಸಿಂಗ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಹೊರಟ ಇಂಡಿಗೋದ ಚೊಚ್ಚಲ ವಿಮಾನ (6E 2278) ಬೆಳಗ್ಗೆ 8:05ಕ್ಕೆ 182 ಪ್ರಯಾಣಿಕರೊಂದಿಗೆ ನೋಯ್ಡಾ ಅಂತಾರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಯಶಸ್ವಿಯಾಗಿ ಇಳಿಯಿತು.
ಇದನ್ನೂ ಓದಿ: ದೆಹಲಿಯಿಂದ ನೈನಿತಾಲ್‌ಗೆ ಈಗ 3 ಗಂಟೆ ಬೇಗ ಹೋಗ್ಬೋದು!
ಈ ವಿಮಾನ ನಿಲ್ದಾಣದಿಂದ ಹೊರಟ ಅತ್ಯಂತ ಮೊದಲ ವಿಮಾನವು ಕೆಲವೇ ಸಮಯದ ನಂತರ ಬೆಂಗಳೂರಿನ ಕಡೆಗೆ ತನ್ನ ಯಶಸ್ವಿ ಹಾರಾಟ ನಡೆಸಿತು. ಇಂಡಿಗೋ ಸಂಸ್ಥೆಯು ಹಂತ-ಹಂತವಾಗಿ ನೋಯ್ಡಾ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣವನ್ನು ಭಾರತದಾದ್ಯಂತ ಇರುವ 16ಕ್ಕೂ ಹೆಚ್ಚು ಪ್ರಮುಖ ನಗರಗಳಿಗೆ ನೇರವಾಗಿ ಸಂಪರ್ಕಿಸಲಿದೆ. ಇದರಲ್ಲಿ ಪ್ರಮುಖ ಮೆಟ್ರೋ ನಗರಗಳಾದ ಬೆಂಗಳೂರು ಮತ್ತು ಹೈದರಾಬಾದ್ ಸೇರಿದಂತೆ ಲಕ್ನೋ, ಅಮೃತಸರ, ಚಂಡೀಗಢ, ಜಮ್ಮು, ಶ್ರೀನಗರ, ನವಿ ಮುಂಬೈ, ಜೈಪುರ, ಜೋಧ್‌ಪುರ ಮುಂತಾದ ನಗರಗಳು ಸೇರಿವೆ.
ಯಮುನಾ ಎಕ್ಸ್‌ಪ್ರೆಸ್‌ವೇ ಪಕ್ಕದಲ್ಲಿ ಆಯಕಟ್ಟಿನ ಸ್ಥಳದಲ್ಲಿ ನಿರ್ಮಾಣವಾಗಿರುವ ನೋಯ್ಡಾ ವಿಮಾನ ನಿಲ್ದಾಣದ ಸೇರ್ಪಡೆಯೊಂದಿಗೆ, ದೆಹಲಿ-ಎನ್‌ಸಿಆರ್ ಈಗ ಮಲ್ಟಿಪಲ್ ವಿಮಾನ ನಿಲ್ದಾಣಗಳನ್ನು ಹೊಂದಿರುವ ವಿಶ್ವದ ಪ್ರಮುಖ ಮೆಗಾಸಿಟಿಗಳ ಸಾಲಿಗೆ ಸೇರಿದೆ. ಇಂಡಿಗೋ ಸಂಸ್ಥೆಯು ಈಗ ಎನ್‌ಸಿಆರ್‌ನ ಎಲ್ಲಾ 3 ವಿಮಾನ ನಿಲ್ದಾಣಗಳಿಂದಲೂ (ಇಂದಿರಾ ಗಾಂಧಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ-ದೆಹಲಿ, ಹಿಂದನ್ ವಿಮಾನ ನಿಲ್ದಾಣ-ಘಾಜಿಯಾಬಾದ್ ಮತ್ತು ನೋಯ್ಡಾ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ) ಕಾರ್ಯಾಚರಣೆ ನಡೆಸಿದಂತಾಗಿದೆ.