Thursday, March 19, 2026
Thursday, March 19, 2026

ಟ್ರೈಬಲ್ ಟೂರಿಸಂ ಬಗ್ಗೆ ನಿಮಗೆ ಗೊತ್ತಾ?

ಬುಡಕಟ್ಟು ಪ್ರವಾಸೋದ್ಯಮ ಪ್ರವಾಸಿಗರಿಗೆ ದೇಶದ ಅತ್ಯಂತ ಪುರಾತನ ಸಂಸ್ಕೃತಿಗಳನ್ನು ಜಗತ್ತಿನ ಮುಂದೆ ಹೆಮ್ಮೆಯಿಂದ ಪ್ರದರ್ಶಿಸಲು ಸಹಾಯ ಮಾಡುತ್ತಿದೆ.

ಇತ್ತೀಚಿನ ವರ್ಷಗಳಲ್ಲಿ, ಪ್ರವಾಸಿಗರು ಕೇವಲ ಐಷಾರಾಮಿ ಹೊಟೇಲ್‌ಗಳು ಮತ್ತು ಸ್ಮಾರಕಗಳಿಗೆ ಸೀಮಿತವಾಗದೆ, ಭಾರತದ ಬುಡಕಟ್ಟು ಸಂಸ್ಕೃತಿಯನ್ನು ಅನ್ವೇಷಿಸಲು ಆಸಕ್ತಿ ತೋರುತ್ತಿರುವುದು ವಿಶೇಷ. ಈ 'ಬುಡಕಟ್ಟು ಪ್ರವಾಸೋದ್ಯಮವು ಭಾರತದ ಪ್ರವಾಸೋದ್ಯಮ ಕ್ಷೇತ್ರಕ್ಕೆ ಹೊಸ ಮೆರುಗು ನೀಡುತ್ತಿದೆ.

ಭಾರತದ ಮೂಲನಿವಾಸಿಗಳಾದ ಬುಡಕಟ್ಟು ಸಮುದಾಯಗಳ ಜತೆ ವಾಸಿಸುವುದು, ಅವರ ಆಹಾರ ಪದ್ಧತಿ, ಸಂಪ್ರದಾಯಗಳು, ಕಲೆ ಮತ್ತು ಜೀವನಶೈಲಿಯನ್ನು ಹತ್ತಿರದಿಂದ ಅನುಭವಿಸುವುದನ್ನು ಅನೇಕ ಪ್ರವಾಸಿಗರು ಇಷ್ಟಪಡುತ್ತಿದ್ದಾರೆ.

ಇದನ್ನೂ ಓದಿ: ಪಶ್ಚಿಮ ಬಂಗಾಳದಿಂದ ಹೊಸ ಎಕ್ಸ್‌ಪ್ರೆಸ್ ಆರಂಭ

ಎಲ್ಲೆಲ್ಲಿದೆ?

  • ಒಡಿಶಾ: ಬೋಂಡಾ ಮತ್ತು ಗದಬಾ ಬುಡಕಟ್ಟು ಜನಾಂಗದವರ ವಿಶಿಷ್ಟ ಸಂಸ್ಕೃತಿ.
  • ಛತ್ತೀಸ್‌ಗಢ: ಬಸ್ತಾರ್ ಪ್ರದೇಶದ ಬುಡಕಟ್ಟು ಹಬ್ಬಗಳು ಮತ್ತು ಅವರ ಲೋಹದ ಕಲೆ.
  • ಈಶಾನ್ಯ ಭಾರತ (ನಾಗಾಲ್ಯಾಂಡ್): ಇಲ್ಲಿನ 'ಹಾರ್ನ್‌ಬಿಲ್ ಹಬ್ಬ' (Hornbill Festival) ಬುಡಕಟ್ಟು ಸಂಸ್ಕೃತಿಯ ಬೃಹತ್ ಪ್ರದರ್ಶನ. ಹದಿನಾರಕ್ಕೂ ಹೆಚ್ಚು ನಾಗಾ ಪಂಗಡಗಳ ಸಂಸ್ಕೃತಿಯನ್ನು ಇಲ್ಲಿ ಏಕಕಾಲಕ್ಕೆ ನೋಡಬಹುದು.
  • ಮಧ್ಯಪ್ರದೇಶ: ಗೊಂಡ ಮತ್ತು ಭಿಲ್ ಸಮುದಾಯಗಳ ಸಾಂಪ್ರದಾಯಿಕ ಚಿತ್ರಕಲೆ ಮತ್ತು ಕರಕುಶಲ ವಸ್ತುಗಳು.

ಬದಲಾವಣೆಗೆ ಕಾರಣಗಳೇನು?

ಆಧುನಿಕ ಪ್ರವಾಸಿಗರು ಕೃತಕ ಪ್ರಪಂಚದಿಂದ ದೂರವಾಗಿ, ನೈಜ ಮತ್ತು ಅಥೆಂಟಿಕ್‌ ಅನುಭವಗಳನ್ನು ಬಯಸುತ್ತಿದ್ದಾರೆ. ಬುಡಕಟ್ಟು ಜನರ ಜೀವನ ಸಂಪೂರ್ಣವಾಗಿ ಪ್ರಕೃತಿಯನ್ನು ಅವಲಂಬಿಸಿರುವುದರಿಂದ ಪರಿಸರ ಪ್ರೇಮಿ ಪ್ರವಾಸಿಗರಿಗೆ ಅತ್ಯಂತ ಸೂಕ್ತ. ಎಲ್ಲಕ್ಕಿಂತ ಹೆಚ್ಚಾಗಿ ಸೋಶಿಯಲ್ ಮೀಡಿಯಾ ಮತ್ತು ವ್ಲಾಗರ್‌ಗಳ ಮೂಲಕ ದೂರದ ಕಾಡುಗಳಲ್ಲಿರುವ ಈ ಸುಂದರ ಸಂಸ್ಕೃತಿಗಳು ಜಗತ್ತಿಗೆ ಪರಿಚಯವಾಗುತ್ತಿವೆ.

ಇದನ್ನೂ ಓದಿ: ಶ್ರೀನಗರದಲ್ಲಿ ಏಷ್ಯಾದ ಅತಿದೊಡ್ಡ ಟುಲಿಪ್ ಗಾರ್ಡನ್

ಇದರಿಂದ ಪ್ರವಾಸಿ ಮಾರ್ಗದರ್ಶಿಗಳಾಗಿ, ಹೋಮ್‌ಸ್ಟೇ ಮಾಲೀಕರಾಗಿ ಮತ್ತು ಕರಕುಶಲ ವಸ್ತುಗಳ ಮಾರಾಟಗಾರರಾಗಿ ಬುಡಕಟ್ಟು ಜನರು ಆರ್ಥಿಕ ಸ್ವಾವಲಂಬನೆ ಪಡೆಯುತ್ತಿದ್ದಾರೆ ಎನ್ನಲಾಗಿದೆ. ಹಾಗೆಯೇ ಪ್ರವಾಸಿಗರು ಆಸಕ್ತಿ ತೋರುವುದರಿಂದ, ಅಳಿವಿನಂಚಿನಲ್ಲಿರುವ ಹಲವು ಬುಡಕಟ್ಟು ಕಲೆಗಳು ಮತ್ತು ಭಾಷೆಗಳನ್ನು ಉಳಿಸಿಕೊಳ್ಳಲು ಆ ಸಮುದಾಯಗಳಿಗೆ ಪ್ರೇರಣೆ ಸಿಗಬಹುದು.

ಜವಾಬ್ದಾರಿ ಮುಖ್ಯ:

ಭಾರತ ಸರಕಾರವು 'ದೇಖೋ ಅಪ್ನಾ ದೇಶ್' ನಂಥ ಯೋಜನೆಗಳ ಮೂಲಕ ಇದನ್ನು ಉತ್ತೇಜಿಸುತ್ತಿದೆ. ಆದರೆ, ಪ್ರವಾಸಿಗರು ಬುಡಕಟ್ಟು ಜನರ ಖಾಸಗಿತನ ಮತ್ತು ಪದ್ಧತಿಗಳನ್ನು ಗೌರವಿಸಬೇಕು. ಸೂಕ್ಷ್ಮ ಪ್ರದೇಶಗಳಲ್ಲಿ ಪ್ಲಾಸ್ಟಿಕ್ ಬಳಕೆ ಮತ್ತು ಪರಿಸರಕ್ಕೆ ಹಾನಿ ಮಾಡುವ ಚಟುವಟಿಕೆಗಳನ್ನು ನಿಯಂತ್ರಿಸುವುದು ಅತಿ ಮುಖ್ಯ.

Pramod Mohan Hegde

Pramod Mohan Hegde

A media professional with four years of experience in journalism, having worked with leading Kannada publications such as Vistara, Vijayavani, and Vijaya Karnataka as a cinema journalist. Also an author with a keen interest in travel and cinema. Currently serving as Senior Sub Editor at Pravasi Prapancha, contributing editorial expertise and engaging storytelling to the media industry.

ಮೇ 1 ರಿಂದ ವಿದೇಶಿ ಪ್ರವಾಸಿಗರಿಗೆ ಥಾಯ್ಲೆಂಡ್‌ನಲ್ಲಿ ಡಿಜಿಟಲ್ ಆಗಮನ ಕಾರ್ಡ್ ಕಡ್ಡಾಯ

Read Previous

ಮೇ 1 ರಿಂದ ವಿದೇಶಿ ಪ್ರವಾಸಿಗರಿಗೆ ಥಾಯ್ಲೆಂಡ್‌ನಲ್ಲಿ ಡಿಜಿಟಲ್ ಆಗಮನ ಕಾರ್ಡ್ ಕಡ್ಡಾಯ

ಗೋವಾ ಹೋದರೆ ಈ ಬೀಚ್‌ಗಳನ್ನು ಮಿಸ್‌ ಮಾಡಿಕೊಳ್ಳಲೇಬೇಡಿ!

Read Next

ಗೋವಾ ಹೋದರೆ ಈ ಬೀಚ್‌ಗಳನ್ನು ಮಿಸ್‌ ಮಾಡಿಕೊಳ್ಳಲೇಬೇಡಿ!