Monday, March 16, 2026
Monday, March 16, 2026

ಶ್ರೀನಗರದಲ್ಲಿ ಏಷ್ಯಾದ ಅತಿದೊಡ್ಡ ಟುಲಿಪ್ ಗಾರ್ಡನ್

ದಾಲ್ ಸರೋವರದ ಸೌಂದರ್ಯವನ್ನು ಪ್ರತಿಬಿಂಬಿಸುವ, ಜಬರ್ವಾನ್ ಪರ್ವತ ಶ್ರೇಣಿಯ ತಪ್ಪಲಿನಲ್ಲಿರುವ ಈ ಸುಂದರ ತೋಟವು ಪ್ರವಾಸಿಗರನ್ನು ಸ್ವಾಗತಿಸಲು ಸಂಪೂರ್ಣವಾಗಿ ಸಿದ್ಧಗೊಂಡಿದೆ.

ಶ್ರೀನಗರದಲ್ಲಿರುವ ಏಷ್ಯಾದ ಅತಿದೊಡ್ಡ ಟುಲಿಪ್ ತೋಟವಾದ 'ಇಂದಿರಾ ಗಾಂಧಿ ಮೆಮೋರಿಯಲ್ ಟುಲಿಪ್ ಗಾರ್ಡನ್' ಇಂದಿನಿಂದ (ಮಾರ್ಚ್‌ 16) ಪ್ರವಾಸಿಗರಿಗೆ ಮುಕ್ತವಾಗಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಕಾಶ್ಮೀರದ ಫ್ಲೋರಿಕಲ್ಚರ್ ಇಲಾಖೆಯ ನಿರ್ದೇಶಕಿ ಮಾಥುರಾ ಮಸೂಮ್ ಮಾತನಾಡಿ, "ಟುಲಿಪ್ ಹೂಗಳು ಈಗ ಅರಳುತ್ತಿವೆಯಾದ್ದರಿಂದ ತೋಟವನ್ನು ಸಾರ್ವಜನಿಕರಿಗೆ ತೆರೆಯಲಾಗಿದೆ. ದಾಲ್ ಸರೋವರದ ಸೌಂದರ್ಯವನ್ನು ಪ್ರತಿಬಿಂಬಿಸುವ, ಜಬರ್ವಾನ್ ಪರ್ವತ ಶ್ರೇಣಿಯ ತಪ್ಪಲಿನಲ್ಲಿರುವ ಈ ಸುಂದರ ತೋಟವು ಪ್ರವಾಸಿಗರನ್ನು ಸ್ವಾಗತಿಸಲು ಸಂಪೂರ್ಣವಾಗಿ ಸಿದ್ಧಗೊಂಡಿದೆ.

ಪ್ರವಾಸೋದ್ಯಮದ ಹಾದಿ ಬದಲಿಸುತ್ತಿರುವ ಸಣ್ಣ ನಗರಗಳು

ಅಧಿಕಾರಿಗಳ ಮಾಹಿತಿಯಂತೆ, ಈ ವರ್ಷ ತೋಟದಲ್ಲಿ ಸುಮಾರು 18 ಲಕ್ಷ ಟುಲಿಪ್ ಹೂಗಳನ್ನು ಪ್ರದರ್ಶಿಸಲಾಗುವುದು. ಸುಮಾರು 70 ರಿಂದ 75 ವಿವಿಧ ತಳಿಯ ಟುಲಿಪ್‌ಗಳನ್ನು ಇಲ್ಲಿ ಕಾಣಬಹುದು. ಪ್ರವಾಸಿಗರಿಗೆ ಹೂಗಳ ಕಣ್ಮನ ಸೆಳೆಯುವ ನೋಟವನ್ನು ನೀಡಲು ಈ ಬಾರಿ ಹೂವಿನ ಹಾಸುಗಳನ್ನು ಹೆಚ್ಚಿಸಲಾಗಿದೆ.

Pramod Mohan Hegde

Pramod Mohan Hegde

A media professional with four years of experience in journalism, having worked with leading Kannada publications such as Vistara, Vijayavani, and Vijaya Karnataka as a cinema journalist. Also an author with a keen interest in travel and cinema. Currently serving as Senior Sub Editor at Pravasi Prapancha, contributing editorial expertise and engaging storytelling to the media industry.

ಮೇ 1 ರಿಂದ ವಿದೇಶಿ ಪ್ರವಾಸಿಗರಿಗೆ ಥಾಯ್ಲೆಂಡ್‌ನಲ್ಲಿ ಡಿಜಿಟಲ್ ಆಗಮನ ಕಾರ್ಡ್ ಕಡ್ಡಾಯ

Read Previous

ಮೇ 1 ರಿಂದ ವಿದೇಶಿ ಪ್ರವಾಸಿಗರಿಗೆ ಥಾಯ್ಲೆಂಡ್‌ನಲ್ಲಿ ಡಿಜಿಟಲ್ ಆಗಮನ ಕಾರ್ಡ್ ಕಡ್ಡಾಯ

ಗೋವಾ ಹೋದರೆ ಈ ಬೀಚ್‌ಗಳನ್ನು ಮಿಸ್‌ ಮಾಡಿಕೊಳ್ಳಲೇಬೇಡಿ!

Read Next

ಗೋವಾ ಹೋದರೆ ಈ ಬೀಚ್‌ಗಳನ್ನು ಮಿಸ್‌ ಮಾಡಿಕೊಳ್ಳಲೇಬೇಡಿ!