Wednesday, April 29, 2026
Wednesday, April 29, 2026

ಪ್ರವಾಸೋದ್ಯಮದ ಹಾದಿ ಬದಲಿಸುತ್ತಿರುವ ಸಣ್ಣ ನಗರಗಳು

2026ರಲ್ಲಿ ಭಾರತದ ಪ್ರಾದೇಶಿಕ ಪ್ರವಾಸೋದ್ಯಮ ಮಾರುಕಟ್ಟೆಯು ಗಮನಾರ್ಹವಾಗಿ ವಿಸ್ತರಿಸಲಿದ್ದು, ಪ್ರವಾಸೋದ್ಯಮದ ಭವಿಷ್ಯವನ್ನು ರೂಪಿಸುವಲ್ಲಿ ಸಣ್ಣ ನಗರಗಳು ಕೇಂದ್ರ ಭೂಮಿಕೆಯನ್ನು ವಹಿಸಲಿವೆ.

ಸಣ್ಣ ನಗರಗಳು ಭಾರತದ ಪ್ರವಾಸೋದ್ಯಮದ ಹಾದಿಯನ್ನು ಬದಲಿಸುತ್ತಿವೆ. ಟೈರ್ 2 ಮತ್ತು ಟೈರ್ 3 ನಗರಗಳ ಪ್ರವಾಸಿಗರು ಹೆಚ್ಚಿನ ಸಂಖ್ಯೆಯಲ್ಲಿ ಪ್ರವಾಸ ಕೈಗೊಳ್ಳುತ್ತಿರುವುದು ದೇಶದ ಪ್ರವಾಸೋದ್ಯಮದ ಬೆಳವಣಿಗೆಗೆ ದೊಡ್ಡ ಕೊಡುಗೆ ನೀಡುತ್ತಿದೆ. ವಯಾ ಡಾಟ್ ಕಾಮ್ ಸೇರಿದಂತೆ ಹಲವು ದೊಡ್ಡ ಸಂಸ್ಥೆಗಳು ಜೈಪುರ, ಪಾಟ್ನಾ, ಗುವಾಹಟಿ ಮತ್ತು ಶ್ರೀನಗರದಂಥ ನಗರಗಳಲ್ಲಿ ತಮ್ಮ ವ್ಯವಹಾರ ಕೇಂದ್ರಗಳನ್ನು ವಿಸ್ತರಿಸುತ್ತಿವೆ.

ಅಮೃತಸರದಿಂದ ಅಟ್ಟಾರಿ ಬಾರ್ಡರ್‌ವರೆಗೆ ದೇಶಪ್ರೇಮದ ಯಾತ್ರೆ..

ಮಳೆಗಾಲದ ಸಮಯದಲ್ಲಿ ಗಿರಿಧಾಮಗಳು, ನದಿ ತೀರದ ಪಟ್ಟಣಗಳು ಮತ್ತು ಸಾಂಸ್ಕೃತಿಕ ಕೇಂದ್ರಗಳಿಗೆ ಭೇಟಿ ನೀಡುವವರ ಸಂಖ್ಯೆ ಹೆಚ್ಚುತ್ತಿದೆ. ಜುಲೈ ತಿಂಗಳು ಪ್ರವಾಸಿ ಬುಕಿಂಗ್‌ಗಳಿಗೆ ಅತ್ಯಂತ ಬಿಡುವಿಲ್ಲದ ತಿಂಗಳಾಗಿ ಹೊರಹೊಮ್ಮುತ್ತಿದೆ. ಪ್ರವಾಸಿಗರು ಶಾಖದಿಂದ ತಪ್ಪಿಸಿಕೊಳ್ಳಲು ತಂಪಾದ ಹವಾಮಾನ ಮತ್ತು ಹಸಿರು ಪರಿಸರವನ್ನು ಹೊಂದಿರುವ ಗಿರಿಧಾಮಗಳತ್ತ ಆಕರ್ಷಿತರಾಗುತ್ತಿದ್ದಾರೆ. ಇನ್ನು ಚಳಿಗಾಲದಲ್ಲಿ ಧಾರ್ಮಿಕ ಅಥವಾ ತೀರ್ಥಯಾತ್ರೆಗಳ ಬೇಡಿಕೆ ಹೆಚ್ಚಾಗುತ್ತದೆ. ವಾರಾಣಸಿ, ಹರಿದ್ವಾರ ಸೇರಿದಂತೆ ಹಲವು ಆಧ್ಯಾತ್ಮಿಕ ತಾಣಗಳಿಗೆ ಭೇಟಿ ನೀಡುವವರ ಸಂಖ್ಯೆ ಭಾರಿ ಪ್ರಮಾಣದಲ್ಲಿ ಹೆಚ್ಚುತ್ತಿದೆ. ಜನರು ಆಧ್ಯಾತ್ಮಿಕ ಶಾಂತಿ ಮತ್ತು ಸಾಂಸ್ಕೃತಿಕ ಅನುಭವವನ್ನು ಪಡೆಯಲು ಈ ಪವಿತ್ರ ಸ್ಥಳಗಳತ್ತ ಮುಖ ಮಾಡುತ್ತಿದ್ದಾರೆ.

ಡಿಜಿಟಲ್ ತಂತ್ರಜ್ಞಾನದ ಪ್ರಭಾವ:

ಡಿಜಿಟಲ್ ಪ್ಲಾಟ್‌ಫಾರ್ಮ್‌ಗಳು ಭಾರತದ ಪ್ರವಾಸೋದ್ಯಮ ಉದ್ಯಮವನ್ನು ಬದಲಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತಿವೆ. ಸ್ಥಳೀಯ ಏಜೆಂಟ್‌ಗಳು ಈಗ ತಂತ್ರಜ್ಞಾನದ ಸಹಾಯದಿಂದ ಪ್ರವಾಸಿಗರಿಗೆ ವೈಯಕ್ತಿಕ ಅಗತ್ಯಗಳಿಗೆ ತಕ್ಕಂತೆ ಸೇವೆಗಳನ್ನು ನೀಡುತ್ತಿದ್ದಾರೆ. ಇದರಿಂದ ಬುಕಿಂಗ್ ಸಾಮರ್ಥ್ಯದಲ್ಲಿ ಶೇ. 25-30 ರಷ್ಟು ಹೆಚ್ಚಳ ಕಂಡುಬಂದಿದೆ.

Pramod Mohan Hegde

Pramod Mohan Hegde

A media professional with four years of experience in journalism, having worked with leading Kannada publications such as Vistara, Vijayavani, and Vijaya Karnataka as a cinema journalist. Also an author with a keen interest in travel and cinema. Currently serving as Senior Sub Editor at Pravasi Prapancha, contributing editorial expertise and engaging storytelling to the media industry.

ಮೇ 1 ರಿಂದ ವಿದೇಶಿ ಪ್ರವಾಸಿಗರಿಗೆ ಥಾಯ್ಲೆಂಡ್‌ನಲ್ಲಿ ಡಿಜಿಟಲ್ ಆಗಮನ ಕಾರ್ಡ್ ಕಡ್ಡಾಯ

Read Previous

ಮೇ 1 ರಿಂದ ವಿದೇಶಿ ಪ್ರವಾಸಿಗರಿಗೆ ಥಾಯ್ಲೆಂಡ್‌ನಲ್ಲಿ ಡಿಜಿಟಲ್ ಆಗಮನ ಕಾರ್ಡ್ ಕಡ್ಡಾಯ

ಗೋವಾ ಹೋದರೆ ಈ ಬೀಚ್‌ಗಳನ್ನು ಮಿಸ್‌ ಮಾಡಿಕೊಳ್ಳಲೇಬೇಡಿ!

Read Next

ಗೋವಾ ಹೋದರೆ ಈ ಬೀಚ್‌ಗಳನ್ನು ಮಿಸ್‌ ಮಾಡಿಕೊಳ್ಳಲೇಬೇಡಿ!