ಈ ಪ್ಲೇಟ್‌ಗಳಿಂದ ಆರಂಭವಾಯಿತು ಫೊಟೋಗ್ರಫಿಯ ಕತೆ
1851ರಲ್ಲಿ ಫೊಟೋಗ್ರಫಿಗೆ ವೆಟ್ ಪ್ಲೇಟ್‌ಗಳ ಬಳಕೆ ಮಾಡಲಾಯಿತು. ಆಲ್ಕೋಹಾಲ್ ಮತ್ತು ಈಥೇನ್‌ನಲ್ಲಿ ಬೆರೆಸಲಾದ ನೈಟ್ರೋಸೆಲ್ಯುಲೋಸ್ ದ್ರಾವಣವನ್ನು ಗಾಜಿನ ಅಥವಾ ಮೆಟಲ್ ಪ್ಲೇಟ್‌ಗೆ ಲೇಪಿಸಿ, ಅದನ್ನು ಡಾರ್ಕ್ ರೂಮಿನಲ್ಲಿ ಬೆಳ್ಳಿಯ ನೈಟ್ರೇಟ್ ದ್ರಾವಣದಲ್ಲಿ ಅದ್ದಿ ಕ್ಯಾಮೆರಾಗೆ ಅಳವಡಿಸಲಾಗುತ್ತಿತ್ತು. ಕೂಡಲೆ ಮಸೂರದ ಮುಚ್ಚಳ ತೆಗೆದು ಕ್ಯಾಮೆರದಲ್ಲಿ ಬೆಳಕು ಹಾಯಿಸಿ ಚಿತ್ರ ಮೂಡಿಸಲಾಗುತ್ತಿತ್ತು. ಚಿತ್ರ ಮೂಡುತ್ತಿದ್ದಂತೆಯೇ ಪ್ಲೇಟನ್ನು ಪೈರೊಗ್ಯಾಲಿಕ್ ಆಸಿಡ್ ಹಾಗೂ ಸೋಡಿಯಂ ಥಿಯೋಸಲ್ಫೇಟ್ ರಾಸಾಯನಿಕ ಕ್ರಿಯೆಗೆ ಒಳಪಡಿಸಿ ನೈಜ ಚಿತ್ರವನ್ನು ಪಡೆಯುತ್ತಿದ್ದರು. ಎಲ್ಲಾ ಕ್ರಿಯೆಗಳು ಕೂಡಲೆ ಆಗಬೇಕಾಗಿತ್ತು.
ಇದು ಮೊಬೈಲ್ ಕ್ಯಾಮೆರಾಗಳ ಕಾಲ. ಬೇಕನಿಸಿದಾಗ ಬೇಕಾದಷ್ಟು ಫೊಟೋಗಳನ್ನು ತೆಗೆದುಕೊಳ್ಳಬಹುದು. ಇಷ್ಟವಾದ ಫೊಟೋದ ಬೇಕಾದಷ್ಟು ಕಾಪಿಗಳನ್ನು ಪಡೆಯಬಹುದು. ಆದರೆ ಕ್ಯಾಮೆರಾಗಳು ಆಗಿನ್ನು ಹುಟ್ಟಿಕೊಂಡ ಕಾಲದಲ್ಲಿ ಈ ಪ್ರಕ್ರಿಯೆ ಹೇಗಿತ್ತು ಗೊತ್ತಾ?
ಚಿತ್ರವನ್ನು ಸೆರೆ ಹಿಡಿಯಲು ಕ್ಯಾಮೆರಾಗಳು ಇದ್ದವು. ಆದರೆ ಚಿತ್ರ ಮೂಡಲು ಬಳಸುವ ಪ್ಲೇಟ್‌ಗಳಲ್ಲಿ ಅನೇಕ ಆವಿಷ್ಕಾರಗಳಾದವು. ವೆಟ್ ಪ್ಲೇಟ್‌ನಲ್ಲಿ ಚಿತ್ರದ ನಕಲನ್ನು ಪಡೆಯಲು ಸಾಧ್ಯವಿರಲಿಲ್ಲ. ಆದರೆ ಡ್ರೈ ಪ್ಲೇಟ್‌ನಿಂದ ಬೇಕಾದಷ್ಟು ಚಿತ್ರದ ನಕಲನ್ನು ಪಡೆಯಬಹುದಿತ್ತು.
ಇದನ್ನೂ ಓದಿ: ಸ್ಮಾರ್ಟ್‌ಫೋನ್ ಅನ್ನು 'ಸೂಪರ್ ಝೂಮ್' ಕ್ಯಾಮೆರಾ ಮಾಡಬಹುದು
ವೆಟ್ ಪ್ಲೇಟ್
1851ರಲ್ಲಿ ಫೊಟೋಗ್ರಫಿಗೆ ವೆಟ್ ಪ್ಲೇಟ್‌ಗಳ ಬಳಕೆ ಮಾಡಲಾಯಿತು. ಆಲ್ಕೋಹಾಲ್ ಮತ್ತು ಈಥೇನ್‌ನಲ್ಲಿ ಬೆರೆಸಲಾದ ನೈಟ್ರೋಸೆಲ್ಯುಲೋಸ್ ದ್ರಾವಣವನ್ನು ಗಾಜಿನ ಅಥವಾ ಮೆಟಲ್ ಪ್ಲೇಟ್‌ಗೆ ಲೇಪಿಸಿ, ಅದನ್ನು ಡಾರ್ಕ್ ರೂಮಿನಲ್ಲಿ ಬೆಳ್ಳಿಯ ನೈಟ್ರೇಟ್ ದ್ರಾವಣದಲ್ಲಿ ಅದ್ದಿ ಕ್ಯಾಮೆರಾಗೆ ಅಳವಡಿಸಲಾಗುತ್ತಿತ್ತು. ಕೂಡಲೆ ಮಸೂರದ ಮುಚ್ಚಳ ತೆಗೆದು ಕ್ಯಾಮೆರದಲ್ಲಿ ಬೆಳಕು ಹಾಯಿಸಿ ಚಿತ್ರ ಮೂಡಿಸಲಾಗುತ್ತಿತ್ತು. ಚಿತ್ರ ಮೂಡುತ್ತಿದ್ದಂತೆಯೇ ಪ್ಲೇಟನ್ನು ಪೈರೊಗ್ಯಾಲಿಕ್ ಆಸಿಡ್ ಹಾಗೂ ಸೋಡಿಯಂ ಥಿಯೋಸಲ್ಫೇಟ್ ರಾಸಾಯನಿಕ ಕ್ರಿಯೆಗೆ ಒಳಪಡಿಸಿ ನೈಜ ಚಿತ್ರವನ್ನು ಪಡೆಯುತ್ತಿದ್ದರು. ಎಲ್ಲಾ ಕ್ರಿಯೆಗಳು ಕೂಡಲೆ ಆಗಬೇಕಾಗಿತ್ತು. ಹಾಗಾಗಿ ಕ್ಯಾಮೆರಾದ ಜತೆಗೆ ಡಾರ್ಕ್ ರೂಮ್ ಇರುವ ವ್ಯಾಗನ್ ಬಳಸುತ್ತಿದ್ದರು.

ಆಮ್ರೊ ಟೈಪ್ ಮತ್ತು ಟಿನ್ ಟೈಪ್
ಆಮ್ರೋ ಟೈಪ್– ವೆಟ್ ಪ್ಲೇಟ್ ಲೇಪನವನ್ನು ಗಾಜಿನ ಹಲಗೆಯ ಮೇಲೆ ಮಾಡಲಾಗುತ್ತಿತ್ತು. ಚಿತ್ರ ಮೂಡಿದ ನಂತರ ಅದನ್ನು ಕಪ್ಪು ಬಟ್ಟೆಯ ಮೇಲೆ ಇಟ್ಟು ನೋಡಿದರೆ ನೈಜ ಚಿತ್ರ ಕಾಣುತ್ತಿತ್ತು.
ಟಿನ್ ಟೈಪ್- ವೆಟ್ ಪ್ಲೇಟ್ ಲೇಪನವನ್ನು ಕಬ್ಬಿಣದ ಅಥವ ಅಲ್ಯೂಮಿನಿಯಂ ಪ್ಲೇಟ್‌ನ ಮೇಲೆ ಗ್ಲಾಸ್‌ಗೆ ಬದಲಾಗಿ ಮಾಡಲಾಗುತ್ತಿತ್ತು. ಇದು ಕಡಿಮೆ ಬೆಲೆ ಹಾಗು ಜನಪ್ರಿಯವಾದ ವಿಧವಾಗಿತ್ತು.
ಈ ಚಿತ್ರಗಳನ್ನು ನಕಲಿಸಲು ಸಾಧ್ಯವಿರಲಿಲ್ಲ.

ಡ್ರೈ ಪ್ಲೇಟ್
1871ರಲ್ಲಿ ಜಿಲೆಟಿನ್ ಎಮಲ್ಶನ್ ಲೇಪನದ ಗಾಜಿನ ಹಲಗೆಗಳನ್ನು ಚಿತ್ರ ತೆಗೆಯಲು ಬಳಸುತ್ತಿದ್ದರು. ಈ ಆವಿಷ್ಕಾರದಿಂದ ಮೊಬೈಲ್ ಡಾರ್ಕ್ ರೂಮ್ ಅವಶ್ಯಕತೆ ನಿಂತಿತು. ಈ ಡ್ರೈ ಪ್ಲೇಟ್‌ಗಳು ಮೊದಲೇ ರಾಸಾಯನಿಕ ಲೇಪಿತವಾಗಿದ್ದರಿಂದ ಬೇಕಾದಾಗ ಉಪಯೋಗಿಸಿ ಚಿತ್ರಗಳನ್ನು ತೆಗೆಯಲು ಅನುಕೂಲವಾಯಿತು.
ಈ ಡ್ರೈ ಪ್ಲೇಟ್‌ಗಳು ವೆಟ್ ಪ್ಲೇಟ್‌ಗಳಿಗಿಂತ ಸೂಕ್ಷ್ಮವಿದ್ದುದರಿಂದ ಚಿತ್ರಗಳನ್ನು ನಿಮಿಷಗಟ್ಟಲೆ ಎಕ್ಸ್‌ಪೋಸ್ ಮಾಡುವ ಸಮಯ ಕಡಿಮೆಯಾಯಿತು. ನಿಮಿಷಗಳ ಕೆಲಸ ಸೆಕೆಂಡುಗಳಲ್ಲಿ ಆಗಲು ಸಾಧ್ಯವಾಯಿತು. ಚಿತ್ರ ತೆಗೆದ ನಂತರ ಡ್ರೈ ಗ್ಲಾಸ್ ಪ್ಲೇಟ್ ನೆಗೆಟಿವ್‌ಗಳನ್ನು ಡಾರ್ಕ್ ರೂಮಿನಲ್ಲಿ ಸಂಸ್ಕರಿಸಿ ಚಿತ್ರದ ಬೇಕಾದಷ್ಟು ಪ್ರಿಂಟ್‌ಗಳನ್ನು ತೆಗೆದುಕೊಳ್ಳಲು ಸಾಧ್ಯವಾಯಿತು. ಇದರ ಬಳಕೆ 1900 ಇಸವಿ ಮುಂಚಿನವರೆಗೂ ಇತ್ತು.
ಇಲ್ಲಿ ಸಂಸ್ಕರಿಸಿದ ನೆಗೆಟೀವ್‌ನಿಂದ ಎಷ್ಟು ಬೇಕಾದರೂ ಪಾಸಿಟೀವ್ ಚಿತ್ರಗಳನ್ನು ಪಡೆಯಬಹುದಾಗಿತ್ತು ಎಂಬುದು ವಿಶೇಷ. ಇದು ಡ್ರೈ ಪ್ಲೇಟ್ ಮತ್ತು ವೆಟ್ ಪ್ಲೇಟ್‌ಗಳ ಕತೆ.