Monday, August 31, 2026
Monday, August 31, 2026

ಮಧುರೈನಿಂದ ಹೆಲಿಕಾಪ್ಟರ್ ಸೇವೆ ಆರಂಭ

ವಿಐಎಲ್ ಏವಿಯೇಷನ್ ಪ್ರೈವೇಟ್ ಲಿಮಿಟೆಡ್ ಸಂಸ್ಥೆಯು ಮಧುರೈ ಬಳಿಯ ನಾಗರತಿರಮ್ ಅಂಗಮ್ಮಾಳ್ ಆರ್ಟ್ಸ್ ಅಂಡ್ ಸೈನ್ಸ್ ಕಾಲೇಜು ಪರಿಸರದಲ್ಲಿ ದಕ್ಷಿಣ ಭಾರತದ ಹೆಲಿಕಾಪ್ಟರ್ ಕಾರ್ಯಾಚರಣಾ ಕೇಂದ್ರವಾದ 'ವಿಐಎಲ್ ಹೆಲಿ ಸ್ಟೇಷನ್'ಅನ್ನು ಪ್ರಾರಂಭಿಸಿದೆ.

ದಕ್ಷಿಣ ತಮಿಳುನಾಡಿನ ಪ್ರವಾಸೋದ್ಯಮ ಮತ್ತು ಸಾರಿಗೆ ವ್ಯವಸ್ಥೆಗೆ ಹೊಸ ಆಯಾಮ ನೀಡುವ ನಿಟ್ಟಿನಲ್ಲಿ ಪ್ರಮುಖ ಹೆಜ್ಜೆಯಿಡಲಾಗಿದೆ. ಮಧುರೈನಿಂದ ಜನಪ್ರಿಯ ಪ್ರವಾಸಿ ಹಾಗೂ ಧಾರ್ಮಿಕ ಕ್ಷೇತ್ರಗಳಾದ ಕೊಡೆಮಾಡ, ರಾಮೇಶ್ವರಂ ಮತ್ತು ತಿರುಚೆಂದೂರಿಗೆ ಕೇವಲ ಅರ್ಧ ಗಂಟೆಯಲ್ಲಿ (30 ನಿಮಿಷಗಳು) ತಲುಪಲು ಅನುಕೂಲವಾಗುವಂತೆ ಖಾಸಗಿ ಸಂಸ್ಥೆಯೊಂದು ಹೊಸ ಹೆಲಿಕಾಪ್ಟರ್ ಸೇವೆಯನ್ನು ಅಧಿಕೃತವಾಗಿ ಆರಂಭಿಸಿದೆ.

ಇದನ್ನೂ ಓದಿ: ದೆಹಲಿ ವಿಮಾನ ನಿಲ್ದಾಣ: 15 ವಿಮಾನಗಳ ಮಾರ್ಗ ಬದಲಾವಣೆ

ವಿಐಎಲ್ ಏವಿಯೇಷನ್ ಪ್ರೈವೇಟ್ ಲಿಮಿಟೆಡ್ ಸಂಸ್ಥೆಯು ಮಧುರೈ ಬಳಿಯ ನಾಗರತಿರಮ್ ಅಂಗಮ್ಮಾಳ್ ಆರ್ಟ್ಸ್ ಅಂಡ್ ಸೈನ್ಸ್ ಕಾಲೇಜು ಪರಿಸರದಲ್ಲಿ ದಕ್ಷಿಣ ಭಾರತದ ಹೆಲಿಕಾಪ್ಟರ್ ಕಾರ್ಯಾಚರಣಾ ಕೇಂದ್ರವಾದ 'ವಿಐಎಲ್ ಹೆಲಿ ಸ್ಟೇಷನ್'ಅನ್ನು ಪ್ರಾರಂಭಿಸಿದೆ.

ಪ್ರವಾಸೋದ್ಯಮ, ಧಾರ್ಮಿಕ ಯಾತ್ರೆಗಳು, ಕಾರ್ಪೊರೇಟ್ ಭೇಟಿಗಳು ಮತ್ತು ತುರ್ತು ವೈದ್ಯಕೀಯ ಸೇವೆಗಳ (Medical Emergencies) ಅವಶ್ಯಕತೆಗಳಿಗಾಗಿ ಈ ಹೆಲಿಕಾಪ್ಟರ್ ಸೇವೆಯನ್ನು ಬಳಸಿಕೊಳ್ಳಬಹುದು.

ಈ ಹೆಲಿಕಾಪ್ಟರ್‌ನಲ್ಲಿ ಒಟ್ಟು ಐವರು ಪ್ರಯಾಣಿಕರು ಏಕಕಾಲದಲ್ಲಿ ಪ್ರಯಾಣಿಸಬಹುದು. ಪ್ರತಿ ಗಂಟೆಗೆ ₹1.60 ಲಕ್ಷ ಶುಲ್ಕವನ್ನು ನಿಗದಿಪಡಿಸಲಾಗಿದೆ. ಪ್ರಯಾಣಿಕರು ಹೊರಡುವ ಸಮಯಕ್ಕಿಂತ ಕನಿಷ್ಠ 45 ನಿಮಿಷಗಳ ಮುಂಚಿತವಾಗಿ ಬುಕಿಂಗ್ ಮಾಡಿಕೊಳ್ಳಬೇಕು.

ವಿವಿಧ ಸ್ಥಳಗಳಿಗೆ ಹಾರಾಟದ ಸಮಯ:

  • ಮಧುರೈನಿಂದ ತಿರುಚೆಂದೂರು: 20 ನಿಮಿಷಗಳು
  • ಮಧುರೈನಿಂದ ರಾಮೇಶ್ವರಂ: 30 ನಿಮಿಷಗಳು
  • ಮಧುರೈನಿಂದ ಕೊಯಮತ್ತೂರು: 30 ನಿಮಿಷಗಳು
  • ಮಧುರೈನಿಂದ ಚೆನ್ನೈ: 1 ಗಂಟೆ 10 ನಿಮಿಷಗಳು

ವಿಶೇಷ ಸೌಲಭ್ಯಗಳು:

ಪ್ರಯಾಣಿಕರು ಕುಟುಂಬ ಸಮೇತ ಕೊಡೈಕೆನಾಲ್ ಅಥವಾ ಇತರೆ ಪ್ರವಾಸಿ ತಾಣಗಳಿಗೆ ತೆರಳಿದರೆ, ಹೆಲಿಕಾಪ್ಟರ್ ಅಲ್ಲಿ ನಿಲ್ಲುವ ಸಮಯಕ್ಕೆ ಯಾವುದೇ ಹೆಚ್ಚುವರಿ ಕಾಯುವಿಕೆಯ ಶುಲ್ಕವನ್ನು ವಿಧಿಸುವುದಿಲ್ಲ.

ಮುಂಬರುವ ದಿನಗಳಲ್ಲಿ ಪ್ರವಾಸಿಗರಿಗಾಗಿ ಕೈಗೆಟುಕುವ ದರದಲ್ಲಿ 'ಮಧುರೈ ಸಿಟಿ ಟೂರಿಸಂ' ಹೆಲಿಕಾಪ್ಟರ್ ಸವಾರಿಯನ್ನೂ ಪರಿಚಯಿಸಲು ಕಂಪನಿ ಯೋಜನೆ ರೂಪಿಸಿದೆ. ಮಧುರೈ ವಿಮಾನ ನಿಲ್ದಾಣಕ್ಕೆ ಅಂತಾರಾಷ್ಟ್ರೀಯ ಮಾನ್ಯತೆ ದೊರೆತಿರುವ ಈ ಸಂದರ್ಭದಲ್ಲಿ, ಈ ಹೆಲಿಕಾಪ್ಟರ್ ಸೇವೆಯು ದಕ್ಷಿಣ ತಮಿಳುನಾಡಿನ ಪ್ರವಾಸೋದ್ಯಮ ಬೆಳವಣಿಗೆಗೆ ಮತ್ತಷ್ಟು ಬಲ ತುಂಬಲಿದೆ.

Pramod Mohan Hegde

Pramod Mohan Hegde

A media professional with four years of experience in journalism, having worked with leading Kannada publications such as Vistara, Vijayavani, and Vijaya Karnataka as a cinema journalist. Also an author with a keen interest in travel and cinema. Currently serving as Senior Sub Editor at Pravasi Prapancha, contributing editorial expertise and engaging storytelling to the media industry.

ಮೇ 1 ರಿಂದ ವಿದೇಶಿ ಪ್ರವಾಸಿಗರಿಗೆ ಥಾಯ್ಲೆಂಡ್‌ನಲ್ಲಿ ಡಿಜಿಟಲ್ ಆಗಮನ ಕಾರ್ಡ್ ಕಡ್ಡಾಯ

Read Previous

ಮೇ 1 ರಿಂದ ವಿದೇಶಿ ಪ್ರವಾಸಿಗರಿಗೆ ಥಾಯ್ಲೆಂಡ್‌ನಲ್ಲಿ ಡಿಜಿಟಲ್ ಆಗಮನ ಕಾರ್ಡ್ ಕಡ್ಡಾಯ

ಬೇಸಿಗೆಯ ಪ್ರವಾಸಕ್ಕಿದು ಸೂಕ್ತ ಸಮಯ; ತೆರಳುವ ಮುನ್ನ ಪೊಲೀಸರ ಈ ಸಲಹೆಗಳನ್ನು ಪಾಲಿಸಿ

Read Next

ಬೇಸಿಗೆಯ ಪ್ರವಾಸಕ್ಕಿದು ಸೂಕ್ತ ಸಮಯ; ತೆರಳುವ ಮುನ್ನ ಪೊಲೀಸರ ಈ ಸಲಹೆಗಳನ್ನು ಪಾಲಿಸಿ