ಅಡಿಗಾಸ್ ಯಾತ್ರಾದಿಂದ ಅಮರನಾಥ ಯಾತ್ರೆ
ಅಡಿಗಾಸ್ ಯಾತ್ರಾ ಸಂಸ್ಥೆಯಿಂದ ಫಿಕ್ಸೆಡ್ ಗ್ರೂಪ್ ಟೂರ್ ಅಡಿಯಲ್ಲಿ ಯಾತ್ರಿಕರಿಗೆ ಮೂರು ವಿಧದಲ್ಲಿ ಹೆಲಿಕಾಪ್ಟರ್ ಸೌಲಭ್ಯ ಸಹಿತ ಟೂರ್ ಆಯೋಜಿಸಲಾಗಿದೆ. ಇದರಲ್ಲಿ ಅಮರನಾಥಕ್ಕೆ 5 ದಿನಗಳ ಯಾತ್ರೆಯಲ್ಲಿ ಹೆಲಿಕಾಪ್ಟರ್ ಮೂಲಕ ಪ್ರವಾಸ, 7 ದಿನಗಳಲ್ಲಿ ಅಮರನಾಥ-ವೈಷ್ಣೋದೇವಿ ಕ್ಷೇತ್ರ ದರ್ಶನ ಹಾಗೂ 9 ದಿನಗಳ ಅಮರನಾಥ-ವೈಷ್ಣೋದೇವಿ-ಅಮೃತಸರಕ್ಕೆ ಪ್ರವಾಸವನ್ನು ಕೈಗೊಳ್ಳಬಹುದು.
ಹಿಂದೂಗಳಿಗೆ ಅತ್ಯಂತ ಪವಿತ್ರವಾದ ಅಮರನಾಥ ಯಾತ್ರೆಯನ್ನು ಯಾತ್ರಿಕರಿಗೆ ಸುವ್ಯವಸ್ಥಿತವಾಗಿ ಕಲ್ಪಿಸಿಕೊಡಲು ಅಡಿಗಾಸ್ ಯಾತ್ರಾ ಸಿದ್ಧವಾಗಿದೆ. ಜಮ್ಮು ಕಾಶ್ಮೀರದ ಅನಂತನಾಗ್ ಜಿಲ್ಲೆಯಲ್ಲಿರುವ ಪೆಹಲ್ಗಾಮ್ ಬಳಿ ಅಮರನಾಥ ಗುಹಾ ದೇವಾಲಯವಿದ್ದು, ಇದು ಸಮುದ್ರಮಟ್ಟದಿಂದ 3,888 ಮೀಟರ್ ಎತ್ತರದಲ್ಲಿದೆ. ಸುತ್ತಮುತ್ತಲೂ ಹಿಮಶಿಖರಗಳಿಂದ ಕೂಡಿರುವ ಅಮರನಾಥ ಕ್ಷೇತ್ರವು ಭಕ್ತಾದಿಗಳಿಗೆ ಅಭೂತಪೂರ್ವ ದೈವಿಕ ಅನುಭೂತಿಯನ್ನು ನೀಡುತ್ತದೆ. 2026ರ ಜುಲೈನಲ್ಲಿ ಅಮರನಾಥ ಯಾತ್ರೆ ಆರಂಭವಾಗಲಿದೆ.
ಇದನ್ನೂ ಓದಿ: ವಿಶ್ವ ಪಾರಂಪರಿಕ ದಿನ: ಸ್ಮಾರಕಗಳ ಸಂರಕ್ಷಣೆಗಿದು ಸೂಕ್ತ ಸಮಯ
ಅಡಿಗಾಸ್ ಯಾತ್ರಾ ಸಂಸ್ಥೆಯಿಂದ ಫಿಕ್ಸೆಡ್ ಗ್ರೂಪ್ ಟೂರ್ ಅಡಿಯಲ್ಲಿ ಯಾತ್ರಿಕರಿಗೆ ಮೂರು ವಿಧದಲ್ಲಿ ಹೆಲಿಕಾಪ್ಟರ್ ಸೌಲಭ್ಯ ಸಹಿತ ಟೂರ್ ಆಯೋಜಿಸಲಾಗಿದೆ. ಇದರಲ್ಲಿ ಅಮರನಾಥಕ್ಕೆ 5 ದಿನಗಳ ಯಾತ್ರೆಯಲ್ಲಿ ಹೆಲಿಕಾಪ್ಟರ್ ಮೂಲಕ ಪ್ರವಾಸ, 7 ದಿನಗಳಲ್ಲಿ ಅಮರನಾಥ-ವೈಷ್ಣೋದೇವಿ ಕ್ಷೇತ್ರ ದರ್ಶನ ಹಾಗೂ 9 ದಿನಗಳ ಅಮರನಾಥ-ವೈಷ್ಣೋದೇವಿ-ಅಮೃತಸರಕ್ಕೆ ಪ್ರವಾಸವನ್ನು ಕೈಗೊಳ್ಳಬಹುದು. ಸ್ಟ್ಯಾಂಡರ್ಡ್ ಗ್ರೂಪ್ ಟೂರ್‌ನಲ್ಲಿ ಅಮರನಾಥ ದೇವಾಲಯದ ಜತೆಗೆ ಗುಲ್ ಮಾರ್ಗ್, ಸೋನಾ ಮಾರ್ಗ್, ಕತ್ರಾ, ವೈಷ್ಣೋದೇವಿ ದೇಗುಲದ ದರ್ಶನವನ್ನು ಕೈಗೊಳ್ಳಬಹುದು.
ಶ್ರೀಮಾತಾ ವೈಷ್ಣೋದೇವಿ ಲಕ್ಷ್ಮೀ ದೇವಿಯ ಸನ್ನಿಧಾನವಾಗಿದ್ದು, ಶಕ್ತಿಪೀಠಗಳಲ್ಲಿ ಒಂದಾಗಿದೆ. ಅಮರನಾಥ ಯಾತ್ರೆಯಲ್ಲಿ ಅಡಿಗಾಸ್ ಯಾತ್ರಾದ ಅಡುಗೆ ಸಿಬ್ಬಂದಿ ಜತೆಗಿದ್ದು, ರುಚಿಕಟ್ಟಾದ ಊಟೋಪಚಾರದ ವ್ಯವಸ್ಥೆಯನ್ನು ಯಾತ್ರಿಕರಿಗೆ ಒದಗಿಸುತ್ತಾರೆ. ಆಸಕ್ತರು ಹೆಚ್ಚಿನ ಮಾಹಿತಿಗೆ ಅಡಿಗಾಸ್ ಯಾತ್ರಾವನ್ನು ಸಂಪರ್ಕಿಸಿ: 080-26616678 / 7022259008 / 9449478944
Website: www. adigasyatra.com