Wednesday, July 22, 2026
Wednesday, July 22, 2026

ಮುಂಡಾ ಪಹಾಡ್‌ ಬೀಚ್

ಅಂಡಮಾನ್‌ನಲ್ಲಿ 572 ದ್ವೀಪಗಳಿವೆ. ಆದರೆ ಜನವಸತಿ ಇರುವುದು ಕೇವಲ 37 ದ್ವೀಪಗಳಲ್ಲಿ. ಚಿಡಿಯಾ ಟಾಪ್ ದ್ವೀಪದ ಮುಖ್ಯ ತೀರದ ಬಳಿಯೇ ಮುಂಡಾ ಪಹಾಡ್ ಇದೆ. ಸಣ್ಣ ಚಾರಣದೊಂದಿಗೆ, ಎರಡೂ ಬದಿಗಳಲ್ಲಿ ಮೋಹಕ ಪ್ರಕೃತಿ ಸೌಂದರ್ಯ ವೀಕ್ಷಿಸುತ್ತಾ, ಮುಂಡಾ ಪಹಾಡ್ ಬೀಚ್‌ ತಲುಪಬಹುದು.

  • ಶ್ರೀನಿವಾಸ ಜೋಕಟ್ಟೆ

ಅಂಡಮಾನ್‌ನ ರಾಜಧಾನಿ ಪೋರ್ಟ್ ಬ್ಲೇರ್. ಅದರ ಸಮೀಪದಲ್ಲಿ ಚಿಡಿಯಾ ಟಾಪುನ ಪ್ರಶಾಂತ ಮುಂಡಾ ಪಹಾಡ್ ಬೀಚ್‌ ಇದೆ. ಅಲ್ಲಿಂದ ನಮ್ಮ ಅಂಡಮಾನ್ ಪ್ರವಾಸದ ಬೀಚ್ ಸುತ್ತಾಟ ಆರಂಭವಾಗಿತ್ತು.

ಪೋರ್ಟ್ ಬ್ಲೇರ್‌ನ ವೀರ ಸಾವರ್ಕರ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಇಳಿದಾಗ ತುಂತುರು ಮಳೆ. ಅಲ್ಲಿಂದ ನಾವು ಪಾಮ್‌ಗ್ರೋವ್ ಇಕೋ ರೆಸಾರ್ಟ್‌ಗೆ ತಲುಪುವಾಗ ದಾರಿಯುದ್ದಕ್ಕೂ ತೆಂಗು- ಕಂಗು ವೃಕ್ಷರಾಶಿ ಕಂಡಿತ್ತು. ಮಧ್ಯಾಹ್ನ ಊಟದ ನಂತರ ವಿಶ್ರಾಂತಿ ಪಡೆದು ಸಂಜೆಗೆ ಅಂಡಮಾನ್ ದ್ವೀಪ ಸಮೂಹಗಳ ಸುತ್ತಾಟಕ್ಕೆ ಹೊರಟೆವು.

ಇದನ್ನೂ ಓದಿ: ಅಂಡಮಾನ್‌ನ ಬಂದಿಖಾನೆಯಲ್ಲಿ ವೀರ ಸಾವರ್ಕರ್‌ರನ್ನು ಬಂದಿಸಿಟ್ಟಿದ್ದರು

ಮುಂಡಾ ಪಹಾಡ್ ಬೀಚ್

ಅಂಡಮಾನ್‌ನಲ್ಲಿ 572 ದ್ವೀಪಗಳಿವೆ. ಆದರೆ ಜನವಸತಿ ಇರುವುದು ಕೇವಲ 37 ದ್ವೀಪಗಳಲ್ಲಿ. ಚಿಡಿಯಾ ಟಾಪ್ ದ್ವೀಪದ ಮುಖ್ಯ ತೀರದ ಬಳಿಯೇ ಮುಂಡಾ ಪಹಾಡ್ ಇದೆ. ಸಣ್ಣ ಚಾರಣದೊಂದಿಗೆ, ಎರಡೂ ಬದಿಗಳಲ್ಲಿ ಮೋಹಕ ಪ್ರಕೃತಿ ಸೌಂದರ್ಯ ವೀಕ್ಷಿಸುತ್ತಾ, ಮುಂಡಾ ಪಹಾಡ್ ಬೀಚ್‌ ತಲುಪಬಹುದು. ಇದು ಪೋರ್ಟ್ ಬ್ಲೇರ್‌ನಿಂದ ಸುಮಾರು 26- 28 ಕಿಮೀ. ದೂರದಲ್ಲಿದೆ.‌

Untitled design (16)

ಸುನಾಮಿಯ ಸಾಕ್ಷಿ: ಮರಗಳರಾಶಿ

ಈ ಬೀಚ್ ಸುಮಾರು ಒಂದೂವರೆ ಕಿಮೀ ವಿಸ್ತರಿಸಿದ್ದು, ಸ್ವಚ್ಛವಾದ ನೀಲಿ ನೀರನ್ನು ಹೊಂದಿದೆ. 2004ರ ಸುನಾಮಿಯ ಭೀಕರತೆಯ ಸಾಕ್ಷಿಯಾಗಿ ಉರುಳಿ ಬಿದ್ದ ಅದೆಷ್ಟೋ ದೊಡ್ಡ ಮರಗಳು ಇನ್ನೂ ತೀರದಲ್ಲಿ ಹಾಗೆಯೇ ಬಿದ್ದುಕೊಂಡಿವೆ. ಈ ಬೀಚ್‌ನ ಕೆಲವು ಮರಗಳ ಕಾಂಡಗಳನ್ನು ಪ್ರವಾಸಿಗರು ಕೂರಲು ಬೆಂಚುಗಳ ಮಾದರಿಯಲ್ಲಿ ಕೆತ್ತಿಡಲಾಗಿದೆ. ಅದರ ಪಕ್ಕದಲ್ಲಿ ಚಿಡಿಯಾ ಟಾಪು ಝೂ. ಅಲ್ಲಿ ನೂರು ವರ್ಷಗಳನ್ನು ದಾಟಿದ ನೂರಾರು ವೃಕ್ಷಗಳಿವೆ.

ಸೂರ್ಯಾಸ್ತ ವೀಕ್ಷಣೆಗೆ ಬೆಸ್ಟ್‌ ಚಾಯ್ಸ್‌

ಈ ಬೀಚ್ ದಕ್ಷಿಣ ಅಂಡಮಾನ್ ದ್ವೀಪದ ದಕ್ಷಿಣದ ತುದಿಯಲ್ಲಿದೆ. ಹಚ್ಚ ಹಸಿರಿನ, ಚಿಕ್ಕ ಚಿಕ್ಕ ಬಂಡೆಗಳು ಮತ್ತು ಕಲ್ಲಿನ ರಚನೆಗಳಿಂದ ಆವೃತವಾಗಿದೆ. ಪ್ರವಾಸಿಗರು ಸಾಮಾನ್ಯವಾಗಿ ಮುಂಡಾ ಪಹಾಡ್ ಬೀಚ್‌ಗೆ ಮಧ್ಯಾಹ್ನದ ನಂತರವೇ ಭೇಟಿ ನೀಡುತ್ತಾರೆ. ಯಾಕೆಂದರೆ ಪಕ್ಕದ ಚಿಡಿಯಾ ಟಾಪುನ ಸೂರ್ಯಾಸ್ತದ ಸ್ಥಳ ಮತ್ತು ಸುತ್ತಮುತ್ತಲಿನ ಅರಣ್ಯ ಹಾದಿಗಳೊಂದಿಗೆ ಸಂಪೂರ್ಣ ಪ್ರಕೃತಿ ಸೌಂದರ್ಯವನ್ನು ಅನುಭವಿಸಲು ಈ ಸಮಯ ದಿ ಬೆಸ್ಟ್‌. ಇದು ತನ್ನಲ್ಲಿನ ಜೀವವೈವಿಧ್ಯ ಮೇಲಾಗಿ ವೈವಿಧ್ಯಮಯ ಪಕ್ಷಿ ಪ್ರಭೇದಗಳಿಗೆ ಪ್ರಸಿದ್ಧ ದ್ವೀಪ. ಇದಕ್ಕೆ 'ಪಕ್ಷಿ ದ್ವೀಪ' ಎಂದೂ ಕರೆಯಲಾಗುತ್ತದೆ.

ಮಾಹಿತಿಗಾಗಿ

ಅಂಡಮಾನ್ ದ್ವೀಪಗಳಿಗೆ ಭೇಟಿ ನೀಡಲು ಅಕ್ಟೋಬರ್‌ನಿಂದ ಮೇ ತಿಂಗಳ ನಡುವಿನ ಸಮಯ ಹೆಚ್ಚು ಸೂಕ್ತ. ಈ ಸಮಯದಲ್ಲಿ ಹವಾಮಾನವು ಆಹ್ಲಾದಕರವಾಗಿರುತ್ತದೆ. ಸಮುದ್ರವು ಶಾಂತವಾಗಿರುತ್ತದೆ. ಬೀಚ್‌ ವಾಕ್‌, ಪ್ರವಾಸಿ ತಾಣಗಳ ಸುತ್ತಾಟ ಮತ್ತು ಸ್ಕೂಬಾ ಡೈವಿಂಗ್‌ನಂಥ ಸಾಹಸ ಜಲಕ್ರೀಡೆಗಳಿಗೆ ಸೂಕ್ತವಾದ ಸಮಯ.

ದಾರಿ ಹೇಗೆ?

ಪೋರ್ಟ್ ಬ್ಲೇರ್‌ನಿಂದ ಟ್ಯಾಕ್ಸಿ ಮೂಲಕ ಮುಂಡಾ ಪಹಾಡ್‌ ತಲುಪಬಹುದು.

Admin

Admin

Pravasi Prapancha – A pioneering initiative led by Vishweshwar Bhat, the esteemed journalist and head of the Vishwavani Group. It is the first and only travel-focused publication in Kannada journalism, dedicated exclusively to news, information, and travel narratives about various destinations. The digital media counterpart of this venture is Pravasi Prapancha Digital Channel, which brings travel-related news from across the state, country, and world. It features fascinating insights, traveler experiences, interviews related to travel, entertainment segments, and much more. Editor-in-Chief: Shri Vishweshwar Bhat

ಗೋವಾ ಹೋದರೆ ಈ ಬೀಚ್‌ಗಳನ್ನು ಮಿಸ್‌ ಮಾಡಿಕೊಳ್ಳಲೇಬೇಡಿ!

Read Previous

ಗೋವಾ ಹೋದರೆ ಈ ಬೀಚ್‌ಗಳನ್ನು ಮಿಸ್‌ ಮಾಡಿಕೊಳ್ಳಲೇಬೇಡಿ!

ತತ್ಕಾಲ್ ಬುಕಿಂಗ್ ಸಮಯದಲ್ಲಿ ಬದಲಾವಣೆಗಲಿಲ್ಲ: IRCTC ಸ್ಪಷ್ಟನೆ

Read Next

ತತ್ಕಾಲ್ ಬುಕಿಂಗ್ ಸಮಯದಲ್ಲಿ ಬದಲಾವಣೆಗಲಿಲ್ಲ: IRCTC ಸ್ಪಷ್ಟನೆ