ದಕ್ಷಿಣ ಕರಾವಳಿ ರೈಲ್ವೇಯಲ್ಲಿ ಸುರಕ್ಷತಾ ಪರಿಶೀಲನೆ
ವಿಶಾಖಪಟ್ಟಣದಲ್ಲಿ ದಕ್ಷಿಣ ಕರಾವಳಿ ರೈಲ್ವೇ ವಲಯದ ಸುರಕ್ಷತಾ ಕ್ರಮಗಳ ಕುರಿತು ಉನ್ನತ ಮಟ್ಟದ ಪರಿಶೀಲನಾ ಸಭೆ ನಡೆಯಿತು.
ವಿಶಾಖಪಟ್ಟಣದಲ್ಲಿ ದಕ್ಷಿಣ ಕರಾವಳಿ ರೈಲ್ವೇ ವಲಯದ ಸುರಕ್ಷತಾ ಕ್ರಮಗಳ ಕುರಿತು ಉನ್ನತ ಮಟ್ಟದ ಪರಿಶೀಲನಾ ಸಭೆ ನಡೆಯಿತು. ದಕ್ಷಿಣ ಮಧ್ಯ ವಲಯದ ರೈಲ್ವೇ ಸುರಕ್ಷತಾ ಆಯುಕ್ತೆ (CRS) ಮಾಧವಿ ಅವರು ದಕ್ಷಿಣ ಕರಾವಳಿ ರೈಲ್ವೇಯ ಪ್ರಧಾನ ವ್ಯವಸ್ಥಾಪಕ ಸಂದೀಪ್ ಮಥೂರ್ ಹಾಗೂ ಹಿರಿಯ ಅಧಿಕಾರಿಗಳೊಂದಿಗೆ ಸಭೆ ನಡೆಸಿದರು.
ರೈಲು ಕಾರ್ಯಾಚರಣೆಯಲ್ಲಿ ಸುರಕ್ಷತೆಯೇ ಪ್ರಮುಖ ಆದ್ಯತೆಯಾಗಿರಬೇಕು ಎಂದು ಮಾಧವಿ ಒತ್ತಿ ಹೇಳಿದರು. ವಲಯದ ಒಟ್ಟಾರೆ ಸುರಕ್ಷತಾ ಕಾರ್ಯಕ್ಷಮತೆ, ಸುರಕ್ಷತಾ ಸುಧಾರಣಾ ಕ್ರಮಗಳು, ಕಾನೂನುಬದ್ಧ ನಿಯಮಗಳ ಪಾಲನೆ ಹಾಗೂ ಅಪಘಾತರಹಿತ ರೈಲು ಸಂಚಾರಕ್ಕಾಗಿ ಕೈಗೊಳ್ಳಬೇಕಾದ ಕ್ರಮಗಳ ಕುರಿತು ಸಭೆಯಲ್ಲಿ ಚರ್ಚಿಸಲಾಯಿತು.
ಹಳಿಗಳು, ಪಾಯಿಂಟ್‌ಗಳು ಮತ್ತು ಕ್ರಾಸಿಂಗ್‌ಗಳು, ಓವರ್‌ಹೆಡ್ ವಿದ್ಯುತ್ ವ್ಯವಸ್ಥೆ, ಸಿಗ್ನಲಿಂಗ್ ಉಪಕರಣಗಳು, ಬೋಗಿಗಳು, ಸರಕು ಸಾಗಣೆ ಬೋಗಿಗಳು ಹಾಗೂ ಲೋಕೋಮೋಟಿವ್‌ಗಳ ನಿಗದಿತ ನಿರ್ವಹಣೆಯನ್ನು ಕಟ್ಟುನಿಟ್ಟಾಗಿ ಪಾಲಿಸುವಂತೆ ಸೂಚಿಸಲಾಯಿತು. ರಸ್ತೆ ಸುರಕ್ಷತಾ ಕಾಮಗಾರಿಗಳು, ರೈಲ್ವೇ ಮೇಲ್ಸೇತುವೆ ಮತ್ತು ಕೆಳಸೇತುವೆ ನಿರ್ಮಾಣ, ಲೆವೆಲ್ ಕ್ರಾಸಿಂಗ್‌ಗಳ ಇಂಟರ್‌ಲಾಕಿಂಗ್ ಹಾಗೂ ಸಾರ್ವಜನಿಕ ಜಾಗೃತಿ ಅಭಿಯಾನಗಳಿಗೂ ಒತ್ತು ನೀಡಲಾಯಿತು.
ಮಳೆಗಾಲದ ಮುನ್ನೆಚ್ಚರಿಕಾ ಕ್ರಮಗಳ ಜತೆಗೆ ‘ಕವಚ್’ ರೈಲು ಸುರಕ್ಷತಾ ವ್ಯವಸ್ಥೆ, ಡಿಜಿಟಲ್ ಆಕ್ಸಲ್ ಕೌಂಟರ್‌ಗಳು ಮತ್ತು ಬೋಗಿಗಳಲ್ಲಿನ ಅಗ್ನಿ ಪತ್ತೆ ವ್ಯವಸ್ಥೆಗಳ ಅಳವಡಿಕೆ ಹಾಗೂ ನಿರ್ವಹಣೆಯನ್ನು ತ್ವರಿತಗೊಳಿಸುವಂತೆ ಸೂಚಿಸಲಾಯಿತು.