ಬೆಂಗಳೂರು-ಚೆನ್ನೈ ಎಕ್ಸ್‌ಪ್ರೆಸ್‌ವೇ ಟೋಲ್ ದರ ಏರಿಕೆ
ಹೊಸ ಪರಿಷ್ಕರಣೆಯಂತೆ ಕಾರು, ಜೀಪ್ ಮತ್ತು ವ್ಯಾನ್‌ಗಳಂಥ ಲಘು ವಾಹನಗಳಿಗೆ ಪ್ರಯಾಣಿಸುವ ದೂರಕ್ಕೆ ಅನುಗುಣವಾಗಿ ಅಂದಾಜು ರು. 355 ರಿಂದ ರು. 380 ರವರೆಗೆ ಟೋಲ್ ನಿಗದಿಪಡಿಸಲಾಗಿದೆ.
ಬೆಂಗಳೂರು ಮತ್ತು ಚೆನ್ನೈ ನಡುವಿನ ಪ್ರಯಾಣದ ಸಮಯವನ್ನು ಗಣನೀಯವಾಗಿ ತಗ್ಗಿಸಿರುವ ಬಹುನಿರೀಕ್ಷಿತ 'ಬೆಂಗಳೂರು-ಚೆನ್ನೈ ಎಕ್ಸ್‌ಪ್ರೆಸ್‌ವೇ' ಮಾರ್ಗದಲ್ಲಿ ಸಂಚರಿಸುವ ವಾಹನ ಸವಾರರಿಗೆ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರವು ಪ್ರಮುಖ ಸೂಚನೆ ನೀಡಿದೆ. ಎಕ್ಸ್‌ಪ್ರೆಸ್‌ವೇ ಕಾರ್ಯಾಚರಣೆ ಹಾಗೂ ನಿರ್ವಹಣಾ ವೆಚ್ಚದ ಹಿನ್ನೆಲೆಯಲ್ಲಿ ಟೋಲ್ ದರಗಳನ್ನು ಪರಿಷ್ಕರಿಸಲಾಗಿದ್ದು, ಪರಿಷ್ಕೃತ ನೂತನ ಟೋಲ್ ದರಗಳು ಅಧಿಕೃತವಾಗಿ ಜಾರಿಗೆ ಬಂದಿವೆ.
ಇದನ್ನೂ ಓದಿ: ದೆಹಲಿ–ನೇಪಾಳ ರಸ್ತೆ ಪ್ರಯಾಣ ಇನ್ನಷ್ಟು ಸುಲಭ
ಹೊಸ ಪರಿಷ್ಕರಣೆಯಂತೆ ಕಾರು, ಜೀಪ್ ಮತ್ತು ವ್ಯಾನ್‌ಗಳಂಥ ಲಘು ವಾಹನಗಳಿಗೆ ಪ್ರಯಾಣಿಸುವ ದೂರಕ್ಕೆ ಅನುಗುಣವಾಗಿ ಅಂದಾಜು ರು. 355 ರಿಂದ ರು. 380 ರವರೆಗೆ ಟೋಲ್ ನಿಗದಿಪಡಿಸಲಾಗಿದೆ. ಲಘು ವಾಣಿಜ್ಯ ವಾಹನಗಳು ಮತ್ತು ಮಿನಿ ಬಸ್‌ಗಳಿಗೆ ರು. 570 ಹಾಗೂ 2-ಆಕ್ಸಲ್ ಟ್ರಕ್ ಮತ್ತು ಬಸ್‌ಗಳಿಗೆ ರು. 1,190 ಟೋಲ್ ಪಾವತಿಸಬೇಕಾಗುತ್ತದೆ. ಇನ್ನು 3-ಆಕ್ಸಲ್ ವಾಣಿಜ್ಯ ವಾಹನಗಳಿಗೆ ರು. 1,295, ಬೃಹತ್ ನಿರ್ಮಾಣ ಯಂತ್ರೋಪಕರಣ ವಾಹನಗಳಿಗೆ ರು. 1,865 ಮತ್ತು 7 ಅಥವಾ ಅದಕ್ಕಿಂತ ಹೆಚ್ಚು ಆಕ್ಸಲ್ ಹೊಂದಿರುವ ಅತಿ ದೊಡ್ಡ ವಾಣಿಜ್ಯ ವಾಹನಗಳಿಗೆ ರು. 2,270 ಟೋಲ್ ದರ ನಿಗದಿಯಾಗಿದೆ.
ಈ ಎಕ್ಸ್‌ಪ್ರೆಸ್‌ವೇನಲ್ಲಿ ವಾಹನ ಸವಾರರ ಅನುಕೂಲಕ್ಕಾಗಿ ಸಾಂಪ್ರದಾಯಿಕ ಟೋಲ್ ಗೇಟ್‌ಗಳ ಕ್ಯೂ ಇರುವುದಿಲ್ಲ. ಬದಲಿಗೆ ಆಟೋಮ್ಯಾಟಿಕ್ ನಂಬರ್ ಪ್ಲೇಟ್ ಗುರುತಿಸುವಿಕೆ ಹಾಗೂ ಜಿಪಿಎಸ್ ತಂತ್ರಜ್ಞಾನದ ಮೂಲಕ ವಾಹನ ಚಲಿಸುವ ದೂರಕ್ಕೆ ಅನುಗುಣವಾಗಿ ಫಾಸ್ಟಾಗ್ ಖಾತೆಯಿಂದ ನೇರವಾಗಿ ಟೋಲ್ ಕಡಿತಗೊಳ್ಳಲಿದೆ. ದರ ಏರಿಕೆಯಾಗಿದ್ದರೂ ಈ ನೂತನ ಎಕ್ಸ್‌ಪ್ರೆಸ್‌ವೇ ಬೆಂಗಳೂರಿನಿಂದ ಚೆನ್ನೈ ನಡುವಿನ ಪ್ರಯಾಣದ ಸಮಯವನ್ನು ಹಳೆಯ 6-7 ಗಂಟೆಗಳಿಂದ ಕೇವಲ 2.5 ರಿಂದ 3 ಗಂಟೆಗಳಿಗೆ ತಗ್ಗಿಸಿದೆ.
ಇದರ ಜತೆಗೆ, ಟೋಲ್ ಪ್ಲಾಜಾದಿಂದ 20 ಕಿಲೋಮೀಟರ್ ವ್ಯಾಪ್ತಿಯಲ್ಲಿ ವಾಸಿಸುವ ಸ್ಥಳೀಯ ನಿವಾಸಿಗಳಿಗಾಗಿ ಮಾಸಿಕ ರಿಯಾಯಿತಿ ಪಾಸ್ ಸೌಲಭ್ಯವು ಯಥಾವತ್ತಾಗಿ ಮುಂದುವರಿಯಲಿದೆ. ಬೆಂಗಳೂರಿನ ಹೊಸಕೋಟೆ, ಬಂಗಾರಪೇಟೆ ಹಾಗೂ ಚಿತ್ತೂರು ಮಾರ್ಗವಾಗಿ ಪ್ರಯಾಣಿಸುವ ವಾಹನ ಸವಾರರು ತಮ್ಮ ಫಾಸ್ಟಾಗ್‌ನಲ್ಲಿ ಸೂಕ್ತ ಪ್ರಮಾಣದ ಬ್ಯಾಲೆನ್ಸ್ ಕಾಯ್ದುಕೊಳ್ಳಲು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಮನವಿ ಮಾಡಿದೆ.