Monday, July 27, 2026
Monday, July 27, 2026

ದೆಹಲಿ–ನೇಪಾಳ ರಸ್ತೆ ಪ್ರಯಾಣ ಇನ್ನಷ್ಟು ಸುಲಭ

ದೆಹಲಿ ಹಾಗೂ ಉತ್ತರ ಭಾರತದ ಪ್ರವಾಸಿಗರಿಗೆ ನೇಪಾಳ ರಸ್ತೆ ಪ್ರಯಾಣ ಮತ್ತಷ್ಟು ವೇಗವಾಗಲಿದೆ.

ದೆಹಲಿ ಹಾಗೂ ಉತ್ತರ ಭಾರತದ ಪ್ರವಾಸಿಗರಿಗೆ ನೇಪಾಳ ರಸ್ತೆ ಪ್ರಯಾಣ ಮತ್ತಷ್ಟು ವೇಗವಾಗಲಿದೆ. ಭಾರತ-ನೇಪಾಳ ಸಂಪರ್ಕವನ್ನು ಬಲಪಡಿಸುವ ಗೋರಖ್‌ಪುರ್–ಸೋನೌಲಿ ನಾಲ್ಕು ಪಥದ ರಾಷ್ಟ್ರೀಯ ಹೆದ್ದಾರಿ (NH-24) ಕಾಮಗಾರಿ ಸುಮಾರು 89% ಪೂರ್ಣಗೊಂಡಿದ್ದು, ಶೀಘ್ರದಲ್ಲೇ ಸಾರ್ವಜನಿಕ ಸಂಚಾರಕ್ಕೆ ತೆರೆದುಕೊಳ್ಳುವ ನಿರೀಕ್ಷೆಯಿದೆ.

Untitled design - 2026-07-25T181735.537

79.5 ಕಿಮೀ. ಉದ್ದದ ಈ ಹೊಸ ನಾಲ್ಕು ಪಥದ ಹೆದ್ದಾರಿ ಗೋರಖ್‌ಪುರ್‌ನಿಂದ ಸೋನೌಲಿ ಗಡಿವರೆಗೆ ವೇಗವಾದ ಮತ್ತು ಸುರಕ್ಷಿತ ಸಂಚಾರಕ್ಕೆ ಅನುಕೂಲವಾಗಲಿದೆ. ಪ್ರಸ್ತುತ ಇರುವ ಎರಡು ಪಥದ ರಸ್ತೆಯಲ್ಲಿ ಸಂಚಾರ ದಟ್ಟಣೆ, ಟ್ರಕ್‌ಗಳ ಸಾಲು ಹಾಗೂ ಬಾಟಲ್‌ನೆಕ್ ಸಮಸ್ಯೆಯಿಂದ ಪ್ರಯಾಣಿಕರು ಸಾಕಷ್ಟು ತೊಂದರೆ ಅನುಭವಿಸುತ್ತಿದ್ದಾರೆ. ಹೊಸ ಹೆದ್ದಾರಿ ಕಾರ್ಯಾರಂಭವಾದ ಬಳಿಕ ದೆಹಲಿ, ಉತ್ತರ ಪ್ರದೇಶ ಹಾಗೂ ಬಿಹಾರದಿಂದ ನೇಪಾಳ ಗಡಿಗೆ ತಲುಪುವ ಸಮಯ ಗಮನಾರ್ಹವಾಗಿ ಕಡಿಮೆಯಾಗಲಿದೆ. ದೆಹಲಿಯಿಂದ ನೇಪಾಳ ಗಡಿಯವರೆಗೆ ಸುಮಾರು 8 ಗಂಟೆಗಳಲ್ಲಿ ತಲುಪುವ ಸಾಧ್ಯತೆಯಿದೆ.

ಈ ಯೋಜನೆಯಲ್ಲಿ ರೈಲು ಮೇಲ್ಸೇತುವೆ, ಎರಡು ಫ್ಲೈಓವರ್‌ಗಳು, 24 ಅಂಡರ್‌ಪಾಸ್‌ಗಳು, 105 ಕಲ್ವರ್ಟ್‌ಗಳು, 68 ಕಿಮೀ. ಸರ್ವಿಸ್ ರಸ್ತೆ ಹಾಗೂ ಸುಧಾರಿತ ಸಂಚಾರ ನಿರ್ವಹಣಾ ವ್ಯವಸ್ಥೆ (ATMS) ಅಳವಡಿಸಲಾಗುತ್ತಿದೆ. ಸಿಸಿಟಿವಿ, ಎಲೆಕ್ಟ್ರಾನಿಕ್ ಮಾಹಿತಿ ಫಲಕಗಳು ಮತ್ತು ತುರ್ತು ಸಹಾಯ ವ್ಯವಸ್ಥೆಗಳು ರಸ್ತೆ ಸುರಕ್ಷತೆಯನ್ನು ಹೆಚ್ಚಿಸಲಿವೆ. ಈ ಹೆದ್ದಾರಿ ಭಾರತ–ನೇಪಾಳ ನಡುವಿನ ಪ್ರವಾಸೋದ್ಯಮ, ವ್ಯಾಪಾರ ಮತ್ತು ಗಡಿ ಸಂಪರ್ಕಕ್ಕೆ ಹೊಸ ಉತ್ತೇಜನ ನೀಡುವ ನಿರೀಕ್ಷೆಯಿದೆ.

Admin

Admin

Pravasi Prapancha – A pioneering initiative led by Vishweshwar Bhat, the esteemed journalist and head of the Vishwavani Group. It is the first and only travel-focused publication in Kannada journalism, dedicated exclusively to news, information, and travel narratives about various destinations. The digital media counterpart of this venture is Pravasi Prapancha Digital Channel, which brings travel-related news from across the state, country, and world. It features fascinating insights, traveler experiences, interviews related to travel, entertainment segments, and much more. Editor-in-Chief: Shri Vishweshwar Bhat

ಇದು 1753ರ ಮನೆ, ಗೊತ್ತಿರಲಿ!

Read Previous

ಇದು 1753ರ ಮನೆ, ಗೊತ್ತಿರಲಿ!

ಅಚ್ಚರಿ ಮೂಡಿಸುವ ʻಬ್ಲೂ ಡ್ರ್ಯಾಗನ್‌ ನದಿʼ...

Read Next

ಅಚ್ಚರಿ ಮೂಡಿಸುವ ʻಬ್ಲೂ ಡ್ರ್ಯಾಗನ್‌ ನದಿʼ...