Monday, October 19, 2026
Monday, October 19, 2026

ರೂಲ್ಸ್‌ ಬ್ರೇಕ್‌ ಮಾಡಿದರೆ 5,000 ದಂಡ

ಎಸಿ ಕೋಚ್‌ಗಳು ಹಾಗೂ ಮೌತವಾದ ವಾತಾವರಣದಲ್ಲಿ ಪ್ರಯಾಣಿಸುವಾಗ ಕೆಲವರು ಮೊಬೈಲ್‌ನಲ್ಲಿ ಸಿನಿಮಾ, ಧಾರಾವಾಹಿ ಹಾಗೂ ಸಾಮಾಜಿಕ ಜಾಲತಾಣಗಳ ರೀಲ್ಸ್‌ಗಳನ್ನು ಹೈ ವಾಲೂಮ್‌ನಲ್ಲಿ ಇಟ್ಟುಕೊಂಡು ಇಡೀ ಬೋಗಿಗೆ ಕಿರಿಕಿರಿ ಉಂಟುಮಾಡುತ್ತಾರೆ ಎಂಬ ದೂರುಗಳು ನಿರಂತರವಾಗಿ ಕೇಳಿಬಂದಿದ್ದವು. ಪ್ರಯಾಣಿಕರು ಸಾರ್ವಜನಿಕ ಶಿಷ್ಟಾಚಾರವನ್ನು ಪಾಲಿಸಬೇಕು. ಆಡಿಯೋ ಕೇಳಲು ಕಡ್ಡಾಯವಾಗಿ ಇಯರ್‌ಫೋನ್‌ಗಳನ್ನು ಬಳಸುವುದು, ಕರೆಗಳನ್ನು ಸಂಕ್ಷಿಪ್ತವಾಗಿ ಮತ್ತು ಮಿತವಾದ ಧ್ವನಿಯಲ್ಲಿ ಮಾತನಾಡುವಂತೆ ರೈಲ್ವೆ ಇಲಾಖೆ ಕೋರಿದೆ.

ಭಾರತೀಯ ರೈಲ್ವೆ ರೈಲು ಪ್ರಯಾಣದಲ್ಲಿ ಮೊಬೈಲ್ ಫೋನ್ ಸ್ಪೀಕರ್ ಬಳಕೆ ಮತ್ತು ಜೋರಾಗಿ ಮಾತನಾಡುವಿಕೆ ಕುರಿತು ಕಠಿಣ ನಿಯಮ ಜಾರಿಗೊಳಿಸಿದೆ. ಇಂಥ ವರ್ತನೆಯಿಂದ ಇತರ ಪ್ರಯಾಣಿಕರಿಗೆ ಉಂಟಾಗುವ ಅನಾನುಕೂಲತೆಯನ್ನು ತಡೆಯಲು ಭಾರತೀಯ ರೈಲ್ವೆ ಕಠಿಣ ಮಾರ್ಗಸೂಚಿ ಪ್ರಕಟಿಸಿದ್ದು, ತಪ್ಪಿದಲ್ಲಿ ದಂಡ ಹಾಗೂ ಜೈಲು ಶಿಕ್ಷೆ ಎದುರಿಸಬೇಕಾಗುತ್ತದೆ ಎಂದು ಎಚ್ಚರಿಸಿದೆ. ಜನ್ ವಿಶ್ವಾಸ್ (ತಿದ್ದುಪಡಿ) ಕಾಯ್ದೆಯ ಪ್ರಕಾರ ರೈಲ್ವೆ ಕಾಯ್ದೆಯ ಸೆಕ್ಷನ್ 145 (2) (ಎ) ಅಡಿಯಲ್ಲಿ, ಸಾರ್ವಜನಿಕ ಸ್ಥಳ ಅಥವಾ ರೈಲುಗಳಲ್ಲಿ ಮೊಬೈಲ್ ಫೋನ್‌ಗಳನ್ನು ಸ್ಪೀಕರ್ ಮೋಡ್‌ನಲ್ಲಿ ಬಳಸುವ ಮೂಲಕ ಅಥವಾ ಜೋರಾಗಿ ಮಾತನಾಡುವ ಮೂಲಕ ಇತರರಿಗೆ ತೊಂದರೆ ಉಂಟುಮಾಡುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು.

ರೈಲ್ವೆ ಅಧಿಕಾರಿಯ ಎಚ್ಚರಿಕೆಯ ನಂತರವೂ ನಿಯಮ ಉಲ್ಲಂಘನೆ ಮುಂದುವರಿಸಿದರೆ, 6 ತಿಂಗಳ ಸರಳ ಜೈಲು ಶಿಕ್ಷೆ ಮತ್ತು/ಅಥವಾ 5,000 ರೂ.ಗಳವರೆಗೆ ದಂಡ ವಿಧಿಸಬಹುದಾಗಿದೆ. ದಕ್ಷಿಣ ರೈಲ್ವೆ ಸೇರಿದಂತೆ ವಿವಿಧ ವಲಯಗಳು ಈ ಕುರಿತು ಜಾಗೃತಿ ಮೂಡಿಸಲು ಸೂಚನೆ ನೀಡಿವೆ. ಅಲ್ಲದೆ, ನಿಯಮ ಉಲ್ಲಂಘಿಸುವವರ ವಿರುದ್ಧ ಕ್ರಮ ಕೈಗೊಳ್ಳಲು ಟಿಕೆಟ್ ಪರೀಕ್ಷಕರಿಗೆ ಹಾಗೂ ರೈಲ್ವೆ ಸಿಬ್ಬಂದಿಗೆ ಅಧಿಕಾರ ನೀಡಲಾಗಿದೆ.

ಎಸಿ ಕೋಚ್‌ಗಳು ಹಾಗೂ ಮೌತವಾದ ವಾತಾವರಣದಲ್ಲಿ ಪ್ರಯಾಣಿಸುವಾಗ ಕೆಲವರು ಮೊಬೈಲ್‌ನಲ್ಲಿ ಸಿನಿಮಾ, ಧಾರಾವಾಹಿ ಹಾಗೂ ಸಾಮಾಜಿಕ ಜಾಲತಾಣಗಳ ರೀಲ್ಸ್‌ಗಳನ್ನು ಹೈ ವಾಲೂಮ್‌ನಲ್ಲಿ ಇಟ್ಟುಕೊಂಡು ಇಡೀ ಬೋಗಿಗೆ ಕಿರಿಕಿರಿ ಉಂಟುಮಾಡುತ್ತಾರೆ ಎಂಬ ದೂರುಗಳು ನಿರಂತರವಾಗಿ ಕೇಳಿಬಂದಿದ್ದವು. ಪ್ರಯಾಣಿಕರು ಸಾರ್ವಜನಿಕ ಶಿಷ್ಟಾಚಾರವನ್ನು ಪಾಲಿಸಬೇಕು. ಆಡಿಯೋ ಕೇಳಲು ಕಡ್ಡಾಯವಾಗಿ ಇಯರ್‌ಫೋನ್‌ಗಳನ್ನು ಬಳಸುವುದು, ಕರೆಗಳನ್ನು ಸಂಕ್ಷಿಪ್ತವಾಗಿ ಮತ್ತು ಮಿತವಾದ ಧ್ವನಿಯಲ್ಲಿ ಮಾತನಾಡುವಂತೆ ರೈಲ್ವೆ ಇಲಾಖೆ ಕೋರಿದೆ. ಒಂದು ವೇಳೆ ಪಕ್ಕದ ಪ್ರಯಾಣಿಕರಿಂದ ನಿರಂತರವಾಗಿ ತೊಂದರೆಯುಂಟಾದಲ್ಲಿ, ಪ್ರಯಾಣಿಕರು ತಕ್ಷಣವೇ ರೈಲ್ವೆ ಸಿಬ್ಬಂದಿಗೆ ಮಾಹಿತಿ ನೀಡಬಹುದು ಅಥವಾ ‘ರೈಲ್ಮದದ್’ ಪೋರ್ಟಲ್ ಮೂಲಕ ದೂರು ದಾಖಲಿಸಬಹುದಾಗಿದೆ.

Admin

Admin

Pravasi Prapancha – A pioneering initiative led by Vishweshwar Bhat, the esteemed journalist and head of the Vishwavani Group. It is the first and only travel-focused publication in Kannada journalism, dedicated exclusively to news, information, and travel narratives about various destinations. The digital media counterpart of this venture is Pravasi Prapancha Digital Channel, which brings travel-related news from across the state, country, and world. It features fascinating insights, traveler experiences, interviews related to travel, entertainment segments, and much more. Editor-in-Chief: Shri Vishweshwar Bhat

ಮೇ 1 ರಿಂದ ವಿದೇಶಿ ಪ್ರವಾಸಿಗರಿಗೆ ಥಾಯ್ಲೆಂಡ್‌ನಲ್ಲಿ ಡಿಜಿಟಲ್ ಆಗಮನ ಕಾರ್ಡ್ ಕಡ್ಡಾಯ

Read Previous

ಮೇ 1 ರಿಂದ ವಿದೇಶಿ ಪ್ರವಾಸಿಗರಿಗೆ ಥಾಯ್ಲೆಂಡ್‌ನಲ್ಲಿ ಡಿಜಿಟಲ್ ಆಗಮನ ಕಾರ್ಡ್ ಕಡ್ಡಾಯ

ಗೋವಾ ಹೋದರೆ ಈ ಬೀಚ್‌ಗಳನ್ನು ಮಿಸ್‌ ಮಾಡಿಕೊಳ್ಳಲೇಬೇಡಿ!

Read Next

ಗೋವಾ ಹೋದರೆ ಈ ಬೀಚ್‌ಗಳನ್ನು ಮಿಸ್‌ ಮಾಡಿಕೊಳ್ಳಲೇಬೇಡಿ!