ದೇವರ ನಾಡಿನತ್ತ ಕೆಎಸ್‌ಟಿಡಿಸಿ ಬಂಡಿ
ಕೆಎಸ್‌ಟಿಡಿಸಿಯಲ್ಲಿ ಪ್ರವಾಸ ಹೋಗುವವರಿಗೆ ಮಯೂರದಲ್ಲಿ ವಾಸ್ತವ್ಯವಿರುತ್ತದೆ. ಕೆಎಸ್‌ಟಿಡಿಸಿ ಇದೀಗ ಬೇರೆ ರಾಜ್ಯದ ಪ್ರವಾಸೋದ್ಯಮಕ್ಕೂ ಸಡ್ಡು ಹೊಡೆದು ಮೈಕೊಡವಿ ನಿಂತಿದೆ. ಇಂಥ ಕೆಎಸ್‌ಟಿಡಿಸಿ ಈಗ ವಿಶೇಷ ಟೂರ್ ಪ್ಯಾಕೇಜ್ ಘೋಷಿಸಿದೆ. ಮೂರು ದಿನಗಳ ವಯನಾಡು ಪ್ರವಾಸ ಇದಾಗಿದೆ. ಕೇರಳದ ವಯನಾಡು, ಕರ್ನಾಟಕದ ಹಿಮವದ್ ಗೋಪಾಲಸ್ವಾಮಿ ಬೆಟ್ಟಗಳು ಈ ಲಿಸ್ಟ್‌ನಲ್ಲಿವೆ. ಧಾರ್ಮಿಕ, ನೇಚರ್, ಚಾರಣ ಹೀಗೆ ಡಿಫರೆಂಟ್ ಟ್ರಾವೆಲ್ ಎಕ್ಸ್‌ಪೀರಿಯನ್ಸ್‌ಗೆ ಒಂದೇ ಪ್ಯಾಕೇಜ್.
ನಾವು ಮೊದಲೇ ನಿಮಗೆ ಹೇಳಿದ್ದೇವೆ, ಬದುಕು ಒಂದು ಮುಗಿಯದ ಪ್ರಯಾಣ. ಅದು ಮುಗಿದ ದಿನದಂದೇ ನಾವು ಈ ಭೂಮಿಯ ಮೇಲೆ ಇರುವುದಿಲ್ಲ. ದೂರದ ಒಂದು ಊರಿಗೆ ಹೋಗುವಾಗಲೇ ಆಗಾಗ ಬ್ರೇಕ್ ತೆಗೆದುಕೊಳ್ಳುತ್ತೇವೆ. ಅಂಥದರಲ್ಲಿ ಜೀವನ ಪ್ರಯಾಣ ನಿತ್ಯವೂ ಚಾಲ್ತಿಯಲ್ಲೇ ಇದ್ದರೆ ಹೇಗೆ? ಆಗಾಗ ಅದಕ್ಕೂ ಬ್ರೇಕ್ ಬೇಕು. ಚಿಂತೆಗಳು ನಿಮ್ಮನ್ನು ಬಾಧಿಸುತ್ತಿವೆ ಅಂತ ತಿಳಿದಾಗಲೇ ಒಂದು ಬ್ರೇಕ್ ತೆಗೆದುಕೊಳ್ಳಿ. ಅಂದರೆ ಒಂದು ಪ್ರವಾಸಮಾಡಿ. ಪ್ರವಾಸ ಎಂಬುದು ಜೀವನಕ್ಕೆ ಸಿಗುವ ಬ್ರೇಕ್ ಜತೆಗೆ ನಿಮ್ಮ ಮುಂದಿನ ಜೀವನ ಪ್ರಯಾಣಕ್ಕೆ ತುಂಬುವ ಇಂಧನವೂ ಹೌದು. ಸಂದೇಹವೇ ಬೇಡ. ಹಾಗೇನಾದರು ಇನ್ನೂ ಸಂದೇಹವಿದ್ದರೆ ನಿಮ್ಮ ಪರಿಚಿತ ವೈದ್ಯರನ್ನೇ ಒಮ್ಮೆ ಕೇಳಿ ನೋಡಿ. ಅವರೂ ಆಗಾಗ ಔಟಿಂಗ್ ಹೋಗ್ತಾರೆ, ಪ್ರವಾಸ ಅಂತ ವಿಷಯ ಬಂದಾಗ ಮೊದಲ ಸರತಿಯಲ್ಲಿ ಅವರೇ ಇರುತ್ತಾರೆ. ಯಾಕೆಂದರೆ ಅವರಿಗೆ ಗೊತ್ತಿದೆ ಪ್ರಕೃತಿಯಷ್ಟು ದೊಡ್ಡ ಚಿಕಿತ್ಸಕ ಮತ್ತೊಂದು ಇಲ್ಲ ಅಂತ. ಮನಸು ಮಮ್ಮಲ ಮರುಗುವ ಮುನ್ನ ಅದಕ್ಕೊಮ್ಮೆ ಪ್ರವಾಸದ ಚಿಕಿತ್ಸೆಯನ್ನು ಅವರು ನೀಡುತ್ತಾರೆ. ಇದರಿಂದ ನೂರು ವರ್ಷ ಬಿಟ್ಟರೂ ಯಾವ ನೆಗೆಟಿವ್ ಸೈಡ್ ಎಫೆಕ್ಟ್‌ಗಳೂ ಇಲ್ಲ.
ಇದನ್ನೂ ಓದಿ: ಚೆಲುವ ನಾರಾಯಣನ ಸನ್ನಿಧಿಗೆ ಕೆಎಸ್‌ಟಿಡಿಸಿ ಪ್ರವಾಸ ರಥ
ನೀವು ಉದ್ಯಮ ಕಂಡುಕೊಳ್ಳುವ ಪ್ರಯೋಜನದಿಂದಲಾದರೂ ಪ್ರವಾಸಕ್ಕೆ ಹೊರಡಬಹುದು. ಅಲ್ಲಿಂದ ಹತ್ತುಹಲವು ಹೊಸ ವಿಷಯಗಳನ್ನು ನಿಮ್ಮೂರಿಗೆ ಹೊತ್ತು ತರಬಹುದು. ಯಾವ ಊರಿನಲ್ಲಿ ಯಾವುದು ಈಗಾಗಲೇ ಫೇಮಸ್ ಎಂಬುದನ್ನು ಅರಿತರೆ ಸಾಕು. ಇನ್ನೂ ಏನಿಲ್ಲದಿದ್ದರೂ ಒಂದು ದಿವ್ಯ ಅನುಭವದ ಬುತ್ತಿಯನ್ನಂತೂ ನೀವು ತುಂಬಿಕೊಳ್ಳುತ್ತೀರಿ.

ಜ್ಞಾನಕ್ಕಾಗಿ ಎಂದಾಗ ಮೊದಲು ನೆನಪಾಗುವ ಮಾತು ʻದೇಶ ಸುತ್ತು ಅಥವಾ ಕೋಶ ಓದುʼ ಎನ್ನುವುದು. ಇದಂತೂ ಸಾರ್ವಕಾಲಿಕ ಸತ್ಯ ನೀವೂ ನಂಬುತ್ತೀರಿ ಅಲ್ವೇ? ಆದರೆ, ಇಲ್ಲೂ ನಮ್ಮ ಒಂದು ಸಲಹೆ ಇದೆ. ನೀವು ದೇಶ ಸುತ್ತುವುದಾದರೂ ಅದರ ಬಗ್ಗೆ ತಿಳಿದುಕೊಳ್ಳಲು ಒಂಚೂರು ಓದಿ. ನಾವು ಕೋಶ ಓದುತ್ತೇವೆ ಎಂದಾದರೆ ಅದಕ್ಕೆ ಪುರಾವೆಯಂತಿರುವ ತಾಣಗಳನ್ನು ಖುದ್ದಾಗಿ ಒಮ್ಮೆಯಾದರೂ ಭೇಟಿನೀಡಿ. ಇಂದಿನ ಸ್ಥಿತಿ-ಗತಿಗಳನ್ನು ತಿಳಿಯದ ಹೊರತು ಯಾವ ಇತಿಹಾಸವೂ ಪೂರ್ಣವಾಗುವುದಿಲ್ಲ. ಅವು ದಿನದಿಂದ ದಿನಕ್ಕೆ ಬದಲಾಗುತ್ತಲೇ ಇರುತ್ತವೆ. ಹಾಗಾಗಿ ದೇಶ ಮತ್ತು ಕೋಶಗಳೆರಡಕ್ಕೂ ನಿಮ್ಮ ಆದ್ಯತೆ ಇರಲಿ. ಇಷ್ಟೆಲ್ಲ ಅರಿತ ನಂತರ ಪ್ರವಾಸದ ಪ್ರಾಮುಖ್ಯತೆ ನಿಮಗೆ ಮನದಟ್ಟಾಗಿರಬೇಕು. ಇಲ್ಲೂ ನಾವು ಹೇಳಬೇಕಾದ ಇನ್ನೊಂದು ಸಂಗತಿ ಇದೆ. ಅದು ಗೈಡ್‌ಗಳ ಕುರಿತು. ಗೈಡ್‌ಗಳು ನಿಮ್ಮ ಪ್ರವಾಸವನ್ನು ಮತ್ತಷ್ಟು ಉತ್ಕೃಷ್ಟವಾಗಿಸಬಲ್ಲರು. ಎಷ್ಟು ಅನುಭವಿ ಗೈಡ್‌ಗಳಿರುತ್ತಾರೋ ಅಷ್ಟೇ ಅದ್ಭುತ ಪ್ರವಾಸ ನಿಮ್ಮದಾಗುತ್ತದೆ. ಈ ವಿಷಯದಲ್ಲಿ ನಮ್ಮ ನಾಡಿನ ಅನುಭವಿ ಪ್ರವಾಸಿ ಗೈಡ್ ಇನ್ಯಾರಾಗಿರಲು ಸಾಧ್ಯ? ಅದು ನಮ್ಮ ನಾಡಿನ ಪ್ರವಾಸೋದ್ಯಮ ನಿಗಮ ಮಾತ್ರ ಆಗಿರಬಲ್ಲದು. ಅದು ನಮ್ಮ ನಾಡಿನ ಎಲ್ಲಾ ಪ್ರವಾಸಿ ತಾಣಗಳನ್ನು ಅರಿತ ದೊಡ್ಡಣ್ಣ.
ಕೈಗೆಟುಕುವ ದರದಲ್ಲಿ ಪ್ರವಾಸ ಮಾಡಿಸಲು ಕೆಎಸ್‌ಟಿಡಿಸಿ ಸಜ್ಜಾಗಿದೆ. ಈ ಪ್ರವಾಸದಲ್ಲಿ ನೀವು ಕಂಡು, ಕೇಳಿ, ಅನುಭವಿಸಿ ಅರಿತು ಅಳವಡಿಸಿಕೊಳ್ಳಬಹುದಾದ ಹಲವು ವಿಷಯಗಳನ್ನು ಮರಳಿ ಬರುವಾಗ ಹೊತ್ತು ತರುತ್ತೀರಿ. ಇದರಿಂದ ಹಳೆಯ ಕಹಿ ಘಟನೆಗಳನ್ನು ಮರೆತು ಹೊಸತನವನ್ನು ನಿಮ್ಮಲ್ಲಿ ತುಂಬಿಕೊಂಡಂತಾಗುತ್ತದೆ. ಉದ್ಯಮಶೀಲ ಪ್ರವೃತ್ತಿ ನಿಮ್ಮಲ್ಲಿ ಮೊಳಕೆಯೊಡೆಯುತ್ತದೆ. ಪ್ರವಾಸಿ ತಾಣವೊಂದರ ಪ್ರಸ್ತುತ ಮತ್ತು ಪುರಾತನ ಸ್ಥಿತಿಗತಿಗಳನ್ನು ಕೆಎಸ್‌ಟಿಡಿಸಿ ಬಲ್ಲದು. ನುರಿತ ಟೂರ್ ಗೈಡ್‌ಗಳು ನಿಮಗೆ ಮಾರ್ಗದರ್ಶನ ನೀಡುತ್ತಾರೆ. ಇತಿಹಾಸ, ವನ ವಿಹಾರ, ಊಟೋಪಚಾರ, ಆಚರಣೆ, ಸಂಸ್ಕೃತಿಯನ್ನು ಅರಿಯಬಹುದು. ಅಲ್ಲಿನ ಉಡುಗೆ-ತೊಡುಗೆ, ಉದ್ಯಮಗಳು ಹೀಗೆ ನಿಮಗೆ ಬೇಕಾದ ಮಾಹಿತಿಯನ್ನು ಕಣ್ಣಾರೆ ಕಂಡು ಮಾಹಿತಿಯೂ ಪಡೆದು ನೀವೂ ಪ್ರವಾಸಿಯಾಗಬಹುದು.

ಕೆಎಸ್‌ಟಿಡಿಸಿಯಲ್ಲಿ ಪ್ರವಾಸ ಹೋಗುವವರಿಗೆ ಮಯೂರದಲ್ಲಿ ವಾಸ್ತವ್ಯವಿರುತ್ತದೆ. ಕೆಎಸ್‌ಟಿಡಿಸಿ ಇದೀಗ ಬೇರೆ ರಾಜ್ಯದ ಪ್ರವಾಸೋದ್ಯಮಕ್ಕೂ ಸಡ್ಡು ಹೊಡೆದು ಮೈಕೊಡವಿ ನಿಂತಿದೆ. ಇಂಥ ಕೆಎಸ್‌ಟಿಡಿಸಿ ಈಗ ವಿಶೇಷ ಟೂರ್ ಪ್ಯಾಕೇಜ್ ಘೋಷಿಸಿದೆ. ಮೂರು ದಿನಗಳ ವಯನಾಡು ಪ್ರವಾಸ ಇದಾಗಿದೆ. ಕೇರಳದ ವಯನಾಡು, ಕರ್ನಾಟಕದ ಹಿಮವದ್ ಗೋಪಾಲಸ್ವಾಮಿ ಬೆಟ್ಟಗಳು ಈ ಲಿಸ್ಟ್‌ನಲ್ಲಿವೆ. ಧಾರ್ಮಿಕ, ನೇಚರ್, ಚಾರಣ ಹೀಗೆ ಡಿಫರೆಂಟ್ ಟ್ರಾವೆಲ್ ಎಕ್ಸ್‌ಪೀರಿಯನ್ಸ್‌ಗೆ ಒಂದೇ ಪ್ಯಾಕೇಜ್. ಯಾವ ಮನಸಿನ ಆಸಾಮಿಗಳಿಗೂ ಕೆಎಸ್‌ಟಿಡಿಸಿಯ ಈ ಹೊಸ ಪ್ಯಾಕೇಜ್ ಇಷ್ಟವಾಗದಿರದು. ವೃಥಾ ಯೋಚಿಸದೆ ಹೊರಡಿ. ಹ್ಯಾವ್ ಎ ನೈಸ್ ಟ್ರಿಪ್!
ಹಿಮವದ್ ಗೋಪಾಲಸ್ವಾಮಿ ಬೆಟ್ಟ
ಫಾಗ್ ಮಧ್ಯೆ ಓಡಾಟ ಬಯಸುವ ಜತೆಗೆ ಪ್ರಕೃತಿಯನ್ನು ಆರಾಧಿಸುವ ಮತ್ತು ಆಸ್ವಾದಿಸುವ ಜನರಿಗೆ ಈ ಬೆಟ್ಟ ನಿಸರ್ಗದತ್ತ ವರ. ಹಿಮವದ್ ಗೋಪಾಲ ಸ್ವಾಮಿ ಬೆಟ್ಟ ಕರ್ನಾಟಕದ ಅತ್ಯಂತ ಎತ್ತರದ ಬೆಟ್ಟಗಳಲ್ಲಿ ಮೂರನೆಯದು. ಸಮುದ್ರ ಮಟ್ಟದಿಂದ ಸುಮಾರು 1440 ಮೀ ಎತ್ತರವಿದೆ. ಬೆಟ್ಟದ ಮೇಲೆ ಶ್ರೀ ಕೃಷ್ಣನ ದೇವಾಲಯವಿದೆ. ಇಲ್ಲಿನ ಸೂರ್ಯೋದಯ ಮತ್ತು ಸೂರ್ಯಾಸ್ತಗಳ ವೀಕ್ಷಣೆಯೂ ತುಂಬಾ ಪ್ರಸಿದ್ಧಿ ಪಡೆದಿವೆ. ಸಮೀಪದಲ್ಲೇ ಬಂಡೀಪುರ ರಾಷ್ಟ್ರೀಯ ಉದ್ಯಾನವಿದೆ. ಹಾಗಾಗಿ ಬೆಳಗ್ಗೆ 7 ರಿಂದ ಸಂಜೆ 5 ಗಂಟೆಯವರೆಗೆ ಮಾತ್ರ ಇಲ್ಲಿ ಭೇಟಿಗೆ ಅವಕಾಶವಿದೆ.
ಬಾಣಾಸುರ ಸಾಗರ ಅಣೆಕಟ್ಟು
ಬಾಣಾಸುರ ಅಣೆಕಟ್ಟು, ವಯನಾಡು ಸಮೀಪದ ಸುಂದರ ಪ್ರಕೃತಿಧಾಮ ಎಂದರೆ ತಪ್ಪಾಗದು. ಈ ಅಣೆಕಟ್ಟು ಬಾಣಾಸುರ ಬೆಟ್ಟಗಳ ತಪ್ಪಲಿನಲ್ಲಿದೆ. ಒಂದೆಡೆ ಹಸಿರು ಹೊದ್ದ ಎತ್ತರದ ಬೆಟ್ಟಗಳು ಮತ್ತೊಂದೆಡೆ ವಿಶಾಲ ನೀಲರಾಶಿ ಕಣ್ಣಿಗೆ ಬೀಳುತ್ತದೆ. ಬಾಣಾಸುರ ಎಂಬುದು ಬಲಿ ಚಕ್ರವರ್ತಿಯ ಮಗನ ಹೆಸರು. ಅದೇ ಹೆಸರನ್ನು ಇಲ್ಲಿನ ಬೆಟ್ಟದ ಸಾಲು ಮತ್ತು ಈ ಅಣೆಕಟ್ಟಿಗೂ ಇಡಲಾಗಿದೆ. ವಿಶೇಷವೆಂದರೆ ಈ ಅಣೆಕಟ್ಟು ಭಾರತದ ಅತಿದೊಡ್ಡ ಮಣ್ಣಿನ ಅಣೆಕಟ್ಟು ಹಾಗೂ ಏಷ್ಯಾದ ಎರಡನೆಯ ಅತಿದೊಡ್ಡ ಅಣೆಕಟ್ಟು. ಇದರ ಮೇಲೆ ಓಡಾಡಲೂ ಸಾರ್ವಜನಿಕರಿಗೆ ಅವಕಾಶವಿದೆ. ಹಾಗಾಗಿಯೇ ಇಲ್ಲಿ ಫೊಟೋಗ್ರಾಫರ್‌ಗಳು ಹೆಚ್ಚು. ಪ್ರಕೃತಿ ಪ್ರಿಯರಿಗಂತೂ ಈ ತಾಣ ಅಚ್ಚುಮೆಚ್ಚು.
ಮಯೂರ ವ್ಯಾಲಿ ವ್ಯೂನಲ್ಲಿ ಮೈಮರೆಸುವ ಆತಿಥ್ಯ
ʻಬೆಟ್ಟದ ಮೇಲೊಂದು ಮನೆಯ ಮಾಡಿʼ ಮಯೂರ ಆತಿಥ್ಯ ನೀಡುತ್ತಿದೆ. ಮಯೂರ ಎಂದರೆ ಅಲ್ಲಿ ಊಟೋಪಚಾರ, ಅಲ್ಲಿನ ಸಿಬ್ಬಂದಿ ಸೇವೆ ಕುರಿತು ನಾವು ಹೇಳುವ ಅಗತ್ಯವಿಲ್ಲ. ಈಗಾಗಲೇ ನೀವು ನಿಮ್ಮ ಹತ್ತಿರದ ಮಯೂರ ಹೊಟೇಲ್‌ಗಳಲ್ಲಿ ಅನುಭವಿಸಿರುತ್ತೀರಿ. ಅದು ನಿಜಕ್ಕೂ ಫೇಮಸ್. ಬೇಕಾದರೆ ವಿದೇಶಿ ಪ್ರವಾಸಿಗರ ವಾಸ್ತವ್ಯದ ಆಯ್ಕೆಯನ್ನು ಗಮನಿಸಿ ಎಂದೂ ನಾವು ಈಗಾಗಲೇ ಹಲವು ಬಾರಿ ಹೇಳಿದ್ದೀವಿ. ಆದರೆ, ಮಡಿಕೇರಿಯಲ್ಲಿ ನೆಲೆಗೊಂಡಿರುವ ಹೊಟೇಲ್ ಮಯೂರ ವ್ಯಾಲಿ ವ್ಯೂ ಕುರಿತು ನಿಮಗೆ ಹೇಳಬೇಕು. ಇದು ಕೊಡಗಿನ ಕಂಪಿನೊಂದಿಗೆ ಹೊಂದಿಕೊಂಡಿದೆ. ಇಲ್ಲಿಂದ ಬೆಟ್ಟಗಳ ಸಾಲಿನ ವ್ಯೂ ಸಹ ನೋಡಿಯೇ ಅನುಭವಿಸಬೇಕು. ಪದಗಳಿಗೆ ನಿಲುಕದ ಪ್ರಕೃತಿಯ ಸೊಬಗು ಅಲ್ಲಿ ನೆಲೆಸಿದೆ. ಅನ್ವೇಷಿಸಲು ಹಲವು ಅದ್ಭುತ ಕಣಿವೆಯ ನೋಟಗಳು. ಮಡಿಕೇರಿಯು ದಟ್ಟ ಕಾಡು, ಕಾಫಿ ತೋಟಗಳು ಮತ್ತು ಜಲಪಾತಗಳ ಸಾಲುಸಾಲು ಅವಕಾಶಗಳಿವೆ. ಸುಂದರ ಪಿಕ್ನಿಕ್ ತಾಣಗಳು ಮತ್ತು ಟ್ರೆಕ್ಕಿಂಗ್ ಸ್ಪಾಟ್‌ಗಳು, ರಿವರ್ ರಾಫ್ಟಿಂಗ್‌ನಂಥ ಚೇತೋಹಾರಿ ಅವಕಾಶಗಳಿಗೆ ಮಯೂರ ಹತ್ತಿರದಲ್ಲೇ ಇದೆ. ಹೋಟೆಲ್‌ನಿಂದಲೇ ಕಸ್ಟಮೈಸ್ ಪ್ರವಾಸವನ್ನೂ ಮಾಡಬಹುದು. ಈ ಸುಂದರ ಹೊಟೇಲ್‌ನಲ್ಲಿ ಒಟ್ಟು 35 ಕೊಠಡಿಗಳಿದ್ದು, 10 ಎಸಿ ಡಿಲಕ್ಸ್ ಕೊಠಡಿಗಳು, 5 ಎಸಿ ಡಿಲಕ್ಸ್ ಸೂಟ್ ರೂಮ್‌ಗಳು, 12 ನಾನ್ ಎಸಿ ಸ್ಟಾಂಡರ್ಡ್ ಡಬಲ್ ರೂಮ್‌ಗಳು, 8 ನಾನ್ ಎಸಿ ಎಕ್ಸಿಕ್ಯೂಟಿವ್ ರೂಮ್‌ಗಳು ಹೀಗೆ ವೈವಿಧ್ಯಮಯ ಆಯ್ಕೆಗಳಿವೆ. ಈಜುಕೊಳ, ಹೊರಾಂಗಣ ಮತ್ತು ಒಳಾಂಗಣ ಆಟದ ಸೌಲಭ್ಯಗಳೂ ಇಲ್ಲಿವೆ. ಊಟಕ್ಕಂತೂ ಫೇಮಸ್ ಮತ್ತು ಅಥೆಂಟಿಕ್ ಕೊಡವ ಭಕ್ಷ್ಯಗಳಿವೆ. ವೈವಿಧ್ಯಮಯ ತಿನಿಸುಗಳನ್ನು ಮಾಡಿ ಬಡಿಸುವ ರೆಸ್ಟೋರೆಂಟ್ ಇಲ್ಲಿದೆ. ಇಷ್ಟು ದೂರ ಪ್ರವಾಸ ಬಂದು ಮಧ್ಯೆ ಒಂಚೂರು ಮದ್ಯ ಇಲ್ಲದಿದ್ದರೆ ಹೇಗೆ ಎಂದು ಮೆಲ್ಲಗೆ ರಾಗ ತೆಗೆಯುವ ಅವಶ್ಯಕತೆ ಇಲ್ಲ. ಲೈಟ್ ಆಗಿ ಕುಡಿಯಲು ಒಂದು ಬಾರ್ ಇದೆ. ಹೆಚ್ಚಾಗದಂತೆ ಕುಡಿದು ಬೆಚ್ಚಗಿನ ವಾಸ್ತವ್ಯ ಅನುಭವಿಸಿ.

ಪ್ಯಾಕೇಜ್
ದಿನ - 1
ಬೆಳಗ್ಗೆ 6:00 – ಯಶವಂತಪುರದ ಬಿಎಂಟಿಸಿ ಬಸ್ ನಿಲ್ದಾಣದ ಕೆಎಸ್‌ಟಿಡಿಸಿ ಬುಕಿಂಗ್ ಕೌಂಟರ್‌ನಿಂದ ನಿರ್ಗಮನ.
ಬೆಳಗ್ಗೆ 08:00 - 8:30ರವರೆಗೆ - ಉಪಾಹಾರ
ಬೆಳಗ್ಗೆ 11:00 - ಮಧ್ಯಾಹ್ನ 1:00ರವರೆಗೆ - ಹಿಮವದ್ ಗೋಪಾಲಸ್ವಾಮಿ ಬೆಟ್ಟ ವೀಕ್ಷಣೆ
ಮಧ್ಯಾಹ್ನ 1:30 - 2:15ರವರೆಗೆ - ಊಟದ ವಿರಾಮ
ಸಂಜೆ 4:30 - 6:30ರವರೆಗೆ - ವೈತ್ರಿಯಲ್ಲಿ ವಯನಾಡ್ ವ್ಯೂ ಪಾಯಿಂಟ್ ಲಕಾಡಿ ಮತ್ತು ಪೂಕಡೆ ಲೇಕ್, ವಾಸ್ತವ್ಯ
ದಿನ - 2
ಬೆಳಗ್ಗೆ 8:30 - ಉಪಾಹಾರದ ನಂತರ ಪ್ರವಾಸ ಮುಂದುವರಿಯುತ್ತದೆ
ಬೆಳಗ್ಗೆ 9:30 - 10:30ರವರೆಗೆ - ಕಾಂತನ್‌ಪಾರ ಜಲಪಾತಗಳಿಗೆ ಭೇಟಿ
ಬೆಳಗ್ಗೆ 11:30 - ಮಧ್ಯಾಹ್ನ 12:00ರವರೆಗೆ – ಟೀ ಎಸ್ಟೇಟ್‌ನಲ್ಲಿ ಛಾಯಾಗ್ರಹಣ
ಮಧ್ಯಾಹ್ನ 1:00 - 2:00ರವರೆಗೆ - ಊಟದ ವಿರಾಮ
ಮಧ್ಯಾಹ್ನ 3:00 - 4:00ರವರೆಗೆ - ಬಾಣಾಸುರ ಅಣೆಕಟ್ಟು ಭೇಟಿ
ಸಂಜೆ 6:00 - 6:30ರವರೆಗೆ - ಸ್ಥಳೀಯ ಶಾಪಿಂಗ್
ದಿನ - 3
ಬೆಳಗ್ಗೆ 9:00 - ಉಪಾಹಾರದ ನಂತರ ಔಟಿಂಗ್
ಬೆಳಗ್ಗೆ 9:00 - 10:00ರವರೆಗೆ - ವೈತ್ರಿಯಲ್ಲಿ ಗ್ಲಾಸ್ ಬ್ರಿಡ್ಜ್‌ಗೆ ಭೇಟಿ
ಬೆಳಗ್ಗೆ 11:00 - ಮಧ್ಯಾಹ್ನ 1:30ರವರೆಗೆ - ಎಡಕಲ್ ಗುಹೆಗಳಿಗೆ ಭೇಟಿ
ಮಧ್ಯಾಹ್ನ 1:30 - 2:30ರವರೆಗೆ - ಊಟದ ವಿರಾಮ
ಮಧ್ಯಾಹ್ನ 2:30 - ರಾತ್ರಿ 9:30 ರವರೆಗೆ – ಬೆಂಗಳೂರಿಗೆ ಹಿಂತಿರುಗಲಾಗುತ್ತದೆ
ಇಲ್ಲಿ ಗಮನಿಸಿ
ಕೆಎಸ್‌ಟಿಡಿಸಿ ಬುಕ್ ಮಾಡುವವರಿಗೆ ವಿಶೇಷ ಅವಕಾಶಗಳಿವೆ.
ಡಿಲಕ್ಸ್ ಎಸಿ ಬಸ್‌ನಲ್ಲಿ ಆರಾಮದಾಯಕ ಮತ್ತು ಸುಖಕರ ಪ್ರಯಾಣ.
ಆಯ್ಕೆ ಮಾಡಿಕೊಂಡ ಪ್ಯಾಕೇಜ್ ಅನ್ವಯ ಪ್ರವಾಸ
ರಾಜ್ಯ, ಕೇಂದ್ರ ಮತ್ತು ಸಾರ್ವಜನಿಕ ವಲಯದ ಉದ್ಯೋಗಿಗಳಿಗೆ ಎಲ್‌ಟಿಸಿ ಸೌಲಭ್ಯ

ಕೆಎಸ್‌ಟಿಡಿಸಿ ನಿಮ್ಮ ಆಯ್ಕೆಯಾಗಲಿ
ಕೆಎಸ್‌ಟಿಡಿಸಿಯ ಪ್ಯಾಕೇಜ್ ಬಜೆಟ್ ಸ್ನೇಹಿಯಾಗಿದೆ.
ಪ್ರವಾಸಿಗರಿಗೆ ಆರಾಮದಾಯಕ, ಸುರಕ್ಷಿತ ಮತ್ತು ಸುಸಜ್ಜಿತ ಯೋಜಿತ ಪ್ರವಾಸದ ಭರವಸೆಯನ್ನು ನೀಡುತ್ತದೆ.
ಆರಾಮದಾಯಕ ಪ್ರಯಾಣ: ಆಧುನಿಕ ಬಸ್‌ಗಳು ಮತ್ತು ಅನುಭವಿ ಚಾಲಕರೊಂದಿಗೆ ಇಡೀ ದಿನ ಸುರಕ್ಷಿತ ಪ್ರಯಾಣ ಮಾಡಬಹುದು.
ವಿಶೇಷ ಗೈಡ್‌ಗಳು: ತಾಣಗಳ ಇತಿಹಾಸ ಮತ್ತು ಮಹತ್ವವನ್ನು ವಿವರಿಸುವ ತಜ್ಞ ಗೈಡ್‌ಗಳು ಪ್ರವಾಸಿಗರೊಂದಿಗೆ ಇರುತ್ತಾರೆ.
ಸಮಗ್ರ ಯೋಜನೆ: ಪ್ಯಾಕೇಜ್‌ನಲ್ಲಿ ಇರುವ ಎಲ್ಲ ತಾಣಗಳನ್ನೂ ಮನತಣಿಯುವವರೆಗೂ ನೋಡಬಹುದು. ಹಿತಾನುಭವ ಪಡೆಯಬಹುದು. ಸಮಯದ ಪ್ಲ್ಯಾನಿಂಗ್ ಇಲ್ಲಿ ಅತ್ಯಂತ ಶಿಸ್ತಿನಿಂದ ರೂಪಿಸಿರಲಾಗುತ್ತದೆ.
ಕೈಗೆಟುಕುವ ಬೆಲೆ: ಎಲ್ಲರಿಗೂ ಒಗ್ಗುವ, ಮಧ್ಯಮ ವರ್ಗದವರ ಕನಸು ನನಸು ಮಾಡುವ, ಕೈಗೆಟುಕುವ ದರದಲ್ಲಿ ಪ್ರಯಾಣ ಸೇವೆ ಸಿಗುತ್ತದೆ. ಮತ್ತೇನು ಯೋಚನೆ ಮಾಡ್ತಿದ್ದೀರಿ? ಕೆಎಸ್‌ಟಿಡಿಸಿ ನಿಮ್ಮ ಪ್ರವಾಸ ಸಂಗಾತಿ. ಈಗಲೇ ಬುಕ್ ಮಾಡಿ. ಹೊರಡಿ. ಜಗತ್ತು ಕೈ ಬೀಸಿ ಕರೆಯುತ್ತಿದೆ.
ಇದನ್ನೂ ಓದಿ: ಗೋಪಿನಾಥಂನಲ್ಲಿ ಓಡಾಟ.. ಜೆಎಲ್‌ಆರ್ ಫುಲ್ ಊಟ
ಸಂಪರ್ಕ:
Yogesh. MK
Manager (Tours)
Mob No: +91 960 6987 822 | Email ID: tour.manager@kstdc.co
Karnataka State Tourism Development Corporation Ltd. (KSTDC)