Tuesday, April 7, 2026
Tuesday, April 7, 2026

ದುಬಾರೆ ಆನೆಯ ಮೇಲೆ ಅಂಬಾರಿ

ನಮ್ಮ ಕರ್ನಾಟಕದಲ್ಲಿ ಹಲವೆಡೆ ಆನೆಗಳಿಗಾಗಿಯೇ ಹಲವಾರು ಶಿಬಿರ ಮತ್ತು ಸಂರಕ್ಷಿತ ಅರಣ್ಯ ಪ್ರದೇಶಗಳಿವೆ. ಆದರೆ, ನಾವೀಗ ಹೇಳಲು ಹೊರಟಿರುವುದು ಒಂದು ಸ್ಪೆಷಲ್‌ ಶಿಬಿರದ ಬಗ್ಗೆ. ಅಲ್ಲಿ ಮದವೇರಿದ ಆನೆಗಳನ್ನು ಪಳಗಿಸುತ್ತಾರೆ. ಅಲ್ಲಿಗೆ ಹೋದ ಜನತೆಯನ್ನು ಸತ್ಕರಿಸುತ್ತಾರೆ. ನಮಗೆ ಊಟ ವಸತಿಯ ಸತ್ಕಾರ ನೀಡಿ, ಆನೆಗಳ ಸಂಗಡ ಬೆರೆಯಲು ಅನುವು ಮಾಡಿಕೊಡುತ್ತಾರೆ. ಗೊತ್ತಿಲ್ಲದ ಊರಲ್ಲಿ ನೆಂಟರಿಗಿಂತ ಅದ್ಭುತವಾಗಿ ಅತಿಥಿ ಸತ್ಕಾರ ಮಾಡುವವರು ಯಾರು? ಜೆಎಲ್‌ಆರ್ ಬಿಟ್ಟರೆ ಮತ್ಯಾರಿದ್ದಾರೆ ಹೇಳಿ.

ʼಆನೆಯ ಮೇಲೆ ಅಂಬಾರಿ ಕಂಡೆ, ಅಂಬಾರಿಯೊಳಗೆ ನಿನ್ನನ್ನು ಕಂಡೆ ನಿನ್ನೇ ನಾ ಕಂಡೆʼ ಈ ಹಾಡು ಯಾರಿಗೆಲ್ಲ ಗೊತ್ತಿದೆ? ನಟಸಾರ್ವಭೌಮ ಡಾ.ರಾಜಕುಮಾರ್‌ ಅವರ ಕಂಠಸಿರಿಯಲ್ಲಿ ಮೂಡಿ ಬಂದ ಅದ್ಭುತ ಹಾಡಿದು. ʼನಾವಾಡುವ ನುಡಿಯೇ ಕನ್ನಡ ನುಡಿ ಚಿನ್ನದ ನುಡಿ ಸಿರಿಗನ್ನಡ ನುಡಿ ನಾವಿರುವ ತಾಣವೇ ಗಂಧದ ಗುಡಿʼ ಈ ಹಾಡು ಕೂಡ ಡಾ.ರಾಜ್‌ ಅವರು ನಟಿಸಿರುವ ಗಂಧದಗುಡಿ ಸಿನಿಮಾದ ಸೂಪರ್‌ ಹಿಟ್‌ ಹಾಡು. ಈಗಲೂ ಅದು ಜನಜನಿತ. ಅದು ಕನ್ನಡಿಗರ ಮನೆ ಮತ್ತು ಮನದ ಗೀತೆ. ಈಗ ಹೇಳಿ ಮೇಲಿನ ಎರಡು ಹಾಡುಗಳನ್ನು ಕೇಳುತ್ತಿದ್ದಂತೆ ನಿಮ್ಮ ಕಣ್ಣೆದುರು ರಾಜಕುಮಾರ್‌ ಅವರ ಚಿತ್ರ ಸರಿದಂತೆಯೇ ಆನೆಯ ಚಿತ್ರವೂ ಸರಿದು ಹೋಗುತ್ತದೆ ಅಲ್ಲವೇ? ಆನೆಯೇ ಈ ಹಾಡುಗಳ ಕೇಂದ್ರಬಿಂದು. ಆನೆಗೂ ನಮಗೂ ಅವಿನಾಭಾವ ನಂಟು. ಆನೆಯ ಸುತ್ತಲೂ ಕತೆ ಮತ್ತು ದಂತಕತೆಗಳಿವೆ. ಪುರಾಣದ ಕತೆಗಳನ್ನೂ ಆನೆಯ ಜತೆಗೆ ತಳುಕು ಹಾಕಿದ್ದೇವೆ. ಆನೆ ನಮ್ಮ ಜಿಗರ್‌ ಕ ದೋಸ್ತ್‌ ಇದ್ದಹಾಗೆ. ಶಾಲೆಯಲ್ಲಿ ರಗಸದಅ ಕಲಿಯುವಾಗಿನಿಂದಲೂ ಆನೆ ನಮಗೆ ಪರಿಚಯ. ಮಗ್ಗಿ ಪುಸ್ತಕದಲ್ಲಿ ಅ ಅರಸ, ಆ ಆನೆ ಎಂದು ಓದಿರುತ್ತೇವೆ. ದೇವಸ್ಥಾನಗಳ ಮುಂದೆ ನಿಂತಿರುವ ಆನೆಗಳನ್ನು ನಮ್ಮ ಬಾಲ್ಯದಲ್ಲಿ ಬೆರಗುಗಣ್ಣುಗಳಿಂದ ನೋಡಿರುತ್ತೇವೆ. ಆನೆಯ ಸೊಂಡಿಲು ಮತ್ತು ಹಣೆಯನ್ನು ಮುಟ್ಟಿ ಪುಳಕಗೊಂಡಿರುತ್ತೇವೆ. ಆನೆಯ ಸೊಂಡಿಲಿನಿಂದ ಆಶೀರ್ವಾದ ಮಾಡಿಸಿಕೊಂಡಿರುತ್ತೇವೆ. ನಾವು ಅಜದಂತಿದ್ದರೂ(ಆಡು) ನಮಗೆ ಗಜರಾಜನ ಬಗ್ಗೆ ಇನ್ನಿಲ್ಲದ ಕುತೂಹಲ. ಪೂರ್ಣಚಂದ್ರ ತೇಜಸ್ವಿಯವರ ಕೃಷ್ಣೇಗೌಡನ ನಾಟಕ ಓದಿದಾಗಿನಿಂದ ಆನೆ ನಮ್ಮ ನೆಂಟನೇ ಆಗಿಬಿಟ್ಟಿದ್ದಾನೆ. ಅರೆ.. ಆನೆಗಳು ಯಾರಿಗೆ ಇಷ್ಟ ಇಲ್ಲ ಹೇಳಿ? ಚಿಕ್ಕಮಕ್ಕಳಿಂದ ಹಿಡಿದು ಮುದುಕರೂ ಆನೆಯನ್ನು ಇಷ್ಟಪಡುತ್ತಾರೆ. ಆನೆಯನ್ನು ದೇವರಿಗೆ ಹೋಲಿಸಿದ್ದೇವೆ. ಅದರಲ್ಲಿ ದೈವಿಕ ಅಂಶವಿದೆ ಎಂದು ಗಟ್ಟಿಯಾಗಿ ನಂಬಿದ್ದೇವೆ. ಆನೆ ಅಂದರೆ ದೇವರಿಗೂ ಇಷ್ಟ.ಗಣಪತಿಯ ನಿಜ ಮುಖ ನಮ್ಮಲ್ಲಿ ಯಾರು ಬಲ್ಲರು? ನಮಗೆ ಗಜವದನ ಗಣಪತಿಯೇ ಹೆಚ್ಚು ಪರಿಚಯ ಮತ್ತು ಆಪ್ತ. ಗಣಪತಿಯನ್ನು ಬಿಡಿ. ಹೆಣ್ಣು ದೇವರಾದ ಗಜಲಕ್ಷ್ಮಿಯೂ ಇದ್ದಾಳೆ. ನಮ್ಮ ನಾಡ ಅಧಿ ದೇವತೆ ಚಾಮುಂಡೇಶ್ವರಿಗೂ ಆನೆ ಇಲ್ಲದೆ ದಸರಾ ಇಲ್ಲ.

ಇದನ್ನೂ ಓದಿ: ಜೆಎಲ್‌ಆರ್‌ನವರ ಆನೆಝರಿ ನೇಚರ್‌ ಕ್ಯಾಂಪ್‌

ಮತ್ತೆ ಗಂಧದಗುಡಿ ಸಿನಿಮಾವನ್ನು ನೆನಪು ಮಾಡಿಕೊಳ್ಳಿ. ಆ ಸಿನಿಮಾದಲ್ಲಿ ರಾಜಕುಮಾರ್‌ ಅವರನ್ನು ಹೊತ್ತು ಮೆರೆಸಿದ ಆನೆ, ನಾಗರಹೊಳೆ ಸಿನಿಮಾದಲ್ಲೂ ಇತ್ತು. ವೀರಪ್ಪನ್‌ನ ಕಾಟಕ್ಕೊಳಗಾಗಿದ್ದರೂ, ನೀರಾಟವನ್ನು ಬಿಟ್ಟಿರಲಿಲ್ಲ. ʼದಿ ಎಲಿಫ್ಯಾಂಟ್‌ ವಿಸ್ಪರರ್ಸ್‌ʼ ಡಾಕ್ಯುಮೆಂಟರಿಗೆ ಆಸ್ಕರ್‌ ಸಹ ಬಂತು. ಆನೆಯೇ ಅದರ ಕಥಾ ನಾಯಕ. ಆನೆ ಬಗ್ಗೆ ಮಾತನಾಡುತ್ತಾ ಹೋದರೆ ಮಾತು ನಿಲ್ಲುವುದಿಲ್ಲ. ಬರೆಯುತ್ತ ಹೋದರೆ ಪುಟಗಳೂ ಸಾಲುವುದಿಲ್ಲ. ಕಾಡಿನ ರಾಜ ಸಿಂಹವೇ ಆದರೂ ಆನೆ ನಮ್ಮ ಪಾಲಿಗೆ ಅದಕ್ಕಿಂತಲೂ ಮಿಗಿಲು.

ನಮ್ಮ ಕರ್ನಾಟಕದಲ್ಲಿ ಹಲವೆಡೆ ಆನೆಗಳಿಗಾಗಿಯೇ ಹಲವಾರು ಶಿಬಿರ ಮತ್ತು ಸಂರಕ್ಷಿತ ಅರಣ್ಯ ಪ್ರದೇಶಗಳಿವೆ. ಆದರೆ, ನಾವೀಗ ಹೇಳಲು ಹೊರಟಿರುವುದು ಒಂದು ಸ್ಪೆಷಲ್‌ ಶಿಬಿರದ ಬಗ್ಗೆ. ಅಲ್ಲಿ ಮದವೇರಿದ ಆನೆಗಳನ್ನು ಪಳಗಿಸುತ್ತಾರೆ. ಅಲ್ಲಿಗೆ ಹೋದ ಜನತೆಯನ್ನು ಸತ್ಕರಿಸುತ್ತಾರೆ. ನಮಗೆ ಊಟ ವಸತಿಯ ಸತ್ಕಾರ ನೀಡಿ, ಆನೆಗಳ ಸಂಗಡ ಬೆರೆಯಲು ಅನುವು ಮಾಡಿಕೊಡುತ್ತಾರೆ. ಗೊತ್ತಿಲ್ಲದ ಊರಲ್ಲಿ ನೆಂಟರಿಗಿಂತ ಅದ್ಭುತವಾಗಿ ಅತಿಥಿ ಸತ್ಕಾರ ಮಾಡುವವರು ಯಾರು? ಜೆ ಎಲ್ ಆರ್ ಬಿಟ್ಟರೆ ಮತ್ಯಾರಿದ್ದಾರೆ ಹೇಳಿ. ಹೌದು, ನಮ್ಮ ಪ್ರವಾಸಿ ಪ್ರಪಂಚ ತಂಡ ಇಂದು ಜೆ ಎಲ್ ಆರ್ ದುಬಾರೆ ಆನೆ ಕ್ಯಾಂಪ್ ಗೆ ಬಂದಿದೆ. ನಾವು ಇಲ್ಲಿ ನೂರಾರು ಆನೆಗಳನ್ನು ನೋಡುತ್ತಿದ್ದೇವೆ. ಆನೆಗಳ ಮೈ ತಿಕ್ಕುತ್ತಿದ್ದೇವೆ. ಅದರ ಜಲಕ್ರೀಡೆ ಮತ್ತು ಚೇಷ್ಟೆಗಳನ್ನು ನೋಡುತ್ತಾ ಹೊಟ್ಟೆಯಲ್ಲಿ ಹುಣ್ಣಾಗುವಷ್ಟು ನಗುತ್ತಿದ್ದೇವೆ.

New Project (59)

ಜೆಎಲ್‌ಆರ್‌ ದುಬಾರೆ ಆನೆ ಕ್ಯಾಂಪ್

ದುಬಾರೆ ಕೊಡಗಿನ ಕುಶಾಲನಗರದ ಹತ್ತಿರವಿರುವ ಒಂದು ದಟ್ಟ ಕಾಡು. ಇಲ್ಲೇ ಇದೆ ದುಬಾರೆ ಆನೆ ಕ್ಯಾಂಪ್. ಆ ಆನೆ ಕ್ಯಾಂಪಿಗೆ ಹತ್ತಿರದಲ್ಲೇ ಜೆಎಲ್‌ಆರ್‌ ದುಬಾರೆ ಆನೆ ಕ್ಯಾಂಪ್ ಇದೆ. ಗಾಬರಿ ಬೀಳಬೇಡಿ. ಈ ದುಬಾರೆ ಖರ್ಚಿನ ವಿಷಯದಲ್ಲಿ ದುಬಾರಿ ಅಲ್ಲ. ವನ್ಯಜೀವಿ ಫೊಟೋಗ್ರಾಫರ್‌ ಗಳಿಂದ ಹಿಡಿದು ಶಾಲಾ ಮಕ್ಕಳವರೆಗೂ ದುಬಾರೆ ಇಷ್ಟ! ದುಬಾರೆಯಲ್ಲಿ ವಾಸ್ತವ್ಯ ಹೂಡಲು ಎಲ್ಲರ ಫೇವರಿಟ್ ತಾಣ ಜೆಎಲ್‌ಆರ್‌. ದುಬಾರೆ ಆನೆ ಕ್ಯಾಂಪ್ ಬದುಕಿನಲ್ಲೊಮ್ಮೆ ಹೋಗಲೇಬೇಕಾದ ತಾಣ. ಏಕೆಂದರೆ, ದಸರಾ ಸಮಯದಲ್ಲಿ ತಾಯಿ ಚಾಮುಂಡೇಶ್ವರಿಯನ್ನು ಹೊತ್ತುಸಾಗುವ ಅರ್ಜುನ, ಭೀಮ, ಅಭಿಮನ್ಯು, ಧನಂಜಯ, ಗೋಪಿ ಮತ್ತು ವರಲಕ್ಷ್ಮೀ ಜತೆ ಹಲವಾರು ಆನೆಗಳು ಈ ಶಿಬಿರದಲ್ಲಿದೆ. ಅದನ್ನು ತೋರಿಸುವ ವ್ಯವಸ್ಥೆ ಜೆಎಲ್‌ಆರ್‌ನ ಸಿಬ್ಬಂದಿ ಮಾಡುತ್ತಾರೆ. ಆನೆ ನೋಡೋದು ಅಂದರೆ ಸುಮ್ಮನೆ ದೂರ ನಿಂತು ಇಷ್ಟಬಂದಂತೆ ಕೈ ಬೀಸುವುದಲ್ಲ. ಅಲ್ಲೆಲ್ಲೋ ಪಕ್ಕದಲ್ಲಿ ನಿಂತು ಒಂದು ಸೆಲ್ಫೀ ತೆಗೆದುಕೊಂಡು ಓಡಿಹೋಗುವುದೂ ಅಲ್ಲ. ಆನೆಗಳು ಸ್ನಾನ ಮಾಡುವಾಗ, ಆಟವಾಡುವಾಗ, ಅದರ ತಲೆಗೆ ಎಣ್ಣೆ ಹಚ್ಚಿ ಮಸಾಜ್‌ ಮಾಡುವ ಸಮಯದಲ್ಲಿ ಪ್ರಶಾಂತತೆಯಿಂದ ಆನೆಗಳು ಕಣ್ಣುಮುಚ್ಚಿ ಎಂಜಾಯ್‌ ಮಾಡುತ್ತಾವಲ್ಲ. ಆಗ, ಅವುಗಳಿಗೆ ಅಂಟಿ ನಿಂತು, ಜೆಎಲ್‌ಆರ್‌ನ ಗೈಡ್ ಗಳು ಕಾಡು, ಪರಿಸರ, ಪ್ರಾಣಿ, ಪಕ್ಷಿಗಳ ಜತೆಗೆ ಆನೆಗಳ ಬಗ್ಗೆ ಕುತೂಹಲಕಾರಿ ಮಾಹಿತಿಗಳನ್ನು ಬಿಚ್ಚಿಡುತ್ತಾರೆ ನೋಡಿ. ಅಂಥ ಮಧುರ ಅನುಭವಗಳನ್ನು ಮರೆಯಲು ಸಾಧ್ಯವಿಲ್ಲ.

New Project (51)

ಆನೆ ಜತೆ ಆನಂದಿಸಿ

ನೀವು ಜೆಎಲ್‌ಆರ್‌ನ ಪ್ರತಿನಿಧಿಯೊಟ್ಟಿಗೆ ಕ್ಯಾಂಪ್ ನೊಳಗೆ ಹೋದರೆ, ಆನೆಗಳ ಟ್ರೇನಿಂಗ್‌ ಮಾಡುವುದನ್ನು ನೋಡಬಹುದು. ಬರೀ ಅಷ್ಟೇ ಅಲ್ಲ, ಕಾವೇರಿ ನದಿಯೊಳಗೆ ಆನೆಗಳಿಗೆ ಮೈಯುಜ್ಜುತ್ತ ಸ್ನಾನ ಮಾಡಿಸುವ ಕಾವಾಡಿಗರ ಜತೆ ಮಾತನಾಡಬಹುದು. ಆನೆಗಳ ತಲೆಗೆ ಎಣ್ಣೆ ಹಚ್ಚಿ ಕೂದಲು ಬಾಚುವುದನ್ನೂ ನೋಡಬಹುದು. ಆನೆ ದಂತ ಸೇರಿ ಮತ್ತಿತರ ಭಾಗಗಳಿಗೆ ಎಣ್ಣೆಹಚ್ಚಿ ಅದರ ಮೇಕಪ್‌ ಮಾಡುವುದು, ಅದರ ಅಂದಚಂದವನ್ನು ನೋಡುವುದು. ಅಷ್ಟು ದೊಡ್ಡ ಆನೆ ಮಾವುತನ ಮಾತನ್ನು ಮಗುವಿನಂತೆ ಕೇಳುವುದು, ಅವನ ಜತೆ ಆಟವಾಡುವುದು, ಪ್ರವಾಸಿಗರನ್ನು ಹೊತ್ತುಕೊಂಡು ಹೋಗುವುದು. ನಿಮ್ಮ ತಲೆಯ ಮೇಲೆ ಅದರ ಬೃಹದಾಕಾರದ ಸೊಂಡಿಲನ್ನು ಇಟ್ಟು ಆಶೀರ್ವಾದ ಮಾಡುವುದು. ಇಲ್ಲಿಯ ಆನೆಗಳ ಜತೆಗಿನ ಮಾತುಕತೆ ನಿಮ್ಮನ್ನು ಬೇರೆಯದೇ ಪ್ರಪಂಚಕ್ಕೆ ಕರೆದೊಯ್ಯುತ್ತದೆ. ಆನೆಗಳು ಆಹಾರ ತಿನ್ನುವುದನ್ನು ನೋಡೋದೇ ಒಂದು ಬಿಗ್ ಟೈಂಪಾಸ್. ಅವುಗಳು ಬರೀ ಹುಲ್ಲನ್ನಷ್ಟೇ ತಿನ್ನುವುದಿಲ್ಲ. ಅವು ಮನುಷ್ಯರ ರೀತಿಯಲ್ಲೇ ಹಲವಾರು ವಿಧದ ಆಹಾರ ತಿನ್ನುತ್ತವೆ. ಆ ಆಹಾರ ತಯಾರು ಮಾಡುವ ವಿಧಾನವನ್ನೂ ನಾವು ನೋಡಬಹುದು. ಅಲ್ಲಿನ ಮಾವುತರ ಬಗ್ಗೆ ತಿಳಿದುಕೊಳ್ಳೋಕೂ ಒಂದೊಳ್ಳೇ ಅವಕಾಶ. ಅವರು ಸ್ನೇಹಜೀವಿಗಳು. ಆನೆಗಳಿಗೆ ಹೇಗೆ ತರಬೇತಿ ನೀಡುತ್ತಾರೆ. ಆನೆಗಳು ಹೇಗೆ ಅವರ ಮಾತುಗಳನ್ನು ಕಮಾಂಡ್‌ ಗಳನ್ನು ಕೇಳುತ್ತವೆ ಇದನ್ನೆಲ್ಲ ನೋಡಿಯೇ ಸವಿಯಬೇಕು.

ಆನೆ ಕ್ಯಾಂಪಿನ ಈ ಕಾಡಿನಲ್ಲಿ ಬರೀ ಆನೆ ಅಷ್ಟೇ ಅಲ್ಲ. ಬೇರೆ ಹಲವಾರು ಪ್ರಾಣಿಗಳಿಗೂ ಈ ದುಬಾರೆ ಅರಣ್ಯ ವಸತಿಯಾಗಿದೆ. ಇಲ್ಲಿ ಕಾಡೆಮ್ಮೆ, ಚಿರತೆ, ಕಾಡು ನಾಯಿ, ಕರಡಿ, ನವಿಲು, ಕೌಜುಗಗಳು ಸೇರಿದಂತೆ ಹತ್ತು ಹಲವು ರೀತಿಯ ಕಾಡುಪ್ರಾಣಿ ಪಕ್ಷಿಗಳು ಇಲ್ಲಿ ಕಾಣಸಿಗುತ್ತದೆ. ಪ್ರಾಣಿ, ಪಕ್ಷಿ, ಪರಿಸರ ಪ್ರೇಮಿಗಳಿಗೆ ಇದು ಸ್ವರ್ಗಕ್ಕಿಂತ ಸೊಗಸು. ಪರಿಸರದ ಮೇಲೆ ಅಷ್ಟೊಂದು ಆಸಕ್ತಿ ಪ್ರೀತಿ ಇಲ್ಲದವರೂ ಜೆ ಎಲ್ ಆರ್ ನಿಂದ ಹೊರಡುವ ಹೊತ್ತಿಗೆ ಪರಿಸರ ಪ್ರೇಮಿಗಳಾಗಿರುತ್ತಾರೆ.

New Project (55)

ಜೆಎಲ್‌ಆರ್‌ ತನ್ನ ಆತಿಥ್ಯದಿಂದ ಅತಿಥಿಗಳ ಮನಸಲ್ಲಿ ಮನೆ ಮಾಡಿದೆ. ಅಲ್ಲಿನ ಸಿಬ್ಬಂದಿಯ ಸಹೃದಯತೆ, ಆತ್ಮೀಯತೆ, ಯಾವುದಕ್ಕೂ ಕುಂದು ಕೊರತೆ ಬರದ ಹಾಗೆ ಮಾಡುವ ಅತಿಥಿ ಸತ್ಕಾರ ಪ್ರವಾಸಿಗರಿಗೆ ಫುಲ್ ಪೈಸಾ ವಸೂಲ್ ಭಾವವನ್ನು ನೀಡುತ್ತದೆ. ಜೆಎಲ್‌ಆರ್‌ ಊಟದ ಬಗ್ಗೆ ಎಲ್ಲಿಯೂ ಚಕಾರ ಎತ್ತಲು ಸಾಧ್ಯವಿಲ್ಲ. ಶುಚಿ ರುಚಿ ಮತ್ತು ಶುಚಿಯಾದ ಅಡುಗೆ ಜೆಎಲ್‌ಆರ್‌ ಅವರ ಐಡೆಂಟಿಟಿ. ದುಬಾರೆಯಲ್ಲಿರುವ ಜೆ ಎಲ್ ಆರ್ ಗೆ ಹೋದರೆ ಅದ್ಭುತ ಊಟದ ಜತೆ ಆರಾಮದಾಯಕ ವಸತಿ ಬಗ್ಗೆ ಯೋಚಿಸುವ ಅಗತ್ಯವೇ ಇಲ್ಲ. ನಿಮ್ಮ ಕೋರಿಕೆಯ ಮೇರೆಗೆ ಅಲ್ಲಿನ ಸ್ಥಳೀಯ ಆಹಾರವನ್ನೂ ನಿರೀಕ್ಷಿಸಬಹುದು.

ಆನೆಗೆ ಕೈತುತ್ತು ತಿನಿಸುವಿರಾ?

ಕೊಡಗಿನ ವಾತಾವರಣ ಸದಾ ಆಹ್ಲಾದಕರ. ದುಬಾರೆ ಆನೆ ಕ್ಯಾಂಪ್‌ ಪ್ರವೇಶಕ್ಕೆ ಸದಾ ಮುಕ್ತವಿದ್ದರೂ, ಮುಂಗಾರಿನ ಸಮಯದಲ್ಲಿ ಹೋಗುವುದು ಚೆನ್ನ! ಜುಲೈನಿಂದ ಸೆಪ್ಟೆಂಬರ್‌ ವರೆಗೆ ಪೀಕ್‌ ಸೀಸನ್‌ ಆಗಿರುವುದರಿಂದ ಆಗ ಹೋಗುವುದು ಒಳ್ಳೆಯದು. ಮಳೆ ಚೆನ್ನಾಗಿ ಆಗಿದ್ದರೆ, ತುಂಬಿ ಹರಿಯುವ ಕಾವೇರಿ ನಮ್ಮನ್ನು ನಾವೇ ಮರೆಯುವ ಹಾಗೆ ಮಾಡುತ್ತಾಳೆ. ಕೆಲವೊಮ್ಮೆ ಮಳೆ ಜಾಸ್ತಿ ಆಗಿದ್ದಾಗ ಸೆಪ್ಟೆಂಬರ್‌ನಿಂದ ಮಾರ್ಚ್‌ ವರೆಗೂ ಹೋಗಬಹುದು. ಮಕ್ಕಳ ಬೇಸಿಗೆ ರಜಾ ಸಮಯದಲ್ಲಿ ಹೋಗಲೂ ಇದು ಪರ್ಫೆಕ್ಟ್ ಆಯ್ಕೆ . ದುಬಾರೆ ಬೇಸಗೆಯಲ್ಲೂ ತಂಪಾಗಿರುತ್ತದೆ. ಹೇಗಿದ್ದರೂ ನಿಮ್ಮ ಮಕ್ಕಳಿಗೆ ಈಗ ಬೇಸಿಗೆ ರಜೆ. ಒಂದೆರಡು ದಿನ ದುಬಾರೆ ಕ್ಯಾಂಪ್‌ನಲ್ಲಿ ಉಳಿದು ದುಬಾರಿ ಅನುಭವಗಳಿಸಿ.

ರಿವರ್‌ ವ್ಯೂ ಕಾಟೇಜ್ ಪ್ಯಾಕೇಜ್‌

ಪ್ಯಾಕೇಜ್‌ನಲ್ಲಿ ಏನೇನಿದೆ?

ಆಯ್ದ ಸ್ಥಳದಲ್ಲಿ ವಾಸ್ತವ್ಯ

ಲಂಚ್, ಡಿನ್ನರ್, ಬ್ರೇಕ್‌ಫಾಸ್ಟ್

ದುಬಾರೆ ಅರಣ್ಯದಲ್ಲಿ ಜೀಪ್ ಸಫಾರಿ

ಪಕ್ಷಿ ವೀಕ್ಷಣೆ/ನೇಚರ್ ವಾಕ್

ಫಾರೆಸ್ಟ್‌ ವ್ಯೂ ಕಾಟೇಜ್ ಪ್ಯಾಕೇಜ್

ಪ್ಯಾಕೇಜ್‌ನಲ್ಲಿ ಏನೇನಿದೆ?

ಆಯ್ದ ಸ್ಥಳದಲ್ಲಿ ವಾಸ್ತವ್ಯ

ಲಂಚ್, ಡಿನ್ನರ್, ಬ್ರೇಕ್‌ಫಾಸ್ಟ್

ಆನೆ ಶಿಬಿರ ಭೇಟಿ

ದುಬಾರೆ ಅರಣ್ಯದಲ್ಲಿ ಜೀಪ್ ಸಫಾರಿ

ಪಕ್ಷಿ ವೀಕ್ಷಣೆ/ನೇಚರ್ ವಾಕ್

ಆನೆ ಚಟುವಟಿಕೆ ಪ್ಯಾಕೇಜ್‌

ಪ್ಯಾಕೇಜ್‌ನಲ್ಲಿ ಏನೇನಿದೆ?

ಬ್ರೇಕ್‌ಫಾಸ್ಟ್

ಆನೆ ಶಿಬಿರ ಭೇಟಿ

ಸಮಯ: ರಿಪೋರ್ಟಿಂಗ್ – ಬೆಳಗ್ಗೆ 8:30, ಚೆಕ್‌ಔಟ್ – ಬೆಳಗ್ಗೆ 11:30

ಡೇ ವಿಸಿಟ್ ಪ್ಯಾಕೇಜ್

ಪ್ಯಾಕೇಜಲ್ಲಿ ಏನೇನಿದೆ?

ಬ್ರೇಕ್‌ಫಾಸ್ಟ್

ಶಿಬಿರ ಭೇಟಿ

ಟ್ರೆಕ್ಕಿಂಗ್

ಲಂಚ್

ಸಮಯ: ರಿಪೋರ್ಟಿಂಗ್ – ಬೆಳಗ್ಗೆ 8:30, ಚೆಕ್‌ ಔಟ್ – ಮಧ್ಯಾಹ್ನ 2:30

ದುಬಾರೆಯಲ್ಲಿ ದುಬಾರಿ ದಿನ

ದಿನ 1

ಮಧ್ಯಾಹ್ನ 1:00 –ಚೆಕ್ ಇನ್ ಮಾಡಿ, ಸ್ವಲ್ಪ ವಿಶ್ರಾಂತಿ ಮಾಡಿ, ಫ್ರೆಶ್ ಆಗಿ ರೆಡಿಯಾಗಿ

1:30 – 2:30 –ರುಚಿಯಾದ ಊಟ ಸವಿಯಿರಿ.

4:00 – 4:30 –ಟೀ/ಕಾಫಿ ಮುಗಿಸಿ, ಅರಣ್ಯದ ಕಡೆ ಹೋಗಲು ಸಿದ್ಧರಾಗಿ.

4:30 – 6:30 –ಸಿಬ್ಬಂದಿಯ ಜತೆ ವನ್ಯಜೀವಿ ಸಫಾರಿ ಅಥವಾ ನೇಚರ್ ವಾಕ್. ಗೈಡ್ ಗಳು ತಾವು ಕಂಡು ಕೇಳಿದ ಅರಣ್ಯದ ಕಥೆಗಳನ್ನು ಹಂಚಿಕೊಳ್ಳುತ್ತಾರೆ. ಪ್ರಾಣಿ, ಪಕ್ಷಿ, ಸುತ್ತಲಿನ ಪರಿಸರ ಎಲ್ಲದರ ಬಗ್ಗೆ ತಿಳಿದುಕೊಳ್ಳಿ.

6:30 – 7:15 –ಬೋನ್‌ಫೈರ್‌ ಎದುರು ಚಹಾ/ಕಾಫಿ ಜತೆಗೆ ಸ್ವಾದಿಷ್ಟವಾದ ಸ್ನ್ಯಾಕ್ಸ್.

8:00 – 9:30 –ರಾತ್ರಿ ಊಟ

ದಿನ 2

6:15 – 6:30 –ಆರಾಮವಾಗಿ ಎದ್ದೇಳಿ!

6:30 – 8:30 –ಟೀ ಅಥವಾ ಕಾಫಿ ಬಳಿಕ ಇನ್ನೊಂದು ಸಫಾರಿ ಅಥವಾ ನೇಚರ್ ವಾಕ್. ಮತ್ತೆ ಅದೇ ಪರಿಸರ ತಜ್ಞರ ತಂಡ. ಆದರೆ ಈ ಬಾರಿ ಬೆಳಗಿನ ಜಾವದ ಅರಣ್ಯ ನೋಡುವುದು ವಿಶೇಷ.

8:30 – 9:00 –ಬ್ಯಾಕ್ ಟು ಕ್ಯಾಂಪ್ – ಒಳ್ಳೆಯ ಬ್ರೇಕ್‌ಫಾಸ್ಟ್ ಸಿದ್ಧವಾಗಿರುತ್ತದೆ!

9:00 – 10:15 –ಆನೆ ಕ್ಯಾಂಪ್ ಭೇಟಿ – ಆನೆಗಳನ್ನು ಕಣ್ತುಂಬಿಕೊಂಡು ಅವುಗಳ ಜೀವನವನ್ನು ಹತ್ತಿರದಿಂದ ನೋಡಿ

10:30 –ಚೆಕ್‌ಔಟ್ – ಅರಣ್ಯದ ಮತ್ತು ಜೆ ಎಲ್ ಆರ್ ಆತಿಥ್ಯದ ಸವಿನೆನಪುಗಳೊಂದಿಗೆ ನಿಮ್ಮ ಮನೆ ಕಡೆಗೆ ನಡೆಯಿರಿ

ಗಮನಿಸಿ:
ಸಂಜೆ 7 ಗಂಟೆಯ ಬಳಿಕ ಚೆಕ್-ಇನ್ ಮಾಡಲಾಗದು. ಬೋಟ್ ಸೌಲಭ್ಯ ಲಭ್ಯವಿಲ್ಲ.

ದಾರಿ ಹೇಗೆ?

ರಸ್ತೆ ಮೂಲಕ

ಬೆಂಗಳೂರಿನಿಂದ ಶಿಬಿರದ ದೂರ ಸುಮಾರು 239 ಕಿಲೋಮೀಟರ್.

ರೈಲಿನ ಮೂಲಕ

ಹತ್ತಿರದಲ್ಲಿ ಮೈಸೂರು ಜಂಕ್ಷನ್‌ ಇದೆ

ವಿಮಾನದ ಮೂಲಕ

ಮೈಸೂರು ವಿಮಾನ ನಿಲ್ದಾಣ‌ವೇ ಹತ್ತಿರದ ಏರ್‌ಪೋರ್ಟ್. ಇಲ್ಲಿ ಬೆಂಗಳೂರು ಮತ್ತು ಮುಂಬೈಗೆ ಸಂಪರ್ಕವಿರುವ ವಿಮಾನಗಳು ಲಭ್ಯ.

ರೆಸಾರ್ಟ್ ಸಂಪರ್ಕ

ನಂಜರಾಜಪಟ್ಟಣ ಪೋಸ್ಟ್, ಕುಶಾಲನಗರ,
ಸೋಮವಾರಪೇಟೆ ತಾಲೂಕು, ಕೊಡಗು ಜಿಲ್ಲೆ, ಹೋಬಳಿ,
ಮೈಸೂರು ಹತ್ತಿರ – ಪಿನ್ ಕೋಡ್: 571 234

ಮ್ಯಾನೇಜರ್: ಕೃಷ್ಣಪ್ರಸಾದ್

ಮೊಬೈಲ್ (ರೆಸಾರ್ಟ್): 94495 97876
ಬುಕಿಂಗ್‌ ನಂಬರ್‌ : 9480885305

ಲ್ಯಾಂಡ್‌ಲೈನ್ : 08276 – 267641

ಇಮೇಲ್ ಐಡಿ: dubare@junglelodges.com

Deekshith Nair

Deekshith Nair

Travel blogger and adventurer passionate about exploring new cultures and sharing travel experiences.

ಪ್ರವಾಸಿಗರ ನೆಚ್ಚಿನ ಎವರ್ ಗ್ರೀನ್ ಕೌಂಟಿ...

Read Previous

ಪ್ರವಾಸಿಗರ ನೆಚ್ಚಿನ ಎವರ್ ಗ್ರೀನ್ ಕೌಂಟಿ...

ಪ್ರಕೃತಿಯ ಮೈಮಾಟವನ್ನು ನೋಡಬೇಕೆ? ಸಮತಗೆ ಬನ್ನಿ

Read Next

ಪ್ರಕೃತಿಯ ಮೈಮಾಟವನ್ನು ನೋಡಬೇಕೆ? ಸಮತಗೆ ಬನ್ನಿ