Thursday, February 19, 2026
Thursday, February 19, 2026

ಪ್ರವಾಸಸ್ನೇಹಿ ಬಜೆಟ್-ಬಜೆಟ್ ಸ್ನೇಹಿ ಪ್ರವಾಸ

ಸಂತಸದ ವಿಷಯವೇನೆಂದರೆ ಈ ಬಾರಿಯ ಕೇಂದ್ರ ಬಜೆಟ್ ಪ್ರವಾಸೋದ್ಯಮದ ಪಾಲಿಗೆ ಪೂರಕವಾಗಿದೆ. ಈ ಬಾರಿಯ ಬಜೆಟ್ ಪ್ರವಾಸೋದ್ಯಮವನ್ನು ಆದ್ಯತೆ(priority) ಎಂದು ನೋಡಿದೆ. ಆರ್ಥಿಕತೆಗೆ ಕಾಂಟ್ರಿಬ್ಯೂಟ್ ಮಾಡುವ ಯಾವುದೇ ಕ್ಷೇತ್ರವನ್ನು ಆದ್ಯತೆಯನ್ನಾಗಿ ನೋಡಬೇಕಿರುವುದು ಆರೋಗ್ಯಕರ ಬಜೆಟ್ ನ ಲಕ್ಷಣ. ಆರ್ಥಿಕ ಉತ್ಪತ್ತಿಯ ಸಾಮರ್ಥ್ಯ ಹೊಂದಿರುವ ಕ್ಷೇತ್ರಗಳನ್ನು ಅಭಿವೃದ್ಧಿಪಡಿಸಬೇಕಿರುವುದು ಆಳುವವರ ಕರ್ತವ್ಯ. ಈ ದಿಸೆಯಲ್ಲಿ ಪ್ರವಾಸೋದ್ಯಮದ ಮಹತ್ವವನ್ನು ಅರ್ಥಮಾಡಿಕೊಂಡಿರುವುದು ಹಾಗೂ ಇದೊಂದು ಸೀರಿಯಸ್ ಉದ್ಯಮ ಎಂದು ಪರಿಗಣಿಸಿರುವುದು ಸ್ವಾಗತಾರ್ಹ ಅಂಶ.

ಬಜೆಟ್ ಎಂಬುದೇ ಹಾಗೆ. ಅದು ಯಾವತ್ತಿಗೂ ಸರ್ವರೂ ಮೆಚ್ಚುವ ವಿಷಯವಾಗಲು ಸಾಧ್ಯವಿಲ್ಲ. ಇಷ್ಟು ದೊಡ್ಡ ದೇಶದ, ನೂರೈವತ್ತು ಕೋಟಿ ಜನಸಂಖ್ಯೆಯ ಹಾಗೂ ಒಕ್ಕೂಟ ವ್ಯವಸ್ಥೆ ಹೊಂದಿರುವ ದೇಶದ ಹಣಕಾಸಿನ ನಿರ್ವಹಣೆ ಮತ್ತು ಅದನ್ನು ಆಧರಿಸಿದ ಯೋಜನಾ ನಿರ್ವಹಣೆ ಸಣ್ಣ ವಿಷಯವಂತೂ ಅಲ್ಲವೇ ಅಲ್ಲ. ಒಂದು ಪುಟ್ಟ ಕುಟುಂಬದಲ್ಲೇ ಎಲ್ಲರನ್ನೂ ಸಂತುಷ್ಟಗೊಳಿಸಲು ಸಾಧ್ಯವಿಲ್ಲ. ಹೀಗಿರುವಾಗ ಭಾರತದಂಥ ದೇಶದಲ್ಲಿ ಸರ್ವಾನುಮತದಿಂದ ಒಪ್ಪುವ ಬಜೆಟ್ ಮಂಡಿಸುವುದು ಅಸಾಧ್ಯವೇ ಸರಿ. ಪ್ರತಿ ವರ್ಷ ಕೆಲವು ವಿಭಾಗಗಳು ಆದ್ಯತೆ ಪಡೆದರೆ, ಮತ್ತೆ ಕೆಲವು ಅವಗಣನೆಗೆ ಒಳಗಾಗುತ್ತವೆ.

ಇದನ್ನೂ ಓದಿ: ಚಾರಣವೆಂದರೆ ಕೇವಲ ಕುಮಾರಪರ್ವತವಾಗದಿರಲಿ

ಸಂತಸದ ವಿಷಯವೇನೆಂದರೆ ಈ ಬಾರಿಯ ಕೇಂದ್ರ ಬಜೆಟ್ ಪ್ರವಾಸೋದ್ಯಮದ ಪಾಲಿಗೆ ಪೂರಕವಾಗಿದೆ. ಈ ಬಾರಿಯ ಬಜೆಟ್ ಪ್ರವಾಸೋದ್ಯಮವನ್ನು ಆದ್ಯತೆ(priority) ಎಂದು ನೋಡಿದೆ. ಆರ್ಥಿಕತೆಗೆ ಕಾಂಟ್ರಿಬ್ಯೂಟ್ ಮಾಡುವ ಯಾವುದೇ ಕ್ಷೇತ್ರವನ್ನು ಆದ್ಯತೆಯನ್ನಾಗಿ ನೋಡಬೇಕಿರುವುದು ಆರೋಗ್ಯಕರ ಬಜೆಟ್ ನ ಲಕ್ಷಣ. ಆರ್ಥಿಕ ಉತ್ಪತ್ತಿಯ ಸಾಮರ್ಥ್ಯ ಹೊಂದಿರುವ ಕ್ಷೇತ್ರಗಳನ್ನು ಅಭಿವೃದ್ಧಿಪಡಿಸಬೇಕಿರುವುದು ಆಳುವವರ ಕರ್ತವ್ಯ. ಈ ದಿಸೆಯಲ್ಲಿ ಪ್ರವಾಸೋದ್ಯಮದ ಮಹತ್ವವನ್ನು ಅರ್ಥಮಾಡಿಕೊಂಡಿರುವುದು ಹಾಗೂ ಇದೊಂದು ಸೀರಿಯಸ್ ಉದ್ಯಮ ಎಂದು ಪರಿಗಣಿಸಿರುವುದು ಸ್ವಾಗತಾರ್ಹ ಅಂಶ. ಈ ಬಾರಿಯ ಬಜೆಟ್ ನಲ್ಲಿ ಪ್ರವಾಸಿಗರಿಗೆ ಸಿಕ್ಕ ಬಹುದೊಡ್ಡ ಕೊಡುಗೆ ಅಂದರೆ ಅದು ಟಿಸಿಎಸ್(Tax collected at Source) ನ ದರದಲ್ಲಿ ಮಾಡಿದ ಗಣನೀಯ ಇಳಿಕೆ. ಪ್ರತಿ ಪ್ರವಾಸಲ್ಲೂ ಪ್ರಯಾಣಿಕನ ಜೇಬಿನ ಮೇಲೆ ಕೆಂಗಣ್ಣು ಬೀರುತ್ತಿದ್ದ ಈ ಟಿಸಿಎಸ್ ಇನ್ನು ಮುಂದೆ ಪ್ರವಾಸಿಸ್ನೇಹಿಯಾಗಲಿದೆ. ಫ್ಲಾಟ್ 2%ಗೆ ಇಳಿಕೆ ಮಾಡುವ ಮೂಲಕ ನಿರ್ಮಲಾ ಸೀತಾರಾಮನ್ ಪ್ರವಾಸಿಗರ ಮನ ಗೆದ್ದಿದ್ದಾರೆ. ಇದನ್ನು ಇನ್ಯಾವುದಾದರೂ ರೂಪದಲ್ಲಿ ಕಿತ್ತುಕೊಳ್ಳುತ್ತಿದ್ದಾರಾ ಎಂಬ ಆತಂಕವೂ ಬೇಕಿಲ್ಲ. ವಿದೇಶ ಪ್ರವಾಸಗಳನ್ನು ಉತ್ತೇಜಿಸುವ ಸಲುವಾಗಿ ಮಾಡಿರುವ ಈ ಸುಧಾರಣೆಯಿಂದ ಗ್ರಾಹಕರಿಗೆ ಹೊರೆಯಾಗದೆಯೂ ಲಾಭ ಮಾಡಬಹುದು ಎಂದು ಸರಕಾರ ಮನಗಂಡಿದೆ.

Untitled design - 2026-02-19T105048.466

ಇದರ ಹೊರತಾಗಿ ಪ್ರವಾಸೋದ್ಯಮ ದೃಷ್ಟಿಯಿಂದ ಗುಣಾತ್ಮಕ ಅಂಶಗಳು ಏನೇನಿವೆ ಎಂದು ನೋಡಿದರೆ ಕಾಣುವುದು ವೆಲ್ ನೆಸ್ ಟೂರಿಸಂ ಮತ್ತು ಕೋಸ್ಟಲ್ ಟೂರಿಸಂಗೆ ಸಿಕ್ಕಿರುವ ಪ್ರಾಶಸ್ತ್ಯ. ಆರೋಗ್ಯ ಪ್ರವಾಸೋದ್ಯಮ ಕೇವಲ ಕೇರಳಕ್ಕೆ ಸೀಮಿತವಲ್ಲ. ಅದು ಇಡೀ ದೇಶದಲ್ಲಿ ವ್ಯಾಪಕವಾಗಬೇಕು ಎಂಬ ಆಶಯ ಈ ಬಾರಿಯ ಬಜೆಟ್ ನಲ್ಲಿ ಕಂಡುಬಂದಿದೆ. ಇದರಿಂದ ಕರ್ನಾಟಕಕ್ಕೆ ಹೆಚ್ಚು ಲಾಭವಾಗುವುದು ಖಚಿತ. ಏಕೆಂದರೆ ಕೇರಳ ಹೊರತುಪಡಿಸಿದರೆ ಆರೋಗ್ಯಪ್ರವಾಸೋದ್ಯಮವನ್ನು ಗಂಭೀರವಾಗಿ ಪರಿಗಣಿಸಿದ್ದು ಕರ್ನಾಟಕ ಮಾತ್ರ. ಆದರೆ ಸರಕಾರದ ಸಹಕಾರ ಸಿಕ್ಕಿರಲಿಲ್ಲ. ಈಗ ಅದು ಇನ್ನಷ್ಟು ಚುರುಕುಗೊಳ್ಳುವ ಸೂಚನೆ ಕಾಣುತ್ತಿದೆ. ಅಂತೆಯೇ ಕರಾವಳಿ ಪ್ರವಾಸೋದ್ಯಮಕ್ಕೆ ಈಗ ಶುಕ್ರದೆಸೆ ಆರಂಭವಾದಂತಿದೆ. ಕಳೆದ ತಿಂಗಳಷ್ಟೇ ರಾಜ್ಯ ಸರಕಾರ ಕರಾವಳಿ ಪ್ರವಾಸೋದ್ಯಮಕ್ಕೆ ಪ್ರತ್ಯೇಕ ನೀತಿ ರೂಪಿಸುವ ಮಾತುಗಳನ್ನಾಡಿತ್ತು. ಇದೀಗ ಕೇಂದ್ರ ಸರಕಾರವೂ ಕರಾವಳಿ ಪ್ರವಾಸೋದ್ಯಮದ ಅಭಿವೃದ್ಧಿಗೆ ಪೂರಕವಾದ ಘೋಷಣೆಗಳನ್ನು ಹೊರಡಿಸಿದೆ. ಟರ್ಟಲ್ ಟ್ರಯಲ್ಸ್ ಈ ನಿಟ್ಟಿನಲ್ಲಿ ಒಂದು ಮಹತ್ವದ ಹೆಜ್ಜೆ ಅನ್ನಬಹುದು. ಕೇಂದ್ರ ಸರಕಾರದಿಂದ ಕರ್ನಾಟಕಕ್ಕೆ ವಿಶೇಷವಾಗಿ ಕಣ್ಣಿಗೆ ರಾಚುವಂತೆ ಏನೂ ಸಿಗದಿರಬಹುದು. ಆದರೆ ಪ್ರವಾಸೋದ್ಯಮಕ್ಕೆ ಕೊಟ್ಟಿರುವ ಆದ್ಯತೆಯ ಲಾಭ ಪಡೆದುಕೊಂಡರೆ ಕರ್ನಾಟಕದ ಪ್ರವಾಸೋದ್ಯಮ ಏಳಿಗೆ ಕಾಣುವುದು ಖಚಿತ. ಇಲ್ಲಿ ಬೇಕಿರುವುದು ಇಚ್ಛಾಶಕ್ತಿ ಮತ್ತು ದೂರದೃಷ್ಟಿ ಅಷ್ಟೆ. ಪ್ರವಾಸೋದ್ಯಮದ ದೃಷ್ಟಿಕೋನವನ್ನು ಬದಲಿಸಲು ಹೊರಟಿರುವ ಕೇಂದ್ರ ಸರಕಾರದ ಆಶಯ ಅರ್ಥಮಾಡಿಕೊಂಡಲ್ಲಿ ನಮ್ಮ ದೇಶದ ಪ್ರತಿ ಊರು, ಹಳ್ಳಿ, ಕೆರೆ, ಗದ್ದೆ ತೋಟಗಳೆಲ್ಲ ಪ್ರವಾಸಿತಾಣಗಳಾಗುವ ಅವಕಾಶವಿದೆ. ಅನುಭವ ಪ್ರವಾಸೋದ್ಯಮದ ಅಡಿಯಲ್ಲಿ ಎಲ್ಲವನ್ನೂ ಪ್ರವಾಸಿ ತಾಣವಾಗಿಸುವುದು ನಮ್ಮ ಕೈಯಲ್ಲಿದೆ. ಮುಂದಿನ ಒಂದು ವರ್ಷದಲ್ಲಿ ಈ ಸಲದ ಬಜೆಟ್ ಏನೇನು ಬದಲಾವಣೆ ತಂದೀತೆಂದು ಕಾದು ನೋಡೋಣ.

Admin

Admin

Pravasi Prapancha – A pioneering initiative led by Vishweshwar Bhat, the esteemed journalist and head of the Vishwavani Group. It is the first and only travel-focused publication in Kannada journalism, dedicated exclusively to news, information, and travel narratives about various destinations. The digital media counterpart of this venture is Pravasi Prapancha Digital Channel, which brings travel-related news from across the state, country, and world. It features fascinating insights, traveler experiences, interviews related to travel, entertainment segments, and much more. Editor-in-Chief: Shri Vishweshwar Bhat

ಜಪಾನಿನಲ್ಲಿ ಬೀದಿಯಲ್ಲಿಟ್ಟ ಕಸದ ತೊಟ್ಟಿಗಳೂ ಮಾತಾಡುತ್ತವೆ!

Read Previous

ಜಪಾನಿನಲ್ಲಿ ಬೀದಿಯಲ್ಲಿಟ್ಟ ಕಸದ ತೊಟ್ಟಿಗಳೂ ಮಾತಾಡುತ್ತವೆ!

ಒಂದು ಮರದ ಕೊಂಬೆ ಅಲ್ಲಾಡಿಸಿದ್ದಕ್ಕೆ ಕ್ಯಾತೆ ತೆಗೆದಿದ್ದ ಜಪಾನಿಯರು!

Read Next

ಒಂದು ಮರದ ಕೊಂಬೆ ಅಲ್ಲಾಡಿಸಿದ್ದಕ್ಕೆ ಕ್ಯಾತೆ ತೆಗೆದಿದ್ದ ಜಪಾನಿಯರು!