ಓಣಂ ಹಬ್ಬದ ಪ್ರಯುಕ್ತ ಬೆಂಗಳೂರಿನಿಂದ ಕೇರಳಕ್ಕೆ ಪ್ರಯಾಣಿಸುವ ಪ್ರವಾಸಿಗರ ಭಾರಿ ನೂಕುನುಗ್ಗಲನ್ನು ಸರಿದೂಗಿಸಲು ರೈಲ್ವೇ ಮಂಡಳಿಯು ಮಹತ್ವದ ನಿರ್ಧಾರ ಕೈಗೊಂಡಿದೆ. ಬೆಂಗಳೂರು-ಎರ್ನಾಕುಲಂ ವಂದೇ ಭಾರತ್‌ ಎಕ್ಸ್‌ಪ್ರೆಸ್‌ (Bengaluru-Ernakulam Vande Bharat Express) ರೈಲಿನ ಬೋಗಿಗಳ ಸಂಖ್ಯೆಯನ್ನು 8 ರಿಂದ 16ಕ್ಕೆ ದುಪ್ಪಟ್ಟುಗೊಳಿಸಲಾಗಿದ್ದು, ಆ 17 ರಿಂದ ನೂತನ 16 ಬೋಗಿಗಳ ಸೇವೆ ಜಾರಿಗೆ ಬಂದಿದೆ.

ಇದನ್ನೂ ಓದಿ: ರಷ್ಯಾದಿಂದ ಭಾರತಕ್ಕೆ ಹೊಸ ರೈಲು ಬರುತ್ತಾ?

ಓಣಂ ಹಬ್ಬದ ಪ್ರಯುಕ್ತ ಆ 21, 22 ರ ಪ್ರಯಾಣದ ದಿನಾಂಕಗಳಿಗೆ ಕಾಯುವಿಕೆ ಪಟ್ಟಿ 100 ಕ್ಕೂ ಮೀರಿತ್ತು ಮತ್ತು ಆ 29 ರಿಂದ 31 ರವರೆಗಿನ ರಿಟರ್ನ್ ಟಿಕೆಟ್‌ಗಳು ಸಂಪೂರ್ಣ ಭರ್ತಿಯಾಗಿದ್ದವು. ಹೀಗಾಗಿ ಈ ನಿರ್ಧಾರ ಕೈಗೊಳ್ಳಲಾಗಿದೆ.

ರೈಲಿನ ಸಮಯ ಮತ್ತು ಮಾರ್ಗ:

  • ಬುಧವಾರ ಹೊರತುಪಡಿಸಿ ವಾರದ 6 ದಿನ ಈ ರೈಲು (Train No. 26651/26652) ಸಂಚರಿಸಲಿದೆ.
  • ಸಮಯ: ಬೆಂಗಳೂರಿನಿಂದ (KSR Bengaluru) ಬೆಳಿಗ್ಗೆ 5.10 ಕ್ಕೆ ಹೊರಟು ಮಧ್ಯಾಹ್ನ 1.50 ಕ್ಕೆ ಎರ್ನಾಕುಲಂ ತಲುಪಲಿದೆ.
  • ನಿಲುಗಡೆಗಳು: ಕೃಷ್ಣರಾಜಪುರಂ, ಸೇಲಂ, ಈರೋಡ್, ತಿರುಪ್ಪೂರ್, ಕೊಯಮತ್ತೂರು, ಪಾಲಕ್ಕಾಡ್ ಮತ್ತು ತ್ರಿಶ್ಶೂರ್.
  • ಕರ್ನಾಟಕ, ತಮಿಳುನಾಡು ಮತ್ತು ಕೇರಳ - ಈ ಮೂರು ದಕ್ಷಿಣ ರಾಜ್ಯಗಳನ್ನು ಸಂಪರ್ಕಿಸುವ ಅತ್ಯಂತ ಜನಪ್ರಿಯ ಪ್ರೀಮಿಯಂ ರೈಲಿಗೆ ಹೆಚ್ಚುವರಿ ಬೋಗಿಗಳನ್ನು ಸೇರಿಸಿರುವುದು ಹಬ್ಬದ ಸಮಯದಲ್ಲಿ ಸಾರ್ವಜನಿಕರಿಗೆ ದೊಡ್ಡ ಕೊಡುಗೆಯಾಗಿದೆ.