Monday, August 31, 2026
Monday, August 31, 2026

ಏರ್‌ ಇಂಡಿಯಾ ಸಿಬ್ಬಂದಿಯಿಂದ 'ಬ್ರೋ-ಜೋನ್' ಆದ ಭಾರತೀಯ-ಅಮೆರಿಕನ್ ಬರಹಗಾರ

ವಾಯುಮಾರ್ಗದಲ್ಲಿ 30,000 ಅಡಿ ಎತ್ತರದಲ್ಲಿ ಹಾರಾಟ ನಡೆಸುತ್ತಿದ್ದ ಏರ್‌ ಇಂಡಿಯಾ ವಿಮಾನದಲ್ಲಿ, ಕ್ಯಾಬಿನ್ ಸಿಬ್ಬಂದಿ ಸುಧಾಂಶು ಕೌಶಿಕ್ ಅವರ ಕೈಗೆ ರಾಖಿ ಕಟ್ಟಿ ಹಬ್ಬವನ್ನು ಆಚರಿಸಿದ್ದಾರೆ.

ರಕ್ಷಾ ಬಂಧನ ಹಬ್ಬದ ದಿನದಂದು ವಿಮಾನದಲ್ಲಿ ನಡೆದ ವಿನೂತನ ಹಾಗೂ ತಮಾಷೆಯ ಘಟನೆಯೊಂದು ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ವೈರಲ್ ಆಗಿದೆ. ಭಾರತೀಯ-ಅಮೆರಿಕನ್ ಬರಹಗಾರ ಸುದಾಂಶು ಕೌಶಿಕ್ (Sudhanshu Kaushik) ಅವರು ವಿಮಾನದಲ್ಲಿ ಪ್ರಯಾಣಿಸುತ್ತಿದ್ದ ವೇಳೆ, ಏರ್‌ ಇಂಡಿಯಾ ವಿಮಾನದ ಸಿಬ್ಬಂದಿ ಅವರಿಗೆ ಅನಿರೀಕ್ಷಿತವಾಗಿ ರಾಖಿ ಕಟ್ಟುವ ಮೂಲಕ ರಕ್ಷಾ ಬಂಧನ ಆಚರಿಸಿದ್ದು, ಈ ವಿಡಿಯೋ ನೆಟ್ಟಿಗರ ಗಮನ ಸೆಳೆದಿದೆ.

ಇದನ್ನೂ ಓದಿ: ಚೆನ್ನೈ ವಿಮಾನ ನಿಲ್ದಾಣಕ್ಕೆ ಐದನೆಯ ಟರ್ಮಿನಲ್‌

ವಾಯುಮಾರ್ಗದಲ್ಲಿ 30,000 ಅಡಿ ಎತ್ತರದಲ್ಲಿ ಹಾರಾಟ ನಡೆಸುತ್ತಿದ್ದ ಏರ್‌ ಇಂಡಿಯಾ ವಿಮಾನದಲ್ಲಿ, ಕ್ಯಾಬಿನ್ ಸಿಬ್ಬಂದಿ ಸುದಾಂಶು ಕೌಶಿಕ್ ಅವರ ಕೈಗೆ ರಾಖಿ ಕಟ್ಟಿ ಹಬ್ಬವನ್ನು ಆಚರಿಸಿದ್ದಾರೆ. ʼವಿಮಾನದ ಇಡೀ ಸಿಬ್ಬಂದಿ ನನ್ನನ್ನು 'ಬ್ರೋ-ಜೋನ್' ಮಾಡಲು ನಿರ್ಧರಿಸಿದರು ಎಂದು ಅವರು ತಮ್ಮ ಇನ್‌ಸ್ಟಾಗ್ರಾಮ್ ವಿಡಿಯೋದಲ್ಲಿ ತಮಾಷೆಯಾಗಿ ಬರೆದುಕೊಂಡಿದ್ದಾರೆ.

ಸಿಬ್ಬಂದಿಯೊಬ್ಬರು ರಾಖಿ ಕಟ್ಟುತ್ತಿದ್ದರೆ, ಮತ್ತೊಬ್ಬ ಸಿಬ್ಬಂದಿ ತಮ್ಮ ಮೊಬೈಲ್‌ನಲ್ಲಿ ಈ ಸುಂದರ ಕ್ಷಣವನ್ನು ಕ್ಯಾಮೆರಾದಲ್ಲಿ ಸೆರೆಹಿಡಿಯುತ್ತಿರುವುದು ವಿಡಿಯೋದಲ್ಲಿ ಕಂಡುಬಂದಿದೆ.

ಈ ವಿಡಿಯೋಗೆ ಆನ್‌ಲೈನ್‌ನಲ್ಲಿ ಭಾರಿ ಮೆಚ್ಚುಗೆ ವ್ಯಕ್ತವಾಗಿದ್ದು, ನೆಟ್ಟಿಗರು ಮೋಜಿನ ಕಾಮೆಂಟ್‌ಗಳನ್ನು ಹಂಚಿಕೊಂಡಿದ್ದಾರೆ. ʼಬರಹಗಾರನಿಗೆ ರಾಖಿ ಸಿಕ್ಕಿತು, ಆದರೆ ಗಿಫ್ಟ್ ಸಿಕ್ಕಿತಾ?ʼ ಎಂದು ಕೆಲವರು ಹಾಸ್ಯ ಮಾಡಿದ್ದರೆ, ಇನ್ನು ಕೆಲವರು ವಿಡಿಯೋದ ಹಿನ್ನೆಲೆಯಲ್ಲಿ ಗಾಢ ನಿದ್ರೆಯಲ್ಲಿದ್ದ ಸಹಯಾತ್ರಿಕರ ಕಡೆಗೆ ಗಮನ ಸೆಳೆದು ನಕ್ಕಿದ್ದಾರೆ.

ಸಾಮಾನ್ಯವಾಗಿ ಕುಟುಂಬದವರೊಂದಿಗೆ ಆಚರಿಸುವ ಹಬ್ಬವನ್ನು ಆಕಾಶದಲ್ಲೇ ಅತ್ಯಂತ ಅಪರೂಪ ಹಾಗೂ ಸಡಗರದಿಂದ ಆಚರಿಸಿಕೊಂಡ ಈ ವಿಡಿಯೋ ಪ್ರಸ್ತುತ ಸಾಮಾಜಿಕ ಮಾಧ್ಯಮಗಳಲ್ಲಿ ಸಕತ್ ಟ್ರೆಂಡ್‌ ಆಗಿದೆ.

Pramod Mohan Hegde

Pramod Mohan Hegde

A media professional with four years of experience in journalism, having worked with leading Kannada publications such as Vistara, Vijayavani, and Vijaya Karnataka as a cinema journalist. Also an author with a keen interest in travel and cinema. Currently serving as Senior Sub Editor at Pravasi Prapancha, contributing editorial expertise and engaging storytelling to the media industry.

ಕಲ್ಲಿನಲ್ಲಿ ಅರಳಿದ ಕಲಾಕುಸುಮ - ಪುಷ್ಕರಣಿ

Read Previous

ಕಲ್ಲಿನಲ್ಲಿ ಅರಳಿದ ಕಲಾಕುಸುಮ - ಪುಷ್ಕರಣಿ

ಕೃಷ್ಣ-ಸುಧಾಮರ ಸ್ನೇಹದ ಗುರುತು ಬೇಟ್ ದ್ವಾರಕಾ

Read Next

ಕೃಷ್ಣ-ಸುಧಾಮರ ಸ್ನೇಹದ ಗುರುತು ಬೇಟ್ ದ್ವಾರಕಾ