Wednesday, August 26, 2026
Wednesday, August 26, 2026

ಚೆನ್ನೈ ವಿಮಾನ ನಿಲ್ದಾಣಕ್ಕೆ ಐದನೆಯ ಟರ್ಮಿನಲ್‌

ಚೆನ್ನೈನ ಮೀಣಂಬಕ್ಕಂನಲ್ಲಿರುವ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಸಾಮರ್ಥ್ಯವನ್ನು ಹೆಚ್ಚಿಸುವ ಉದ್ದೇಶದಿಂದ ಐದನೆಯ ಟರ್ಮಿನಲ್‌ ನಿರ್ಮಿಸುವ ಯೋಜನೆ ರೂಪಿಸಲಾಗಿದೆ.

ಚೆನ್ನೈನ ಮೀಣಂಬಕ್ಕಂನಲ್ಲಿರುವ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಸಾಮರ್ಥ್ಯವನ್ನು ಹೆಚ್ಚಿಸುವ ಉದ್ದೇಶದಿಂದ ಐದನೆಯ ಟರ್ಮಿನಲ್‌ ನಿರ್ಮಿಸುವ ಯೋಜನೆ ರೂಪಿಸಲಾಗಿದೆ. ಎರಡು ಪ್ರಸ್ತುತ ರನ್‌ವೇಗಳ ನಡುವಿನ ಪ್ರದೇಶದಲ್ಲಿ ಹೊಸ ಟರ್ಮಿನಲ್‌ ನಿರ್ಮಿಸುವ ಪ್ರಸ್ತಾವನೆ ಇದ್ದು, ಇದರಿಂದ ಚೆನ್ನೈ ವಿಮಾನ ನಿಲ್ದಾಣದ ಪ್ರಯಾಣಿಕರ ನಿರ್ವಹಣಾ ಸಾಮರ್ಥ್ಯ ಗಣನೀಯವಾಗಿ ಹೆಚ್ಚಲಿದೆ.

ವಿಮಾನ ನಿಲ್ದಾಣ ಪ್ರಾಧಿಕಾರದ (AAI) ಅಧಿಕಾರಿಗಳ ಪ್ರಕಾರ ಯೋಜನೆ ಇನ್ನೂ ಆರಂಭಿಕ ಹಂತದಲ್ಲಿದೆ. ಈವರೆಗೆ ತಾಂತ್ರಿಕ ಅಥವಾ ಪ್ರಯಾಣಿಕರ ಸಂಚಾರ ಕುರಿತ ಸಮಗ್ರ ಅಧ್ಯಯನ ಆರಂಭವಾಗಿಲ್ಲ, ಸದ್ಯ ಪರಿಕಲ್ಪನಾ ಹಂತದ ಪ್ರಸ್ತಾವನೆಯಷ್ಟೇ ಸಿದ್ಧವಾಗಿದೆ. ಈಗಿರುವ ಟರ್ಮಿನಲ್‌ಗಳಿಂದ ರನ್‌ವೇಯ ಮತ್ತೊಂದು ಬದಿಯಲ್ಲಿರುವ ಹೊಸ ಟರ್ಮಿನಲ್‌ಗೆ ಪ್ರಯಾಣಿಕರನ್ನು ಹೇಗೆ ಕರೆದೊಯ್ಯಬೇಕು ಎಂಬುದರ ಬಗ್ಗೆಯೂ ಅಂತಿಮ ನಿರ್ಧಾರವಾಗಿಲ್ಲ. ಸ್ವಯಂಚಾಲಿತ ಪ್ರಯಾಣಿಕರ ಸಾಗಣೆ ವ್ಯವಸ್ಥೆ (Automated People Mover) ಪರಿಗಣನೆಯಲ್ಲಿದೆ.

ಯೋಜನೆಯ ಭಾಗವಾಗಿ 10 ವೇಗದ ನಿರ್ಗಮನ ಟ್ಯಾಕ್ಸಿವೇಗಳನ್ನು ನಿರ್ಮಿಸುವುದು ಮತ್ತು ವಿಮಾನ ನಿಲ್ದಾಣದ ಸುತ್ತಲಿನ ರಸ್ತೆಗಳನ್ನು ಅಗಲಗೊಳಿಸುವ ಉದ್ದೇಶವಿದೆ. ಹಿಂಭಾಗದಲ್ಲಿ ಸಮಾನಾಂತರವಾಗಿ ಸರಕು ಸಾಗಣೆ ಕೇಂದ್ರ ನಿರ್ಮಿಸುವ ಪ್ರಸ್ತಾವನೆಯೂ ಇದೆ. ಆದರೆ, ಅದರ ಸಾಮರ್ಥ್ಯ ಇನ್ನೂ ನಿಗದಿಯಾಗಿಲ್ಲ. GST ರಸ್ತೆಯಲ್ಲಿರುವ ಹಾಲಿ ಕಾರ್ಗೋ ಟರ್ಮಿನಲ್‌ನ್ನು ಪ್ರಯಾಣಿಕ ವಿಮಾನಗಳ ಬೆಲ್ಲಿ ಕಾರ್ಗೋ ಸಂಗ್ರಹಣಾ ಗೋದಾಮಾಗಿ ಮುಂದುವರಿಸುವ ಯೋಜನೆ ಇದೆ.

ಈ ವಿಸ್ತರಣೆಯೊಂದಿಗೆ ಚೆನ್ನೈ ವಿಮಾನ ನಿಲ್ದಾಣವು ಸೀಮಿತ ಭೂಪ್ರದೇಶದಲ್ಲೇ ಹೆಚ್ಚಿನ ಪ್ರಯಾಣಿಕರನ್ನು ನಿರ್ವಹಿಸುವ ದೇಶದ ಪ್ರಮುಖ ವಿಮಾನ ನಿಲ್ದಾಣಗಳಲ್ಲಿ ಒಂದಾಗುವ ನಿರೀಕ್ಷೆಯಿದೆ.

Admin

Admin

Pravasi Prapancha – A pioneering initiative led by Vishweshwar Bhat, the esteemed journalist and head of the Vishwavani Group. It is the first and only travel-focused publication in Kannada journalism, dedicated exclusively to news, information, and travel narratives about various destinations. The digital media counterpart of this venture is Pravasi Prapancha Digital Channel, which brings travel-related news from across the state, country, and world. It features fascinating insights, traveler experiences, interviews related to travel, entertainment segments, and much more. Editor-in-Chief: Shri Vishweshwar Bhat

ಮೇ 1 ರಿಂದ ವಿದೇಶಿ ಪ್ರವಾಸಿಗರಿಗೆ ಥಾಯ್ಲೆಂಡ್‌ನಲ್ಲಿ ಡಿಜಿಟಲ್ ಆಗಮನ ಕಾರ್ಡ್ ಕಡ್ಡಾಯ

Read Previous

ಮೇ 1 ರಿಂದ ವಿದೇಶಿ ಪ್ರವಾಸಿಗರಿಗೆ ಥಾಯ್ಲೆಂಡ್‌ನಲ್ಲಿ ಡಿಜಿಟಲ್ ಆಗಮನ ಕಾರ್ಡ್ ಕಡ್ಡಾಯ

ಗೋವಾ ಹೋದರೆ ಈ ಬೀಚ್‌ಗಳನ್ನು ಮಿಸ್‌ ಮಾಡಿಕೊಳ್ಳಲೇಬೇಡಿ!

Read Next

ಗೋವಾ ಹೋದರೆ ಈ ಬೀಚ್‌ಗಳನ್ನು ಮಿಸ್‌ ಮಾಡಿಕೊಳ್ಳಲೇಬೇಡಿ!