Thursday, July 10, 2025
Thursday, July 10, 2025

ವಿಮಾನದ ಟೈರುಗಳ ಮಹತ್ವ

ವಿಮಾನಗಳು ತೀವ್ರ ವೇಗದಲ್ಲಿ ಲ್ಯಾಂಡ್ ಆಗುವಾಗ ಅದರ ಸಂಪೂರ್ಣ ಭಾರ ಬೀಳುವುದೇ ಟೈರುಗಳ ಮೇಲೆ. ವಿಮಾನದ ಟೈರುಗಳು ಭೂಮಿಯ ಮೇಲಿನ ಚಲನವಲನಗಳಿಗಾಗಿ ಮಾತ್ರ ಬೇಕು. ಇವು ಟೇಕ್-ಆಫ್ (Take-off) , ಲ್ಯಾಂಡಿಂಗ್ ( Landing ), ಟ್ಯಾಕ್ಸಿಯಿಂಗ್ ( Taxiing) ವೇಳೆ ವಿಮಾನವನ್ನು ಪರಿಣಾಮಕಾರಿಯಾಗಿ ಸಮರ್ಥಿಸಿಕೊಳ್ಳುವ ಶಕ್ತಿಶಾಲಿ ಭಾಗಗಳಾಗಿವೆ. ‌

ಎಲ್ಲ ವಾಹನಗಳಿಗೂ ಇರುವ, ಆದರೆ ವಿಮಾನಗಳಿಗೆ ಅತ್ಯಂತ ಪ್ರಮುಖವಾಗಿರುವ ಭಾಗ ಯಾವುದು? ಅವುಗಳ ಟೈರುಗಳು ಅಂದ್ರೆ ಆಶ್ಚರ್ಯವಾದೀತು. ವಿಮಾನ ಭೂಮಿಯಿಂದ ಹಾರುವಾಗ ಮತ್ತು ಇಳಿಯುವಾಗ ಬೇಕಾಗುವ ಅತ್ಯಂತ ಮಹತ್ವಪೂರ್ಣ ಬಿಡಿಭಾಗ ಅಂದರೆ ಟೈರ್. ಅವುಗಳ ರಚನೆ, ಕಾರ್ಯಕ್ಷಮತೆ, ಭದ್ರತೆ, ತಂತ್ರಜ್ಞಾನ ಮತ್ತು ನಿರ್ವಹಣೆ ಈ ಎಲ್ಲ ಅಂಶಗಳು ವಿಮಾನದ ಕಾರ್ಯನಿರ್ವಹಣೆಗೆ ಸಹಾಯಕ.

ಏಕೆಂದರೆ ವಿಮಾನಗಳು ತೀವ್ರ ವೇಗದಲ್ಲಿ ಲ್ಯಾಂಡ್ ಆಗುವಾಗ ಅದರ ಸಂಪೂರ್ಣ ಭಾರ ಬೀಳುವುದೇ ಟೈರುಗಳ ಮೇಲೆ. ವಿಮಾನದ ಟೈರುಗಳು ಭೂಮಿಯ ಮೇಲಿನ ಚಲನವಲನಗಳಿಗಾಗಿ ಮಾತ್ರ ಬೇಕು. ಇವು ಟೇಕ್-ಆಫ್ (Take-off) , ಲ್ಯಾಂಡಿಂಗ್ (Landing), ಟ್ಯಾಕ್ಸಿಯಿಂಗ್ (Taxiing) ವೇಳೆ ವಿಮಾನವನ್ನು ಪರಿಣಾಮಕಾರಿಯಾಗಿ ಸಮರ್ಥಿಸಿಕೊಳ್ಳುವ ಶಕ್ತಿಶಾಲಿ ಭಾಗಗಳಾಗಿವೆ. ‌

ವಿಮಾನದ ಟೈರುಗಳಲ್ಲಿ ನೈಟ್ರೋಜನ್ ಬಳಸುವುದೇಕೆ?

ಈ ಟೈರುಗಳನ್ನು ಅತ್ಯಂತ ಕಠಿಣ ಪರಿಸ್ಥಿತಿಗಳಲ್ಲಿ ಕಾರ್ಯನಿರ್ವಹಿಸಲು ಸಹಾಯಕವಾಗುವಂತೆ ವಿನ್ಯಾಸಗೊಳಿಸಲಾಗಿದೆ. ವಿಮಾನಗಳ ಟೈರುಗಳು ಸಾಮಾನ್ಯ ವಾಹನಗಳ ಟೈರುಗಳಂತೆ ಕಾಣಬಹುದು, ಆದರೆ ಅವನ್ನು ಭಿನ್ನವಾದ ಉದ್ದೇಶಗಳಿಗೆ ವಿನ್ಯಾಸಗೊಳಿಸಲಾಗಿದೆ. ವಿಮಾನದ ಟೈರುಗಳನ್ನು ಪ್ರಧಾನವಾಗಿ ನೈಸರ್ಗಿಕ ಮತ್ತು ಸಿಂಥೆಟಿಕ್ ರಬ್ಬರ್, ಸ್ಟೀಲ್ ಬೆಲ್ಟ್‌ಗಳು ಮತ್ತು ನೈಲಾನ್ ಅಥವಾ ಪಾಲಿಯೆಸ್ಟರ್‌ಗಳಿಂದ ತಯಾರಿಸಲಾಗುತ್ತದೆ.

flighr tire 5

ಇದರಿಂದ ಟೈರುಗಳು ಹೆಚ್ಚು ಬಾಳಿಕೆ ಬರುತ್ತವೆ. ಅಷ್ಟೇ ಅಲ್ಲ, ಅವು ಬಲಿಷ್ಠ ಮತ್ತು ಉಷ್ಣತೆಯನ್ನು ತಾಳುವ ಸಾಮರ್ಥ್ಯವನ್ನು ಹೊಂದಿರುತ್ತವೆ. ಆಧುನಿಕ ವಿಮಾನಗಳಲ್ಲಿ ಟ್ಯೂಬ್‌ಲೆಸ್ ಟೈರುಗಳನ್ನೇ ಬಳಸಲಾಗುತ್ತವೆ. ಇತ್ತೀಚಿನ ವರ್ಷಗಳಲ್ಲಿ ರೇಡಿಯಲ್ ಟೈರುಗಳನ್ನೂ ಬಳಸಲಾಗುತ್ತಿದೆ. ಟೈರಿನ ಬಲವನ್ನು ಪದರಗಳು (ಲೇಯರ್‌ಗಳು) ನಿಶ್ಚಯಿಸುತ್ತವೆ.

ಹೆಚ್ಚಿನ ಲೇಯರ್‌ಗಳಿದ್ದರೆ, ಹೆಚ್ಚು ಶಕ್ತಿಮತ್ತು ಬಾಳಿಕೆ. ಟೈರುಗಳನ್ನು ನಿರ್ದಿಷ್ಟ ಕಾರ್ಯಪದ್ಧತಿಯೊಂದಿಗೆ ವಿನ್ಯಾಸಗೊಳಿಸಲಾಗುತ್ತದೆ. ಲ್ಯಾಂಡಿಂಗ್ ಸಮಯದಲ್ಲಿ ಟೈರುಗಳು ಅತಿ ಹೆಚ್ಚಿನ ತಾಪಮಾನವನ್ನು ಸಹಿಸಿಕೊಳ್ಳಬೇಕಾಗುತ್ತದೆ. ವಿಮಾನವು ಸುಮಾರು ಗಂಟೆಗೆ 250ಕಿ.ಮೀ. ವೇಗದಲ್ಲಿ ಲ್ಯಾಂಡ್ ಆಗುತ್ತದೆ.

ಇದು ಟೈರುಗಳ ಮೇಲೆ ಭಾರಿ ಘರ್ಷಣೆಯ ಒತ್ತಡವನ್ನು ಹೇರಬಲ್ಲದು. ವಿಮಾನದ ಟೈರುಗಳ ಮೇಲೆ ಅದೆಷ್ಟು ಒತ್ತಡ ಬೀರುತ್ತದೆಂದರೆ, ರನ್‌ವೇಗೆ ಟೈರುಗಳು ಸ್ಪರ್ಶವಾಗುತ್ತಿದ್ದಂತೆ ಹೊಗೆ ಕಾಣಿಸಿಕೊಳ್ಳುತ್ತದೆ. ಈ ಉಷ್ಣತೆಯನ್ನುತಡೆದುಕೊಳ್ಳುವ ಸಾಮರ್ಥ್ಯ ಟೈರುಗಳಿಗೆ ಅತ್ಯಗತ್ಯ. ವಿಮಾನ ಟೈರುಗಳಲ್ಲಿ ಸಾಮಾನ್ಯವಾಗಿ ಗಾಳಿಯ ಒತ್ತಡ 200 PSI (pounds per square inch) ಅಥವಾ ಹೆಚ್ಚು ಇರಬಹುದು. ಇದು ಕಾರುಗಳ ಟೈರುಗಳಿಗಿಂತ 3-4 ಪಟ್ಟು ಹೆಚ್ಚು. ಒಂದು ಬೋಯಿಂಗ್ 777ವಿಮಾನದಲ್ಲಿ ಪ್ರತಿಯೊಂದು ಮುಖ್ಯ ಲ್ಯಾಂಡಿಂಗ್ ಗಿಯರ್ ಟೈರು ಸುಮಾರು 30000 ಕೆ.ಜಿ. ಭಾರವನ್ನು ಸಹಿಸಬಲ್ಲದು.

flight tire

ಟೈರುಗಳನ್ನು ವಿಮಾನಗಳಿಗೆ ಹಾಕುವ ಮುನ್ನ ಅವುಗಳನ್ನು ಹಲವು ಪರೀಕ್ಷೆಗಳಿಗೆ ಒಳಪಡಿಸಲಾಗುತ್ತದೆ. ವಿಮಾನ ನಿಂತಾಗ ಅದು ಅದರ ಇಡೀ ಭಾರವನ್ನು ( Static Load Test ) ಸಹಿಸಿ ಕೊಳ್ಳುವುದಾ ಎಂಬುದನ್ನು ಪರೀಕ್ಷಿಸಲಾಗುತ್ತದೆ. ನಂತರ ಡೈನಮಿಕ್ ಲೋಡ್ ಪರೀಕ್ಷೆ ಮಾಡಲಾಗುತ್ತದೆ. ವಿಮಾನ ಜೋರಾಗಿ ರನ್‌ವೇಗೆ ಬಂದು ಅಪ್ಪಳಿಸುವ ರಭಸವನ್ನು ತಾಳುವುದಾ ಎಂಬುದನ್ನು ಸ್ಫೋಟ ಪರೀಕ್ಷೆ (Burst Test)ಯಿಂದ ಪತ್ತೆ ಹಚ್ಚಲಾಗುತ್ತದೆ.

ವಿಮಾನ ಟೈರುಗಳು ಸವೆಯದಿದ್ದರೂ ಸಾಮಾನ್ಯವಾಗಿ 250ರಿಂದ 300 ಲ್ಯಾಂಡಿಂಗ್‌ಗಳವರೆಗೆ ಮಾತ್ರ ಬಳಸಲು ಯೋಗ್ಯ. ಪ್ರತಿ ಹಾರಾಟದ ನಂತರ ಟೈರುಗಳನ್ನು ಕಡ್ಡಾಯವಾಗಿ ಪರಿಶೀಲಿಸಲೇಬೇಕು. ಅಷ್ಟೇ ಅಲ್ಲ, ಟೈರಿನ ಗಾಳಿಯ ಒತ್ತಡ, ಲ್ಯಾಂಡಿಂಗ್ ನಂತರ ಟೈರಿನ ತಾಪಮಾನ ಪರೀಕ್ಷೆ, ಟೈರು ಡ್ಯಾಮೇಜ್ ಆಗಿದೆಯಾ ಎಂಬುದರ ಪರೀಕ್ಷೆ ಮತ್ತು ಟೈರಿನ ಟ್ರೆಡ್ ಆಳದ ಪರಿಶೀಲನೆ ಆಗಲೇಬೇಕು. ಟೈರುಗಳು ಸವೆದುಹೋಗಿದ್ದರೆ, ಲ್ಯಾಂಡಿಂಗ್ ವೇಳೆ ವಿಮಾನ ಟೈರುಗಳು ಸ್ಫೋಟ ( Burst)ವಾಗುವ ಅಪಾಯವಿರುತ್ತವೆ.

ವಿಮಾನರ ಟೈರಿನ ತಂತ್ರಜ್ಞಾನದಲ್ಲಿ ಸಾಕಷ್ಟು ಸುಧಾರಣೆಗಳಾಗಿವೆ. ಈ ಟೈರುಗಳು ಸಣ್ಣ ರಂಧ್ರಗಳನ್ನು ಸ್ವತಃ ಮುಚ್ಚಿಕೊಳ್ಳುವ ಸಾಮರ್ಥ್ಯ ಹೊಂದಿರುತ್ತವೆ. ಗಾಳಿಯ ಒತ್ತಡ, ಉಷ್ಣತೆ ಮತ್ತು ಧಾರಣಾ ಶಕ್ತಿಯ ಬಗ್ಗೆ ಸೆನ್ಸರ್‌ಗಳು ಮಾಹಿತಿ ನೀಡಬಲ್ಲವು.

Vishweshwar Bhat

Vishweshwar Bhat

Editor in Chief

ಜಪಾನಿನಲ್ಲಿ ಬೀದಿಯಲ್ಲಿಟ್ಟ ಕಸದ ತೊಟ್ಟಿಗಳೂ ಮಾತಾಡುತ್ತವೆ!

Read Previous

ಜಪಾನಿನಲ್ಲಿ ಬೀದಿಯಲ್ಲಿಟ್ಟ ಕಸದ ತೊಟ್ಟಿಗಳೂ ಮಾತಾಡುತ್ತವೆ!

ಒಂದು ಮರದ ಕೊಂಬೆ ಅಲ್ಲಾಡಿಸಿದ್ದಕ್ಕೆ ಕ್ಯಾತೆ ತೆಗೆದಿದ್ದ ಜಪಾನಿಯರು!

Read Next

ಒಂದು ಮರದ ಕೊಂಬೆ ಅಲ್ಲಾಡಿಸಿದ್ದಕ್ಕೆ ಕ್ಯಾತೆ ತೆಗೆದಿದ್ದ ಜಪಾನಿಯರು!