ಇದು ಬರಡುಭೂಮಿ ಅಲ್ಲ…ಬರ್ಡ್ ಭೂಮಿ!
ಕಲ್ಯಾಣ ಕರ್ನಾಟಕ ಭಾಗದ ಅತ್ಯಂತ ಅಪರೂಪದ ಪಕ್ಷಿಧಾಮ ಅಂಕಸಮುದ್ರ. ವೈವಿಧ್ಯಮಯ ಪಕ್ಷಿಗಳ ಸುಂದರತಾಣವಾದ ಈ ಸ್ಥಳವನ್ನು ಸರ್ಕಾರವು 2017ರಲ್ಲಿ ಪಕ್ಷಿಗಳ ಸಂರಕ್ಷಣಾ ಮೀಸಲು ನೆಲೆಯೆಂದು ಘೋಷಿಸಿದೆ.
- ಅನಂತ ಪದ್ಮನಾಭ ರಾವ್,ಹೊಸಪೇಟೆ
ಅಂಕಸಮುದ್ರವು ಹೊಸಪೇಟೆ ಜಿಲ್ಲೆಯ ಹಗರಿಬೊಮ್ಮನಹಳ್ಳಿ ತಾಲೂಕಿನ ಪ್ರಾಚೀನ ಗ್ರಾಮಗಳಲ್ಲೊಂದು. ಹೊಸಪೇಟೆಯಿಂದ 30ಕಿ.ಮೀ ದೂರದಲ್ಲಿರುವ ಈ ಗ್ರಾಮದ ಪೂರ್ವಕ್ಕೆ ವಿಜಯನಗರಕಾಲದಲ್ಲಿ ನಿರ್ಮಿಸಲಾದ ವಿಸ್ತಾರವಾದ ಕೆರೆಯಿದೆ. ಇದು ಈ ಭಾಗದ ಪ್ರಸಿದ್ಧ ಪಕ್ಷಿಧಾಮವಾಗಿದೆ. ಈ ಕೆರೆಯು ಹಿಂದೆ ಮಳೆಯಾಶ್ರಿತ ನೀರನ್ನು ಹೆಚ್ಚಾಗಿ ಆಶ್ರಯಿಸಿತ್ತು. ಆದರೆ ಈಗ ತುಂಗಭದ್ರಾ ನದಿಯಿಂದಲೂ ನೀರನ್ನು ತುಂಬಿಸುವ ಕಾರ್ಯ ಆರಂಭವಾಗಿದೆ. 244 ಎಕರೆಯಷ್ಟು ವಿಸ್ತಾರವಾದ ಈ ಕೆರೆಯಲ್ಲಿಸ್ಥಳೀಯವಾಗಿ ಬೆಳೆದ ಕರಿಜಾಲಿ ಮೊದಲಾದ ಮರ, ಗಿಡ ಮತ್ತು ಪೊದೆಗಳು ಪಕ್ಷಿಗಳಿಗೆ ಸುರಕ್ಷಿತ ಆಸರೆಯನ್ನು ಒದಗಿಸಿವೆ. ಚಳಿಗಾಲವು ಆರಂಭವಾಗುತ್ತಲೇ ಜಗತ್ತಿನ ವಿವಿಧೆಡೆಗಳಿಂದ ವಿಭಿನ್ನ ಜಾತಿಯ ವೈವಿಧ್ಯಮಯ ಪಕ್ಷಿಗಳು ಇಲ್ಲಿಗೆ ವಲಸೆ ಬಂದು ತಮ್ಮ ಗೂಡುಗಳನ್ನು ಕಟ್ಟಿ ಸಂತಾನವೃದ್ಧಿ ಮಾಡಿಕೊಳ್ಳುವ ನೆಚ್ಚಿನತಾಣವಾಗಿದೆ. ಈ ಕೆರೆಯಲ್ಲಿರುವ ಮೀನುಗಳಲ್ಲದೆ, ತುಂಗಭದ್ರಾ ಹಿನ್ನೀರಿನಲ್ಲಿರುವ ಮೀನು, ಕೀಟಗಳು ಇವುಗಳ ಆಹಾರವಾಗಿವೆ.
ಕಲ್ಯಾಣ ಕರ್ನಾಟಕದ ಮೀಸಲು ನೆಲೆ
ಕಲ್ಯಾಣ ಕರ್ನಾಟಕ ಭಾಗದ ಅತ್ಯಂತ ಅಪರೂಪದ ಪಕ್ಷಿಧಾಮವಿದು. ವೈವಿಧ್ಯಮಯ ಪಕ್ಷಿಗಳ ಸುಂದರತಾಣವಾದ ಈ ಸ್ಥಳವನ್ನು ಸರ್ಕಾರವು 2017ರಲ್ಲಿ ಪಕ್ಷಿಗಳ ಸಂರಕ್ಷಣಾ ಮೀಸಲು ನೆಲೆಯೆಂದು ಘೋಷಿಸಿದೆ. ಇಲ್ಲಿ ಸುಮಾರು 240 ವಿವಿಧಜಾತಿಯ 35,000ಕ್ಕೂ ಹೆಚ್ಚು ಪಕ್ಷಿಗಳು ವಲಸೆಬಂದು ಸಂತಾನೋತ್ಪತ್ತಿ ಕಾರ್ಯದಲ್ಲಿ ತೊಡಗುತ್ತವೆ ಎಂಬುದನ್ನು ದಾಖಲಿಸಲಾಗಿದೆ.

ಪಕ್ಷಿಗಳ ಜಾತ್ರೆ
ಈ ಕೆರೆಯಲ್ಲಿಒಂಭತ್ತು ಬಗೆಯ ಮೀನಿನ ಪ್ರಭೇದಗಳಿವೆ. ಇಲ್ಲಿಗೆ ವಲಸೆ ಬರುವ ಪಕ್ಷಿಗಳಲ್ಲಿ ಬೆಳ್ಳಕ್ಕಿಗಳ ಹಿಂಡೇ ಇರುತ್ತದೆ. ಇವುಗಳಲ್ಲದೆ ಬಾತುಕೋಳಿಗಳು, ಕೋಳದ ಬೆಳ್ಳಕ್ಕಿಗಳು, ಚಿಕ್ಕ ಬೆಳ್ಳಕ್ಕಿಗಳು, ಶಿಳ್ಳೆ ಬಾತುಕೋಳಿಗಳು, ನೀರು ಕಾಗೆ(ಕಾರ್ಮೊರೆಂಟ್), ಹೆಜ್ಜಾರ್ಲೆ, ಬೂದು ಬಕ, ಭಾರತೀಯ ಕಾರ್ಮೊರೆಂಟ್, ಗ್ರೇಟ್ ಕಾರ್ಮೊರೆಂಟ್, ಬೂದುಬಣ್ಣದ ಹೆರಾನ್, ಕೆನ್ನೇರಳೆ ಬೆಳ್ಳಕ್ಕಿಗಳು, ನೈಟ್ ಹೆರಾನ್, ಕ್ಯಾಟಲ್ ಈಗ್ರೇಟ್, ಕಪ್ಪು ಮತ್ತು ಬಿಳಿಬಣ್ಣದ ಐಬಿಸ್,ಬುಲ್‌ಬುಲ್, ಇಬಿಸ್, ಸ್ಟಾರ್ಕ್ಸ್ ಮೊದಲಾದ150ಕ್ಕೂ ಹೆಚ್ಚು ಪ್ರಭೇದಗಳ ವೈವಿಧ್ಯಮಯ ಪಕ್ಷಿ ಸಂಕುಲವೇ ಇಲ್ಲಿ ನೆಲೆಸುವುದು ಗಮನಾರ್ಹ. ಜಾಗತಿಕವಾಗಿ ಅಳಿವಿನ ಅಂಚಿನಲ್ಲಿರುವಅನೇಕ ಪಕ್ಷಿಗಳೂ ಇಲ್ಲಿಗೆ ಬಂದು ಸಂತಾನೋತ್ಪತ್ತಿ ಕಾರ್ಯವನ್ನು ಕೈಗೊಳ್ಳುತ್ತಿರುವುದರಿಂದ ಈ ಸಂರಕ್ಷಿತ ಪಕ್ಷಿಧಾಮವನ್ನು ರಕ್ಷಿಸುವ ಜವಾಬ್ದಾರಿ ನಮ್ಮೆಲ್ಲರ ಮೇಲಿದೆ.
ಹಗರಿಬೊಮ್ಮನಹಳ್ಳಿ ತಾಲ್ಲೂಕಿನಿಂದ ಅಂಕಸಮುದ್ರ ಪಕ್ಷಿಧಾಮಕ್ಕೆ1.6 ಕಿ.ಮೀ ಇರುತ್ತದೆ.
ಹತ್ತಿರವಿರುವ ಪ್ರವಾಸಿ ತಾಣಗಳು
*ತುಂಗಾಭದ್ರಾಜಲಾಶಯ
*ಹಂಪಿಯ ಪ್ರಮುಖ ಪ್ರವಾಸಿ ತಾಣಗಳು
*ಹೂವಿನಹಡಗಲಿ ತಾಲ್ಲೂಕಿನ ಮೈಲಾರದ ಮೈಲಾರಲಿಂಗೇಶ್ವರ ಮತ್ತುಕುರುವತ್ತಿಯಮಲ್ಲಿಕಾರ್ಜುನ ದೇವಾಲಯಗಳು
*ಹರಪನಹಳ್ಳಿ ತಾಲ್ಲೂಕಿನ ಬಾಗಳಿ ಮತ್ತು ಉಚ್ಚಂಗಿ ದುರ್ಗಾದೇವಾಲಯ.
ವಿಮಾನ ಮಾರ್ಗ:
ಜಿಂದಾಲ್ ವಿಜಯನಗರ ವಿಮಾನ ನಿಲ್ದಾಣ (ಹಂಪಿ ಯಿಂದ 38 ಕಿ.ಮೀ.) ಬೆಂಗಳೂರು ಮತ್ತು ಹೈದರಾಬಾದ್ ನಡುವೆ ಯುಡಿಎಎನ್ ಯೋಜನೆಯಡಿ ದೈನಂದಿನ ವಿಮಾನಗಳು ಲಭ್ಯವಿದೆ. ಹಂಪಿಯಿಂದ 150 ಕಿ.ಮೀ ದೂರದಲ್ಲಿರುವ ಹುಬ್ಬಳ್ಳಿ ವಿಮಾನ ನಿಲ್ದಾಣಕ್ಕೆ ವಿಮಾನಗಳು ಲಭ್ಯವಿದೆ
ರೈಲು ಮಾರ್ಗ:
ಹಂಪಿಗೆ 12 ಕಿ.ಮೀ ದೂರದಲ್ಲಿರುವ ಹೊಸಪೇಟೆ ಹತ್ತಿರದ ರೈಲು ನಿಲ್ದಾಣವಾಗಿದೆ. ಹುಬ್ಬಳ್ಳಿ ಮತ್ತು ಗುಂಟಕಲ್ ಜಂಕ್ಷನ್ನಿಂದ ಹೊಸಪೇಟೆ ದೈನಂದಿನ ರೈಲುಗಳು ಲಭ್ಯವಿದೆ
ರಸ್ತೆ ಮೂಲಕ:
ವಿಜಯನಗರ ಜಿಲ್ಲೆ ರಾಜ್ಯ ಹೆದ್ದಾರಿ ಮತ್ತು ರಾಷ್ಟ್ರೀಯ ಹೆದ್ದಾರಿಯ ಮೂಲಕ ಬಸ್ಸುಗಳಿಂದ ಉತ್ತಮ ಸಂಪರ್ಕ ಹೊಂದಿದೆ. ಕರ್ನಾಟಕದ ಎಲ್ಲಾ ಪ್ರಮುಖ ನಗರಗಳಿಗೆ ಬಳ್ಳಾರಿ (ಹಂಪಿ ಯಿಂದ 65 ಕಿ.ಮೀ) ಮತ್ತು ಹೊಸಪೇಟೆ (ಹಂಪಿಗೆ 12 ಕಿ.ಮೀ.) ನಿಂದ ಬಸ್ಸುಗಳು ಲಭ್ಯವಿದೆ.