Thursday, February 26, 2026
Thursday, February 26, 2026

ಅಡಿಗಾಸ್‌ ಯಾತ್ರಾದಿಂದ ಕೈಲಾಸ ಮಾನಸ ಸರೋವರ ಯಾತ್ರೆ

18-70 ವರ್ಷ ವಯೋಮಾನದವರು ಕೈಲಾಸ ಮಾನಸ ಸರೋವರ ಯಾತ್ರೆ ಮಾಡಬಹುದು. ಪಾಸ್‌ ಪೋರ್ಟ್‌ ಇರಬೇಕು. ಕಳೆದ 32 ವರ್ಷಗಳಿಂದಲೂ 3 ಲಕ್ಷಕ್ಕೂ ಹೆಚ್ಚು ಪ್ರವಾಸಿಗರಿಗೆ ಪ್ರವಾಸ ಕಾರ್ಯಕ್ರಮಗಳನ್ನು ಅಡಿಗಾಸ್‌ ಆಯೋಜಿಸಿದೆ. ಸಸ್ಯಾಹಾರಿ ಊಟೋಪಚಾರ, ನುರಿತ ಮಾರ್ಗದರ್ಶನ, ಡಿಲಕ್ಸ್‌ ಬಸ್‌, ಸ್ಟ್ಯಾಂಡರ್ಡ್‌ ರೂಮ್‌, ಟ್ರಾವೆಲ್‌ ವಿಮೆಯನ್ನು ಒದಗಿಸಲಾಗುತ್ತಿದೆ.

ನೀವು ಭವ್ಯ ದಿವ್ಯ ಕೈಲಾಸ ಮಾನಸ ಸರೋವರ ಯಾತ್ರೆಯನ್ನು ಮಾಡಲು ಆಲೋಚಿಸುತ್ತಿದ್ದೀರಾ? ಹಾಗಾದರೆ ಇಲ್ಲಿದೆ ಸಿಹಿ ಸುದ್ದಿ! ಕೇಂದ್ರ ಸರಕಾರದ ʼಅನುಭವಿ ಸೇವಾ ಪೂರೈಕೆದಾರʼ ಎಂಬ ಮಾನ್ಯತೆ ಗಳಿಸಿರುವ ಅಡಿಗಾಸ್‌ ಯಾತ್ರಾ ಟ್ರಾವೆಲ್‌ ಸಂಸ್ಥೆಯು ಈ ಯಾತ್ರೆಯನ್ನು ಆಯೋಜಿಸಿದೆ.

ಕೈಲಾಸ ಮಾನಸ ಸರೋವರ ಯಾತ್ರೆ 2026ರ ಮೇ ತಿಂಗಳಿನಿಂದ ಆರಂಭವಾಗುತ್ತದೆ. ವಿಮಾನ ಮತ್ತು ಹೆಲಿಕಾಪ್ಟರ್‌ ಮೂಲಕ ಪ್ರಯಾಣ ಕಲ್ಪಿಸಿರುವುದರಿಂದ 10 ದಿನಗಳಲ್ಲಿ ಸುಲಭ ಮತ್ತು ಸುರಕ್ಷಿತ ಯಾತ್ರೆ ಕೈಗೊಳ್ಳಬಹುದು. ಭಾರತದ ಗಡಿಯಿಂದ 50 ಕಿಲೋಮೀಟರ್‌ ದೂರದಲ್ಲಿ ಚೀನಾ-ಟಿಬೆಟ್‌ ಗಡಿಯನ್ನು ದಾಟಿದರೆ ಕೈಲಾಸ ಮಾನಸ ಸರೋವರಕ್ಕೆ ತಲುಪಬಹುದು. ಬೆಂಗಳೂರಿನಿಂದ ಲಖನೌ ತನಕ ವಿಮಾನದಲ್ಲಿ ಪ್ರಯಾಣ. ಲಖನೌದಿಂದ ನೇಪಾಳ ಗಂಝ್‌ಗೆ 180 ಕಿಲೋಮೀಟರ್‌ ತನಕ ರಸ್ತೆ ಪ್ರಯಾಣ ಮಾಡಿ ಮೊದಲ ದಿನ ರಾತ್ರಿ ಅಲ್ಲಿ ತಂಗಲಾಗುವುದು. ಎರಡನೆಯ ದಿನ ನೇಪಾಳ ಗಂಜ್‌ನಿಂದ ಸೆಮಿಕೋಟ್‌ ತನಕ ವಿಮಾನ ಪ್ರಯಾಣ. ಸೆಮಿಕೋಟ್‌ನಿಂದ ಟಿಬೆಟ್-ನೇಪಾಳ ಗಡಿ ಭಾಗದ ಹಿಲ್ಸಾ ಎಂಬಲ್ಲಿಗೆ ಹೆಲಿಕಾಪ್ಟರ್‌ ಮೂಲಕ ಯಾತ್ರೆ. ಹೀಗೆ ಲಖನೌದಿಂದ ಟಿಬೆಟ್-ನೇಪಾಳ ಗಡಿಭಾಗಕ್ಕೆ ಒಂದೇ ದಿನದಲ್ಲಿ ತಲುಪಲಾಗುವುದು.

ಇದನ್ನೂ ಓದಿ: 32ರ ಸಂಭ್ರಮದಲ್ಲಿ ಅಡಿಗಾಸ್‌ ಯಾತ್ರಾ

ಹಿಲ್ಸಾ ಬಿಟ್ಟ ನಂತರ ಎರಡನೆಯ ರಾತ್ರಿ ಪುರಾಂಗ್‌ ಎಂಬಲ್ಲಿ ಪ್ರವಾಸಿಗರು ವಾಸ್ತವ್ಯ ಹೂಡುತ್ತಾರೆ. ಅಲ್ಲಿನ ಹವಾಮಾನಕ್ಕೆ ಹೊಂದಿಕೊಳ್ಳಲು ಮತ್ತೊಂದು ದಿನ ಅಲ್ಲಿಯೇ ತಂಗಲಾಗುವುದು. ನಾಲ್ಕನೆಯ ದಿನ ಪುರಾಂಗ್‌ನಿಂದ ಪವಿತ್ರ ಮಾನಸ ಸರೋವರಕ್ಕೆ ಪ್ರಯಾಣ. ಇದು ಅತಿ ಎತ್ತರಪ್ರದೇಶದಲ್ಲಿರುವ ಸಿಹಿ ನೀರಿನ ಸರೋವರ ಆಗಿದೆ. ಕೈಲಾಸ ಪರ್ವತದ ದಕ್ಷಿಣ ಭಾಗದಲ್ಲಿದೆ. ಅಲ್ಲಿ ಒಂದು ರಾತ್ರಿ ಪ್ರವಾಸಿಗರು ತಂಗುತ್ತಾರೆ. ಮಾನಸ ಸರೋವರದ ಪಕ್ಕದಲ್ಲೇ ರಾಕ್ಷಸ ಸರೋವರ್ ಎಂಬ ಉಪ್ಪಿನ ನೀರಿನ ಸರೋವರವಿದೆ. ಇದನ್ನೆಲ್ಲ ವೀಕ್ಷಿಸಿದ ಬಳಿಕ ಕೈಲಾಸ ಪರ್ವತದ ಬುಡದಲ್ಲಿರುವ ದಾರ್ಚೆನ್‌ ಎಂಬಲ್ಲಿಗೆ ತೆರಳಿ ವಾಸ್ತವ್ಯ ಮಾಡಲಾಗುವುದು. ಬಳಿಕ ಮೂರು ದಿನಗಳ ಕೈಲಾಸ ಪರ್ವತದ ಪರಿಕ್ರಮ ಆರಂಭವಾಗುತ್ತದೆ. ಪರಿಕ್ರಮದ ಮೊದಲ ದಿನ ಕೈಲಾಸ ಪರ್ವತದ ಪ್ರವೇಶ ಸ್ಥಳವಾದ ಯಮದ್ವಾರದ ತನಕ ರಸ್ತೆ ಮಾರ್ಗದಲ್ಲಿ ವಾಹನಗಳಲ್ಲಿ ತೆರಳಲಾಗುತ್ತದೆ. ಯಮದ್ವಾರದಿಂದ ದೇರಾಪುಕ್‌ ತನಕ 12 ಕಿಲೋಮೀಟರ್‌ ನಡಿಗೆ ಇರುತ್ತದೆ. ದೇರಾಪುಕ್‌ನಲ್ಲಿ ರಾತ್ರಿ ವಾಸ್ತವ್ಯಕ್ಕೆ ವ್ಯವಸ್ಥೆ. ದೇರಾಪುಕ್‌ ನಿಂದ ಎರಡನೇ ದಿನದ ಪರಿಕ್ರಮ ಜುತುಲ್‌ಪುಕ್‌ ತನಕ ಪ್ರಯಾಣ ಬೆಳೆಸಬೇಕಾಗುತ್ತದೆ. ಮೂರನೆಯ ದಿನ ಮತ್ತೆ ದಾರ್ಚೆನ್‌ಗೆ ತಲುಪಲಾಗುತ್ತದೆ. ಅಲ್ಲಿಗೆ ಕೈಲಾಸ ಪರ್ವತದ ಪರಿಕ್ರಮ ಮುಕ್ತಾಯವಾಗುತ್ತದೆ.

Untitled design (35)

18-70 ವರ್ಷ ವಯೋಮಾನದವರು ಕೈಲಾಸ ಮಾನಸ ಸರೋವರ ಯಾತ್ರೆ ಮಾಡಬಹುದು. ಪಾಸ್‌ ಪೋರ್ಟ್‌ ಇರಬೇಕು. ಕಳೆದ 32 ವರ್ಷಗಳಿಂದಲೂ 3 ಲಕ್ಷಕ್ಕೂ ಹೆಚ್ಚು ಪ್ರವಾಸಿಗರಿಗೆ ಪ್ರವಾಸ ಕಾರ್ಯಕ್ರಮಗಳನ್ನು ಅಡಿಗಾಸ್‌ ಆಯೋಜಿಸಿದೆ. ಸಸ್ಯಾಹಾರಿ ಊಟೋಪಚಾರ, ನುರಿತ ಮಾರ್ಗದರ್ಶನ, ಡಿಲಕ್ಸ್‌ ಬಸ್‌, ಸ್ಟ್ಯಾಂಡರ್ಡ್‌ ರೂಮ್‌, ಟ್ರಾವೆಲ್‌ ವಿಮೆಯನ್ನು ಒದಗಿಸಲಾಗುತ್ತಿದೆ. ಹೆಚ್ಚಿನ ವಿವರಗಳಿಗೆ ಮೊಬೈಲ್-‌ 70222 59008 / 9449478944 080-26616678 ಹಾಗೂ ವೆಬ್ ಸೈಟ್ www.adigasyatranews.com ಸಂಪರ್ಕಿಸಬಹುದೆಂದು ನಿರ್ದೇಶಕಿ ಶ್ರೀಮತಿ ಆಶಾ ಅಡಿಗ ತಿಳಿಸಿದ್ದಾರೆ.

Admin

Admin

Pravasi Prapancha – A pioneering initiative led by Vishweshwar Bhat, the esteemed journalist and head of the Vishwavani Group. It is the first and only travel-focused publication in Kannada journalism, dedicated exclusively to news, information, and travel narratives about various destinations. The digital media counterpart of this venture is Pravasi Prapancha Digital Channel, which brings travel-related news from across the state, country, and world. It features fascinating insights, traveler experiences, interviews related to travel, entertainment segments, and much more. Editor-in-Chief: Shri Vishweshwar Bhat