Friday, July 17, 2026
Friday, July 17, 2026

ಕರ್ನಾಟಕದಲ್ಲಿ ಮಿನಿ ಟಿಬೆಟ್‌

ಟಿಬೆಟ್‌ ತನ್ನ ಸುಂದರ ನೋಟಗಳಿಂದ ಮಾತ್ರವಲ್ಲದೆ; ಹಿಂದೂ ಮತ್ತು ಭೌದ್ಧ ಜನರ ಧಾರ್ಮಿಕ ಮಹತ್ವದ ತಾಣವಾಗಿಯೂ ಗುರುತಿಸಿಕೊಂಡಿರುವ ತಾಣ. 1959ಕ್ಕೂ ಮೊದಲು ಸ್ವತಂತ್ರ ದೇಶವಾಗಿದ್ದ ಟಿಬೆಟನ್ನು ನಂತರ ಚೀನಾ ಕಬ್ಜಾ ಮಾಡಿತು. ಅಲ್ಲಿದ್ದ ಜನರನ್ನು ಗುಳೆ ಎಬ್ಬಿಸಿತು. ಈ ಸಮಯದಲ್ಲಿ ಅಲ್ಲಿಂದ ಬಂದವರಿಗೆ ನೆರೆಹೊರೆಯ ಕೆಲವು ರಾಷ್ಟ್ರಗಳು ಸೂರು ನೀಡಿದವು. ಅವುಗಳಲ್ಲಿ ಒಂದು ನಮ್ಮ ಭಾರತ. ಅದರಲ್ಲೂ ಮುಖ್ಯವಾಗಿ ಕರ್ನಾಟಕ. ಹೀಗೆ ಬಂದ ಅನಿವಾಸಿಗಳಿಗೆ ಕರ್ನಾಟಕ ಕೇವಲ ನಿವಾಸ ನೀಡಲಿಲ್ಲ; ಬದಲಿಗೆ ಒಂದು ಊರನ್ನೇ ನೀಡಿತು. ಅಲ್ಲಿ ಅವರ ಸಂಸ್ಕೃತಿ, ಆಚಾರ-ವಿಚಾರ, ಶಿಕ್ಷಣ ಎಲ್ಲವನ್ನು ಕಾಪಾಡಿಕೊಳ್ಳುವ ಅವಕಾಶ ನೀಡಿತು.

ಡ್ರೆಪುಂಗ್‌ ಬೌದ್ಧ ಮಠ, ಇದು ಇಂದು ಕರ್ನಾಟಕದಲ್ಲಿನ ಮಿನಿ ಟಿಬೆಟ್‌. ಇಲ್ಲಿಗೆ ಭೇಟಿ ನೀಡಿದರೆ ಧ್ಯಾನ ಅಥವಾ ಪೂಜೆ-ಪುನಸ್ಕಾರಗಳಲ್ಲಿ ತೊಡಿಗಿರುವ, ಶಿಕ್ಷಣಕ್ಕಾಗಿ 17 ಸಾವಿರಕ್ಕೂ ಹೆಚ್ಚು ಜನರು ಒಟ್ಟಾಗಿರುವ, ಗಾಡಕೆಂಪು ನಿಲುವಂಗಿ ತೊಟ್ಟ ಟಿಬೆಟಿಯನ್‌ ಬೌದ್ಧರು ಕಣ್ಣಿಗೆ ಬೀಳುತ್ತಾರೆ. ಈ ಮಠದ ವಿನ್ಯಾಸ ಮತ್ತೊಂದು ವಿಶೇಷ. ಥೇಟ್‌ ಟಿಬೆಟ್‌ ಇಲ್ಲಿ ನೆಲೆನಿಂತಿರುವಂತೆ ಭಾಸವಾಗುತ್ತದೆ. ಇಷ್ಟು ಟಿಬೆಟಿಯನ್ನರೇ ವಾಸವಾಗಿ ಇದ್ದಾರೆಂದಮೇಲೆ ಅಲ್ಲಿ ಟಿಬೆಟಿಯನ್‌ ವೈಬ್‌ ಇದೆ ಎಂದು ವಿವರಿಸಬೇಕೇ?

ಇದನ್ನೂ ಓದಿ: ಸಾಗರಕ್ಕೆ ಶಾಂತಿಮಂತ್ರ ಕಲಿಸುತ್ತಿರುವ ಬುದ್ಧ!

ಇವರು ಟಿಬೆಟ್‌ನಿಂದ ಬಂದವರು

ಟಿಬೆಟ್‌ ಎಂದ ಕೂಡಲೆ ಕೆಲವರಿಗೆ ಶಾಂತಿಪ್ರಿಯ ಬೌದ್ಧರು, ಅವರ ಮಂದಿರಗಳ ಚಿತ್ರಣಗಳು ಕಣ್ಮನಗಳಲ್ಲಿ ಮೂಡುತ್ತವೆ. ಇನ್ನೂ ಕೆಲವರಿಗೆ ಅದು ಈಗ ಚೀನಾದ ಕಬ್ಜಾದಲ್ಲಿನ ಪ್ರದೇಶ ಎಂಬುದು ನೆನಪಾಗುತ್ತದೆ. ಟಿಬೆಟ್‌ ತನ್ನ ಸುಂದರ ನೋಟಗಳಿಂದ ಮಾತ್ರವಲ್ಲದೆ; ಹಿಂದೂ ಮತ್ತು ಭೌದ್ಧ ಜನರ ಧಾರ್ಮಿಕ ಮಹತ್ವದ ತಾಣವಾಗಿಯೂ ಗುರುತಿಸಿಕೊಂಡಿರುವ ತಾಣ. ಸಿಂಧೂ ಮತ್ತು ಬ್ರಹ್ಮಪುತ್ರ ನದಿಗಳ ಉಗಮದ ತಾಣವೂ ಹೌದು. 1959ಕ್ಕೂ ಮೊದಲು ಸ್ವತಂತ್ರ ದೇಶವಾಗಿದ್ದ ಟಿಬೆಟ್‌ ಅನ್ನು ನಂತರ ಚೀನಾ ಕಬ್ಜಾ ಮಾಡಿತು. ನಂತರ ಅಲ್ಲಿದ್ದ ಜನರನ್ನು ಗುಳೆ ಎಬ್ಬಿಸಿತು. ಈ ಸಮಯದಲ್ಲಿ ಅಲ್ಲಿಂದ ಬಂದವರಿಗೆ ನೆರೆಹೊರೆಯ ಕೆಲವು ರಾಷ್ಟ್ರಗಳು ಸೂರು ನೀಡಿದವು. ಅವುಗಳಲ್ಲಿ ಒಂದು ನಮ್ಮ ಭಾರತ. ಅದರಲ್ಲೂ ಮುಖ್ಯವಾಗಿ ಕರ್ನಾಟಕ. ಹೀಗೆ ಬಂದ ಅನಿವಾಸಿಗಳಿಗೆ ಕರ್ನಾಟಕ ಕೇವಲ ನಿವಾಸ ನೀಡಲಿಲ್ಲ; ಬದಲಿಗೆ ಒಂದು ಊರನ್ನೇ ನೀಡಿತು. ಅಲ್ಲಿ ಅವರ ಸಂಸ್ಕೃತಿ, ಆಚಾರ-ವಿಚಾರ, ಶಿಕ್ಷಣ ಎಲ್ಲವನ್ನು ಕಾಪಾಡಿಕೊಳ್ಳುವ ಅವಕಾಶ ನೀಡಿತು. ಆ ನೆಲೆಯೇ ಕರ್ನಾಟಕದ ಉತ್ತರ ಕನ್ನಡ ಜಿಲ್ಲೆಯ ಮುಂಡಗೋಡು.

Untitled design (6)

ಸಮಗ್ರ ಮಠ

ಡ್ರೆಪುಂಗ್‌ ಭೌದ್ಧ ಮಠ ಕೇವಲ ಒಂದು ಭೌದ್ಧ ಮಠವಲ್ಲ; ಅದು ಸಾವಿರಾರು ಟಿಬೆಟಿಯನ್‌ ಜನರ ಆಶ್ರಯ ತಾಣ. ಅವರ ಶೈಕ್ಷಣಿಕ ಮತ್ತು ಧಾರ್ಮಿಕ ಕೇಂದ್ರ. ಇಲ್ಲಿ ಅವರ ಆಹಾರ ಶೈಲಿ, ಆಚಾರ-ವಿಚಾರ, ಭಾಷೆ, ಭಾವನೆ, ಮಠ, ಟಿಬೆಟಿಯನ್‌ ವಾಸ್ತುಶಿಲ್ಪ ಮೇಲಾಗಿ ಶಾಂತತೆ ನೆಲೆಯೂರಿದೆ. ಅದಕ್ಕೆ ಪಶ್ಚಿಮ ಘಟ್ಟದ ಸೊಬಗೂ ಸಾತ್‌ ನೀಡಿದ್ದು, ಅಪರೂಪದ ಸೊಗಡು ಅಲ್ಲಿ ಮೈದಳೆದಂತಿದೆ. ಹಾಗಾಗಿಯೇ ಇದು ಶಾಂತಿ ಹುಡುಕಿ ಪ್ರವಾಸ ಕೈಗೊಳ್ಳುವವರ ನೆಚ್ಚಿನ ತಾಣವಾಗಿದೆ. ವಾತಾವರಣದ ತಂಪು, ಕಾನನದ ಶಾಂತತೆ, ಟಿಬೆಟಿಯನ್‌ ವೈಬ್‌ ಅಲ್ಲಿ ಅವರ ಆರೈಕೆ ಮಾಡುತ್ತದೆ. ಇಂಥ ಶಾಂತಿಯನ್ನು ಹುಡುಕಿ ಇಲ್ಲಿಗೆ ಬರುವವರಲ್ಲಿ ಕರ್ನಾಟಕದ ವಿವಿಧ ಭಾಗಗಳು ಸೇರಿ ದೇಶ-ವಿದೇಶದ ಪ್ರವಾಸಿಗರೂ ಇರುವುದು ವಿಶೇಷ.

Untitled design (7)

ಏನೇನಿದೆ

ಟಿಬೆಟಿಯನ್‌ ಜನರು ತಮ್ಮ ದೇಶ ಬಿಟ್ಟು ಕರ್ನಾಟಕಕ್ಕೆ ವಲಸೆ ಬಂದಾಗ ಸರಕಾರ ಅವರಿಗೆ ಸುಮಾರು 4000 ಎಕರೆಯಷ್ಟು ಭೂಮಿಯನ್ನು ಆಶ್ರಯಕ್ಕಾಗಿ ನೀಡಿತ್ತು. ಆ ಜಾಗದಲ್ಲಿ ಇಂದು ಟಿಬೆಟಿಯನ್‌ ವಾಸ್ತುಶಿಲ್ಪ ಮಾದರಿಯ ಮಾನೆಸ್ಟ್ರಿಗಳು ತಲೆಯೆತ್ತಿ ನಿಂತಿವೆ. ಕೆಂಪು ನಿಲುವಂಗಿತೊಟ್ಟ ಸಾವಿರಾರು ವಿದ್ಯಾರ್ಥಿಗಳು ಇಲ್ಲಿ ಸದಾ ಇರುತ್ತಾರೆ. ಟಿಬೆಟಿಯನ್‌ ಶೈಲಿಯ ಕರಕುಶಲ ವಸ್ತುಗಳ ಮಳಿಗೆಗಳು, ಆಹಾರ ಮಳಿಗೆಗಳು, ವಸತಿ ನಿಲಯಗಳು, ಶಿಕ್ಷಣ ಕೇಂದ್ರಗಳು, ಗ್ರಂಥಾಲಯ ಇನ್ನೂ ಸಾಕಷ್ಟನ್ನು ಇಲ್ಲಿ ಕಾಣಬಹುದು.

ಸಾಗಾ ಡಾವಾ

ಗಾದೆನ್‌, ಡ್ರೆಪುಂಗ್, ತಾಶಿಲ್ಹನ್ಪೋ, ತಾಶಿಲಿಂಗ್, ನ್ಯಿಂಗ್ಮಾ, ಶಕ್ಯ, ಕಾಗ್ಯೂ, ಜಾಂಗ್ಚುಬ್‌ ಹೀಗೆ ಸಾಕಷ್ಟು ಬೌದ್ಧ ಮಠಗಳು ಇಲ್ಲಿ ನೆಲೆಯಾಗಿವೆ. ಈ ಮಠಗಳ ಆವರಣಗಳನ್ನು ʻಸಾಗಾ ಡಾವಾʼದ ಸಂಭ್ರಮದ ದಿನಗಳಲ್ಲಿ ನೋಡಲು ಸುಂದರವಾಗಿರುತ್ತವೆ. ʻಸಾಗಾ ಡಾವಾʼ ಎಂಬುದು ಈ ಜನರ ಪ್ರಮುಖವಾದ ಆಚರಣೆಯಾಗಿದ್ದು, ಒಂದು ತಿಂಗಳುಗಳ ಕಾಲ ನಡೆಯುತ್ತದೆ. ಸಾಮಾನ್ಯವಾಗಿ ಪ್ರತಿವರ್ಷದ ಮೇ ಮಧ್ಯದಿಂದ ಆರಂಭವಾಗಿ ಜೂನ್‌ ತಿಂಗಳ ಮಧ್ಯದವರೆಗೆ ಜರುಗುತ್ತದೆ. ಈ ಸಂದರ್ಭದಲ್ಲಿ ಇಲ್ಲಿ ಈ ಜನರು ಅವರ ಸಾಂಪ್ರದಾಯಿಕ ಉಡುಪುಗಳನ್ನು ಧರಿಸಿ ದೇವಾಲಯಗಳಿಗೆ ತೆರಳಿ ಪ್ರಾರ್ಥನೆ ಸಲ್ಲಿಸುತ್ತಾರೆ. ಬಣ್ಣ ಬಣ್ಣದ ಧ್ವಜಗಳನ್ನು ಕಟ್ಟುತ್ತಾರೆ. ಹಬ್ಬದ ವಾತಾವರಣ ಅಲ್ಲಿರುತ್ತದೆ.

ದಾರಿ ಹೇಗೆ?

ಬೆಂಗಳೂರಿನಿಂದ ಡ್ರೆಪುಂಗ್‌ ಮಠವು ಸುಮಾರು 400 ಕಿಮೀ ದೂರದಲ್ಲಿದೆ. ಹುಬ್ಬಳ್ಳಿಯಿಂದ ಸುಮಾರು 55 ಕಿಮೀ ದೂರದಲ್ಲಿದೆ. ಹುಬ್ಬಳ್ಳಿ ರೈಲ್ವೇ ಮತ್ತು ವಿಮಾನ ನಿಲ್ದಾಣಗಳನ್ನು ಹೊಂದಿದೆ. ಇಲ್ಲಿಂದ ಸ್ಥಳೀಯ ವಾಹಗಳ ಮೂಲಕ ಡ್ರೆಪುಂಗ್‌ ಮಠವನ್ನು ತಲುಪಬಹುದು.

Jadesha Emmiganur

Jadesha Emmiganur

Jadesha Emmiganur Is a Passionate Journalist from Ballari

ದೇಶ ಸುತ್ತಬೇಕಿಲ್ಲ, ಕರ್ನಾಟಕದಲ್ಲೇ ಇವೆ ಅನೇಕ ಡಾಲ್ಫಿನ್‌ ತಾಣಗಳು..

Read Previous

ದೇಶ ಸುತ್ತಬೇಕಿಲ್ಲ, ಕರ್ನಾಟಕದಲ್ಲೇ ಇವೆ ಅನೇಕ ಡಾಲ್ಫಿನ್‌ ತಾಣಗಳು..

ನೋಡಬನ್ನಿ ರಾಮನಗರ..ಇತಿಹಾಸವನ್ನು ಒಡಲಲ್ಲಿ  ಹೊತ್ತ ಬೆಟ್ಟಗಳ ತವರೂರ..

Read Next

ನೋಡಬನ್ನಿ ರಾಮನಗರ..ಇತಿಹಾಸವನ್ನು ಒಡಲಲ್ಲಿ ಹೊತ್ತ ಬೆಟ್ಟಗಳ ತವರೂರ..