Thursday, June 11, 2026
Thursday, June 11, 2026

ಖರಾಸುರನಿಂದ ಪ್ರತಿಷ್ಠಾಪನೆಗೊಂಡ ಸ್ವಯಂಭೂ

ಇಲ್ಲಿ ಮುಖ್ಯ ದೇವರು ಶ್ರೀ ಸ್ವಯಂಭೂ ಆದರೆ ಶ್ರೀ ಮಹಾಗಣಪತಿ ಮತ್ತು ಮಹಾವಿಷ್ಣು ಪರಿವಾರ ದೇವತೆಗಳು. ಭಕ್ತ ಸಮೂಹದಿಂದ “ಜಟಕ” ಎಂದು ಕರೆಸಿಕೊಳ್ಳುವ ಕ್ಷೇತ್ರಪಾಲನು ಬಹು ಶಕ್ತಿ ಶಾಲಿಯಾಗಿದ್ದಾನೆ .

  • ಕಾವ್ಯ ಹೆಗಡೆ

ಹೊನ್ನಾವರ ಅಂದರೆ ಬರೀ ಬೋಟಿಂಗ್ ಬೀಚ್ ಇಷ್ಟೆ ಅಲ್ಲ ಇಲ್ಲಿ ಹಲವಾರು ಪ್ರಸಿದ್ಧ ದೇವಾಲಯಗಳಿವೆ. ಅವುಗಳಲ್ಲಿ ಶ್ರೀ ಸ್ವಯಂಭೂ ದೇವಾಲಯ ಕೂಡ ಒಂದು. ಹೊನ್ನಾವರದಿಂದ 17ಕಿಮೀ ದೂರದಲ್ಲಿರುವ ಈ ದೇವಾಲಯವು 2000 ವರ್ಷಗಳ ಪುರಾತನ ಇತಿಹಾಸವುಳ್ಳ ಸುಂದರ ಶಿಲಾಮಯ ದೇವಾಲಯವಾಗಿದೆ.

ಇದನ್ನೂ ಓದಿ: ಸಂಪರ್ಕಕ್ಕಾಗಿ ಕಟ್ಟಿದ ಸೇತುವೆ ಸಂಪತ್ತಾಯಿತು

ಸ್ವಯಂಭೂ ಎಂದರೆ ಸ್ವತಃ ಉದ್ಭವಿಸಿದದ್ದು ಎಂದರ್ಥ. ಅಂದರೆ, ಮಾನವನಿಂದ ನಿರ್ಮಿಸಲ್ಪಟ್ಟ ದೇವರ ಮೂರ್ತಿಯಲ್ಲ, ಪ್ರಕೃತಿಯಿಂದಲೇ ಸ್ವಯಂ ರೂಪುಗೊಂಡ ದೈವಿಕ ಚಿಹ್ನೆ ಅಥವಾ ಮೂರ್ತಿಯನ್ನು ಹೊಂದಿರುವ ದೇವಾಲಯವನ್ನು ಸ್ವಯಂಭೂ ದೇವಾಲಯವೆಂದು ಕರೆಯುತ್ತಾರೆ.

ಇತಿಹಾಸ

ಸುಮಾರು ಎರಡು ಸಾವಿರ ವರ್ಷಗಳಿಗೂ ಹಿಂದೆ ಪುರಾಣ ಪ್ರಸಿದ್ಧನಾದ ಖರಾಸುರನಿಂದ ʼಶ್ರೀ ಸ್ವಯಂಭೂʼ ಪ್ರತಿಷ್ಠಾಪಿಸಲ್ಪಟ್ಟನೆಂಬ ಪ್ರತೀತಿ ಇದೆ. ಕಡತೋಕದ ಅತ್ಯಂತ ಎತ್ತರದ ಪ್ರದೇಶದಲ್ಲಿ 'ದೇವರ ಬೋಳೆ' ಎಂಬಲ್ಲಿ ಪ್ರತಿಷ್ಠಿತನಾದ ಶ್ರೀ ಸ್ವಯಂಭೂ ಕಡತೋಕದ ಪ್ರಸಿದ್ಧ ಹೆಗಡೆಮನೆ ಮನೆತನದ ಪೂರ್ವಜರೊಬ್ಬರಿಗೆ ಕನಸಿನಲ್ಲಿ ಕಾಣಿಸಿಕೊಂಡ. ಸರಿಯಾದ ಪೂಜೆ ಪುನಸ್ಕಾರಗಳು ನಡೆಯುತ್ತಿಲ್ಲವೆಂದು ತಿಳಿದ ಹೆಗಡೆ ಮನೆತನದವರು, ಊರ ಜನರ ಸಹಕಾರದೊಂದಿಗೆ ಈಗ ದೇವಾಲಯ ಇರುವ ಸ್ಥಳದಲ್ಲಿ ತಂದು ಪುನಃ ಪ್ರತಿಷ್ಠಾಪಿಸಿದರೆಂದು ವಾಡಿಕೆ ಇದೆ.

Untitled design (82)

ಪೂಜೆ ಪುನಸ್ಕಾರ

ಇಲ್ಲಿ ಮುಖ್ಯ ದೇವರು ಶ್ರೀ ಸ್ವಯಂಭೂ ಆದರೆ ಶ್ರೀ ಮಹಾಗಣಪತಿ ಮತ್ತು ಮಹಾವಿಷ್ಣು ಪರಿವಾರ ದೇವತೆಗಳು. ಭಕ್ತ ಸಮೂಹದಿಂದ ʼಜಟಕʼ ಎಂದು ಕರೆಸಿಕೊಳ್ಳುವ ಕ್ಷೇತ್ರಪಾಲನು ಬಹು ಶಕ್ತಿಶಾಲಿಯಾಗಿದ್ದಾನೆ .

ದೇವಾಲಯದಲ್ಲಿ ಅತ್ಯಂತ ಶಾಸ್ತ್ರ ಬದ್ಧ ರೀತಿಯಲ್ಲಿ ತ್ರಿಕಾಲ ಪೂಜೆ ಪುನಸ್ಕಾರಗಳು ನಡೆದುಕೊಂಡು ಬರುತ್ತಿದ್ದು, ಅರ್ಚಕರುಗಳು, ಪಾಠಾಳಿಗಳು, ಭಂಡಾರಿ ಮತ್ತು ಹಾಲಕ್ಕಿ ಸಮಾಜದ ಮನೆತನದವರು ನಿರಂತರವಾಗಿ ಸೇವೆ ಸಲ್ಲಿಸುತ್ತಾ ಬಂದಿರುತ್ತಾರೆ. ಊರಿನವರೆಲ್ಲರೂ ಒಂದಾಗಿ ಸೇವೆ ಸಲ್ಲಿಸುತ್ತಿದ್ದು, ಒಂದೊಂದು ದಿನ ಒಬ್ಬೊಬ್ಬರು ಒಂದೊಂದು ರೀತಿಯ ಸೇವೆ ಸಲ್ಲಿಸುತ್ತಾರೆ. ಎಲ್ಲರೂ ಅನುವಂಶಿಯವಾಗಿ ಸೇವೆ ಸಲ್ಲಿಸುತ್ತಾ ಬಂದಿರುತ್ತಾರೆ. ಸಂಕ್ರಾಂತಿ, ಯುಗಾದಿ, ನಾಗರಪಂಚಮಿ, ನೂಲು ಹುಣ್ಣಿಮೆ, ಶಿವರಾತ್ರಿ, ಶ್ರಾವಣ ಮಾಸದ ವಿಶೇಷ ಉತ್ಸವ, ನವರಾತ್ರಿ, ಹಸಿರು ಪೂಜೆ, ವಿಶೇಷ ಹರಕೆ ಮಹಾಪೂಜೆ, ಕಾರ್ತಿಕ ಸಮಾರಾಧನೆಗಳಲ್ಲಿ ವಿಶೇಷ ಪೂಜೆ ನಡೆಯುತ್ತದೆ.

ಗರ್ಭಗುಡಿ ನಿರ್ಮಾಣ

ಶ್ರೀಮಜ್ಜಗದ್ಗುರು ಶಂಕರಾಚಾರ್ಯ ಶ್ರೀ ಶ್ರೀ ರಾಘವೇಶ್ವರಭಾರತೀ ಮಹಾಸ್ವಾಮಿಗಳವರ ಮಾರ್ಗದರ್ಶನದಂತೆ ವಾಸ್ತುಶಾಸ್ತ್ರ ತಜ್ಞರಿಂದ ಆಕರ್ಷಕ ಕೆತ್ತನೆಯಲ್ಲಿ ಹಿಂದಿನ ಚೋಳ ಶೈಲಿಯ ಗರ್ಭಗುಡಿಯ ಮಾದರಿಯಲ್ಲಿ ನೂತನ ಶಿಲಾಮಯ ಗರ್ಭಗುಡಿ ನಿರ್ಮಾಣಗೊಂಡಿತು. ಈ ಭಾಗದ ಮೊಟ್ಟ ಮೊದಲನೆಯ ಶಿಲಾಮಯ ದೇವಾಲಯವೆಂದು ಪ್ರಸಿದ್ಧವಾಗಿದೆ. ಸೂಕ್ತ ಸಲಹೆ ಸೂಚನೆ ನೀಡಿದ್ದಲ್ಲದೇ ಎಲ್ಲಾ ಧಾರ್ಮಿಕ ಕಾರ್ಯಗಳನ್ನು ಸಾಂಗವಾಗಿ ನೆರವೇರಿಸಿದ ತಾಂತ್ರಿಕ ಶ್ರೇಷ್ಠರಾದ ದಿ|| ಕಟ್ಟೆ ಭಟ್ಟರವರು ಮತ್ತು ಅನೇಕ ವೈದಿಕ ಶ್ರೇಷ್ಠರ ನಿರ್ವಹಣೆಯಲ್ಲಿ ನೆರವೇರಿದೆ.

ದಾರಿ ಹೇಗೆ?

ಹೊನ್ನಾವರದಿಂದ 17 ಕಿಮೀ ದೂರದಲ್ಲಿರುವ ದೇವಾಲಯವಿದು. ಹೊನ್ನಾವರದವರೆಗೆ ಬಸ್‌ ಅಲ್ಲಿ ಹೋಗಿ ಅಲ್ಲಿಂದ ಸ್ವಂತ ಗಾಡಿ, ಆಟೊ ಮೂಲಕ ತಲುಪಬಹುದು.

ಲೇಖಕರು: ವ್ಲಾಗರ್‌

Admin

Admin

Pravasi Prapancha – A pioneering initiative led by Vishweshwar Bhat, the esteemed journalist and head of the Vishwavani Group. It is the first and only travel-focused publication in Kannada journalism, dedicated exclusively to news, information, and travel narratives about various destinations. The digital media counterpart of this venture is Pravasi Prapancha Digital Channel, which brings travel-related news from across the state, country, and world. It features fascinating insights, traveler experiences, interviews related to travel, entertainment segments, and much more. Editor-in-Chief: Shri Vishweshwar Bhat

ದೇಶ ಸುತ್ತಬೇಕಿಲ್ಲ, ಕರ್ನಾಟಕದಲ್ಲೇ ಇವೆ ಅನೇಕ ಡಾಲ್ಫಿನ್‌ ತಾಣಗಳು..

Read Previous

ದೇಶ ಸುತ್ತಬೇಕಿಲ್ಲ, ಕರ್ನಾಟಕದಲ್ಲೇ ಇವೆ ಅನೇಕ ಡಾಲ್ಫಿನ್‌ ತಾಣಗಳು..

ನೋಡಬನ್ನಿ ರಾಮನಗರ..ಇತಿಹಾಸವನ್ನು ಒಡಲಲ್ಲಿ  ಹೊತ್ತ ಬೆಟ್ಟಗಳ ತವರೂರ..

Read Next

ನೋಡಬನ್ನಿ ರಾಮನಗರ..ಇತಿಹಾಸವನ್ನು ಒಡಲಲ್ಲಿ ಹೊತ್ತ ಬೆಟ್ಟಗಳ ತವರೂರ..