Friday, July 24, 2026
Friday, July 24, 2026

ಸೋಲೋ ಬೈಕ್‌ ರೈಡ್‌ ಎಂದರೆ ಸ್ವಾತಂತ್ರ್ಯ

ಕೇದಾರ್‌ನಾಥಕ್ಕೆ ಹೋಗಬೇಕು ಅಂತ ನಾನು ಕಳೆದ ಐದು ವರ್ಷಗಳಿಂದ ಅಂದುಕೊಳ್ಳುತ್ತಿದ್ದೇನೆ. ಎಷ್ಟೋ ಸಲ ಪ್ಲಾನ್ ಕೂಡ ಮಾಡಿದ್ದೆ, ಆದರೆ, ಏನೋ ಕಾರಣಗಳಿಂದ ಅದು ವರ್ಕೌಟ್ ಆಗ್ಲಿಲ್ಲ. ಆದಷ್ಟು ಬೇಗ ಅಲ್ಲಿಗೆ ಹೋಗೋಕೆ ಸಾಧ್ಯ ಆಗುತ್ತದೆ ಎಂಬ ನಂಬಿಕೆ ಇದೆ. ಕೆಲವೊಮ್ಮೆ ಜಾಗಗಳೇ ನಮ್ಮನ್ನು ಕರೆಸಿಕೊಳ್ಳಬೇಕು ಅಂತಾರೆ. ಆ ಮಾತನ್ನು ನಂಬುತ್ತೇನೆ.

ನಟ ಅಭಿಷೇಕ್‌ ರಾಮ್‌ದಾಸ್‌ ಸದ್ಯ ʼನಂದಗೋಕುಲʼ ಧಾರಾವಾಹಿಯಲ್ಲಿ ಪ್ರೇಕ್ಷಕರ ಮನಗೆಲ್ಲುತ್ತಿರುವ ಸ್ಟಾರ್‌. ಇದರ ಜತೆಗೆ ಇತ್ತೀಚೆಗೆ ಬಿಡುಗಡೆಯಾದ ʼಲ್ಯಾಂಡ್‌ಲಾರ್ಡ್‌ʼ ಸಿನಿಮಾದಲ್ಲಿ ವಿಭಿನ್ನ ಪಾತ್ರದಲ್ಲಿ ಮಿಂಚಿದ್ದರು. ಹೀಗೆ ಸೀರಿಯಲ್‌ ಮತ್ತು ಸೀನಿಮಾ ಎರಡರಲ್ಲೂ ಬ್ಯುಸಿಯಾಗಿರುವ ಅಭಿ ದಾಸ್‌ ಅವರಿಗೆ ಬೈಕ್‌ ರೈಡ್‌ ಎಂದರೆ ಸ್ವಾತಂತ್ರ್ಯ. ಅವರ ಪ್ರವಾಸದ ಕಥೆಗಳನ್ನು ಪ್ರವಾಸಿ ಪ್ರಪಂಚದ ಜತೆಗೆ ಹಂಚಿಕೊಂಡಿದ್ದಾರೆ.

*ನೀವು ಸೋಲೋ ಟ್ರಾವೆಲ್ ತುಂಬಾ ಎಂಜಾಯ್ ಮಾಡೋ ಥರ ಕಾಣ್ತೀರಾ. ಕಾರಣ?

ಸೋಲೋ ಟ್ರಾವೆಲ್ ಎನ್ನುವುದು ನನಗೆ ಒಂದು ಬೇರೆ ರೀತಿಯದ್ದೇ ಅನುಭವ ಕೊಡುತ್ತದೆ. ಒಬ್ಬರೇ ಟ್ರಾವೆಲ್ ಮಾಡುತ್ತಿರುವಾಗ, ನಿಮಗಾಗಿ ನೀವೇ ಹೊಸ ನೆನಪುಗಳನ್ನು ಕ್ರಿಯೇಟ್ ಮಾಡಿಕೊಳ್ಳುತ್ತೀರಿ, ಜತೆಗೆ ನಿಮ್ಮ ಬಗ್ಗೆ ನಿಮಗೇ ತುಂಬಾ ವಿಷಯಗಳು ಅರ್ಥ ಆಗುತ್ತವೆ. ಫ್ಯಾಮಿಲಿ ಅಥವಾ ಫ್ರೆಂಡ್ಸ್ ಜತೆ ಹೋಗುವ ಟ್ರಿಪ್ಸ್‌ ಅಲ್ಲಿ ಅದರದ್ದೇ ಆದ ಸ್ಪೆಷಾಲಿಟಿ ಇರುತ್ತದೆ. ಆದರೆ, ಸೋಲೋ ಟ್ರಾವೆಲ್ ನಮಗೆ ಒಂದು ವಿಭಿನ್ನವಾದ ಸ್ವಾತಂತ್ರ್ಯ ಕೊಡುತ್ತದೆ. ಇದು ನನ್ನ ದಿನನಿತ್ಯದ ಬದುಕಿನಿಂದ ಕೊಂಚ ದೂರ ಉಳಿದು, ಮೆಂಟಲಿ ರಿಲ್ಯಾಕ್ಸ್ ಆಗೋಕೆ ಹೆಲ್ಪ್ ಮಾಡುತ್ತದೆ. ನಮ್ಮೊಳಗಿರುವ ಎಷ್ಟೋ ಪ್ರಶ್ನೆಗಳಿಗೆ ಉತ್ತರ ಸಿಗುತ್ತದೆ.

ಇದನ್ನೂ ಓದಿ:ಕಾವ್ಯಾ ಗೌಡ ಸಂದರ್ಶನ

*ಇದುವರೆಗೆ ನೀವು ಯಾವ್ಯಾವ ಜಾಗಗಳಿಗೆ ಹೋಗಿದ್ದೀರಿ? ನೆನಪಿನಲ್ಲಿರುವ ಘಟನೆ ಯಾವುದು?

ಹಿಮಾಚಲ ಪ್ರದೇಶ, ಉತ್ತರಾಖಂಡ, ಕಾಶ್ಮೀರ, ತಮಿಳುನಾಡು ಹೀಗೆ ಎಷ್ಟೋ ಕಡೆ ಹೋಗಿದ್ದೀನಿ. ಇದರಲ್ಲಿ ಹೆಚ್ಚಿನ ಟ್ರಿಪ್ಸ್ ನಾನು ನನ್ನ ಬೈಕ್‌ನಲ್ಲೇ ಮಾಡಿದ್ದೇನೆ. ಇದಲ್ಲದೆ ಸಿಂಗಾಪುರ, ಮಲೇಷ್ಯಾ, ಥೈಲ್ಯಾಂಡ್ ಮತ್ತು ಶ್ರೀಲಂಕಾದಂಥ ದೇಶಗಳಿಗೂ ವಿಸಿಟ್ ಮಾಡಿದ್ದೇನೆ. ಯಾರದ್ದೂ ಹಂಗಿಲ್ಲದೆ ಇಂಡಿಪೆಂಡೆಂಟ್ ಆಗಿ ಟ್ರಾವೆಲ್ ಮಾಡಿರುವುದೇ ನನ್ನ ಲೈಫ್‌ನ ಅತಿ ದೊಡ್ಡ ಎಕ್ಸ್‌ಪೀರಿಯನ್ಸ್. ಹೈವೇಗಳು, ಬೆಟ್ಟ-ಗುಡ್ಡಗಳು ಮತ್ತು ಹಿಲ್ ಸ್ಟೇಷನ್‌ಗಳಲ್ಲಿ ಬೈಕ್ ರೈಡ್ ಮಾಡಿರೋದು ನನಗೆ ಯಾವತ್ತೂ ಮರೆಯದ ನೆನಪುಗಳನ್ನ ಕೊಟ್ಟಿದೆ. ಅದರಲ್ಲೂ ನನಗೆ ಸ್ಪಷ್ಟವಾಗಿ ನೆನಪಿರುವುದು ಎಂದರೆ ಊಟಿಯ ಹೇರ್‌ಪಿನ್ ಬೆಂಡ್‌ಗಳಲ್ಲಿ ರೈಡ್ ಮಾಡಿದ್ದು. ಅಲ್ಲಿ ಸುಮಾರು 72 ಹೇರ್‌ಪಿನ್ ತಿರುವುಗಳಿವೆ, ಅಲ್ಲಿ ಬೈಕ್ ಓಡಿಸಿದ್ದು ನಿಜಕ್ಕೂ ಒಂದು ಅದ್ಭುತವಾದ ಅನುಭವ. ಯಾವುದೇ ಜಾಗವನ್ನು ಬೈಕ್ ಮೇಲೆ ಎಕ್ಸ್‌ಪ್ಲೋರ್ ಮಾಡುವುದರಿಂದ ಸಿಗುವ ದೃಷ್ಟಿಕೋನವೇ ಬೇರೆ ಥರ ಇರುತ್ತದೆ.

Untitled design - 2026-07-24T201103.255

*ನಿಮ್ಮ ಬಕೆಟ್ ಲಿಸ್ಟ್‌ನಲ್ಲಿ ಭೇಟಿ ನೀಡಲೇಬೇಕು ಅಂತಿರುವ ಜಾಗಗಳು ಯಾವುವು?

ಕೇದಾರ್‌ನಾಥಕ್ಕೆ ಹೋಗಬೇಕು ಅಂತ ನಾನು ಕಳೆದ ಐದು ವರ್ಷಗಳಿಂದ ಅಂದುಕೊಳ್ಳುತ್ತಿದ್ದೇನೆ. ಎಷ್ಟೋ ಸಲ ಪ್ಲಾನ್ ಕೂಡ ಮಾಡಿದ್ದೆ, ಆದರೆ, ಏನೋ ಕಾರಣಗಳಿಂದ ಅದು ವರ್ಕೌಟ್ ಆಗ್ಲಿಲ್ಲ. ಆದಷ್ಟು ಬೇಗ ಅಲ್ಲಿಗೆ ಹೋಗೋಕೆ ಸಾಧ್ಯ ಆಗುತ್ತದೆ ಎಂಬ ನಂಬಿಕೆ ಇದೆ. ಕೆಲವೊಮ್ಮೆ ಜಾಗಗಳೇ ನಮ್ಮನ್ನು ಕರೆಸಿಕೊಳ್ಳಬೇಕು ಅಂತಾರೆ. ಆ ಮಾತನ್ನು ನಂಬುತ್ತೇನೆ.

*ನಿಮಗೆ ಅಡ್ವೆಂಚರ್ ಅಥವಾ ಸ್ಪಿರಿಚುಯಲ್ ಟ್ರಾವೆಲ್, ಯಾವುದು ಹೆಚ್ಚು ಇಷ್ಟ?

ನನಗೆ ಎರಡೂ ಇಷ್ಟ. ಸ್ಪಿರಿಚುವಲ್‌ ಪ್ರವಾಸದಲ್ಲೊಂದು ಅಡ್ವೆಂಚರ್‌ ಇರಬೇಕು. ಅಡ್ವೆಂಚರ್‌ ಪ್ರವಾಸದಲ್ಲೊಂದು ಅಧ್ಯಾತ್ಮ ಇರಬೇಕು. ದೇವಸ್ಥಾನಗಳಿಗೆ ಭೇಟಿ ನೀಡೋದು ಒಂದು ಅರ್ಥಪೂರ್ಣವಾದ ವಿಷಯ ಆದರೆ, ಆ ಜರ್ನಿ, ಅದರಲ್ಲೂ ವಿಶೇಷವಾಗಿ ಟ್ರೆಕ್ಕಿಂಗ್ ಮತ್ತು ಅಡ್ವೆಂಚರ್ ಆಕ್ಟಿವಿಟೀಸ್ ಮಾಡುವುದು ಕೂಡ ಅಷ್ಟೇ ಎಕ್ಸೈಟಿಂಗ್ ಆಗಿರುತ್ತದೆ.

*ನಿಮ್ಮ ಈ ಬೈಕಿಂಗ್ ಪ್ಯಾಶನ್ ಬಗ್ಗೆ ಸ್ವಲ್ಪ ಹೇಳಿ.

ನಾನು ಎಷ್ಟೋ ವರ್ಷಗಳಿಂದ ಬೈಕ್ ರೈಡ್ ಮಾಡುತ್ತಿದ್ದೇನೆ. 2015ರಲ್ಲಿ KTM 390 ಬೈಕ್ ತಗೊಂಡಿದ್ದೆ. ಬೇರೆ ಬೇರೆ ಸ್ಟೇಟ್‌ಗಳಿಗೆ ಅದರಲ್ಲೇ ಲಾಂಗ್ ರೈಡ್ ಹೋಗ್ತಿದ್ದೆ. ಆದ್ರೆ 2018 ರಲ್ಲಿ ನನಗೊಂದು ಬೈಕ್ ಆಕ್ಸಿಡೆಂಟ್ ಆಯ್ತು, ಆಮೇಲಿಂದ ನಾನು ತುಂಬಾ ದೂರದ ಲಾಂಗ್ ರೈಡ್ಸ್ ಮಾಡೋದನ್ನ ಸ್ವಲ್ಪ ಕಮ್ಮಿ ಮಾಡಿದೆ. ಆದ್ರೂ ಈಗಲೂ ಟೈಮ್ ಸಿಕ್ಕಾಗಲೆಲ್ಲಾ ರೈಡಿಂಗ್ ಮಾಡೋದನ್ನು ಎಂಜಾಯ್ ಮಾಡುತ್ತೇನೆ.

Untitled design - 2026-07-24T201044.574

*ಪ್ಲಾನ್ಡ್‌ ಅಥವಾ ಅನ್‌ಪ್ಲಾನ್ಡ್‌, ಯಾವುದು ನಿಮ್ಮ ಆಯ್ಕೆ?

-ಖಂಡಿತವಾಗಿಯೂ ಅನ್ಪ್ಲಾನ್ಡ್ ಟ್ರಿಪ್ಸ್ ಅಂದ್ರೇನೆ ಇಷ್ಟ. ನನ್ನ ಟ್ರಾವೆಲ್ಸ್‌ನಲ್ಲಿ ಶೇಕಡಾ 90 ರಷ್ಟು ಯಾವುದೇ ಪ್ಲಾನಿಂಗ್ ಇಲ್ಲದೆ ದಿಢೀರ್ ಅಂತ ಆಗಿದ್ದು. ಕೆಲವು ಸಲ ಸಡನ್ ಆಗಿ ತಗೆದುಕೊಳ್ಳುವ ನಿರ್ಧಾರಗಳಿಂದಲೇ ಬೆಸ್ಟ್ ಎಕ್ಸ್‌ಪೀರಿಯನ್ಸ್ ಸಿಗುತ್ತವೆ.

*ಟ್ರಾವೆಲಿಂಗ್ ನಿಮ್ಮ ಆಕ್ಟಿಂಗ್ ಕೆರಿಯರ್‌ಗೆ ಏನಾದ್ರೂ ಹೆಲ್ಪ್ ಮಾಡಿದೆಯಾ?

ಹೌದು, ಡೆಫಿನೆಟ್ಲಿ. ಸುಮಾರು ಹತ್ತು ವರ್ಷಗಳ ಹಿಂದೆ ನನಗೆ ಶೂಟಿಂಗ್‌ಗಾಗಿ ವಿದೇಶಕ್ಕೆ ಟ್ರಾವೆಲ್ ಮಾಡುವ ಚಾನ್ಸ್ ಸಿಕ್ಕಿತ್ತು. ನಾವು ಥೈಲ್ಯಾಂಡ್‌ನ ಕ್ರಾಬಿ, ಬ್ಯಾಂಕಾಕ್ ಮತ್ತು ಪಟ್ಟಾಯದಲ್ಲಿ ಹತ್ತಿರತ್ತಿರ 14 ದಿನಗಳ ಕಾಲ ಕಳೆದಿದ್ವಿ. ಅದು ತುಂಬಾ ಹೆಕ್ಟಿಕ್ ಶೆಡ್ಯೂಲ್ ಆಗಿತ್ತು, ಆದರೂ ನಮಗೆ ಫ್ರೀ ಟೈಮ್ ಸಿಕ್ಕಾಗಲೆಲ್ಲಾ ಅಲ್ಲಿನ ಜಾಗಗಳನ್ನ ಎಕ್ಸ್‌ಪ್ಲೋರ್ ಮಾಡುತ್ತಿದ್ದೆವು. ಟ್ರಾವೆಲ್ ಮಾಡುವುದರಿಂದ ನಮ್ಮ ಯೋಚನೆಗಳು, ದೃಷ್ಟಿಕೋನ ವಿಶಾಲವಾಗುತ್ತದೆ, ಅದು ಒಬ್ಬ ನಟನಾಗಿ ನನಗೂ ಹೆಲ್ಪ್ ಆಗುತ್ತದೆ.

*ಸದ್ಯಕ್ಕೆ ಸಿನಿಮಾ ಹಾಗೂ ಟಿವಿ ಸೀರಿಯಲ್‌ಗಳು ಏನಾಗುತ್ತಿವೆ?

ನಾನು ಎರಡರಲ್ಲೂ ಆಕ್ಟಿವ್ ಆಗಿದ್ದೀನಿ. ಆದರೆ, ಸಿನಿಮಾ ಅನ್ನೋದು ಯಾವಾಗಲೂ ಒಂದು ದೊಡ್ಡ ಕನಸು ಮತ್ತು ಲಾಂಗ್-ಟರ್ಮ್ ಗೋಲ್. ಫಿಲ್ಮ್ ಇಂಡಸ್ಟ್ರಿಯಲ್ಲಿ ಪ್ರೊಸೆಸ್ ಸ್ವಲ್ಪ ಸ್ಲೋ ಆಗಿರುತ್ತದೆ, ಜತೆಗೆ ಅವಕಾಶಗಳು ಸಿಗೋಕೆ ಸ್ವಲ್ಪ ಟೈಮ್ ತಗೊಳ್ಳುತ್ತದೆ. ಸಿನಿಮಾದಲ್ಲಿ ಯಾವುದಾದರೂ ಒಳ್ಳೆ ಆಫರ್ ಬಂದ್ರೆ ಖಂಡಿತವಾಗಿಯೂ ಮಾಡುತ್ತೇನೆ. ಸದ್ಯಕ್ಕೆ ಸೀರಿಯಲ್‌ಗೆ ವೀಕ್ಷಕರಿಂದ ಸಿಕ್ತಿರೋ ರೆಸ್ಪಾನ್ಸ್ ನೋಡಿ ನನಗೆ ಖುಷಿ ಇದೆ.

Untitled design - 2026-07-24T201057.181

--

ನಾನು ಎಲ್ಲೇ ಹೋದರೂ ಅಲ್ಲಿನ ಸ್ಥಳೀಯ ರುಚಿಗಳು ಮತ್ತು ಅಲ್ಲಿನ ಆಚರಣೆ, ಸಂಪ್ರದಾಯಗಳನ್ನು ಎಕ್ಸ್‌ಪೀರಿಯನ್ಸ್ ಮಾಡಲು ಟ್ರೈ ಮಾಡುತ್ತೇನೆ. ಟ್ರಾವೆಲ್‌ ಹೋಗುವಾಗ ಮುಖ್ಯವಾಗಿ ನೀರು, ಸ್ನ್ಯಾಕ್ಸ್, ಸಿಕ್ಕಾಗ ಎಳನೀರು, ಸಿಗರೇಟ್ಸ್ ಮತ್ತು ಲೈಟರ್, ಎಮರ್ಜೆನ್ಸಿಗಾಗಿ ಸ್ವಲ್ಪ ಎಕ್ಸ್‌ಟ್ರಾ ಫ್ಯುಯೆಲ್ (ಪೆಟ್ರೋಲ್), ಕ್ಯಾಶ್ ಮತ್ತು ಬೇಸಿಕ್ ಟ್ರಾವೆಲ್ ಕಿಟ್ ಇರಬೇಕು. ಲಾಂಗ್ ರೈಡ್ಸ್ ಹೋಗುವಾಗ ಇವೆಲ್ಲದಕ್ಕೂ ಮೊದಲೇ ಪ್ರಿಪೇರ್ ಆಗಿರೋದು ಯಾವತ್ತೂ ಒಳ್ಳೆಯದು.
- ಅಭಿಷೇಕ್‌ ರಾಮ್‌ದಾಸ್‌, ನಟ
Pramod Mohan Hegde

Pramod Mohan Hegde

A media professional with four years of experience in journalism, having worked with leading Kannada publications such as Vistara, Vijayavani, and Vijaya Karnataka as a cinema journalist. Also an author with a keen interest in travel and cinema. Currently serving as Senior Sub Editor at Pravasi Prapancha, contributing editorial expertise and engaging storytelling to the media industry.

ಟ್ರೆಕ್ಕಿಂಗ್‌ ಮಾಡುವುದೆಂದರೆ ನನಗಿಷ್ಟ: ರಂಜನಿ ರಾಘವನ್‌

Read Previous

ಟ್ರೆಕ್ಕಿಂಗ್‌ ಮಾಡುವುದೆಂದರೆ ನನಗಿಷ್ಟ: ರಂಜನಿ ರಾಘವನ್‌

ಅವಿಸ್ಮರಣೀಯ ಅನುಭವ ನೀಡಿದ ಮಾಸೈ ಮರಾ ; ರಮೇಶ್ ಅರವಿಂದ್

Read Next

ಅವಿಸ್ಮರಣೀಯ ಅನುಭವ ನೀಡಿದ ಮಾಸೈ ಮರಾ ; ರಮೇಶ್ ಅರವಿಂದ್