Sunday, May 17, 2026
Sunday, May 17, 2026

ಬೇಸಿಗೆಯಲ್ಲಿ ವಿಮಾನ ಟಿಕೆಟ್ ದರ ದುಬಾರಿ: ಇಲ್ಲಿದೆ ಮಾಹಿತಿ

ಬೇಸಿಗೆ ಕಾಲದಲ್ಲಿ ಸಾಮಾನ್ಯವಾಗಿ ವಿಮಾನ qikeqf ದರಗಳು ಗಗನಕ್ಕೇರಿರುತ್ತವೆ. ಅದಕ್ಕೆ ಕಾರಣವಾದರೂ ಏನು? ಎಂಬ ಪ್ರಶ್ನೆ ಸಹಜವಾಗಿ ಎಲ್ಲರಲ್ಲೂ ಮೂಡುತ್ತದೆ. ಅದರ ಕುರಿತಾದ ಮಾಹಿತಿ ಇಲ್ಲಿದೆ.

ಕಳೆದ ಒಂದಷ್ಟು ವಾರಗಳಿಂದ ವಿಮಾನ ಪ್ರಯಾಣ ದರವು ಗಗನಕ್ಕೇರುತ್ತಿರುವ ಬಗ್ಗೆ ಸಾಕಷ್ಟು ವರದಿಗಳು ಬಂದಿವೆ. ಉದಾಹರಣೆಗೆ, ಮುಂಬೈನಿಂದ ಬೆಂಗಳೂರಿಗೆ ತೆರಳುವ ವಿಮಾನ ದರವು ಬರೋಬ್ಬರಿ ಶೇಕಡಾ 530 ರಷ್ಟು ಏರಿಕೆಯಾಗಿದೆ. ಮೆಟ್ರೋ ಇಲ್ಲದ ಮಾರ್ಗಗಳಲ್ಲಿಯೂ ಸಹ ವಿಮಾನ ದರಗಳು ಹೆಚ್ಚಾಗುತ್ತಿವೆ ಎಂದು ವರದಿಯಾಗಿದೆ. ಪ್ರವಾಸದ ಸೀಸನ್‌ಗೆ ಹೋಲಿಸಿದರೆ ಅಹಮದಾಬಾದ್‌ನಿಂದ ಡೆಹ್ರಾಡೂನ್‌ಗೆ ಹೋಗುವ ವಿಮಾನ‌‌ ಟಿಕೆಟ್ ದರಗಳು ಕೂಡ ಶೇಕಡಾ 45 ರಷ್ಟು ಏರಿಕೆಯಾಗಿದೆ.

ದಿಢೀರ್‌ ಹೆಚ್ಚಳವೇಕೆ?
ಬೇಸಿಗೆ ರಜೆಯಲ್ಲಿ ಪ್ರವಾಸದ ಬೇಡಿಕೆ ಹೆಚ್ಚಾಗಿರುವುದರಿಂದ ವಿಮಾನ ಟಿಕೆಟ್ ದರವು ದುಬಾರಿಯಾಗಿದೆ ಎಂಬ ಮಾಹಿತಿಯಿದೆ. ಇನ್ನು ಭಾರತ ಮತ್ತು ಪಾಕಿಸ್ತಾನ ನಡುವಿನ ಸಂಬಂಧವು ತೀರಾ ಹದಗೆಟ್ಟಿರುವುದರಿಂದ ಆಮದು ಮತ್ತು ರಫ್ತಿನಲ್ಲಿ ಹಲವಾರು ಸವಾಲುಗಳು ಎದುರಾಗಿವೆ.ಈ ಕಾರಣಗಳಿಂದ ವಿಮಾನ ಪ್ರಯಾಣ ದರ ಏರಿಕೆಯಾಗಿರಬಹುದು. ಅಷ್ಟೇ ಅಲ್ಲದೆ ಇಂಧನ ದರವೂ ಹೆಚ್ಚಾಗಿರುವುದರಿಂದ ಪ್ರಯಾಣದ ದರವನ್ನು ಏರಿಸಲಾಗಿದೆ.

ಬಹುಮುಖ್ಯವಾಗಿ ಬೇಸಿಗೆ ರಜೆಯಾದ ಕಾರಣ ಎಲ್ಲರೂ ಪ್ರವಾಸವನ್ನು ಕೈಗೊಂಡಿದ್ದಾರೆ. ಸಾಮಾನ್ಯವಾಗಿ ಬೇಸಿಗೆಕಾಲದಲ್ಲಿ ಪ್ರವಾಸಿಗರ ಸಂಖ್ಯೆ ಹೆಚ್ಚಿರುತ್ತದೆ. ಹಾಗಾಗಿ ಪ್ರಯಾಣದ ಬೇಡಿಕೆ ಹೆಚ್ಚಾಗಿದೆ. ಆದರೆ ಸೀಮಿತ ವಿಮಾನಗಳ ಸೌಲಭ್ಯವಿದ್ದು ಬೇಡಿಕೆಯನ್ನು ಪೂರೈಸುವಲ್ಲಿ ವಿಮಾನಯಾನವು ಹೈರಾಣಾಗಿದೆ. ಬೇಸಿಗೆ ತಿಂಗಳಲ್ಲಿ ಅಂತಾರಾಷ್ಟ್ರೀಯ ಪ್ರಸಿದ್ಧ ತಾಣಗಳಿಗೆ ಪ್ರವಾಸಿಗರು ಹೋಗುತ್ತಾರೆ. ಅದನ್ನು ತಪ್ಪಿಸಲು ಸಾಧ್ಯವಿಲ್ಲ. ಹಾಗಾಗಿ ವಿಮಾನ ಟಿಕೆಟ್ ದರವನ್ನು ಏರಿಸಲಾಗಿದೆ. ಅಷ್ಟಾಗಿಯೂ ಪ್ರಯಾಣಿಕರು ವಿಮಾನದಲ್ಲಿ ಪ್ರಯಾಣ ಬೆಳೆಸುತ್ತಿದ್ದಾರೆ.

Deekshith Nair

Deekshith Nair

Travel blogger and adventurer passionate about exploring new cultures and sharing travel experiences.

ವ್ಹಾವ್..ವ್ಹಾವ್..ಗೋವಾ!

Read Previous

ವ್ಹಾವ್..ವ್ಹಾವ್..ಗೋವಾ!

ಮಾರಿಷಸ್‌ ಎಂಬ ಸ್ವರ್ಗಸೀಮೆ!

Read Next

ಮಾರಿಷಸ್‌ ಎಂಬ ಸ್ವರ್ಗಸೀಮೆ!