Tuesday, April 7, 2026
Tuesday, April 7, 2026

ನಮ್ಮೊಳಗಿನ ನಂಬಿಕೆಯ ಪಯಣ

ಮನೆಯೊಳಗೆ ನಾವೆಲ್ಲಾ ಕ್ಷಣಕ್ಷಣಕ್ಕೂ ಕನೆಕ್ಟೆಡ್‌ ಆಗಿರ್ತೀವಿ. ಒಳಗೆ ವೈಫೈ, ಹೊರಬಂದರೂ 5ಜಿ, ಒಂದು ಕ್ಷಣ ಇದೆಲ್ಲಾ ತಪ್ಪಿದರೂ ನಾವೆಲ್ಲಾ enexplained ಹಪಹಪಿಯಲ್ಲಿ ಬೆಂದುಬಿಡುತ್ತೇವೆ. ವಿಮಾನ ಲ್ಯಾಂಡ್‌ ಆದ ತಕ್ಷಣ ನಮ್ಮ ಫೋನ್‌ ಆನ್‌ ಮಾಡುವುದಕ್ಕೇ ಕಾಯುತ್ತಿರುತ್ತೇವೆ. ಆದರೆ ಟ್ರಾವೆಲ್‌ ಅಂದಾಗಲೂ ಅದು ಬೇಡ. ಏಕೆಂದರೆ ಅದು ನಮ್ಮನ್ನು ನಾವು ಡಿಸ್ಕನೆಕ್ಟ್‌ ಮಾಡಿಕೊಳ್ಳುವ ಒಂದು ದಾರಿ‌ಯೂ ಹೌದು, ನಮ್ಮೊಳಗೆ ನಮ್ಮನ್ನು ಕಂಡುಕೊಳ್ಳುವ ದಾರಿಯೂ ಹೌದು.

- ಬಡೆಕ್ಕಿಲ ಪ್ರದೀಪ

ನಮ್ಮೊಳಗಿನ ನಂಬಿಕೆಯ ನಾವಿಕ ಎಲ್ಲಿ ನಮ್ಮನ್ನು ಕರೆದೊಯ್ಯುತ್ತಾನೋ, ನಮ್ಮ ಬಾಳ ಪಯಣವೂ ಅದೇ ಹಾದಿಯಲ್ಲಿ ಸಾಗುತ್ತದೆ. ಅದೇ ಕಾರಣಕ್ಕೆ ನಮ್ಮ ಜೀವನದಲ್ಲಿ ದೇವರು, ನಂಬಿಕೆ ಇತ್ಯಾದಿಗಳಿಗೆ ಅಷ್ಟೊಂದು ಮಹತ್ವ.

ಇದೀಗ ನಮ್ಮ ಮುಖ್ಯಭೂಮಿಕೆಗೆ ಬರೋಣ. ನಂಬಿಕೆಯ ಪಯಣ, ಅಥವಾ, ನಂಬಿಕೆಯೇ ಪಯಣದ ಮೂಲಾಧಾರವೂ ಹೌದು ಅನ್ನೋಣವೇ? ಈ ನಂಬಿಕೆ ನಮ್ಮನ್ನು ನೆಮ್ಮದಿಯ ಅಂತರಾಳದೊಳಗೆ ಕೊಂಡೊಯ್ಯಲೂಬಹುದು. ಅಥವಾ ಅದೇ ನಂಬಿಕೆಯ ಭಾರ ನಮ್ಮನ್ನು ನಾವಾಗಿಸಿಕೊಳ್ಳುವಲ್ಲಿ, ಆ ನೆಮ್ಮದಿಯ ಹಾದಿಯಲ್ಲಿ ಸಾಗುವುದರಿಂದ ತಡೆಯಾಗಿಸಿಯೂ ನಿಲ್ಲಬಹುದು. ಹಾಗಾಗಿ ಒಂದು ಟ್ರಿಪ್‌ ಹೋಗುವಾಗ ನಮ್ಮ ಬ್ಯಾಗ್‌ ತುಂಬಾ ಬಟ್ಟೆಬರೆಯನ್ನು ಹೇಗೆ ತುಂಬಿಕೊಳ್ಳುತ್ತೇವೋ, ಅದೇ ರೀತಿ ನಮ್ಮ ನಂಬಿಕೆಯ ಬ್ಯಾಗ್‌ ತುಂಬಾ ತುಂಬಿದ್ದರೂ ಅದು ಕಷ್ಟ ಆಗಲೂಬಹುದು.

ಠೀವಿಯಿಂದ ಇವಿ ಟ್ರಾವೆಲ್‌ ಮಾಡೋದು ಹೇಗೆ?

ಚನ್ನಪಟ್ಟಣದ ಚಂದದ ಗೊಂಬೆಗಳನ್ನು ಹೊತ್ತು ತರುವುದು ನಿಮ್ಮ ಟ್ರಿಪ್‌ನ ಮುಖ್ಯ ಫಲವಾಗಿದ್ದರೆ ಅದು ಓಕೆ. ಆದರೆ ಅದೇ ನಿಮ್ಮ ನಂಬಿಕೆಯ ಬ್ಯಾಲೆನ್ಸ್ ಅನ್ನು ನೀವು ರಿಫ್ರೆಷ್‌ ಮಾಡಿಕೊಳ್ಳುವುದರ ಮೂಲಕ, ನಿಮ್ಮೊಳಗೇ ನೀವು ಇನ್ನೂ ಹೆಚ್ಚಿನ ಭರವಸೆಯನ್ನು ತುಂಬಿಕೊಂಡು ಬಂದರೆ ಆ ಪ್ರಯಾಣಕ್ಕೆ ಇನ್ನಷ್ಟು ಅರ್ಥ ಬರುವುದು. ಇದನ್ನು ನೀವು ಎಷ್ಟು ನಂಬುತ್ತೀರೋ ಇಲ್ವೋ ಗೊತ್ತಿಲ್ಲ. ನೀವನ್ನಬಹುದು, ಟ್ರಾವೆಲ್‌ ಮಾಡುವುದು ಎಂಜಾಯ್‌ ಮಾಡುವುದಕ್ಕಾಗಿ ಅಲ್ವಾ ಅಂತ. ಒಂದಷ್ಟು ರಿಲ್ಯಾಕ್ಸ್‌ ಆಗೋದಕ್ಕೆ ಅಲ್ವಾ ಅಂತ. ಆದರೆ ಅದು ಮಾತ್ರವೇ ಅದರ outcome ಆಗಬೇಕಿಲ್ಲ ಅಲ್ವಾ?

ಫ್ರೆಂಡ್ಸ್‌ ಅಥವಾ ಫ್ಯಾಮಿಲಿ, ಇಲ್ಲ ನಿಮ್ಮ ಪಾರ್ಟ್ನರ್‌ ಜತೆ ಒಂದು ಲಾಂಗ್‌ ವೆಕೇಶನ್‌ ಹೋಗಿ ಬಂದರೆ ಅದರಿಂದ ನಿಮಗೆ ಸಿಗುವ ಒಂದು ರಿಫ್ರೆಷಿಂಗ್‌ ಅನುಭವ ಇದ್ಯಲ್ಲಾ ಅದು ಕೊಡುವ ಬಹುದೊಡ್ಡ ಉಪ ಉತ್ಪನ್ನವೇ ನಿಮ್ಮ ನಂಬಿಕೆಯ ಮೇಲೆ ನಿಮಗೆ ಇನ್ನಷ್ಟು ವಿಶ್ವಾಸ ಮೂಡುವುದು ಅಂದರೆ ನೀವದನ್ನು ಒಪ್ಪಿಕೊಳ್ಳಲೇಬೇಕು. ಒಪ್ಪಿಕೊಳ್ಳದಿದ್ದರೂ, ಇನ್ನೊಮ್ಮೆ ನೀವು ಪ್ರಯಾಣಕ್ಕೆ ಹೋಗಿ ಬಂದಾಗ, ಒಂದಿಷ್ಟು ಗಿಫ್ಟ್‌ಗಳನ್ನೋ, ನೆನಪಿಗಾಗಿ ಕೆಲವು ಐಟಂಗಳನ್ನೋ ತನ್ನಿ. ಜತೆಗೆ, ನಿಮ್ಮನ್ನು ನೀವು ಅರಿತುಕೊಳ್ಳುವುದಕ್ಕೂ ಪ್ರಯತ್ನಮಾಡಿ. ನಂಬಿಕೆ ಸ್ವಲ್ಪ ಹಾಗೇ, ಅದು ಗೊತ್ತಿಲ್ಲದ ರೀತಿಯಲ್ಲಿ ನಮ್ಮೊಳಗೇ ಬೆಳೆದುಕೊಂಡುಬಿಟ್ಟಿರುತ್ತದೆ.

ನಮ್ಮೊಳಗಿನ ಪ್ರಯಾಣ ಸುಲಭನಾ?

ನಿಜ ಹೇಳ್ಬೇಕಂದ್ರೆ ನಮಗೆ ಒಂದು ಊರಿಗೆ ಹೋಗೋ ಟಿಕೆಟ್‌ ಖರೀದಿ ಮಾಡಿದಷ್ಟು ಸುಲಭದಲ್ಲಿ ನಮ್ಮೊಳಗೇ ಹೋಗೋದು ಕಷ್ಟಕಷ್ಟ. ಇದಕ್ಕೆ ಸುಂದರ ಉದಾಹರಣೆ, ನಾನು ಒಂದೊಮ್ಮೆ ಓದಿದ್ದ ಪೌಲೋ ಕೋಯ್ಲೋ ಅವರ ಆಲ್ಕೆಮಿಸ್ಟ್‌ ಅನ್ನುವ ಸುಂದರ ಕಾದಂಬರಿ. ನೀವು ಅದನ್ನು ಓದಿಯೇ ನಿಮ್ಮೊಳಗಿನ ಪ್ರಯಾಣದ ಅನಿವಾರ್ಯತೆಯನ್ನು ತಿಳಿಯಬೇಕಿಲ್ಲ. ನೀವೊಮ್ಮೆ, ಒಂದು ಕ್ಷಣ, ನಿಮ್ಮ ಮನೆಯೊಳಗೇ ಏಕಾಂತದಲ್ಲಿ ಕೂತು ನೋಡಿದರೆ ಸಾಕು.

New Project (61)

ಮನೆಯೊಳಗೆ ನಾವೆಲ್ಲಾ ಕ್ಷಣಕ್ಷಣಕ್ಕೂ ಕನೆಕ್ಟೆಡ್‌ ಆಗಿರ್ತೀವಿ. ಒಳಗೆ ವೈಫೈ, ಹೊರಬಂದರೂ 5ಜಿ, ಒಂದು ಕ್ಷಣ ಇದೆಲ್ಲಾ ತಪ್ಪಿದರೂ ನಾವೆಲ್ಲಾ enexplained ಹಪಹಪಿಯಲ್ಲಿ ಬೆಂದುಬಿಡುತ್ತೇವೆ. ವಿಮಾನ ಲ್ಯಾಂಡ್‌ ಆದ ತಕ್ಷಣ ನಮ್ಮ ಫೋನ್‌ ಆನ್‌ ಮಾಡುವುದಕ್ಕೇ ಕಾಯುತ್ತಿರುತ್ತೇವೆ. ಆದರೆ ಟ್ರಾವೆಲ್‌ ಅಂದಾಗಲೂ ಅದು ಬೇಡ ಅನ್ನುವ ವಿಚಾರವಾಗಿ ನಾವೀಗಾಗಲೇ ಹಿಂದಿನ ವಾರಗಳಲ್ಲಿ ಮಾತನಾಡಿದ್ದೇವೆ. ಅದು ನಮ್ಮನ್ನು ನಾವು ಡಿಸ್ಕನೆಕ್ಟ್‌ ಮಾಡಿಕೊಳ್ಳುವ ಒಂದು ದಾರಿ‌ಯೂ ಹೌದು, ನಮ್ಮೊಳಗೆ ನಮ್ಮನ್ನು ಕಂಡುಕೊಳ್ಳುವ ದಾರಿಯೂ ಹೌದು.

ನೀವೊಬ್ಬ ಐಟಿ ಕಂಪೆನಿಯ ಟೀಂ ಲೀಡ್‌ ಆಗಿರಬಹುದು, ಮನೆಯನ್ನು ನಡೆಸುವ ಯಜಮಾನರಾಗಿರಬಹುದು, ಸ್ಕೂಲ್‌ನಲ್ಲಿ ಮಕ್ಕಳಿಗೆ ಕಲಿಸುವ ಟೀಚರ್‌ ಆಗಿರಬಹುದು, ನಮ್ಮ ಮನೆ-ಮನದ ಸುತ್ತ ನಾವು ಹೀಗೊಂದು ಪರಿಧಿಯನ್ನು ಹಾಕಿ ಅದರ ಸುತ್ತಲೇ ಬದುಕುತ್ತಿರುವುದು ನಮಗೆ ಸಾಮಾನ್ಯವೆನಿಸಬಹುದು. ಆದರೆ ನಮ್ಮ ನಂಬುಗೆಯ ಅರಸಿ ನಡೆವ ಪ್ರಯಾಣ ನಮ್ಮ ಈ ಎಲ್ಲಾ ಟ್ಯಾಗ್‌ಗಳನ್ನು ಕಳಚಿ ಹೋಗುವ ರೀತಿಯನ್ನು ಕಲಿಸಿಕೊಡಬೇಕು.

ಯಾವುದೋ ಜಾಗಕ್ಕೆ ಹೋದಾಗ, ನಮ್‌ ಊರಿನ ಸ್ಟೈಲ್‌ನಲ್ಲಿ ʼನಾನ್ಯಾರು ಅಂತ ನಿನಗ್ಗೊತ್ತಾʼ ಅನ್ನುವ ಹಾಗಿಲ್ಲ. ಆದರೂ ಯಾವುದೋ ದೇವಸ್ಥಾನದ ಕ್ಯೂನಲ್ಲಿ ನಿಲ್ಲುವ ಬದಲು, ಯಾರದೋ ಇನ್ಫ್ಲುಯೆನ್ಸ್‌ನಲ್ಲಿ ಬೇಗ ಹೋಗಿ ದರ್ಶನ ಮಾಡಲು ಪಡುವ ಪ್ರಯತ್ನವೂ ನಡೆಯುತ್ತಲೇ ಇರುತ್ತದೆ.

In fact, ಈ ರೀತಿಯ ಟ್ರಿಪ್‌ಗಳಲ್ಲಿ ನಾವ್ಯಾರು ಅನ್ನುವುದರ ಇನ್ನೊಂದು ದೃಷ್ಟಿಕೋನದ ಹುಡುಕಾಟದಲ್ಲಿ ಸಾಗೋಣ. ಅದಕ್ಕೇ ಅದನ್ನು ನಮ್ಮ ಪಯಣದಲ್ಲಿ ಕಳೆದುಹೋಗುವುದು ಅನ್ನುವ ಮಾತು ಆಗಾಗ ಬರುತ್ತಿರುತ್ತದೆ.

ಟ್ರಾವೆಲ್‌ ಮೇಲೂ ನಂಬಿಕೆಯ ಪ್ರಭಾವ

ನಮ್ಮೊಳಗಿನ ನಂಬಿಕೆಯ ಜತೆ, ನಾವು ಹೋಗುವ ಸ್ಥಳದ ಮೇಲೆ ನಾವಿಡುವ ನಂಬಿಕೆಯೂ ಮುಖ್ಯ. ಯಾವುದೋ ತೀರ್ಥಕ್ಷೇತ್ರಕ್ಕೆ ಹೋಗುವಾಗ ನಮಗೆ ಆ ಕ್ಷೇತ್ರದ ಮೇಲಿನ ನಂಬಿಕೆ ಮುಖ್ಯವಾಗುತ್ತದೆ, ಹಾಗೇ ಯಾವುದೋ ಅಸುರಕ್ಷಿತ ಎನಿಸಿಕೊಳ್ಳುವ ಸ್ಥಳದ ಪ್ರಯಾಣಕ್ಕೆ ಹೊರಟರೆ, ಆ ಸ್ಥಳಕ್ಕೆ ಹೋದಾಗ ಆ ಒಂದು ನಂಬಿಕೆಯೇ ನಮ್ಮನ್ನು ಕಟ್ಟಿಹಾಕಲೂಬಹುದು. ಅದೆಷ್ಟೇ ಸುಂದರ ಅನುಭೂತಿಯನ್ನು ಆ ಜಾಗ ನಮಗೆ ನೀಡಿದರೂ, ನಮ್ಮ ಮನಸು ನಾವು ಕಟ್ಟಿಕೊಂಡು ಹೋದ ನಂಬಿಕೆಯನ್ನೇ ಅಂಟಿಕೊಂಡಿರುತ್ತದೆ. ಅಲ್ಲಿ ಸಿಕ್ಕ ಆಪ್ತ ಅನುಭವವನ್ನೂ ನಾವು ಸಂಶಯದ ಫಿಲ್ಟರ್‌ ಹಾಕಿಯೇ ನೋಡುತ್ತಿರುತ್ತೇವೆ.

ನಮ್ಮ ಪ್ರಯಾಣ ನಮಗೆ ಈ ಮೂರನ್ನು ನೀಡಬೇಕು.

ನಂಬಿಕೆ/ಶ್ರದ್ಧೆ: ನಮ್ಮ ಪಯಣ ನಮಗೆ ನಮ್ಮೊಳಗಿನ ನಂಬಿಕೆಯನ್ನು ಗಟ್ಟಿಗೊಳಿಸುವ ಹಾದಿಯಾಗಲಿ.

ತಾಳ್ಮೆ: ಕ್ರಮಿಸುವ ಪ್ರತಿ ಹಾದಿಯೂ ತಾಳ್ಮೆಯನ್ನು ಕಲಿಸಲಿ.

ವಿವೇಕ: ನಾವು ಹೋಗುವ ಟ್ರಿಪ್‌ ನಮಗೆ ಐಷಾರಾಮಿತನವನ್ನು ಕೊಡಲಿ, ಅದಕ್ಕಿಂತ ಮಿಗಿಲಾದ್ದನ್ನೂ ನೀಡಲು ಅದಕ್ಕೆ ಸಾಧ್ಯವಿರುವುದು ತೆರೆದ ಮನಸಿನಿಂದ ಸಾಗಿದಾಗ ಎನ್ನುವ ವಿವೇಕ ನಮಗೆಲ್ಲ ಬರಲಿ. ಒಟ್ಟಿನಲ್ಲಿ ನಮ್ಮ ನಂಬಿಕೆಗಳು ನಮಗೆ ದಾರಿ ತೋರಿಸಬೇಕೇ ಹೊರತು ನಾವು ಅದು ನಡೆಸಿದ ದಾರಿಯಲ್ಲಿ ಹೋಗಿ ನಮ್ಮೊಳಗಿನ ನಂಬಿಕೆಯನ್ನು ಕಳೆದುಕೊಳ್ಳಬಾರದು.

ಪಂಚ್‌-ರ್‌ ಶಾಪ್‌

ತುಂಬಾ ಮಂದಿ ತಮ್ಮನ್ನು ತಾವು ಅರಿತುಕೊಳ್ಳುವ ಪ್ರಯತ್ನದಲ್ಲೇ ಟ್ರಾವೆಲ್‌ ಮಾಡ್ತಿರ್ತಾರೆ. ಆದರೆ ಕೆಲವೊಮ್ಮೆ ತಪ್ಪು ಮ್ಯಾಪ್‌ ಹಿಡ್ಕೊಂಡು ಎಲ್ಲೆಲ್ಲೋ ಓಡಾಡ್ತಿರ್ತಾರೆ ಅನ್ನುವುದೂ ಅವರಿಗೆ ಗೊತ್ತಿರೋದಿಲ್ಲ!

Admin

Admin

Pravasi Prapancha – A pioneering initiative led by Vishweshwar Bhat, the esteemed journalist and head of the Vishwavani Group. It is the first and only travel-focused publication in Kannada journalism, dedicated exclusively to news, information, and travel narratives about various destinations. The digital media counterpart of this venture is Pravasi Prapancha Digital Channel, which brings travel-related news from across the state, country, and world. It features fascinating insights, traveler experiences, interviews related to travel, entertainment segments, and much more. Editor-in-Chief: Shri Vishweshwar Bhat

ವ್ಹಾವ್..ವ್ಹಾವ್..ಗೋವಾ!

Read Previous

ವ್ಹಾವ್..ವ್ಹಾವ್..ಗೋವಾ!

ಮಾರಿಷಸ್‌ ಎಂಬ ಸ್ವರ್ಗಸೀಮೆ!

Read Next

ಮಾರಿಷಸ್‌ ಎಂಬ ಸ್ವರ್ಗಸೀಮೆ!