Saturday, February 14, 2026
Saturday, February 14, 2026

ಇದು ಚೋರ ಬಜಾರು!

ಫೋರ್ಬ್ಸ್ ಅಡ್ವೈಸರ್ ಇತ್ತೀಚೆಗೆ ಒಂದು ಸಮೀಕ್ಷೆ ನಡೆಸಿ ವಿಸ್ತೃತ ವರದಿ ತಯಾರು ಮಾಡಿತ್ತು. ಸುರಕ್ಷತೆ ಮತ್ತು ಅಪಾಯದ ಅಂಶಗಳನ್ನು ಆಧರಿಸಿ ಹತ್ತು ಅಪಾಯಕಾರಿ ನಗರಗಳನ್ನು ಹೆಸರಿಸಿತ್ತು. ಜತೆಗೆ ಅತ್ಯಂತ ಸುರಕ್ಷಿತವಾದ ತಾಣಗಳ ಪಟ್ಟಿಯನ್ನೂ ನೀಡಿತ್ತು.

ಇತ್ತೀಚಿನ ದಿನಗಳಲ್ಲಿ ಪ್ರವಾಸಿ ವ್ಲಾಗರ್​ಗಳ ಸಂಖ್ಯೆ ಹೆಚ್ಚುತ್ತಿದೆ. ಹೊರಗೆ ಹೋಗಿ ಹೊಸ ಹೊಸ ಜಗತ್ತನ್ನು ಅನ್ವೇಷಿಸುವ ಮೂಲಕ ಅದರಿಂದಲೇ ಜೀವನೋಪಾಯಕ್ಕಾಗಿ ಹಣ ಗಳಿಸುತ್ತಿರುವ ಅನೇಕ ಜನರನ್ನು ಕಾಣಬಹುದು. ಆದರೆ ಪ್ರಯಾಣವು ಅಂದುಕೊಳ್ಳುವಷ್ಟು ಸುಲಭವಲ್ಲ. ಕೆಲವೊಂದು ತಾಣಗಳು ಸುಂದರವಾಗಿದ್ದರೂ ಅಪಾಯಕಾರಿಯೂ ಆಗಿರುತ್ತವೆ!

ಫೋರ್ಬ್ಸ್ ಅಡ್ವೈಸರ್ ಇತ್ತೀಚೆಗೆ ಒಂದು ಸಮೀಕ್ಷೆ ನಡೆಸಿ ವಿಸ್ತೃತ ವರದಿ ತಯಾರು ಮಾಡಿತ್ತು. ಸುರಕ್ಷತೆ ಮತ್ತು ಅಪಾಯದ ಅಂಶಗಳನ್ನು ಆಧರಿಸಿ ಹತ್ತು ಅಪಾಯಕಾರಿ ನಗರಗಳನ್ನು ಹೆಸರಿಸಿತ್ತು. ಜತೆಗೆ ಅತ್ಯಂತ ಸುರಕ್ಷಿತವಾದ ತಾಣಗಳ ಪಟ್ಟಿಯನ್ನೂ ನೀಡಿತ್ತು. ಅದರ ಪ್ರಕಾರವಾಗಿ ಪ್ರವಾಸಿಗರಿಗೆ ಹೋಗಲು ಸುರಕ್ಷಿತವಾಗಿಲ್ಲದ 10 ನಗರಗಳ ಬಗ್ಗೆ ಮಾಹಿತಿಯನ್ನು ಇಲ್ಲಿ ನೀಡಿದ್ದೇವೆ. ವಿಶೇಷವಾಗಿ ನೀವು ಒಂಟಿಯಾಗಿ ಪ್ರಯಾಣಿಸುತ್ತಿದ್ದರೆ, ಈ ನಗರಗಳಿಂದ ಅಂತರ ಕಾಯ್ದುಕೊಳ್ಳುವುದು ಸೂಕ್ತ.

ಇದನ್ನೂ ಓದಿ: ಅನಾರೋಗ್ಯಕ್ಕೆ ಪ್ರವಾಸವೇ ಮದ್ದು!

ವೆನೆಜುವೆಲಾದ ಕ್ಯಾರಕಾಸ್ ನಗರ

ದಕ್ಷಿಣ ಅಮೆರಿಕದ ಉತ್ತರ ಭಾಗದಲ್ಲಿರುವ ವೆನೆಜುವೆಲಾದ ಒಂದು ನಗರವು ಅತ್ಯಂತ ಅಪಾಯಕಾರಿ ತಾಣಗಳಲ್ಲಿ ಮೊದಲ ಸ್ಥಾನವನ್ನು ಪಡೆದುಕೊಂಡಿದೆ. ಇಲ್ಲಿನ ಕ್ಯಾರಕಾಸ್ ನಗರಕ್ಕಿರುವ ಮತ್ತೊಂದು ಹೆಸರೇ 'ದರೋಡೆಕೋರರ ನಗರ'. ಇಲ್ಲಿ ಪ್ರತಿದಿನ ಸಾಕಷ್ಟು ಅಪರಾಧಗಳು ನಡೆಯುತ್ತವೆ. ವಿಶೇಷವಾಗಿ ನೀವು ಪ್ರವಾಸಿಗರಾಗಿದ್ದರೆ ನಿಮ್ಮನ್ನು ಇಲ್ಲಿ ಸುಲಭವಾಗಿ ನಂಬಿಸಿ ದರೋಡೆ ಮಾಡಿಕೊಂಡು ಪರಾರಿಯಾಗುವವರೇ ಹೆಚ್ಚು.

ಪಾಕಿಸ್ತಾನದ ಕರಾಚಿ

ಭಾರತದ ನೆರೆಯ ರಾಷ್ಟ್ರ ಪಾಕಿಸ್ತಾನ ಕರಾಚಿ ನಗರ ಅತ್ಯಂತ ಅಪಾಯಕಾರಿ ತಾಣಗಳಲ್ಲಿ ಎರಡನೇ ಸ್ಥಾನದಲ್ಲಿದೆ. ವಿಶೇಷವಾಗಿ ಅಪರಾಧ, ಹಿಂಸಾಚಾರ, ಭಯೋತ್ಪಾದಕ ಬೆದರಿಕೆಗಳು ಮತ್ತು ನೈಸರ್ಗಿಕ ವಿಕೋಪಗಳಂಥ ಅಪಾಯಗಳಿಂದಾಗಿ, ಕರಾಚಿ ಪ್ರವಾಸಿಗರಿಗೆ ಅಪಾಯಕಾರಿ ಎಂದು ಪರಿಗಣಿಸಲಾಗಿದೆ. ಒಂದೊಮ್ಮೆ ನೀವು ಪಾಕಿಸ್ತಾನಕ್ಕೆ ಭೇಟಿ ನೀಡಿದರೂ ಬಯಸಿದರೆ, ಕರಾಚಿಯಿಂದ ದೂರವಿರುವುದು ಸೂಕ್ತ.

Untitled design (62)

ಇನ್ನುಳಿದ ಅಪಾಯಕಾರಿ ತಾಣಗಳು

ಬರ್ಮಾದ ಯಾಂಗೂನ್ ನಗರವು ಈ ಪಟ್ಟಿಯಲ್ಲಿ ಮೂರನೇ ಸ್ಥಾನದಲ್ಲಿದೆ. ಇಲ್ಲಿಯೂ ಕಳೆದ ಕೆಲವು ವರ್ಷಗಳಿಂದ ಪ್ರವಾಸಿಗರ ವಿರುದ್ಧದ ಅಪರಾಧ ಪ್ರಕರಣಗಳು ಹೆಚ್ಚಿವೆ. ನೈಜೀರಿಯಾದ ಲಾಗೋಸ್ ನಗರವೂ ​​ಈ ಪಟ್ಟಿಯಲ್ಲಿದೆ. ಈ ನಗರದಲ್ಲಿ ದರೋಡೆ, ಕಳ್ಳತನ ಮತ್ತು ವಂಚನೆ ಸಾಮಾನ್ಯವಾಗಿದೆ. ಪ್ರವಾಸಿಗರನ್ನು ಅಲ್ಲಿಯವರು ಬೇಗನೇ ಕಂಡು ಹಿಡಿಯುತ್ತಾರೆ. ಆದ್ದರಿಂದ ಈ ನಗರಗಳು ಪ್ರವಾಸಿಗರಿಗೆ ಸುರಕ್ಷಿತವಲ್ಲ. ವಿಶೇಷವಾಗಿ ನೀವು ಒಂಟಿಯಾಗಿ ಪ್ರಯಾಣಿಸುತ್ತಿದ್ದರೆ, ಈ ನಗರಗಳಿಂದ ದೂರವಿರಿ. ಇದರ ನಂತರ ಮನಿಲಾ, ಢಾಕಾ, ಬೊಗೋಟಾ, ಕೈರೋ, ಮೆಕ್ಸಿಕೊ ನಗರ ಮತ್ತು ಈಕ್ವೆಡಾರ್‌ನ ಕ್ವಿಟೊ ನಗರಗಳು ಬರುತ್ತವೆ. ನಿಮ್ಮ ಪ್ರವಾಸದ ಸಮಯದಲ್ಲಿ ಈ ನಗರಗಳಿಂದ ಅಂತರ ಕಾಯ್ದುಕೊಳ್ಳುವುದು ತುಂಬಾ ಉತ್ತಮ.

ಸುರಕ್ಷಿತ ನಗರಗಳು ಯಾವುವು?

ಫೋರ್ಬ್ಸ್ ಅಡ್ವೈಸರ್ ವರದಿಯ ಪ್ರಕಾರ ಮೊದಲ ಸ್ಥಾನವನ್ನು ಸಿಂಗಾಪುರ ಪಡೆದುಕೊಂಡಿದೆ. ಎರಡನೆಯ ಹೆಸರು ಜಪಾನ್‌ನ ಟೋಕಿಯೊ. ಮೂರನೆಯದು ಕೆನಡಾದ ಟೊರೊಂಟೊ. ಇದರ ನಂತರ ಆಸ್ಟ್ರೇಲಿಯಾದ ಸಿಡ್ನಿ, ನಂತರ ಸ್ವಿಟ್ಜರ್‌ಲ್ಯಾಂಡ್‌ನ ಜ್ಯೂರಿಚ್ ಪಟ್ಟಿಯಲ್ಲಿದೆ. ಇದರ ನಂತರ ಡೆನ್ಮಾರ್ಕ್‌ನ ಕೋಪನ್‌ಹೇಗನ್, ದಕ್ಷಿಣ ಕೊರಿಯಾದ ಸಿಯೋಲ್, ಜಪಾನ್‌ನ ಒಸಾಕಾ, ಆಸ್ಟ್ರೇಲಿಯಾದ ಮೆಲ್ಬೋರ್ನ್ ಮತ್ತು ನೆದರ್‌ಲ್ಯಾಂಡ್ಸ್‌ನ ಆಮ್ಸ್ಟರ್‌ಡ್ಯಾಮ್ ಕೂಡ ಸೇರಿವೆ. ಈ ನಗರಗಳು ಯಾವುದೇ ಪ್ರಯಾಣಿಕರಿಗೆ ಸುರಕ್ಷಿತವಾಗಿದೆ. ನೀವು ಇಲ್ಲಿ ಸುಲಭವಾಗಿ ಸುತ್ತಾಡಬಹುದು ಮತ್ತು ನೀವು ಬಯಸಿದಂತೆ ಇಲ್ಲಿ ನೀವು ಏಕಾಂಗಿಯಾಗಿ ಕೂಡ ಪ್ರಯಾಣಿಸಬಹುದು. ಭಾರತ ಈ ಎರಡೂ ಪಟ್ಟಿಯ ಟಾಪ್ ಟೆನ್ ನಲ್ಲಿ ಇಲ್ಲದಿರುವುದು ಗಮನಿಸಬೇಕಾದ ಅಂಶ.

ಸುರಕ್ಷತಾ ಸಿದ್ಧತೆ ಹೀಗಿರಲಿ

ಯಾವುದೇ ಪ್ರವಾಸವನ್ನು ಕೈಗೊಳ್ಳುವ ಮೊದಲು ಸಿದ್ಧತೆ ಅತ್ಯಂತ ಅಗತ್ಯ. ಪ್ರಯಾಣಕ್ಕೆ ತೆರಳುವ ಮುನ್ನ ನೀವು ಪ್ರವಾಸ ಹೋಗಬೇಕೆಂದಿರುವ ಸ್ಥಳದ ಅನ್ವೇಷಣೆ ಮಾಡಿ. ಸಾಧ್ಯವಾದರೆ ಅಲ್ಲಿಗೆ ಹೋಗಿ ಬಂದಿರುವ ನಿಮ್ಮ ಸ್ನೇಹಿತರಿದ್ದರೆ ಅವರಿಂದ ಮಾಹಿತಿಯನ್ನು ಪಡೆದುಕೊಂಡಿದೆ. ಸಾಕಷ್ಟು ಜಾಗಗಳಲ್ಲಿ ವಿದೇಶಿಗರೆಂದಾಕ್ಷಣ ಮೋಸ ಮಾಡುವವರೇ ಹೆಚ್ಚು. ಇನ್ನು, ತಿಳಿಯದ ಸ್ಥಳಕ್ಕೆ ಹೋದಂಥ ಸಂದರ್ಭದಲ್ಲಿ ಅನಗತ್ಯ ಗೊಂದಲ ಮಾಡಿಕೊಳ್ಳುವುದಕ್ಕಿಂತ ರಸ್ತೆ ವಿವರ ಪಡೆಯಲು ಸ್ಥಳೀಯರ ಸಹಾಯ ಪಡೆಯುವುದು ಕೂಡಾ ಉತ್ತಮ. ನಿಮ್ಮೊಂದಿಗೆ ತಂದ ನಗದು ಹಾಗೂ ಬೆಲೆ ಬಾಳುವ ವಸ್ತುಗಳನ್ನು ಜೋಪಾನವಾಗಿಡುವುದು ಅತ್ಯಂತ ಅಗತ್ಯ. ಏನೇ ಆದರೂ ಕೂಡ ಮೊಬೈಲ್ ಫೋನ್‌ಗಳನ್ನು ಚಾರ್ಜ್‌ ಮಾಡಿಟ್ಟುಕೊಳ್ಳಿ. ಪವರ್‌ ಬ್ಯಾಂಕ್ ಕೂಡಾ ನಿಮ್ಮ ಜೊತೆಗಿರಲಿ. ಕೆಲವೊಂದು ತಾಣಗಳು ನೋಡಲು ಸುಂದರವಾಗಿದ್ದರೂ ಅಷ್ಟೇ ಅಪಾಯಕಾರಿ ಎಂಬುದನ್ನು ನೆನಪಿನಲ್ಲಿಟ್ಟುಕೊಳ್ಳಿ.

Admin

Admin

Pravasi Prapancha – A pioneering initiative led by Vishweshwar Bhat, the esteemed journalist and head of the Vishwavani Group. It is the first and only travel-focused publication in Kannada journalism, dedicated exclusively to news, information, and travel narratives about various destinations. The digital media counterpart of this venture is Pravasi Prapancha Digital Channel, which brings travel-related news from across the state, country, and world. It features fascinating insights, traveler experiences, interviews related to travel, entertainment segments, and much more. Editor-in-Chief: Shri Vishweshwar Bhat

ವ್ಹಾವ್..ವ್ಹಾವ್..ಗೋವಾ!

Read Previous

ವ್ಹಾವ್..ವ್ಹಾವ್..ಗೋವಾ!

ಮಾರಿಷಸ್‌ ಎಂಬ ಸ್ವರ್ಗಸೀಮೆ!

Read Next

ಮಾರಿಷಸ್‌ ಎಂಬ ಸ್ವರ್ಗಸೀಮೆ!