Tuesday, June 17, 2025
Tuesday, June 17, 2025

ಯುರೋಪ್ ಪ್ರವಾಸ ಮಾಡುವುದಾದರೆ ಈ ಮೂರು ದೇಶಗಳಿಗೆ ತಪ್ಪದೇ ಹೋಗಿ!

ಯುರೋಪಿಗೆ ಮೊದಲ ಬಾರಿಗೆ ಪ್ರಯಾಣ ಬೆಳೆಸುವ ಪ್ರವಾಸಿಗರು ಇಟಲಿ ದೇಶಕ್ಕೆ ತಪ್ಪದೇ ಹೋಗಬೇಕು. ಇಟಲಿ ಪುಟ್ಟ ದೇಶವಾದರೂ ತನ್ನ ಪ್ರಾಕೃತಿಕ ಸೌಂದರ್ಯದಿಂದ ಜಗತ್ತಿನ ಜನರನ್ನು ಸೆಳೆಯುತ್ತದೆ. ವೆನಿಸ್ನ ನಯನ ಮನೋಹರವಾದ ಕಾಲುವೆಗಳು ಇಟಲಿ ಪ್ರವಾಸದ ಹೆಚ್ಚುಗಾರಿಕೆ.

ಯುರೋಪ್(Europe) ಪ್ರವಾಸಿ ಪ್ರಿಯರ ಅಚ್ಚುಮೆಚ್ಚಿನ ತಾಣ. ಯುರೋಪ್‌ ಅಕ್ಷರಶಃ ಸ್ವರ್ಗಸದೃಶ ದೇಶ. ಅಲ್ಲಿ ಮೈಮನ ತಣಿಸುವ ಹತ್ತಾರು ಅದ್ಭುತ ತಾಣಗಳಿವೆ. ಅಲ್ಲಿನ ಶ್ರೀಮಂತ ಸಂಸ್ಕೃತಿ ಮತ್ತು ಪರಂಪರೆ ಪ್ರವಾಸದ ಮೆರುಗನ್ನು ಹೆಚ್ಚಿಸುತ್ತದೆ. ಬಹುತೇಕರಿಗೆ ತಿಳಿದಿರುವಂತೆ ಯುರೋಪ್‌ನಲ್ಲಿ ಪ್ರವಾಸಿ ಆಕರ್ಷಣೆಯ ಸಾಕಷ್ಟು ದೇಶಗಳಿವೆ. ಆದರೆ ಈ ಮೂರು ದೇಶಗಳು ಜಗತ್ಪ್ರಸಿದ್ಧಿ ಪಡೆದಿವೆ. ಪ್ರವಾಸಿಗರ ದಂಡೇ ಆ ದೇಶಗಳಿಗೆ ಹೋಗುತ್ತದೆ. ಈ ದೇಶಗಳು ಬಿಟ್ಟನೆಂದರೂ ಬಿಡದ ಮಾಯೆ!
ಆ ಮೂರು ದೇಶಗಳು ಯಾವುವು? ಆ ದೇಶಗಳು ಪ್ರವಾಸಿಗರ ಕನಸಿನ ತಾಣವಾದದ್ದು ಹೇಗೆ? ಒಂದು ಸಣ್ಣ ಟ್ರಿಪ್‌ ಮುಗಿಸಿ ಬರೋಣ ಬನ್ನಿ..

ಇಟಲಿ

ಯುರೋಪ್‌ಗೆ ಮೊದಲ ಬಾರಿಗೆ ಪ್ರಯಾಣ ಬೆಳೆಸುವ ಪ್ರವಾಸಿಗರು ಇಟಲಿ(Italy) ದೇಶಕ್ಕೆ ತಪ್ಪದೇ ಹೋಗಬೇಕು. ಇಟಲಿ ಪುಟ್ಟ ದೇಶವಾದರೂ ತನ್ನ ಪ್ರಾಕೃತಿಕ ಸೌಂದರ್ಯದಿಂದ ಜಗತ್ತಿನ ಜನರನ್ನು ಸೆಳೆಯುತ್ತದೆ. ವೆನಿಸ್‌ನ ನಯನ ಮನೋಹರವಾದ ಕಾಲುವೆಗಳು ಇಟಲಿ ಪ್ರವಾಸದ ಹೆಚ್ಚುಗಾರಿಕೆ. ರೋಮ್‌ನ ಐತಿಹಾಸಿಕ ಅವಶೇಷಗಳು, ಫ್ಲಾರೆನ್ಸ್‌ನ ಕಲಾ ಸಂಪತ್ತು, ಇಟಲಿ ಸಂಸ್ಕೃತಿ, ಇತಿಹಾಸ ಮತ್ತು ನೈಸರ್ಗಿಕ ಸೌಂದರ್ಯ ಬಹಳ ಖ್ಯಾತಿಪಡೆದಿದೆ.

Italy

ಇಟಲಿಗೆ ಹೋದಾಗ ಟಸ್ಕನಿಯ ರೋಲಿಂಗ್ ಬೆಟ್ಟಗಳು, ರೋಮಾಂಚಕ ನಗರವಾದ ಮಿಲನ್ ನಲ್ಲಿ ಅಡ್ಡಾಡುವುದನ್ನು ಮರೆಯಬಾರದು. ರೋಮ್‌ನಲ್ಲಿರುವ ಕೊಲೋಸಿಯಮ್, ವ್ಯಾಟಿಕನ್ ಸಿಟಿ ಮತ್ತು ಸಿಸ್ಟೀನ್ ಚಾಪೆಲ್‌ಗೆ ಭೇಟಿ ಕೊಟ್ಟರೆ ಒಳ್ಳೆಯ ಅನುಭವ ಸಿಗುತ್ತದೆ. ಇನ್ನು ಫ್ಲಾರೆನ್ಸ್‌ನ ಉಫಿಜಿ ಗ್ಯಾಲರಿಗೆ ವೆನಿಸ್‌ನ ಕಾಲುವೆಗಳ ಮೂಲಕ ಗೊಂಡೊಲಾ ಸವಾರಿ ಮಾಡಿದರೆ ಇಟಲಿ ಪ್ರವಾಸ ಬಹುಕಾಲ ನೆನಪಿನಲ್ಲಿ ಉಳಿಯುತ್ತದೆ.

ಫ್ರಾನ್ಸ್
ಫ್ರಾನ್ಸ್(France) ದೇಶದ ಪ್ಯಾರಿಸ್ ಅತ್ಯಂತ ಆಕರ್ಷಣೀಯ‌ ನಗರಗಳಲ್ಲಿ ಒಂದಾಗಿದೆ. ಫ್ರಾನ್ಸ್‌ ಅನ್ನು ಬೆಳಕಿನ ನಗರ ಎಂದು ಕರೆಯಲಾಗುತ್ತದೆ. ಐಫೆಲ್ ಟವರ್, ಲೌವ್ರೆ ಮತ್ತು ನೊಟ್ರೆ-ಡೇಮ್ ಕ್ಯಾಥೆಡ್ರಲ್‌ನಂತಹ ಸ್ಥಳಗಳನ್ನು ನೋಡಲು ದೇಶದ ಮೂಲೆ ಮೂಲೆಗಳಿಂದ ಜನರು ಬರುತ್ತಾರೆ. ತಣ್ಣನೆಯ ಅನುಭವಕ್ಕಾಗಿ ಪ್ರೊವೆನ್ಸ್‌ನ ಸುಂದರವಾದ ಹಳ್ಳಿಗಳು, ಫ್ರೆಂಚ್ ರಿವೇರಿಯಾದ ಗ್ಲಾಮರ್ ಮತ್ತು ಲೋಯಿರ್ ಕಣಿವೆಯ ಐತಿಹಾಸಿಕ ಕೋಟೆಗಳಿಗೆ ತಪ್ಪದೇ ಭೇಟಿ ನೀಡಬೇಕು. ಇನ್ನು ಲೌವ್ರೆ ಮ್ಯೂಸಿಯಂ, ಚಾಂಪ್ಸ್-ಎಲಿಸೀಸ್‌ ಪ್ರದೇಶಗಳು ಪ್ರವಾಸಿಗರ ಇಷ್ಟದ ತಾಣ. ಬೋರ್ಡೆಕ್ಸ್ ನಲ್ಲಿನ ವೈನ್ ರುಚಿಯನ್ನು ಸವಿಯಲೆಂದೇ ಜಗತ್ತಿನ ಮೂಲೆ ಮೂಲೆಗಳಿಂದ ಪ್ರವಾಸಿಗರು ಬರುತ್ತಾರೆ.

France

ಜರ್ಮನ್

ಯುರೋಪ್‌ ಪ್ರವಾಸ ಮಾಡುವವರಿಗೆ ಜರ್ಮನಿ(Germany) ದೇಶ ಅತ್ಯಂತ ಬೆಸ್ಟ್ ಆಯ್ಕೆ. ಜರ್ಮನಿ ಎಂದರೆ ಪ್ರತಿ ಪ್ರವಾಸಿಗರಿಗೂ ಅದೆಂಥದ್ದೋ ಮೋಹ. ಪ್ರವಾಸಿಗರು ಮಧ್ಯಕಾಲೀನ ಕೋಟೆಗಳಿಂದ ಹಿಡಿದು ಅತ್ಯಾಧುನಿಕ ನಗರಗಳಿಗೆ ಭೇಟಿ ಕೊಡಬಹುದು. ಬಿಯರ್ ಗಾರ್ಡನ್‌ಗಳು, ಬವೇರಿಯನ್ ಸಂಪ್ರದಾಯಗಳು, ಅಕ್ಟೋಬರ್‌ ಫೆಸ್ಟ್‌ಗಳು ಇಲ್ಲಿ ಸಾಕಷ್ಟು ಜನಪ್ರಿಯವಾಗಿವೆ. ರಮಣೀಯ ಹಳ್ಳಿಗಳು ಮತ್ತು ರೈನ್ ಕಣಿವೆಯು ಸುಂದರವಾದ ನದಿ ವಿಹಾರಕ್ಕೆ ಸೂಕ್ತವಾಗಿದೆ. ಬರ್ಲಿನ್ ಗೋಡೆ ಮ್ಯೂಸಿಯಂ ದ್ವೀಪ, ನ್ಯೂಶ್ವಾನ್‌ಸ್ಟೈನ್ ಕ್ಯಾಸಲ್‌ ಕೂಡ ಜರ್ಮನ್‌ ದೇಶದ ಅತ್ಯದ್ಭುತವಾದ ಪ್ರವಾಸಿ ತಾಣಗಳು.

Germany

Deekshith Nair

Deekshith Nair

Travel blogger and adventurer passionate about exploring new cultures and sharing travel experiences.

ವ್ಹಾವ್..ವ್ಹಾವ್..ಗೋವಾ!

Read Previous

ವ್ಹಾವ್..ವ್ಹಾವ್..ಗೋವಾ!

ಮಾರಿಷಸ್‌ ಎಂಬ ಸ್ವರ್ಗಸೀಮೆ!

Read Next

ಮಾರಿಷಸ್‌ ಎಂಬ ಸ್ವರ್ಗಸೀಮೆ!