Sunday, June 15, 2025
Sunday, June 15, 2025

ಮುನ್ನಾರ್‌ನಲ್ಲಿದೆ ಸಖತ್‌ ಜಲಪಾತಗಳು!

ಮುನ್ನಾರ್‌ ಪ್ರವಾಸಿಗರ ಅಚ್ಚುಮೆಚ್ಚಿನ ತಾಣ. ವರ್ಷದ ಅಷ್ಟು ದಿನವೂ ಮುನ್ನಾರ್‌ ಪ್ರವಾಸಿಗರನ್ನು ಆಕರ್ಷಿಸುತ್ತದೆ. ಅಲ್ಲಿ ಸಾಕಷ್ಟು ಜಲಪಾತಗಳಿವೆ. ಮೈದುಂಬಿ ಹರಿಯುತ್ತವೆ. ನೋಡುಗರ ಕಣ್ಣಿಗಂತೂ ಹಬ್ಬ!

ಕೇರಳದ ಮುನ್ನಾರ್‌ನಲ್ಲಿ ಭೇಟಿ ನೀಡಲು ಅದ್ಭುತವಾದ ಅನೇಕ ಸ್ಥಳಗಳಿವೆ. ಒಂದೊಂದು ಸ್ಥಳವೂ ವಿಶೇಷವಾಗಿದೆ. ಬೇಸಿಗೆ ರಜೆ, ವಾರಾಂತ್ಯ ಮತ್ತು ಇನ್ನಿತರ ರಜೆ ದಿನಗಳಲ್ಲಿ ಕುಟುಂಬ ಮತ್ತು ಸ್ನೇಹಿತರೊಡನೆ ಮುನ್ನಾರ್‌ ಪ್ರವಾಸ ಕೈಗೊಳ್ಳಬಹುದು. ಮುನ್ನಾರ್‌ನಲ್ಲಿ ಸುಂದರವಾದ ಎಕೋ ಪಾಯಿಂಟ್, ಫೋಟೋ ಪಾಯಿಂಟ್ ಮತ್ತು ಟಾಪ್ ಸ್ಟೇಷನ್‌ಗಳಿವೆ. ಎರವಿಕುಲಂ ರಾಷ್ಟ್ರೀಯ ಉದ್ಯಾನವನ ಮತ್ತು ಚಿನ್ನಾರ್ ವನ್ಯಜೀವಿ ಅಭಯಾರಣ್ಯವು ವನ್ಯಜೀವಿ ಪ್ರೇಮಿಗಳಿಗೆ ಥ್ರಿಲ್‌ ನೀಡುತ್ತದೆ. ಇನ್ನು ಮುನ್ನಾರ್‌ನಲ್ಲಿ ಮನಮೋಹಕವಾದ ಮೂರು ಜಲಪಾತಗಳಿವೆ. ಹಾಲ್ನೊರೆಯಂತೆ ಧುಮಿಕ್ಕುವ ಆ ಜಲಪಾತಗಳ ಕುರಿತು ಇಲ್ಲಿ ಮಾಹಿತಿ ನೀಡಲಾಗಿದೆ.


ಅಟ್ಟುಕಾಡ್‌ ಜಲಪಾತ
ಮುನ್ನಾರ್‌ನ ಈ ಅಟ್ಟಕಾಡ್‌ ಜಲಪಾತವು ಪಶ್ಚಿಮ ಘಟ್ಟಗಳ ಪರ್ವತಗಳಲ್ಲಿನ ಕೆಲವೇ ಕೆಲವು ಜಲಪಾತಗಳಲ್ಲಿ ಒಂದಾಗಿದೆ. ಇದು ಪ್ರಕೃತಿ ಛಾಯಾಗ್ರಹಣ ಮಾಡುವವರಿಗೆ ಹಾಗು ಪಕ್ಷಿಪ್ರೇಮಿಗಳಿಗೆ ಹೇಳಿ ಮಾಡಿಸಿದ ತಾಣವಾಗಿದೆ. ಈ ಅಟ್ಟುಕಾಡ್ ಜಲಪಾತ ಭೋರ್ಗರೆತವಾಗಿ ಧುಮ್ಮಿಕ್ಕುವ ದೃಶ್ಯವನ್ನು ನೋಡುವುದೇ ಸೋಜಿಗ. ದಟ್ಟ ಕಾಡಿನಲ್ಲಿ ಚಾರಣ ಮಾಡುವ ಅನುಭವ ನಿಜಕ್ಕೂ ಪ್ರವಾಸಿಗರನ್ನು ಬೆರಗುಗೊಳಿಸುತ್ತದೆ. ಮಳೆಗಾಲದಲ್ಲಿ ಮೈದುಂಬಿ ಧುಮ್ಮಿಕ್ಕುವ ಈ ಜಲಪಾತಕ್ಕೆ ಪ್ರಶಾಂತ ವಾತಾವರಣ ಬಯಸುವ ಪ್ರವಾಸಿಗರು ಭೇಟಿ ನೀಡಬಹುದು.

Attukaad Falls



ಚಿನ್ನಕನಾಲ್‌ ಜಲಪಾತ
ಮುನ್ನಾರ್‌ನ ಮತ್ತೊಂದು ಸೊಗಸಾದ ಜಲಪಾತಗಳಲ್ಲಿ ಚಿನ್ನಕನಾಲ್‌ ಕೂಡ ಒಂದು. ಈ ಜಲಪಾತವು ಹಚ್ಚ ಹಸುರಿನಿಂದ ಆವೃತವಾಗಿದೆ. ಆ ಜಲಪಾತದಲ್ಲಿ ಈಜಾಡಬಹುದು. ಗಂಟೆಗಟ್ಟಲೆ ಧುಮ್ಮಿಕ್ಕಿ ಬೀಳುವ ನೀರಿನ ಕೆಳಗೆ ನಿಂತುಕೊಂಡು ಆಟವಾಡಬಹುದು. ಮಳೆಗಾಲದಲ್ಲಂತೂ ಈ ಜಲಪಾತದ ಸೌಂದರ್ಯ ದುಪ್ಪಟ್ಟಾಗುತ್ತದೆ. ಚಾರಣದಲ್ಲಿ ಆಸಕ್ತಿ ಇರುವವರು ತಪ್ಪದೇ ಚಿನ್ನಕನಾಲ್‌ ಜಲಪಾತಕ್ಕೆ ಭೇಟಿಕೊಡಬೇಕು.

Chinnakanal Falls


ಲಕ್ಕಮ್‌ ಜಲಪಾತ
ಲಕ್ಕಮ್ ಜಲಪಾತವು ಎರವಿಕುಲಂ ರಾಷ್ಟ್ರೀಯ ಉದ್ಯಾನವನದ ಭಾಗವಾಗಿದೆ. ವನ್ಯಜೀವಿಗಳನ್ನು ಕಣ್ತುಂಬಿಕೊಂಡು ಮನಸೂರೆಗೊಳ್ಳುವ ಲಕ್ಕಮ್‌ ಜಲಪಾತಕ್ಕೆ ಭೇಟಿ ನೀಡಬಹುದು. ಇದು ಮುನ್ನಾರ್‌ನಿಂದ ಉಡುಮಲೈಪೆಟ್ಟೈಗೆ ಹೋಗುವ ಮಾರ್ಗದಲ್ಲಿ ಸಿಗುತ್ತದೆ. ಜಲಪಾತದ ನೀರು ದಟ್ಟವಾದ ಹಸುರು ಕಾಡಿನಿಂದ ಧುಮುಕುತ್ತದೆ ಮತ್ತು ಈ ಚಿಕ್ಕದಾದ ಮತ್ತು ಆಕರ್ಷಕವಾದ ಜಲಪಾತದ ನೋಟವು ಅತ್ಯಂತ ಮನಮೋಹಕವಾಗಿದೆ.

Lakkam Falls

Deekshith Nair

Deekshith Nair

Travel blogger and adventurer passionate about exploring new cultures and sharing travel experiences.

ವ್ಹಾವ್..ವ್ಹಾವ್..ಗೋವಾ!

Read Previous

ವ್ಹಾವ್..ವ್ಹಾವ್..ಗೋವಾ!

ಮಾರಿಷಸ್‌ ಎಂಬ ಸ್ವರ್ಗಸೀಮೆ!

Read Next

ಮಾರಿಷಸ್‌ ಎಂಬ ಸ್ವರ್ಗಸೀಮೆ!