Tuesday, August 19, 2025
Tuesday, August 19, 2025

ಪ್ರವಾಸೋದ್ಯಮದಲ್ಲಿ ಭಾರತ ಜಾಗತಿಕ ನಾಯಕ: ಕೇಂದ್ರ ಪ್ರವಾಸೋದ್ಯಮ ಸಚಿವ

ಪ್ರವಾಸೋದ್ಯಮದಲ್ಲಿ ಭಾರತ ದೇಶವು ಜಾಗತಿಕ ನಾಯಕನಾಗಿ ಬೆಳೆಯಲಿದೆ ಎಂದು ಕೇಂದ್ರ ಪ್ರವಾಸೋದ್ಯಮ ಸಚಿವರು ಹೇಳಿದ್ದಾರೆ. ಮೀಟ್‌ ಇನ್‌ ಇಂಡಿಯಾ ಸಮಾವೇಶದಲ್ಲಿ ಅವರು ಮಾತನಾಡಿದ್ದಾರೆ.

MICE (Meetings, Incentives, Conferences, and Exhibitions) ಉದ್ಯಮವು ದೇಶದ ಆರ್ಥಿಕತೆಗೆ ಬಲ ತುಂಬುತ್ತದೆ ಎಂದು ಕೇಂದ್ರ ಪ್ರವಾಸೋದ್ಯಮ ಸಚಿವ ಗಜೇಂದ್ರ ಸಿಂಗ್‌ ಶೇಖಾವತ್‌ ಹೇಳಿದರು. ಮೀಟ್ ಇನ್ ಇಂಡಿಯಾ ಸಮಾವೇಶದ ಸಭೆಯನ್ನು ಉದ್ದೇಶಿಸಿ ಅವರು ಮಾತನಾಡಿದರು. ಮೇ 5 ರಂದು ನಡೆದ ಸಮಾವೇಶದಲ್ಲಿ ಗಜೇಂದ್ರ ಸಿಂಗ್‌ ಅವರು "ಭಾರತದ MICE ಉದ್ಯಮವು ಜಾಗತಿಕ ಶಕ್ತಿಯಾಗಿ ಹೊರ ಹೊಮ್ಮುತ್ತಿದೆ. ಇದು ಶಕ್ತವಾದ ಆರ್ಥಿಕ ಬೆಳವಣಿಗೆಯಾಗಿದ್ದು ದೇಶಾದ್ಯಂತ ಎಲ್ಲಾ ರಾಜ್ಯಗಳು ಪ್ರವಾಸೋದ್ಯಮ ಅವಕಾಶಗಳನ್ನು ಸೃಷ್ಟಿಸುತ್ತವೆ. ಭಾರತದ ಪ್ರವಾಸೋದ್ಯಮವು ಜಾಗತಿಕ ನಾಯಕನಾಗುವ ಸಮಯ ಬಂದಿದೆ" ಎಂದು ಹೇಳಿದರು.

"ಭಾರತ್ ಮಂಟಪ, ಯಶೋಭೂಮಿ ಮತ್ತು ಜಿಯೋ ವರ್ಲ್ಡ್ ಸೆಂಟರ್‌ನಂತಹ ಪ್ರತಿಷ್ಠಿತ ಸ್ಥಳಗಳೊಂದಿಗೆ ಮತ್ತು 'ಇನ್‌ಕ್ರೆಡಿಬಲ್ ಇಂಡಿಯಾ' ಅಭಿಯಾನದ ಅಡಿಯಲ್ಲಿ MICE ಗೆ ಆದ್ಯತೆ ನೀಡಬೇಕು. ನಾವು ಕನಿಷ್ಠ 10 ಭಾರತದ ಪ್ರಮುಖವಾದ ನಗರಗಳನ್ನು ವಿಶ್ವದ ಉನ್ನತ MICE ತಾಣಗಳಾಗಿ ಅಭಿವೃದ್ಧಿಗೊಳಿಸುವ ಗುರಿಯನ್ನು ಹೊಂದಿದ್ದೇವೆ. ಪ್ರಧಾನಿ ನರೇಂದ್ರ ಮೋದಿಯವರ ದೂರದೃಷ್ಟಿಯ ನಾಯಕತ್ವದ ಮಾರ್ಗದರ್ಶನದಲ್ಲಿ ನಾವು ಯೋಜನೆಗಳನ್ನು ಕೈಗೊಳ್ಳುತ್ತೇವೆ. ರಾಜಸ್ಥಾನದಂತಹ ರಾಜ್ಯಗಳು ಪರಂಪರೆ ಮತ್ತು ನಾವೀನ್ಯತೆಯ ಮೂಲಕ ಸಾಕಷ್ಟು ಮುಂಚೂಣಿಯಲ್ಲಿದೆ.ಭಾರತದ ಪ್ರವಾಸೋದ್ಯಮವು ಜಾಗತಿಕಮಟ್ಟದಲ್ಲಿ ಪ್ರಸಿದ್ದಿಯನ್ನು ಪಡೆಯಲಿದೆ" ಎಂದು ಶೇಖಾವತ್ ಹೇಳಿದರು.

ಭಾರತ ಸರ್ಕಾರದ ಪ್ರವಾಸೋದ್ಯಮ ಸಚಿವಾಲಯವು ಆಯೋಜಿಸಿದ್ದ ಮೀಟ್ ಇನ್ ಇಂಡಿಯಾ ಸಮಾವೇಶದಲ್ಲಿ 300 ಕ್ಕೂ ಹೆಚ್ಚು ಪ್ರತಿನಿಧಿಗಳು ಭಾಗವಹಿಸಿದ್ದರು.

Deekshith Nair

Deekshith Nair

Travel blogger and adventurer passionate about exploring new cultures and sharing travel experiences.

ವ್ಹಾವ್..ವ್ಹಾವ್..ಗೋವಾ!

Read Previous

ವ್ಹಾವ್..ವ್ಹಾವ್..ಗೋವಾ!

ಮಾರಿಷಸ್‌ ಎಂಬ ಸ್ವರ್ಗಸೀಮೆ!

Read Next

ಮಾರಿಷಸ್‌ ಎಂಬ ಸ್ವರ್ಗಸೀಮೆ!